Saturday, August 24 , 2019
ಬೇಡಿಕೆ ಈಡೇರಿಸದ ದೇವರಿಗೆ ಚಪ್ಪಲಿ ಹಾರ ಹಾಕಿದ ಭಕ್ತ | ಪೊಲೀಸರಿಂದ ಭಕ್ತನ ಬಂಧನ

ವಿಜಯಪುರ(11.06.2019): ದೇವರು ತನ್ನ ಬೇಡಿಕೆ ಈಡೇರಿಸಲಿಲ್ಲ ಎನ್ನುವ ಕಾರಣಕ್ಕೆ ಕೋಪಗೊಂಡ ಭಕ್ತನೋರ್ವ ದೇವರಿಗೆ ಚಪ್ಪಲಿ ಹಾರ ಹಾಕಿದ ಘಟನೆ ಜಿಲ್ಲೆಯ ನಿಡಗುಂದಿ ತಾಲೂಕಿನ ಗೊಳಸಂಗಿ ಗ್ರಾಮದಲ್ಲಿ ನಡೆದಿದ್ದು, ಈ ಸಂಬಂಧ ಭಕ್ತನನ್ನು ಪೊಲೀಸರು ಬಂಧಿಸಿದ್ದಾರೆ.

ಗೊಳಸಂಗಿ ಗ್ರಾಮದ ಭಕ್ತ ಬಸಪ್ಪ ಚಂದ್ರಾಮಪ್ಪ ದೊಡ್ಡಮನಿ(32) ಬಂಧಿತ ಆರೋಪಿಯಾಗಿದ್ದಾನೆ. ತಾನು ಸುಮಾರು ಮೂರು ಲಕ್ಷ ರೂಪಾಯಿ ಸಾಲ ಮಾಡಿದ್ದು, ಆ ಸಾಲ ತೀರಬೇಕು ಮತ್ತು ಪತ್ನಿಯ ಜೊತೆಗೆ ಹದಗೆಟ್ಟ ಸಂಬಂಧ ಸರಿ ಹೋಗಬೇಕು ಎಂದು ಬಸಪ್ಪ ದೇವರಲ್ಲಿ ಹರಕೆಯಿಟ್ಟಿದ್ದನು. ಆದರೆ, ದೇವರು ಈ ಬೇಡಿಕೆಗಳನ್ನು ಈಡೇರಿಸದೇ ಇದ್ದುದರಿಂದ ತೀವ್ರ ಆಕ್ರೋಶಗೊಂಡ ಬಸಪ್ಪ ದೇವರ ನಂದಿ ವಿಗ್ರಹಕ್ಕೆ ಚಪ್ಪಲಿ ಹಾರ ಹಾಕಿದ್ದನು ಎಂದು ವಿಚಾರಣೆಯ ವೇಳೆಯಲ್ಲಿ ಆರೋಪಿ ಬಾಯ್ಬಿಟ್ಟಿದ್ದಾನೆ.

ಶನಿವಾರ ಈ ಘಟನೆ ನಡೆದಿತ್ತು. ಬಸಪ್ಪ ತನ್ನ ಕಷ್ಟವನ್ನು ದೂರ ಮಾಡುವಂತೆ ದಿನ ದೇವರಿಗೆ ಪ್ರಾರ್ಥನೆ ಸಲ್ಲಿಸಿದ್ದ. ಆದರೆ ದೇವರು ಈತನ ಪ್ರಾರ್ಥನೆಯನ್ನು ಈಡೇರಿಸಲೇ ಇಲ್ಲ. ಇದರಿಂದ ತೀವ್ರವಾಗಿ ನೊಂದ ಆತ ಬೆಳಗ್ಗೆ ನಂದಿ ವಿಗ್ರಹಕ್ಕೆ ಚಪ್ಪಲಿ ಹಾರ ಹಾಕುವ ಮೂಲಕ ತನ್ನ ಆಕ್ರೋಶ ಹೊರಹಾಕಿದ್ದ.

Like us on facebook
Disclaimer:

ರಾಷ್ಟ್ರಧ್ವನಿ ಅಂತಾರ್ಜಾಲ ಸುದ್ದಿ ವಾಹಿನಿಯಲ್ಲಿ ಪ್ರಕಟವಾಗುವ ಸುದ್ದಿಗಳ ಕುರಿತು ಸಾರ್ವಜನಿಕರು ಆರೋಗ್ಯಕರ ಚರ್ಚೆ, ಕಮೆಂಟ್ ಗಳನ್ನು ಮಾಡಬಹುದಾಗಿದೆ. ಧರ್ಮ, ಜಾತಿ ನಿಂದನೆಯಾಗುವಂತಹ ಮತ್ತು ಸಾಮರಸ್ಯ ಕೆಡಿಸುವಂತಹ ದುರುದ್ದೇಶಪೂರಿತ ಕಮೆಂಟ್ ಹಾಗೂ ಚರ್ಚೆ ಕಾನೂನು ರೀತಿಯಲ್ಲಿ ಅಪರಾಧವಾಗಿರುತ್ತದೆ. ದೇಶದ ಕಾನೂನು ಸುವ್ಯವಸ್ಥೆಗೆ ಧಕ್ಕೆ ತರುವಂತಹ ಯಾವುದೇ ಕಮೆಂಟ್ ಗಳನ್ನು ಹಾಕಿದ್ದಲ್ಲಿ, ಅದಕ್ಕೆ ಕಮೆಂಟ್ ಹಾಕುವವರೇ ಹೊಣೆಗಾರರಾಗಿರುತ್ತಾರೆ. ಅಂತಹವರ ಹೆಸರು ಮತ್ತು ಐಪಿ ಅಡ್ರೆಸ್ ಗಳನ್ನು ಸಂಬಂಧಪಟ್ಟ ಇಲಾಖೆಗೆ ಒದಗಿಸಲು ರಾಷ್ಟ್ರಧ್ವನಿ ಬದ್ಧವಾಗಿರುತ್ತದೆ.

ಸಿನಿಮಾ
ಸಂಪಾದಕೀಯ ಮತ್ತಷ್ಟು
ಅಪಾಯಕಾರಿ ಅಣಕು ಕಾರ್ಯಾಚರಣೆಗಳಲ್ಲಿ ವಿದ್ಯಾರ್ಥಿಗಳನ್ನು ಬಳಕೆ..
ವಿಪತ್ತಿನ ಸಂದರ್ಭದಲ್ಲಿ ಅದರಿಂದ ಪಾರಾಗುವುದು ಹೇಗೆ ಎನ್ನುವುದರ ಬಗ್ಗೆ ವಿದ್ಯಾರ್ಥಿಗಳಲ್ಲಿ ಜಾಗೃತಿ ಮೂಡಿಸುವುದು ಒಳ್ಳೆಯ...
POLL

[democracy id="1"]