Thursday, December 12 , 2019
ಹೊಸ ಹೊಸ ಅಚ್ಚರಿಗಾಗಿ ಹಿಂಬಾಲಿಸಿ ರಾಷ್ಟ್ರಧ್ವನಿ

ಜಗತ್ತು ಇಂದು ಚಿಕ್ಕದಾಗಿದೆ, ಜಗತ್ತಿನ ಯಾವುದೇ ಮೂಲೆಯಲ್ಲಿ ಏನೇ ನಡೆದರೂ ಕ್ಷಣಾರ್ಧದಲ್ಲಿ ನಮ್ಮ ಕಣ್ಣ ಮುಂದೆ ಯಥಾವತ್ತಾಗಿ ವೀಕ್ಷಣೆಗೆ, ಓದುವಿಕೆಗೆ ಲಭ್ಯವಿರುತ್ತದೆ. ಅದಕ್ಕೆ ಕಾರಣ, ಇಂದು ನಮ್ಮ ಮುಂದೆ ಬೆಳೆದು ನಿಂತಿರುವ ಮಾಧ್ಯಮ ಲೋಕ.

ಇಂದು ಕ್ಷಣ ಕ್ಷಣದ ಸುದ್ದಿಗಳಿಗಾಗಿ ಮುಂಜಾನೆ ಪತ್ರಿಕೆ ನಮ್ಮ ಕೈ ಸೇರುವ ವರೆಗೆ ಕಾಯುವ ಅಗತ್ಯವಿಲ್ಲ. ಎಲೆಕ್ಟ್ರಾನಿಕ್ ಮಾಧ್ಯಮ ಯುಗದಲ್ಲಿ ನಾವು ಸುದ್ದಿಗಳನ್ನು ಕ್ಷಣಕ್ಷಣಕ್ಕೂ ಕಣ್ಣಾರೆ ಕಂಡರೂ, ಅದನ್ನು ಪತ್ರಿಕೆಗಳಲ್ಲಿ ಓದಿ ಪರಾಮರ್ಶಿಸಿದ ಬಳಿಕವೇ ಆ ಸುದ್ದಿಗೊಂದು ವಿಶ್ವಾಸಾರ್ಹತೆಯ ಮುದ್ರೆಯನ್ನು ಒತ್ತುವವರು ನಾವು. ಆದರೆ, ಅದೇ ಓದುವಿಕೆಯ ಮಾದರಿಯ ಮಾಧ್ಯಮವಾಗಿ ಇಂದು ವೆಬ್ ಮಾಧ್ಯಮ ಪ್ರಬಲವಾಗಿ ಜನರ ಮುಂದೆ ಪಸರಿಸುತ್ತಿದೆ. ಇತ್ತೀಚಿನ ದಿನಗಳಲ್ಲಿ ಪ್ರತಿಯೊಬ್ಬರ ಕೈಯಲ್ಲೂ ಸ್ಮಾರ್ಟ್ ಫೋನ್, ಇಂಟರ್ನೆಟ್ ಸೌಲಭ್ಯ ಇರುವುದರಿಂದ ಎಂತದ್ದೇ ಸುದ್ದಿಯಿರಲಿ, ವೆಬ್ ಮಾಧ್ಯಮದಲ್ಲಿ ಕ್ಷಣಾರ್ಧದಲ್ಲಿ ಓದುಗನ ಕೈ ಸೇರುತ್ತದೆ. ಅಲ್ಲದೆ ಒಂದು ಪತ್ರಿಕೆಯಲ್ಲಿ ಸುದ್ದಿಯನ್ನು ಓದಿದಷ್ಟೇ ಸಂತೃಪ್ತಿಯನ್ನೂ ಒದಗಿಸುತ್ತದೆ.

ಆದರೆ, ಈ ವೆಬ್ ಮಾಧ್ಯಮದಲ್ಲೂ ಈಗಾಗಲೇ ಒಂದು ನಿರ್ಧಿಷ್ಠ ಅಭಿಪ್ರಾಯ ಜನರಲ್ಲಿ ಮೂಡುವಂತಹ ಕಲುಷಿತ ಮನಸ್ಸುಗಳು ಕಾರ್ಯನಿರ್ವಹಿಸಿವೆ. ಸೆಕ್ಸ್, ಅಶ್ಲೀಲತೆ, ಸುಳ್ಳು ಸುದ್ದಿ ಹರಡುವುದು ಮುಂತಾದ ಕೃತ್ಯಗಳಿಂದ ವೆಬ್ ಮಾಧ್ಯಮಗಳೂ ವಿಶ್ವಾಸಾರ್ಹತೆಯನ್ನು ಕಳೆದುಕೊಳ್ಳುವಂತೆ ಮಾಡಲಾಗಿದೆ. ಆದರೆ, ಈ ಎಲ್ಲ ವಿಷಯಗಳನ್ನು ಗಮನದಲ್ಲಿಟ್ಟುಕೊಂಡು ‘ರಾಷ್ಟ್ರಧ್ವನಿ’ ಓದುಗನಿಗೆ ಒಂದು ಅಪ್ಪಟ ಪತ್ರಿಕೆಯನ್ನು ಓದಿದಷ್ಟೇ ಸಂತೃಪ್ತಿಯನ್ನು ಒದಗಿಸುವ ನಿಟ್ಟಿನಲ್ಲಿ ಸುದ್ದಿ, ವಿಶ್ಲೇಷಣೆ ಸೇರಿದಂತೆ ವಿವಿಧ ಪ್ರಾಕಾರಗಳನ್ನು ಒದಗಿಸಲು ಬದ್ಧವಾಗಿದೆ. ಇಲ್ಲಿ ಸುದ್ದಿಗೇ ಹೆಚ್ಚಿನ ಪ್ರಾಮುಖ್ಯತೆಯಿರುತ್ತದೆ ಮತ್ತು ಅದು ಸತ್ಯಕ್ಕೆ ಹತ್ತಿರವಾಗಿರುತ್ತದೆ. ಪ್ರಚಾರದ ಆತುರತೆಗಾಗಿ ಇಲ್ಲಿ ಪರಿಶೀಲಿಸದ ಸುದ್ದಿಗಳಿಗೆ ಅವಕಾಶವಿರುವುದಿಲ್ಲ. ಸತ್ಯ, ನಿಷ್ಠುರ, ನಿಖರ ಸುದ್ದಿಗಷ್ಟೇ ಇಲ್ಲಿ ಸ್ಥಾನವಿರುತ್ತದೆ.

ಹೊಸ ತಲೆಮಾರಿಗೆ ಆ ತಲೆಮಾರಿನ ಯೋಚನೆಗೆ ಒಪ್ಪುವಂತಹ ದಿಕ್ಕಿನಲ್ಲಿ ಸಾಗುವುದು ನಮ್ಮ ಗುರಿ. ಈ ತಲೆಮಾರಿನ ಆಶಯ, ಹಿತ ಕಾಯುವುದು ನಮ್ಮ ಧ್ಯೇಯ. ಅದಕ್ಕಾಗಿಯೇ, ನಾವು ಈ ವೆಬ್ ಮಾಧ್ಯಮವನ್ನು ಒಂದು ಪತ್ರಿಕೋದ್ಯಮವಾಗಿ ಪರಿಗಣಿಸಿಲ್ಲ, ಇದನ್ನು ಪತ್ರಿಕಾ ಧರ್ಮವಾಗಿ ಸ್ವೀಕರಿಸಿದ್ದೇವೆ. ಧರ್ಮ ಸರ್ವ ಜನರನ್ನು ಪ್ರೀತಿಸುವಂತದ್ದು, ಸರ್ವ ಜನರನ್ನು ಕಾಯುವಂತದ್ದು. ಎಲ್ಲ ಧರ್ಮದ ಸಾರವೇ ಸತ್ಯ, ತ್ಯಾಗ, ಪ್ರೀತಿ, ಶಾಂತಿ, ಸದ್ವಿಚಾರ ಆಗಿರುತ್ತದೆ. ಹೀಗಾಗಿ ಧರ್ಮದ ಹಾದಿಯಲ್ಲಿ ಸರ್ವ ಜನರನ್ನೂ ಪ್ರೀತಿಸುವ, ಸರ್ವ ಜನರಿಗೂ ಸತ್ಯವನ್ನು ಸಾರುವ, ಸರ್ವ ಸಮಾಜದಲ್ಲೂ ಶಾಂತಿಯನ್ನು ನೆಲೆಸುವ, ಸರ್ವ ಜನರಲ್ಲೂ ತ್ಯಾಗ, ಸದ್ವಿಚಾರ ಮನೋಭಾವನೆ ನೆಲೆಗೊಳಿಸುವ ದಿಕ್ಕಿನಲ್ಲಿ ನಮ್ಮದೊಂದು ಕಿಂಚಿತ್ತು ಪ್ರಯತ್ನ. ನಮ್ಮ ಮಣ್ಣಿನ ನೆಲ-ಜಲ-ಭಾಷೆಯ ಸಂರಕ್ಷಣೆ; ಸಂಸ್ಕೃತಿ-ಪರಂಪನೆ ಪುನಃಸ್ಥಾಪನೆ; ಪರಧರ್ಮ, ಪರಭಾಷೆ ಸಹಿಷ್ಣುತೆ ಕಾಪಾಡುವುದು; ಭವ್ಯ ಭಾರತದ ಇತಿಹಾಸದಲ್ಲಿ ದಾಖಲಾಗಿರುವ ಗತ ವೈಭವಕ್ಕೆ ಮರುಜನ್ಮ ನೀಡುವುದೇ ನಮ್ಮ ಪರಮೋಚ್ಛ ಗುರಿ.

ಸಮಪಾಲು – ಸಮಬಾಳು ನೀತಿಯನ್ನಾಧರಿಸಿ ರೂಪಿತವಾಗಿರುವ ಈ ನೆಲದ ಕಾನೂನು ಕಟ್ಟಳೆಗಳನ್ನು ಗೌರವಿಸುತ್ತಾ, ಪತ್ರಿಕಾಧರ್ಮವನ್ನು ಮೆರೆಯುತ್ತಾ ಒಂದು ಸಮೃದ್ಧ ಸಮಾಜವನ್ನು ಕಟ್ಟುವ ಕನಸು ಹೊತ್ತು ಬರುತ್ತಿರುವ ನಮ್ಮನ್ನು ಹರಸಿ, ಮುನ್ನಡೆಸುವಿರೆಂಬ ದೃಢ ವಿಶ್ವಾಸ ಹೊಂದಿದ್ದೇವೆ.

ಇನ್ನು ಪ್ರತಿ ಕ್ಷಣ ಕ್ಷಣದ ಸುದ್ದಿಗಳನ್ನು ‘ರಾಷ್ಟ್ರಧ್ವನಿ’ ಸದಾ ನಿಮ್ಮ ಅಂಗೈಯೊಳಗೇ ಹೊತ್ತು ತರುತ್ತದೆ. ನಮ್ಮ ಅಧಿಕೃತ ಫೇಸ್ ಬುಕ್, ಟ್ವಿಟರ್ ಪುಟಗಳನ್ನು ಹಿಂಬಾಲಿಸುತ್ತಿದ್ದರೆ, ನಿಮ್ಮ ಬೆರಳ ತುದಿಯಲ್ಲೇ ನಮ್ಮ ಸುದ್ದಿಗಳನ್ನು ನೀವು ಓದಬಹುದು. ನಿಮ್ಮ ಮೊಬೈಲ್ ಫೋನ್, ಡೆಸ್ಕ್ ಟಾಪ್, ಲ್ಯಾಪ್ ಟಾಪ್ ಗಳಲ್ಲೂ ನೀವು ಇದನ್ನು ಓದಬಹುದು. ಪ್ರತಿ ಕ್ಷಣವೂ ಹೊಸತನದೊಂದಿಗೆ ಹೊಸ ವಿಚಾರಗಳನ್ನು ಹೊತ್ತು ರಾಷ್ಟ್ರಧ್ವನಿ ನಿಮ್ಮ ಮುಂದಿರುತ್ತದೆ. ಅದಕ್ಕಾಗಿ ನೀವು ನಮ್ಮ ‘ರಾಷ್ಟ್ರಧ್ವನಿ’ ವೆಬ್ ವಾಹಿನಿಯನ್ನು ಸದಾ ಹಿಂಬಾಲಿಸುತ್ತಿರಿ. ಇಲ್ಲಿ ನಿಮಗೆ ಹೊಸ ಹೊಸ ಅಚ್ಚರಿಗಳು ಪ್ರತಿ ದಿನವೂ ಕಾದಿರುತ್ತವೆ.

Like us on facebook
Disclaimer:

ರಾಷ್ಟ್ರಧ್ವನಿ ಅಂತಾರ್ಜಾಲ ಸುದ್ದಿ ವಾಹಿನಿಯಲ್ಲಿ ಪ್ರಕಟವಾಗುವ ಸುದ್ದಿಗಳ ಕುರಿತು ಸಾರ್ವಜನಿಕರು ಆರೋಗ್ಯಕರ ಚರ್ಚೆ, ಕಮೆಂಟ್ ಗಳನ್ನು ಮಾಡಬಹುದಾಗಿದೆ. ಧರ್ಮ, ಜಾತಿ ನಿಂದನೆಯಾಗುವಂತಹ ಮತ್ತು ಸಾಮರಸ್ಯ ಕೆಡಿಸುವಂತಹ ದುರುದ್ದೇಶಪೂರಿತ ಕಮೆಂಟ್ ಹಾಗೂ ಚರ್ಚೆ ಕಾನೂನು ರೀತಿಯಲ್ಲಿ ಅಪರಾಧವಾಗಿರುತ್ತದೆ. ದೇಶದ ಕಾನೂನು ಸುವ್ಯವಸ್ಥೆಗೆ ಧಕ್ಕೆ ತರುವಂತಹ ಯಾವುದೇ ಕಮೆಂಟ್ ಗಳನ್ನು ಹಾಕಿದ್ದಲ್ಲಿ, ಅದಕ್ಕೆ ಕಮೆಂಟ್ ಹಾಕುವವರೇ ಹೊಣೆಗಾರರಾಗಿರುತ್ತಾರೆ. ಅಂತಹವರ ಹೆಸರು ಮತ್ತು ಐಪಿ ಅಡ್ರೆಸ್ ಗಳನ್ನು ಸಂಬಂಧಪಟ್ಟ ಇಲಾಖೆಗೆ ಒದಗಿಸಲು ರಾಷ್ಟ್ರಧ್ವನಿ ಬದ್ಧವಾಗಿರುತ್ತದೆ.

ಸಿನಿಮಾ
ಸಂಪಾದಕೀಯ ಮತ್ತಷ್ಟು
ಸಂವಿಧಾನಾತ್ಮಕ ಸದನಗಳಲ್ಲಿ ಪಾಸ್ ಆಗುತ್ತಿದೆ ‘ಹಿಂದೂ..
ದ್ವೇಷಪೂರಿತ, ಅಸಂವಿಧಾನಿಕ ಪೌರತ್ವ ತಿದ್ದುಪಡಿ ಮಸೂದೆ ಉಭಯ ಸದನಗಳಲ್ಲಿ ಅಂಗೀಕಾರವಾಗಿದೆ. ಇನ್ನು ರಾಷ್ಟ್ರಪತಿ ಅಂಕಿತ...
POLL

[democracy id="1"]