Monday, July 26 , 2021
ಅಪಾಯಕಾರಿ ಅಣಕು ಕಾರ್ಯಾಚರಣೆಗಳಲ್ಲಿ ವಿದ್ಯಾರ್ಥಿಗಳನ್ನು ಬಳಕೆ ಮಾಡಬೇಕೇ?

ವಿಪತ್ತಿನ ಸಂದರ್ಭದಲ್ಲಿ ಅದರಿಂದ ಪಾರಾಗುವುದು ಹೇಗೆ ಎನ್ನುವುದರ ಬಗ್ಗೆ ವಿದ್ಯಾರ್ಥಿಗಳಲ್ಲಿ ಜಾಗೃತಿ ಮೂಡಿಸುವುದು ಒಳ್ಳೆಯ ಕಾರ್ಯಕ್ರಮವಾಗಿದ್ದರೂ, ಇದಕ್ಕೆ ವಿದ್ಯಾರ್ಥಿಗಳು ಬಲಿಯಾಗುತ್ತಿರುವುದು ಆತಂಕದ ವಿಚಾರವಾಗಿದೆ. ಕೊಯಮುತ್ತೂರಿನ ಕೊವಯ್ ಕಲೈಮಗಲ್ ಕಲಾ ಮತ್ತು ವಿಜ್ಞಾನ ಕಾಲೇಜಿನಲ್ಲಿ ನಡೆದ ಘಟನೆ ಇದೀಗ ಹಲವು ಪ್ರಶ್ನೆಗಳನ್ನು ಹುಟ್ಟುಹಾಕಿದ್ದು, ವಿದ್ಯಾರ್ಥಿಗಳನ್ನು ಇಂತಹ ಕಾರ್ಯಾಚರಣೆಯಲ್ಲಿ ಬಳಸುವುದು ಅಗತ್ಯವೇ ಎನ್ನುವ ಪ್ರಶ್ನೆ ಹುಟ್ಟಿಕೊಂಡಿದೆ.

ಸರಿಯಾದ ಪೂರ್ವ ಸಿದ್ಧತೆಗಳಿಲ್ಲದೇ ಇಂತಹ ಕಾರ್ಯಾಚರಣೆಗಳಲ್ಲಿ ತೊಡಗುತ್ತಿರುವುದು ಮತ್ತು ತರಬೇತುದಾರರ ನಿರ್ಲಕ್ಷ್ಯ ಇಂತಹ ಘಟನೆಗಳಿಗೆ ಕಾರಣವಾಗುತ್ತಿದೆ. ಕೊಯಮುತ್ತೂರು ಘಟನೆಯನ್ನು ಗಮನಿಸಿದರೆ, ಇಲ್ಲಿ ಕಟ್ಟಡದಿಂದ ಜಿಗಿಯುವುದು ಮತ್ತು ಕೆಳಗೆ ಜನರು ವಿದ್ಯಾರ್ಥಿ ಬೀಳುವ ಪ್ರದೇಶದಲ್ಲಿ ನೆಟ್ ಹರಡುವ ಮೂಲಕ ಆಕೆಯನ್ನು ಕಾಪಾಡುವುದು ಇಷ್ಟು ಮಾತ್ರವೇ ತರಬೇತುದಾರ ಯೋಚಿಸಿದ್ದಾನೆ. ಆದರೆ, ಮಧ್ಯೆ ಇರುವ ಮಹಡಿಯ ಸಜ್ಜಕ್ಕೆ ವಿದ್ಯಾರ್ಥಿನಿಯ ತಲೆ ಬಡಿಯ ಬಹುದೇ ಎನ್ನುವ ಯೋಚನೆಯನ್ನು ಯಾರೂ ಮಾಡದೇ ಇರುವುದರಿಂದಾಗಿ ವಿದ್ಯಾರ್ಥಿನಿ ದುರಂತವಾಗಿ ಸಾವಿಗೀಡಾಗುವಂತಾಯಿತು.

ಇಂತಹ ನಿರ್ಲಕ್ಷ್ಯ ಈ ಹಿಂದೆಯೂ ವಿದ್ಯಾರ್ಥಿಗಳು ಬಲಿಯಾಗಿರುವ ಘಟನೆಗಳು ನಡೆದಿದೆಯಾದರೂ, ಮತ್ತೆ ಪುನರಾವರ್ತನೆಯಾಗುತ್ತಿರುವುದು ರಾಜ್ಯ ಸರಕಾರಗಳ ನಿರ್ಲಕ್ಷ್ಯ ಎಂದೇ ಹೇಳಬಹುದು. ಇಂತಹ ಅಪಾಯಕಾರಿ ಪ್ರಯೋಗಗಳಿಗೆ ಶಾಲಾ ಮಕ್ಕಳನ್ನು ಬಲಿಕೊಡಬೇಕೇ? ಈ ಬಗ್ಗೆ ತರಬೇತಿಯನ್ನು ಹೊಂದಿರುವವರನ್ನು ಬಳಸಿ ವಿದ್ಯಾರ್ಥಿಗಳಿಗೆ ತರಬೇತಿ ನೀಡಬಾರದೇ? ಈ ರೀತಿ ಮಾಡಿದರೂ ವಿದ್ಯಾರ್ಥಿಗಳಲ್ಲಿ ಜಾಗೃತಿ ಮೂಡುತ್ತದೆಯಲ್ಲವೇ? ಅದಕ್ಕಾಗಿ ವಿದ್ಯಾರ್ಥಿಗಳಿಗೆ ಅಪಾಯ ತಂದೊಡ್ಡುವ ಅಗತ್ಯತೆ ಇದೆಯೇ? ಎನ್ನುವ ವಿಚಾರಗಳನ್ನು ರಾಜ್ಯ ಸರಕಾರಗಳು ಚಿಂತಿಸ ಬೇಕಿದೆ.

ಇಂತಹ ಕಾರ್ಯಾಚರಣೆಗಳನ್ನು ಶಾಲೆಗಳಲ್ಲಿ ನಡೆಸುವ ಮುನ್ನ ಶಿಕ್ಷಣ ಇಲಾಖಾ ಅಧಿಕಾರಿಗಳು ಈ ತರಬೇತಿಯ ಬಗ್ಗೆ ಸರಿಯಾದ ಮಾಹಿತಿ ಪಡೆದು ಬಳಿಕ ಅನುಮತಿಯನ್ನು ನೀಡಬೇಕು. ತರಬೇತುದಾರರು ಮಕ್ಕಳನ್ನು ಕಟ್ಟಡದಿಂದ ಜಿಗಿಯುವುದು, ಬೆಂಕಿಯ ನಡುವೆ ಸಿಲುಕಿಕೊಳ್ಳುವುದು ಇವೇ ಮೊದಲಾದ ಅಪಾಯಕಾರಿ ಪ್ರಯೋಗಗಳಲ್ಲಿ ಭಾಗವಹಿಸದಂತೆ ಆಯಾ ರಾಜ್ಯ ಸರಕಾರದ ಶಿಕ್ಷಣ ಇಲಾಖೆಗಳನ್ನು ಜಾಗೃತಿ ವಹಿಸುವುದರಿಂದ ಇಂತಹ ದುರಂತಗಳಲ್ಲಿ ಮಕ್ಕಳು ಸಾವನ್ನಪ್ಪುವುದನ್ನು ತಡೆಯಬಹುದು.

ತರಬೇತಿ ಹೊಂದಿರುವವರು ಇಂತಹ ಸಾಹಸಗಳನ್ನು ವಿದ್ಯಾರ್ಥಿಗಳಿಗೆ ಮಾಡಿ ತೋರಿಸಿದರೆ ಉತ್ತಮ. ಅಲ್ಪಸ್ವಲ್ಪ ಜ್ಞಾನ ಹೊಂದಿರುವವರು ಇಂತಹ ಕಾರ್ಯಾಚರಣೆಯಲ್ಲಿ ಭಾಗವಹಿಸಿದರೆ, ಕೊಯಮುತ್ತೂರಿನಲ್ಲಿ ನಡೆದ ದುರಂತದಂತೆಯೇ ಪ್ರಾಣ ಹಾನಿ ಸಂಭವಿಸುವುದರಲ್ಲಿ ಯಾವುದೇ ಅನುಮಾನಗಳಿಲ್ಲ. ಈ ಘಟನೆಯಲ್ಲಿ ತರಬೇತುದಾರನ ವೈಫಲ್ಯ ಎದ್ದು ಕಾಣುತ್ತಿದೆ. ಈತ ಭಯ ಭೀತಳಾಗಿ ನಿಂತಿದ್ದ ಬಾಲಕಿಯನ್ನು ಬಲವಂತವಾಗಿ ಕೆಳಗಡೆ ತಳ್ಳಿರುವುದು ವಿಡಿಯೋದಲ್ಲಿ ಸೆರೆಯಾಗಿದೆ. ಅಚಾನಕ್ಕಾಗಿ ತಳ್ಳಿದರಿಂದಾಗಿ ಬ್ಯಾಲೆನ್ಸ್ ಕಳೆದುಕೊಂಡ ವಿದ್ಯಾರ್ಥಿನಿ ನೇರವಾಗಿ ನೆಟ್ ಗೆ ಬೀಳದೇ ಕಟ್ಟಡಕ್ಕೆ ಬಡಿದು ಸಾವನ್ನಪ್ಪಿದ್ದಾಳೆ. ಇಂತಹ ನಿರ್ಲಕ್ಷ್ಯದಿಂದ ವಿದ್ಯಾರ್ಥಿಗಳನ್ನು ಪಾರು ಮಾಡಲು ಸರಕಾರಗಳು ಚಿಂತನೆ ನಡೆಸಬೇಕಿದೆ.

Like us on facebook
Disclaimer:

ರಾಷ್ಟ್ರಧ್ವನಿ ಅಂತಾರ್ಜಾಲ ಸುದ್ದಿ ವಾಹಿನಿಯಲ್ಲಿ ಪ್ರಕಟವಾಗುವ ಸುದ್ದಿಗಳ ಕುರಿತು ಸಾರ್ವಜನಿಕರು ಆರೋಗ್ಯಕರ ಚರ್ಚೆ, ಕಮೆಂಟ್ ಗಳನ್ನು ಮಾಡಬಹುದಾಗಿದೆ. ಧರ್ಮ, ಜಾತಿ ನಿಂದನೆಯಾಗುವಂತಹ ಮತ್ತು ಸಾಮರಸ್ಯ ಕೆಡಿಸುವಂತಹ ದುರುದ್ದೇಶಪೂರಿತ ಕಮೆಂಟ್ ಹಾಗೂ ಚರ್ಚೆ ಕಾನೂನು ರೀತಿಯಲ್ಲಿ ಅಪರಾಧವಾಗಿರುತ್ತದೆ. ದೇಶದ ಕಾನೂನು ಸುವ್ಯವಸ್ಥೆಗೆ ಧಕ್ಕೆ ತರುವಂತಹ ಯಾವುದೇ ಕಮೆಂಟ್ ಗಳನ್ನು ಹಾಕಿದ್ದಲ್ಲಿ, ಅದಕ್ಕೆ ಕಮೆಂಟ್ ಹಾಕುವವರೇ ಹೊಣೆಗಾರರಾಗಿರುತ್ತಾರೆ. ಅಂತಹವರ ಹೆಸರು ಮತ್ತು ಐಪಿ ಅಡ್ರೆಸ್ ಗಳನ್ನು ಸಂಬಂಧಪಟ್ಟ ಇಲಾಖೆಗೆ ಒದಗಿಸಲು ರಾಷ್ಟ್ರಧ್ವನಿ ಬದ್ಧವಾಗಿರುತ್ತದೆ.

ಸಿನಿಮಾ
ಸಂಪಾದಕೀಯ ಮತ್ತಷ್ಟು
ಇನ್ನು ನೆನಪುಗಳಲ್ಲಿ ಮಾತ್ರ ನಿತ್ಯ ಸಂಚಾರಿ.‌‌.‌‌,..
ರಾಷ್ಟ್ರಧ್ವನಿ ಆರಂಭಗೊಂಡು 2019 ರ ಜನವರಿಗೆ ಸರಿಯಾಗಿ ಒಂದು ವರ್ಷ ‌ಆಗಿತ್ತು. ಹೊಸವರ್ಷದ ಸಂಭ್ರಮದಿಂದ...
POLL

[democracy id="1"]