Monday, July 26 , 2021
ಅನಂತ್ ಕುಮಾರ್ ಹೆಗಡೆಗೆ ಪಾಕಿಸ್ತಾನವೇ ಬಂಡವಾಳ | ಸಸಿಕಾಂತ್ ಸೆಂಥಿಲ್ ಮುಂದೆ ಪುಕ್ಕಲನಂತೆ ಕಂಡ ಹೆಗಡೆ

ಬಿಜೆಪಿ ಸಂಸದ ಅನಂತ್ ಕುಮಾರ್ ಹೆಗಡೆ ಸದಾ ವಿವಾದಗಳೊಂದಿಗೆ ತಿರುಗಾಡಿದವರು. ತಾನು ಏನು ಮಾತನಾಡಿದರೂ, ತನ್ನ ಕ್ಷೇತ್ರ ಜನತೆ ಹಿಂದುತ್ವದ ಮುಖ ನೋಡಿ ತನಗೆ ಓಟು ಹಾಕಿ ಗೆಲ್ಲಿಸುತ್ತಾರೆ ಎನ್ನುವ ಸತ್ಯ ಅನಂತ್ ಕುಮಾರ್ ಹೆಗಡೆಗೆ ಗೊತ್ತಿದೆ. ಮಾತೆದರೆ ಸಾಕು ‘ಪಾಕಿಸ್ತಾನಕ್ಕೆ ಹೋಗಿ’ ಎನ್ನುವ ಅನಂತ್ ಕುಮಾರ್ ಹೆಗಡೆ ತಮ್ಮ ರಾಜಕೀಯ ಜೀವನದಲ್ಲಿ ಪಾಕಿಸ್ತಾನವನ್ನೇ ಬಂಡವಾಳ ಮಾಡಿಕೊಂಡಿರುವುದಂತೂ ಸತ್ಯ.

ಸದ್ಯ ದಕ್ಷಿಣ ಕನ್ನಡ ಜಿಲ್ಲಾಧಿಕಾರಿ ಸಸಿಕಾಂತ್ ಸೆಂಥಿಲ್ ಅವರು ಹಾಗೂ ಅವರನ್ನು ಬೆಂಬಲಿಸುವವರು ಪಾಕಿಸ್ತಾನಕ್ಕೆ ಹೋಗಲಿ ಎಂದು ಹೇಳಿಕೆ ನೀಡಿರುವ ಅನಂತ್ ಕುಮಾರ್ ಹೆಗಡೆ ಮತ್ತೆ ವಿವಾದ ಸೃಷ್ಟಿಸಿದ್ದಾರೆ. ಇದರ ಜೊತೆಗೆ ಅವರನ್ನು ಬೆಂಬಲಿಸುವ ಮನಸ್ಥಿತಿಗಳು ಇಂತಹದ್ದನ್ನು ಒಪ್ಪಿಕೊಳ್ಳುತ್ತಿದ್ದಾರೆ. ಆದರೆ ಸಂವಿಧಾನದ ಆಶಯಗಳಿಗೆ ಧಕ್ಕೆ ಬಂದಾಗ ಅದನ್ನು ವಿರೋಧಿಸಿ ಪ್ರತಿಭಟನೆ ಎಂಬಂತೆ ರಾಜೀನಾಮೆ ನೀಡಿರುವ ಒಬ್ಬ ಐಎಎಸ್ ಅಧಿಕಾರಿಯ ರಾಜೀನಾಮೆಯನ್ನು ಸಂಭ್ರಮಿಸುವುದು ನಿಜವಾದ ದೇಶದ್ರೋಹ ಎನ್ನುವ ವಿಚಾರಗಳು ಇದೀಗ ಚರ್ಚೆಗೀಡಾಗುತ್ತಿವೆ.

ಅನಂತ್ ಕುಮಾರ್ ಹೆಗಡೆ ದೇಶದ ಪರವಾಗಿಲ್ಲ, ಆರೆಸ್ಸೆಸ್ ಹಾಗೂ ಬಿಜೆಪಿ ಪರವಾಗಿದ್ದಾರೆ. ಹಾಗಾಗಿ ದೇಶಕ್ಕೆ ಸಂಬಂಧಿಸಿದ ಯಾವುದೇ ಸಮಸ್ಯೆಗಳು ಬಂದರೂ, ಅವರು ದೇಶದ ಪರವಾಗಿ ನಿಲ್ಲದೇ, ಆರೆಸ್ಸೆಸ್ ಪರವಾಗಿ ನಿಲ್ಲುತ್ತಾರೆ ಎನ್ನುವ ಆರೋಪಗಳು ಸದ್ಯ ಕೇಳಿ ಬರುತ್ತಿವೆ. ಈ ಹಿಂದೆ ಬಸನಗೌಡ ಪಾಟೀಲ ಯತ್ನಾಳ್, ಮುಸ್ಲಿಮರ ವಿರುದ್ಧ ಹೇಳಿಕೆ ನೀಡಿದ್ದರು. ಆದರೆ ಉತ್ತರ ಕರ್ನಾಟಕಕ್ಕೆ ಸರಕಾರದಿಂದ ಅನ್ಯಾಯವಾದರೆ ನಾನು ಬಿಜೆಪಿ ವಿರುದ್ಧವೂ ಧ್ವನಿಯೆತ್ತಲು ಸಿದ್ಧನಿದ್ದೇನೆ ಎನ್ನುವ ಮಾತುಗಳನ್ನು ಅವರು ಹೇಳಿದ್ದಾರೆ. ಈ ವಿಚಾರದಲ್ಲಿ ಅನಂತ್ ಕುಮಾರ್ ಹೆಗಡೆ ಪುಕ್ಕಲು ತನವನ್ನು ಹೊಂದಿದ್ದಾರೆ ಎನ್ನುವ ಮಾತುಗಳು ಕೇಳಿ ಬರುತ್ತಿವೆ.

ಅನಂತ್ ಕುಮಾರ್ ಹೆಗಡೆ ಕೇಂದ್ರ ಸರಕಾರದ ವೈಫಲ್ಯಗಳಿಂದ ಕಂಗೆಟ್ಟಿದ್ದಾರೆ. ದೇಶದಾದ್ಯಂತ ಬಿಜೆಪಿ ವಿರುದ್ಧ ಕೇಳಿ ಬರುತ್ತಿರುವ ಆರೋಪಗಳಿಂದ ಬೇಸತ್ತು ಹೋಗಿದ್ದಾರೆ. ತಮ್ಮ ಕ್ಷೇತ್ರ ಪ್ರಗತಿಯಲ್ಲೂ ಹಿಂದಿರುವ ಹೆಗಡೆಗೆ ಪಾಕಿಸ್ತಾನ ಹಾಗೂ ಮುಸ್ಲಿಮರು, ದಲಿತರೇ ಬಂಡವಾಳವಾಗಿದ್ದು, ಇವರ ವಿರುದ್ಧ ಹೇಳಿಕೆ ನೀಡಿರುವುದು ಮಾತ್ರ ಹೆಗಡೆಯ ದೊಡ್ಡ ಸಾಧನೆ ಎಂದು ಸಾಮಾಜಿಕ ಜಾಲತಾಣಗಳಲ್ಲಿ ಜನ ಆಕ್ರೋಶ ವ್ಯಕ್ತಪಡಿಸಿದ್ದಾರೆ.

ಕೇಂದ್ರ ಸರಕಾರದ ಅಭಿವೃದ್ಧಿಯ ಬಗ್ಗೆ ಮಾತನಾಡುವ ಅರ್ಹತೆ ಕಳೆದುಕೊಂಡಿರುವ ಅನಂತ್ ಕುಮಾರ್ ಹೆಗಡೆ, ಅತ್ಯಂತ ದುರ್ಬಲ ಸಂಸದರಂತೆ ಕಾಣಿಸಿಕೊಳ್ಳುತ್ತಿದ್ದಾರೆ. ಉತ್ತರ ಕರ್ನಾಟಕದಲ್ಲಿ ಪ್ರವಾಹ ಬಂದು ಜನರು ಇನ್ನೂ ಚೇತರಿಸಿಕೊಂಡಿಲ್ಲವಾದರೂ ಅನಂತ್ ಕುಮಾರ್ ಹೆಗಡೆಗೆ ಪಾಕಿಸ್ತಾನದ ಚಿಂತೆ. ಅನಂತ್ ಕುಮಾರ್ ಹೆಗಡೆಯವರು ಪಾಕಿಸ್ತಾನದ ಬಗ್ಗೆ ಯೋಚಿಸುವುದನ್ನು ಬಿಟ್ಟು, ಉತ್ತರ ಕರ್ನಾಟಕದಲ್ಲಿ ನೆರೆಯಿಂದ ಸಂತ್ರಸ್ತರಾಗಿರುವ ಹಿಂದೂಗಳ ಬಗ್ಗೆ ಮಾತನಾಡಬೇಕು. ನಿಮ್ಮ ಧರ್ಮ ಪ್ರೇಮ ಕೇವಲ ಮಾತಿನಲ್ಲಿದ್ದರೆ ಸಾಕಾಗದು. ನೆರೆಯಿಂದ ಕಂಗೆಟ್ಟಿರುವ ಎಷ್ಟು ಹಿಂದೂಗಳಿಗೆ ನಿಮ್ಮ ಸಾಂತ್ವನ ದೊರಕಿದೆ? ಎಷ್ಟು ಜನರಿಗೆ ನಿಮ್ಮ ಪರಿಹಾರ ದೊರಕಿದೆ? ಈ ವಿಚಾರದಲ್ಲಿ ನೀವು ಒಬ್ಬ ಸಂಸದರಾಗಿ ಮಾಡದ ಕೆಲಸವನ್ನು ಒಬ್ಬ ಜಿಲ್ಲಾಧಿಕಾರಿಯಾಗಿ ಸಸಿಕಾಂತ್ ಸೆಂಥಿಲ್ ಮಾಡಿದ್ದಾರೆ. ಸಸಿಕಾಂತ್ ಸೆಂಥಿಲ್ ಮುಂದೆ ಅನಂತ್ ಕುಮಾರ್ ಹೆಗಡೆ ಅತ್ಯಂತ ದುರ್ಬಲವಾಗಿ ಕಂಡು ಬರುತ್ತಾರೆ.

ಮೋದಿ ಮುಂದೆ ನಿಲ್ಲದ ಪುಕ್ಕಲು ಸಂಸದ ಹೆಗಡೆ!

ಧರ್ಮ, ಜಾತಿಯಂತಹ ವಿಚಾರ ಬಂದಾಗ ಘರ್ಜಿಸುವ ಸಂಸದ ಅನಂತ್ ಕುಮಾರ್ ಹೆಗಡೆ ಉತ್ತರಕರ್ನಾಟಕಕ್ಕೆ ನೆರೆ ಬಂದಾಗ ಎಲ್ಲಿ ಹೋಗಿದ್ದರು ಎನ್ನುವುದೇ ಯಾರಿಗೂ ತಿಳಿದಿಲ್ಲ. ತೋರಿಕೆಗೆ ಬಂದು ಫೋಟೋ ತೆಗೆಸಿಕೊಂಡು ಹೋದ ಸಂಸದರು ಆ ನಂತರ ಪತ್ತೆಯೇ ಇರಲಿಲ್ಲ. ಅದಾದರೂ ಬಿಡಿ, ಪ್ರವಾಹ ಸಂತ್ರಸ್ತರಿಗೆ ಶೀಘ್ರ ಪರಿಹಾರ ದೊರಕಿಸುವ ಜವಾಬ್ದಾರಿ ಅನಂತ್ ಕುಮಾರ್ ಹೆಗಡೆ ಸೇರಿದಂತೆ ರಾಜ್ಯದಿಂದ ಆಯ್ಕೆಯಾಗಿರುವ ಎಲ್ಲ ಸಂಸದರ ಮುಂದಿತ್ತು. ಆದರೆ ಮೋದಿ ಮುಂದೆ ಅನಂತ್ ಕುಮಾರ್ ಹೆಗಡೆ ಇಲ್ಲಿಯವರೆಗೂ ಘರ್ಜಿಸಿಲ್ಲ. ಜನರ ಪರವಾಗಿ ನಿಂತು ಮಾತನಾಡಲು ಧೈರ್ಯವಿಲ್ಲದ ಒಬ್ಬ ಸಂಸದನಿಗೆ ದಕ್ಷ ಜಿಲ್ಲಾಧಿಕಾರಿ ವಿರುದ್ಧ ಮಾತನಾಡುವ ಯೋಗ್ಯತೆ ಇದೆಯೇ? ಎಂದು ಜನ ಕೇಳುತ್ತಿದ್ದಾರೆ ಅನಂತ್ ಕುಮಾರ್ ಹೆಗಡೆಯವರು ಈ ಪ್ರಶ್ನೆಗಳಿಗೆ ಉತ್ತರಿಸಬೇಕಿದೆ. ಇಲ್ಲವಾದರೆ, ಅನಂತ್ ಕುಮಾರ್ ಹೆಗಡೆಯ ಮಾತುಗಳು ಉತ್ತರನ ಪೌರುಷ ಎಂದು ಜನ ತಿಳಿದುಕೊಳ್ಳುತ್ತಾರೆ ಎನ್ನುವುದು ಅಷ್ಟೇ ಸತ್ಯ.

ಅನಂತ್ ಕುಮಾರ್ ಹೆಗಡೆ ದೇಶ ಪ್ರೇಮಿ ಅಲ್ಲ. ಅವರು ಧರ್ಮ ಪ್ರೇಮಿಯೂ ಅಲ್ಲ. ತಾನು ತನ್ನ ಕ್ಷೇತ್ರದಲ್ಲಿ ಗೆಲ್ಲಬೇಕಾದರೆ, ಸಮುದಾಯಗಳ ಮೇಲೆ ಸಮುದಾಯಗಳನ್ನು ಎತ್ತಿಕಟ್ಟಿದರೆ ಮಾತ್ರ ಸಾಧ್ಯ ಎನ್ನುವುದು ಅವರಿಗೆ ಚೆನ್ನಾಗಿ ತಿಳಿದಿದೆ. ಅನಂತ್ ಕುಮಾರ್ ಹೆಗಡೆ ನಿಜವಾದ ಧರ್ಮ ಪ್ರೇಮಿಯಾಗಿದ್ದರೆ, ಹಿಂದೂ ಡಾಕ್ಟರ್ ಮೇಲೆ ಹಲ್ಲೆ ನಡೆಸಬಾರದಿತ್ತು. ಹಿಂದೂಗಳಾಗಿರುವ ದಲಿತರನ್ನು ನಾಯಿಗಳು ಎಂದು ಕರೆಯಬಾರದಿತ್ತು. ಕೇವಲ ಬ್ರಾಹ್ಮಣ್ಯವನ್ನು ಕಾಪಾಡುವ ಸನ್ಯಾಸಿಯಂತೆ ಅವರು ಬದುಕ ಬಾರದಿತ್ತು. ಈ ಸತ್ಯ ಜನರಿಗೆ ತಿಳಿದರೆ, ಅನಂತ್ ಕುಮಾರ್ ಹೆಗಡೆ ಒಬ್ಬ ರಾಜಕೀಯ ಸಂತ್ರಸ್ತರಂತೆ ಮುಂದಿನ ದಿನಗಳಲ್ಲಿ ಉಳಿಯ ಬೇಕಾಗುತ್ತದೆ ಎನ್ನುವುದು ಸ್ಪಷ್ಟ.

Like us on facebook
Disclaimer:

ರಾಷ್ಟ್ರಧ್ವನಿ ಅಂತಾರ್ಜಾಲ ಸುದ್ದಿ ವಾಹಿನಿಯಲ್ಲಿ ಪ್ರಕಟವಾಗುವ ಸುದ್ದಿಗಳ ಕುರಿತು ಸಾರ್ವಜನಿಕರು ಆರೋಗ್ಯಕರ ಚರ್ಚೆ, ಕಮೆಂಟ್ ಗಳನ್ನು ಮಾಡಬಹುದಾಗಿದೆ. ಧರ್ಮ, ಜಾತಿ ನಿಂದನೆಯಾಗುವಂತಹ ಮತ್ತು ಸಾಮರಸ್ಯ ಕೆಡಿಸುವಂತಹ ದುರುದ್ದೇಶಪೂರಿತ ಕಮೆಂಟ್ ಹಾಗೂ ಚರ್ಚೆ ಕಾನೂನು ರೀತಿಯಲ್ಲಿ ಅಪರಾಧವಾಗಿರುತ್ತದೆ. ದೇಶದ ಕಾನೂನು ಸುವ್ಯವಸ್ಥೆಗೆ ಧಕ್ಕೆ ತರುವಂತಹ ಯಾವುದೇ ಕಮೆಂಟ್ ಗಳನ್ನು ಹಾಕಿದ್ದಲ್ಲಿ, ಅದಕ್ಕೆ ಕಮೆಂಟ್ ಹಾಕುವವರೇ ಹೊಣೆಗಾರರಾಗಿರುತ್ತಾರೆ. ಅಂತಹವರ ಹೆಸರು ಮತ್ತು ಐಪಿ ಅಡ್ರೆಸ್ ಗಳನ್ನು ಸಂಬಂಧಪಟ್ಟ ಇಲಾಖೆಗೆ ಒದಗಿಸಲು ರಾಷ್ಟ್ರಧ್ವನಿ ಬದ್ಧವಾಗಿರುತ್ತದೆ.

ಸಿನಿಮಾ
ಸಂಪಾದಕೀಯ ಮತ್ತಷ್ಟು
ಇನ್ನು ನೆನಪುಗಳಲ್ಲಿ ಮಾತ್ರ ನಿತ್ಯ ಸಂಚಾರಿ.‌‌.‌‌,..
ರಾಷ್ಟ್ರಧ್ವನಿ ಆರಂಭಗೊಂಡು 2019 ರ ಜನವರಿಗೆ ಸರಿಯಾಗಿ ಒಂದು ವರ್ಷ ‌ಆಗಿತ್ತು. ಹೊಸವರ್ಷದ ಸಂಭ್ರಮದಿಂದ...
POLL

[democracy id="1"]