Sunday, May 31 , 2020
ಯೋಗಿ ಸರಕಾರದ ಉತ್ತರಪ್ರದೇಶ ಈಗ ಸುಳಿಗೆಕೋರರ ಸಾಮ್ರಾಜ್ಯ | ವರದಿ ಮಾಡಲು ತೆರಳಿದ ಪತ್ರಕರ್ತನ ಬಾಯಿಗೆ ಮೂತ್ರ ಮಾಡಿದ ಪೊಲೀಸರು

ಲಕ್ನೋ(12.06.2019): ಉತ್ತರಪ್ರದೇಶದಲ್ಲಿ ಬಿಜೆಪಿ ಪತ್ರಕರ್ತರನ್ನು ಗುರಿಯಾಗಿಟ್ಟುಕೊಂಡು ದಾಳಿ ನಡೆಸುತ್ತಿರುವ ಘಟನೆಗಳು ಮುಂದುವರಿದಿದ್ದು, ಇದೀಗ ಇನ್ನೂ ಮುಂದುವರಿದಿರುವ ಯೋಗಿ ಸರಕಾರ, ಕರ್ತವ್ಯ ನಿರತ ಪತ್ರಕರ್ತನನ್ನು ಬಂಧಿಸಿ ಪೊಲೀಸ್ ಠಾಣೆಯಲ್ಲಿ ಆತನ ಬಾಯಿಗೆ ಮೂತ್ರ ಮಾಡಿ ವಿಕೃತ ಮೆರೆದ ಘಟನೆ ವರದಿಯಾಗಿದೆ.

ಇತ್ತೀಚೆಗಷ್ಟೆ ಸಿಎಂ ಯೋಗಿ ವಿರುದ್ಧ ಪತ್ರಕರ್ತ ಪ್ರಶಾಂತ್ ಕನೋಜಿಯಾ ಅವರು ಸಾಮಾಜಿಕ ಜಾಲತಾಣಗಳಲ್ಲಿ ಮಾಡಿದ ಒಂದು ಪೋಸ್ಟ್ ನ ಕಾರಣ ಮುಂದಿಟ್ಟುಕೊಂಡು ಅವರನ್ನು ಬಂಧಿಸಿ ಜೈಲಿನಲ್ಲಿಟ್ಟಿದ್ದರು. ಈ ಪ್ರಕರಣವನ್ನು ವಿಚಾರಣೆ ಮಾಡಿದ ಸುಪ್ರೀಂ ಕೋರ್ಟ್, ಇದೇನು ಕೊಲೆ ಪ್ರಕರಣವಲ್ಲ ಅಲ್ವಾ? ಎಂದು ಯೋಗಿ ಸರಕಾರವನ್ನು ತೀವ್ರವಾಗಿ ತರಾಟೆಗೆತ್ತಿಕೊಂಡು ಪತ್ರಕರ್ತನನ್ನು ಬಿಡುಗಡೆ ಮಾಡಲು ಆದೇಶ ನೀಡಿತ್ತು. ಇದಾಗಿ ಒಂದು ದಿನದೊಳಗೆ ಮತ್ತೋರ್ವ ಪತ್ರಕರ್ತನನ್ನು ಬಂಧಿಸಿ ಪೊಲೀಸರು ದೌರ್ಜನ್ಯ ನಡೆಸಿದ್ದಾರೆ.

ಯೋಗಿ ಅಧಿಕಾರ ಪಡೆದ ಬಳಿಕ ಉತ್ತರಪ್ರದೇಶದಲ್ಲಿ ಸುಳಿಗೆಕೋರರು ಎಗ್ಗಿಲ್ಲದೇ ತಮ್ಮ ಅವ್ಯವಹಾರಗಳನ್ನು ನಡೆಸುತ್ತಿದ್ದಾರೆ. ಅಂತೆಯೇ ದಿಮ್ನಾಪುರ ರೈಲ್ವೇ ಠಾಣೆಯ ಪೊಲೀಸರೇ ಖುದ್ದು ಶಾಮೀಲಾಗಿ ಗೂಡ್ಸ್ ರೈಲಿನಿಂದ ಪದಾರ್ಥಗಳನ್ನು ಕದ್ದ ಮಾರುತ್ತಿದ್ದಾರೆ. ಈ ಬಗ್ಗೆ ಪತ್ರಕರ್ತ ಅಮಿತ್ ಶರ್ಮಾ ಎಂಬವರು ವರದಿ ಮಾಡಿದ್ದು, ಇದಾದ ಬಳಿಕ ಅವರ ಮೇಲೆ ರೈಲ್ವೇ ಪೊಲೀಸರು ಕಣ್ಣಿಟ್ಟಿದ್ದರು. ಈ ಬಗ್ಗೆ ವರದಿ ಮಾಡಲು ರಾತ್ರಿ ವೇಳೆ ತೆರಳಿದ್ದ ಪತ್ರಕರ್ತನನ್ನು ಬಂಧಿಸಿದ ರೈಲ್ವೇ ಪೊಲೀಸರು ಕ್ಯಾಮರಾ ಕಸಿದುಕೊಂಡು, ವಿವಸ್ತ್ರಗೊಳಿಸಿ, ಅವಾಚ್ಯ ಶಬ್ದಗಳಿಂದ ನಿಂದಿಸಿ, ಹಲ್ಲೆ ನಡೆಸಿದ್ದಾರೆ. ಇಷ್ಟು ಸಾಲದು ಎಂಬಂತೆ, ಪತ್ರಕರ್ತನನ್ನು ನೆಲಕ್ಕೆ ತಳ್ಳಿ ಬಾಯಿಗೆ ಮೂತ್ರ ಮಾಡಿದ್ದಾರೆ ಎಂದು ತಿಳಿದು ಬಂದಿದೆ.

Like us on facebook
Disclaimer:

ರಾಷ್ಟ್ರಧ್ವನಿ ಅಂತಾರ್ಜಾಲ ಸುದ್ದಿ ವಾಹಿನಿಯಲ್ಲಿ ಪ್ರಕಟವಾಗುವ ಸುದ್ದಿಗಳ ಕುರಿತು ಸಾರ್ವಜನಿಕರು ಆರೋಗ್ಯಕರ ಚರ್ಚೆ, ಕಮೆಂಟ್ ಗಳನ್ನು ಮಾಡಬಹುದಾಗಿದೆ. ಧರ್ಮ, ಜಾತಿ ನಿಂದನೆಯಾಗುವಂತಹ ಮತ್ತು ಸಾಮರಸ್ಯ ಕೆಡಿಸುವಂತಹ ದುರುದ್ದೇಶಪೂರಿತ ಕಮೆಂಟ್ ಹಾಗೂ ಚರ್ಚೆ ಕಾನೂನು ರೀತಿಯಲ್ಲಿ ಅಪರಾಧವಾಗಿರುತ್ತದೆ. ದೇಶದ ಕಾನೂನು ಸುವ್ಯವಸ್ಥೆಗೆ ಧಕ್ಕೆ ತರುವಂತಹ ಯಾವುದೇ ಕಮೆಂಟ್ ಗಳನ್ನು ಹಾಕಿದ್ದಲ್ಲಿ, ಅದಕ್ಕೆ ಕಮೆಂಟ್ ಹಾಕುವವರೇ ಹೊಣೆಗಾರರಾಗಿರುತ್ತಾರೆ. ಅಂತಹವರ ಹೆಸರು ಮತ್ತು ಐಪಿ ಅಡ್ರೆಸ್ ಗಳನ್ನು ಸಂಬಂಧಪಟ್ಟ ಇಲಾಖೆಗೆ ಒದಗಿಸಲು ರಾಷ್ಟ್ರಧ್ವನಿ ಬದ್ಧವಾಗಿರುತ್ತದೆ.

ಸಿನಿಮಾ
ಸಂಪಾದಕೀಯ ಮತ್ತಷ್ಟು
ಸಂವಿಧಾನಾತ್ಮಕ ಸದನಗಳಲ್ಲಿ ಪಾಸ್ ಆಗುತ್ತಿದೆ ‘ಹಿಂದೂ..
ದ್ವೇಷಪೂರಿತ, ಅಸಂವಿಧಾನಿಕ ಪೌರತ್ವ ತಿದ್ದುಪಡಿ ಮಸೂದೆ ಉಭಯ ಸದನಗಳಲ್ಲಿ ಅಂಗೀಕಾರವಾಗಿದೆ. ಇನ್ನು ರಾಷ್ಟ್ರಪತಿ ಅಂಕಿತ...
POLL

[democracy id="1"]