Monday, July 26 , 2021
ಆನೆಯ ಸವಾರಿ ಎಲ್ಲಿಗೆ? | ಯುಪಿಎ, ಎನ್ ಡಿಎಗೆ ಪರ್ಯಾಯವಾಗಿ ಮಾಯಾವತಿ ತೆಗೆದುಕೊಳ್ಳಬಹುದಾದ ನಿರ್ಧಾರಗಳೇನು?

ರಾಷ್ಟ್ರಧ್ವನಿ ವರದಿ(21.05.2019): ಲೋಕಸಭಾ ಚುನಾವಣಾ ಫಲಿತಾಂಶದ ಬಳಿಕ ಯುಪಿಎ ಆಗಲಿ, ಎನ್ ಡಿಎಯಾಗಲಿ ಸರಕಾರ ರಚಿಸಬೇಕಾದರೆ, ಈ ಎರಡೂ ಪಕ್ಷಗಳು ಆನೆಗೆ ಸಲಾಮ್ ಹೊಡೆಯಲೇ ಬೇಕು. ಇಂತಹದ್ದೊಂದು ಅಭಿಪ್ರಾಯ ಮಾಧ್ಯಮಗಳ ಸಮೀಕ್ಷೆಯಲ್ಲಿ ಉತ್ತರಪ್ರದೇಶದಲ್ಲಿ ಬಿಎಸ್ ಪಿ ಬಿಜೆಪಿಗೆ ಸೆಡ್ಡು ಹೊಡೆಯಲಿದೆ ಎನ್ನುವ ವರದಿ ಹೊರ ಬಿದ್ದ ಬೆನ್ನಲ್ಲೇ ವಿವಿಧ ಮಾಧ್ಯಮಗಳಲ್ಲಿ ಕಂಡು ಬಂದಿದೆ. ಇದರ ಜೊತೆಗೆ ಬಿಎಸ್ ಪಿ ವರಿಷ್ಠೆ ಮಾಯಾವತಿ ಅವರ ರಾಜಕೀಯ ನಡೆಗಳು ಅರ್ಥವಾಗದೇ ರಾಜಕೀಯ ಪಕ್ಷಗಳು ನೇತಾರರು ಹಾಗೂ ಮಾಧ್ಯಮ ಪ್ರತಿನಿಧಿಗಳು ಗೊಂದಲಕ್ಕೀಡಾಗಿದ್ದಾರೆ.

ಮಾಯಾವತಿಯವರು ತಾನು ಕಾಂಗ್ರೆಸ್ ನೇತೃತ್ವದ ಯುಪಿಎ ಮಿತ್ರಕೂಟಕ್ಕೂ ಬೆಂಬಲ ನೀಡುವುದಿಲ್ಲ ಎಂದು ಅವರು ಬಹಿರಂಗ ಹೇಳಿಕೆಯನ್ನು ನೀಡಿದ್ದಾರೆ. ಹಾಗಾಗಿ ಮಾಯಾವತಿ ಅವರು ಬಿಜೆಪಿ ನೇತೃತ್ವದ ಎನ್ ಡಿಎಗೆ ಬೆಂಬಲ ನೀಡಲಿದ್ದಾರೆ ಎನ್ನುವುದು ಮಾಧ್ಯಮಗಳ ವಾದ. ಯುಪಿಎಗೆ ಬೆಂಬಲ ನೀಡದಿದ್ದರೆ, ಎನ್ ಡಿಎಗೆ ಬೆಂಬಲ ನೀಡಲೇ ಬೇಕು ಎಂದಿದೆಯೇ? 2019ರ ಲೋಕಸಭಾ ಚುನಾವಣೆಯಲ್ಲಿ ಮಾಯಾವತಿ ಅವರ ರಾಜಕೀಯ ತಂತ್ರಗಾರಿಕೆ ಏನು? ಬಿಜೆಪಿಯ ಜೊತೆಗೆ ಕಾಂಗ್ರೆಸ್ ಗೂ ಮಾಯಾವತಿ ಹೇಗೆ ಪಾಠ ಕಲಿಸಲಿದ್ದಾರೆ? ಎನ್ನುವುದು ಸದ್ಯ ಕುತೂಹಲ ಮೂಡಿಸಿರುವ ವಿಚಾರವಾಗಿದೆ.

ಒಂದೆಡೆ ಬಿಜೆಪಿ ತನ್ನ ಹಣ ಬಲವನ್ನು ಬಳಸಿ ಸ್ಥಳೀಯ ಪಕ್ಷಗಳನ್ನು ಸೆಳೆಯಲು ಪ್ರಯತ್ನಿಸುತ್ತಿದೆ. ಇನ್ನೊಂದೆಡೆ ಕಾಂಗ್ರೆಸ್, ಕರ್ನಾಟಕ ವಿಧಾನಸಭಾ ಚುನಾವಣೆಯಲ್ಲಿ ಬಿಜೆಪಿಯನ್ನು ಹೊರಗಿಟ್ಟು ಸರಕಾರ ರಚಿಸಿರುವುದನ್ನು ಮಾದರಿಯಾಗಿ ತೋರಿಸುತ್ತಿದೆ. ಈಗಾಗಲೇ ಸೋನಿಯಾ ಗಾಂಧಿ ಹಲವು ರಾಜ್ಯಗಳಲ್ಲಿರುವ ಸ್ಥಳೀಯ ಪಕ್ಷಗಳ ನಾಯಕರನ್ನು ಒಗ್ಗೂಡಿಸುವ ಪ್ರಯತ್ನಕ್ಕೆ ಕೈಹಾಕಿದ್ದಾರೆ. ಚುನಾವಣೆಗೂ ಮುನ್ನ ಎಲ್ಲ ಸ್ಥಳೀಯ ಪಕ್ಷಗಳ ಜೊತೆಗಿನ ಮೈತ್ರಿಯನ್ನು ಒಪ್ಪದೇ ದುರಾಂಹಕಾರ ತೋರಿಸಿದ್ದ ಕಾಂಗ್ರೆಸ್, ಈಗ ಸ್ಥಳೀಯ ಪಕ್ಷಗಳ ಓಲೈಕೆಗೆ ಇಳಿದಿದೆ. ಈ ತಂಡಕ್ಕೆ ಬಿಎಸ್ ಪಿಯನ್ನೂ ಸೇರ್ಪಡೆಗೊಳಿಸಬೇಕು ಎಂದು ಕಾಂಗ್ರೆಸ್ ಈಗ ಹೇಳುತ್ತಿದೆ. ಆದರೆ ಉತ್ತರಪ್ರದೇಶದಲ್ಲಿ ಬಿಜೆಪಿ ಗೆಲುವಿಗೆ ಪೂರಕವಾಗುವಂತಹ ಅಭ್ಯರ್ಥಿಯನ್ನು ಕಾಂಗ್ರೆಸ್ ಕಣಕ್ಕಿಳಿಸಿ, ಬಿಎಸ್ ಪಿ-ಎಸ್ ಪಿ ಮೈತ್ರಿ ವಿರುದ್ಧ ಸಮರ ಸಾರಿತ್ತು. ಕಾಂಗ್ರೆಸ್ ನ ಈ ಎಲ್ಲ ತಂತ್ರಗಾರಿಗಳು ಮಾಯಾವತಿ ಅವರಿಗೆ ಹೊಸದೇನಲ್ಲ. ಆದರೆ ಈ ಬಾರಿ ಮಾಯಾವತಿ ಅವರನ್ನು ಪ್ರಧಾನಿಯನ್ನಾಗಿ ಮಾಡಲು ಅನಿವಾರ್ಯ ಪರಿಸ್ಥಿತಿಯನ್ನು ಮಾಯಾವತಿಯವರೇ ಸೃಷ್ಟಿಸಲಿದ್ದಾರೆ ಎನ್ನುವುದು ದೇಶ ರಾಜಕಾರಣದಲ್ಲಿ ಇನ್ನೂ ಹೊರ ಬರದೇ ಇರುವ ವಿಚಾರವಾಗಿದೆ.

ಆನೆಯ ಸವಾರಿ ಎಲ್ಲಿಗೆ?

ಸೋನಿಯಾ ಗಾಂಧಿ ಈಗ ಸಿದ್ಧಪಡಿಸುತ್ತಿರುವ ಮಹಾಘಟಬಂಧನ್ ನಲ್ಲಿ ತಮ್ಮ ಪುತ್ರ, ಕಾಂಗ್ರೆಸ್ ನ ರಾಷ್ಟ್ರೀಯ ಅಧ್ಯಕ್ಷ ರಾಹುಲ್ ಗಾಂಧಿ ಪ್ರಧಾನಿ ಅಭ್ಯರ್ಥಿ ಎಂದು ಕಾಂಗ್ರೆಸ್ ಪರೋಕ್ಷವಾಗಿ ಹೇಳುತ್ತಿದೆ. ಇನ್ನೊಂದೆಡೆ ಹಲವು ರಾಜ್ಯಗಳ ಸ್ಥಳೀಯ ಪಕ್ಷಗಳ ನಾಯಕರೂ ಈ ರೇಸ್ ನಲ್ಲಿದ್ದಾರೆ. ಇಂತಹ ಸಂದರ್ಭದಲ್ಲಿ ಮಾಯಾವತಿ ಅವರು ಈ ಮಿತ್ರ ಕೂಟದೊಳಗೆ ಹೋಗಿ ತನ್ನನ್ನು ಪ್ರಧಾನಿ ಮಾಡಿ ಎಂದು ಕೇಳ ಬೇಕೆ? ಅಂತಹ ಕೆಲಸವನ್ನು ತಮ್ಮ ರಾಜಕೀಯ ಜೀವನದಲ್ಲಿ ಎಂದಿಗೂ ಮಾಯಾವತಿ ಮಾಡಿದವರಲ್ಲ. ಮಾಯಾವತಿ ಅವರ ಉದ್ದೇಶ ಕೇವಲ ಪ್ರಧಾನಮಂತ್ರಿ ಪಟ್ಟವೂ ಅಲ್ಲ. ದೇಶದಲ್ಲಿ ನಡೆಯುತ್ತಿರುವ ಅನ್ಯಾಯ, ಅಕ್ರಮಗಳನ್ನು ತಡೆಯುವುದು ಮತ್ತು ಸಂವಿಧಾನ ಸಮರ್ಪಕ ಜಾರಿ ಮಾಯಾವತಿಯವರ ಉದ್ದೇಶ. ಹಾಗಾಗಿ ಮಾಯಾವತಿ ಕೇವಲ ಮೂರು ನಿರ್ಧಾರಗಳನ್ನಷ್ಟೇ ತೆಗೆದುಕೊಳ್ಳುವ  ಸಾಧ್ಯತೆ ಇದೆ.

►ಒಂದನೇಯ ಸಾಧ್ಯತೆ:  ಬಿಎಸ್ ಪಿಗೆ ಪ್ರಧಾನಿ ಪಟ್ಟ ಎಂದು ಘೋಷಿಸುವವರೆಗೆ ಕಾಂಗ್ರೆಸ್ ನೇತೃತ್ವದ ಯುಪಿಎಗೆ                                                ಬೆಂಬಲ ನೀಡದೇ ಇರುವುದು.

►ಎರಡನೇಯ ಸಾಧ್ಯತೆ: ಯುಪಿಎ, ಎನ್ ಡಿಎಗೆ ಪರ್ಯಾಯವಾಗಿ ಮಾಯಾವತಿ ನೇತೃತ್ವದಲ್ಲಿ ತೃತೀಯ ರಂಗ                                                    ಅಧಿಕಾರಕ್ಕೆ

►ಮೂರನೇಯ ಸಾಧ್ಯತೆ: ವಿರೋಧ ಪಕ್ಷದ ಸ್ಥಾನದಲ್ಲಿ ನಿಂತು ಬಿಜೆಪಿಯ ದುರಾಡಳಿತಕ್ಕೆ ತಡೆಯೊಡ್ಡುವುದು.

ಒಟ್ಟಿನಲ್ಲಿ ಮಾಯಾವತಿ ಅವರು ತಮ್ಮ ಸ್ಪಷ್ಟ ನಿರ್ಧಾರವನ್ನು ಪ್ರಕಟಿಸುವವರೆಗೂ ಮಾಯಾವತಿಯವರ ರಾಜಕೀಯ ನಡೆ ಯಾರಿಗೂ ಅರ್ಥವಾಗಲು ಸಾಧ್ಯವಿಲ್ಲ. ಈ ಮೂರು ಸಾಧ್ಯತೆಗಳಿಂದಾಚೆಗೂ ಮಾಯಾವತಿ ಅವರ ಯೋಚನೆಗಳು ಇರಬಹುದು. ಆದರೆ, ಸದ್ಯ ಮಾಧ್ಯಮಗಳಲ್ಲಿ ಪ್ರಸಾರವಾಗುತ್ತಿರುವ ಸುದ್ದಿಗಳಂತೆ ಯುಪಿಎ ಸೇರ್ಪಡೆಯಾಗುವುದಿಲ್ಲ ಎಂದರೆ ಎನ್ ಡಿಎಗೆ ಬೆಂಬಲಿಸುತ್ತಾರೆ ಎನ್ನುವುದು ವಾಸ್ತವಕ್ಕೆ ಬಹಳ ದೂರವಾದ ವಿಚಾರವಾಗಿದೆ. ಅದಕ್ಕೂ ಮಿಗಿಲಾಗಿ ಇಂದು ವಿಪಕ್ಷಗಳು ಕರೆದ ಸಭೆಯಲ್ಲಿ ಬಿಎಸ್ ಪಿ ಪ್ರತಿನಿಧಿಯಾಗಿ ಸತೀಶ್ ಚಂದ್ರ ಮಿಶ್ರಾ ಅವರು ಪಾಲ್ಗೊಂಡಿದ್ದಾರೆ. ಇದರ ಹೊರತಾಗಿಯೂ ಮಾಧ್ಯಮಗಳು ಮಾಯಾವತಿ ಎನ್ ಡಿಎಯನ್ನು ಬೆಂಬಲಿಸುತ್ತಾರೆ ಎನ್ನುವ ವರದಿಗಳನ್ನು ನಿರಂತರವಾಗಿ ಪ್ರಸಾರ ಮಾಡುತ್ತಿರುವುದು, ಜನರನ್ನು ಹಾದಿ ತಪ್ಪಿಸುವ ಕೆಲಸವಷ್ಟೇ ಎನ್ನುವುದು ಸ್ಪಷ್ಟ.

Like us on facebook
Disclaimer:

ರಾಷ್ಟ್ರಧ್ವನಿ ಅಂತಾರ್ಜಾಲ ಸುದ್ದಿ ವಾಹಿನಿಯಲ್ಲಿ ಪ್ರಕಟವಾಗುವ ಸುದ್ದಿಗಳ ಕುರಿತು ಸಾರ್ವಜನಿಕರು ಆರೋಗ್ಯಕರ ಚರ್ಚೆ, ಕಮೆಂಟ್ ಗಳನ್ನು ಮಾಡಬಹುದಾಗಿದೆ. ಧರ್ಮ, ಜಾತಿ ನಿಂದನೆಯಾಗುವಂತಹ ಮತ್ತು ಸಾಮರಸ್ಯ ಕೆಡಿಸುವಂತಹ ದುರುದ್ದೇಶಪೂರಿತ ಕಮೆಂಟ್ ಹಾಗೂ ಚರ್ಚೆ ಕಾನೂನು ರೀತಿಯಲ್ಲಿ ಅಪರಾಧವಾಗಿರುತ್ತದೆ. ದೇಶದ ಕಾನೂನು ಸುವ್ಯವಸ್ಥೆಗೆ ಧಕ್ಕೆ ತರುವಂತಹ ಯಾವುದೇ ಕಮೆಂಟ್ ಗಳನ್ನು ಹಾಕಿದ್ದಲ್ಲಿ, ಅದಕ್ಕೆ ಕಮೆಂಟ್ ಹಾಕುವವರೇ ಹೊಣೆಗಾರರಾಗಿರುತ್ತಾರೆ. ಅಂತಹವರ ಹೆಸರು ಮತ್ತು ಐಪಿ ಅಡ್ರೆಸ್ ಗಳನ್ನು ಸಂಬಂಧಪಟ್ಟ ಇಲಾಖೆಗೆ ಒದಗಿಸಲು ರಾಷ್ಟ್ರಧ್ವನಿ ಬದ್ಧವಾಗಿರುತ್ತದೆ.

ಸಿನಿಮಾ
ಸಂಪಾದಕೀಯ ಮತ್ತಷ್ಟು
ಇನ್ನು ನೆನಪುಗಳಲ್ಲಿ ಮಾತ್ರ ನಿತ್ಯ ಸಂಚಾರಿ.‌‌.‌‌,..
ರಾಷ್ಟ್ರಧ್ವನಿ ಆರಂಭಗೊಂಡು 2019 ರ ಜನವರಿಗೆ ಸರಿಯಾಗಿ ಒಂದು ವರ್ಷ ‌ಆಗಿತ್ತು. ಹೊಸವರ್ಷದ ಸಂಭ್ರಮದಿಂದ...
POLL

[democracy id="1"]