Wednesday, October 23 , 2019
ಬೆತ್ತಲೆ ಮೆರವಣಿಗೆ ಪ್ರಕರಣ | ಸಂತ್ರಸ್ತ ಪ್ರತಾಪ್ ನನ್ನು ಭೇಟಿ ಮಾಡಿದ ಶಾಸಕ ಎನ್.ಮಹೇಶ್ | ಕುಟುಂಬಸ್ಥರಿಗೆ ಸಾಂತ್ವನ

ಮೈಸೂರು(13.06.2019): ಗುಂಡ್ಲುಪೇಟೆಯಲ್ಲಿ ದಲಿತ ಯುವಕನನ್ನು ಬೆತ್ತಲೆ ಮೆರವಣಿಗೆ ಮಾಡಿರುವ ಪ್ರಕರಣಕ್ಕೆ ಸಂಬಂಧಿಸಿದಂತೆ ಗುಂಡ್ಲುಪೇಟೆ ಶನೈಶ್ವರ ದೇವಸ್ಥಾನ ಹಾಗೂ ಸಂತ್ರಸ್ತ ಯುವಕ ಪ್ರತಾಪ್ ದಾಖಲಾಗಿರುವ ಮೈಸೂರಿನ ಆಸ್ಪತ್ರೆಗೆ ಮಾಜಿ ಸಚಿವ, ಹಾಲಿ ಶಾಸಕ ಎನ್.ಮಹೇಶ್ ಭೇಟಿ ನೀಡಿ ಘಟನೆಯ ಕುರಿತು ಮಾಹಿತಿ ಪಡೆದರು.

ಆಸ್ಪತ್ರೆಯಲ್ಲಿ ಸಂತ್ರಸ್ತ ಪ್ರತಾಪ್ ಜೊತೆಗೆ ಎನ್.ಮಹೇಶ್ ಮಾತನಾಡಿದ್ದಾರೆ. ಎನ್.ಮಹೇಶ್ ಅವರ ಜೊತೆ ಇಂಗ್ಲಿಷ್ ನಲ್ಲಿಯೇ ಪ್ರತಾಪ್ ಮಾತನಾಡಿದ್ದಾರೆ. ಪ್ರತಾಪ್ ಬಹಳ ಪ್ರತಿಭಾನ್ವಿತನಾಗಿದ್ದು, ಮಾಧ್ಯಮಗಳಲ್ಲಿ ವರದಿಯಾಗಿರುವಂತೆ ಯಾವುದೇ ಮಾನಸಿಕ ಕಾಯಿಲೆಗಳು ಈತನಿಗಿದೆ ಎನ್ನುವುದು ಕಂಡು ಬಂದಿಲ್ಲ. ಹೆಚ್ಚು ಪುಸ್ತಕಗಳನ್ನು ಓದುವ ಹವ್ಯಾಸ ಸಂತ್ರಸ್ತ ಯುವಕನಿಗಿದೆ ಎಂದು ತಿಳಿದು ಬಂದಿದೆ.

ಪ್ರತಾಪ್ ಅವರ ಪೂರ್ವಪರ ವಿಚಾರವನ್ನು ವಿಚಾರಿಸಿದ ವೇಳೆ, ದೇವರ ಬಗ್ಗೆ ಯುವಕ ಹೆಚ್ಚಿನ ಭಕ್ತಿಯನ್ನು ಹೊಂದಿದ್ದಾನೆ ಎಂದು ತಿಳಿದು ಬಂದಿದೆ. ಜೊತೆಗೆ ಇವರು ರಾಮಕೃಷ್ಣ ಆಶ್ರಮದಲ್ಲಿಯೇ ಓದುತ್ತಾ ಬೆಳೆದವರು ಎಂದು ಪ್ರತಾಪ್ ಎನ್.ಮಹೇಶ್ ಅವರಿಗೆ ತಿಳಿಸಿದ್ದಾರೆ. ಹೀಗೆ ಎನ್.ಮಹೇಶ್ ಅವರ ಜೊತೆ ಸುಮಾರು ಅರ್ಧಗಂಟೆಗಳ ಕಾಲ ಪ್ರತಾಪ್ ಮಾತನಾಡಿದ್ದಾರೆ.

ಈ ಸಂದರ್ಭ ಘಟನೆಯಿಂದ ನೊಂದ ಸಂತ್ರಸ್ತ ಪ್ರತಾಪ್ ಹಾಗೂ ಕುಟುಂಬಸ್ಥರಿಗೆ ಸಾಂತ್ವನ ಹೇಳಿ ಧೈರ್ಯ ತುಂಬಿದರು. ಪ್ರತಾಪ್ ನ ಚಿಕಿತ್ಸಾ ವೆಚ್ಚವನ್ನು ಸರಕಾರದಿಂದಲೇ ಭರಿಸಲು ಸಂಬಂಧಪಟ್ಟ ಇಲಾಖೆಯ ಜೊತೆಗೆ ಮಾತನಾಡುತ್ತೇನೆ ಎಂದು ಎನ್.ಮಹೇಶ್ ಇದೇ ಸಂದರ್ಭ ಭರವಸೆ ನೀಡಿದರು.

ಶನೈಶ್ವರ ದೇವಸ್ಥಾನಕ್ಕೆ ಭೇಟಿ ನೀಡಿ ಮಾಹಿತಿ ಪಡೆದ ಎನ್.ಮಹೇಶ್

Like us on facebook
Disclaimer:

ರಾಷ್ಟ್ರಧ್ವನಿ ಅಂತಾರ್ಜಾಲ ಸುದ್ದಿ ವಾಹಿನಿಯಲ್ಲಿ ಪ್ರಕಟವಾಗುವ ಸುದ್ದಿಗಳ ಕುರಿತು ಸಾರ್ವಜನಿಕರು ಆರೋಗ್ಯಕರ ಚರ್ಚೆ, ಕಮೆಂಟ್ ಗಳನ್ನು ಮಾಡಬಹುದಾಗಿದೆ. ಧರ್ಮ, ಜಾತಿ ನಿಂದನೆಯಾಗುವಂತಹ ಮತ್ತು ಸಾಮರಸ್ಯ ಕೆಡಿಸುವಂತಹ ದುರುದ್ದೇಶಪೂರಿತ ಕಮೆಂಟ್ ಹಾಗೂ ಚರ್ಚೆ ಕಾನೂನು ರೀತಿಯಲ್ಲಿ ಅಪರಾಧವಾಗಿರುತ್ತದೆ. ದೇಶದ ಕಾನೂನು ಸುವ್ಯವಸ್ಥೆಗೆ ಧಕ್ಕೆ ತರುವಂತಹ ಯಾವುದೇ ಕಮೆಂಟ್ ಗಳನ್ನು ಹಾಕಿದ್ದಲ್ಲಿ, ಅದಕ್ಕೆ ಕಮೆಂಟ್ ಹಾಕುವವರೇ ಹೊಣೆಗಾರರಾಗಿರುತ್ತಾರೆ. ಅಂತಹವರ ಹೆಸರು ಮತ್ತು ಐಪಿ ಅಡ್ರೆಸ್ ಗಳನ್ನು ಸಂಬಂಧಪಟ್ಟ ಇಲಾಖೆಗೆ ಒದಗಿಸಲು ರಾಷ್ಟ್ರಧ್ವನಿ ಬದ್ಧವಾಗಿರುತ್ತದೆ.

ಸಿನಿಮಾ
ಸಂಪಾದಕೀಯ ಮತ್ತಷ್ಟು
ಕನ್ನಡ ಉಳಿಸುವ ಜವಾಬ್ದಾರಿ ಬಡ ಮಕ್ಕಳಿಗೆ..
ಸರಕಾರಿ ಆಂಗ್ಲ ಮಾಧ್ಯಮ ಶಾಲೆಯ ಆದೇಶವನ್ನು ಹಿಂಪಡೆಯಲು ಕರ್ನಾಟಕ ಕೈಗಾರಿಕಾ ಮತ್ತು ವಾಣಿಜ್ಯೋದ್ಯಮ ಕನ್ನಡ...
POLL

[democracy id="1"]