Friday, November 22 , 2019
ಅಧಿಕಾರ ಹಿಡಿಯುವುದು ಬಿಜೆಪಿ ಅಂದುಕೊಂಡಷ್ಟು ಸುಲಭ ಅಲ್ಲ | ಕಾರಣ ಇಲ್ಲಿದೆ ನೋಡಿ

ಬೆಂಗಳೂರು(11.07.2019): ರಾಜ್ಯ ರಾಜಕಾರಣ ಇದೀಗ ಹೊಸ ತಿರುವು ಪಡೆದುಕೊಂಡಿದ್ದು, ಸಮ್ಮಿಶ್ರ ಸರಕಾರದ ಶಾಸಕರು ರಾಜೀನಾಮೆ ನೀಡಿದರೂ, ಬಿಜೆಪಿ ಅಧಿಕಾರ ಪಡೆದುಕೊಳ್ಳುವುದು ಅಷ್ಟು ಸುಲಭದ ಮಾತಲ್ಲ ಎನ್ನುವುದು ಸ್ಪಷ್ಟವಾಗುತ್ತಿದೆ.

ಶಾಸಕರ ರಾಜೀನಾಮೆ ವಿಚಾರವಾಗಿ ಮಾಧ್ಯಮಗಳಲ್ಲಿ ಬಣ್ಣ ಬಣ್ಣಗಳ ವರದಿಗಳು ಪ್ರಸಾರವಾಗುತ್ತಿದೆ. ಒಂದು ಹಂತದಲ್ಲಿ ಬಿಜೆಪಿ ಅಧಿಕಾರ ಹಿಡಿದೇ ಬಿಟ್ಟಿದೆ ಎನ್ನುವ ಮಟ್ಟಕ್ಕೆ ಸುದ್ದಿವಾಹಿನಿಗಳು ವರದಿ ಪ್ರಸಾರ ಮಾಡಿವೆ. ಆದರೆ, ವಾಸ್ತವ ವಿಚಾರವನ್ನು ಇಲ್ಲಿ ಮುಚ್ಚಿಡಲಾಗಿದ್ದು, ಬಿಜೆಪಿ ಹೇಗೆ ಬಹುಮತವನ್ನು ಸಾಬೀತು ಪಡಿಸಲಿದೆ ಎನ್ನುವ ವಿಚಾರಗಳ ಬಗ್ಗೆ ಮಾಧ್ಯಮಗಳು ಇನ್ನೂ ವಿವರಣೆ ನೀಡಿಲ್ಲ.

ಬಿಜೆಪಿ ಈವರೆಗೆ ತಾನು ಹೇಗೆ ಬಹುಮತ ಸಾಬೀತುಪಡಿಸುತ್ತದೆ ಎನ್ನುವುದನ್ನು ಎಲ್ಲೂ ಹೇಳಿಲ್ಲ. ರಾಜೀನಾಮೆ ನೀಡಿರುವ ಶಾಸಕರು ಬಿಜೆಪಿ ವಶದಲ್ಲಿದ್ದರೂ, ಸಮ್ಮಿಶ್ರ ಸರಕಾರದ ಬಳಿಯಲ್ಲಿ ಶಾಸಕರ ಜುಟ್ಟು ಇನ್ನೂ ಇದೆ ಎನ್ನುವುದು ವಾಸ್ತವ ಅಂಶವಾಗಿದೆ. ಇದು ಬಿಜೆಪಿಗೂ ಗೊತ್ತಿದೆ. ಈ ಕಾರಣಕ್ಕೆ ಬಿಜೆಪಿ ಇನ್ನೂ ಸಿಎಂ ಕುಮಾರಸ್ವಾಮಿ ಬಹುಮತ ಸಾಬೀತುಪಡಿಸಲಿ ಎನ್ನುವ ಒತ್ತಾಯ ಮಾಡದೇ, ರಾಜೀನಾಮೆ ನೀಡಲಿ ಎಂದಷ್ಟೇ ಹೇಳುತ್ತಿದೆ.

ನಾಳೆಯಿಂದ ವಿಧಾನಮಂಡಲ ಅಧಿವೇಶನ ನಡೆಯಲಿದೆ. ಶಾಸಕರ ರಾಜೀನಾಮೆಯಿಂದಾಗಿ ಮೈತ್ರಿ ಸರಕಾರ ಬಹುಮತವನ್ನು ಕಳೆದುಕೊಂಡಿದ್ದರೂ, ಇನ್ನೂ ಶಾಸಕರ ರಾಜೀನಾಮೆ ಅಂಗೀಕಾರವಾಗಿಲ್ಲ. ಸದನದಲ್ಲಿ ಬಿಜೆಪಿ ಬಹುಮತ ಸಾಬೀತುಪಡಿಸಲು ಒತ್ತಾಯಿಸಿದರೆ, ಮೈತ್ರಿ ಸರಕಾರ ಉರುಳುವುದು ಖಚಿತ. ಆದರೆ ಬಿಜೆಪಿ ಬಹುಮತ ಸಾಬೀತುಪಡಿಸುವ ಬಗ್ಗೆ ಒತ್ತಾಯಿಸಲು ಹಿಂದೇಟು ಹಾಕುತ್ತಿದೆ. ಅದಕ್ಕೆ ಪ್ರಮುಖ ಕಾರಣ ಇಲ್ಲಿದೆ.

ಬಹುಮತ ಸಾಬೀತಿಗೆ ಬಿಜೆಪಿ ಒತ್ತಾಯಿಸಿದರೆ ವಿಪ್ ಜಾರಿಯಾಗುತ್ತದೆ. ವಿಪ್ ಜಾರಿಯಾದರೆ ಎಲ್ಲ ಶಾಸಕರೂ ಸದನಕ್ಕೆ ಬರಬೇಕಾಗುತ್ತದೆ ಮತ್ತು ತಾವು ಗೆದ್ದಿರುವ ಪಕ್ಷದ ಪರವಾಗಿಯೇ ಮತ ಚಲಾಯಿಸಬೇಕಾಗುತ್ತದೆ. ಈ ನಿಯಮವನ್ನು ಉಲ್ಲಂಘಿಸಿದರೆ, ತಮ್ಮ ಶಾಸಕ ಸ್ಥಾನ ಅನರ್ಹವಾಗುತ್ತದೆ. ಹೀಗಾಗಿ ಮೈತ್ರಿ ಸರಕಾರಕ್ಕೆ ಬಹುಮತ ಸಾಬೀತುಪಡಿಸುವುದು ಅಷ್ಟೇನು ಕಷ್ಟದ ಕೆಲಸವಲ್ಲ ಎನ್ನುವುದು ಸದ್ಯದ ಪರಿಸ್ಥಿತಿ.

ವಿಪ್ ಜಾರಿಯಾದರೆ ತಮಗೆ ಇಷ್ಟವಿಲ್ಲದಿದ್ದರೂ ಕಾಂಗ್ರೆಸ್-ಜೆಡಿಎಸ್ ಶಾಸಕರು ಅನಿವಾರ್ಯವಾಗಿ ಮೈತ್ರಿ ಸರಕಾರದ ಪರವಾಗಿಯೇ ಮತ ಚಲಾಯಿಸಬೇಕಾಗುತ್ತದೆ. ಮೈತ್ರಿ ಪಕ್ಷಗಳ ವಿಪ್ ಅಧಿಕಾರವು ಬಿಜೆಪಿಗೆ ಕಂಟಕವಾಗಿ ಪರಿಣಮಿಸಿದ್ದು, ಈ ಕಾರಣಕ್ಕಾಗಿ ಬಿಜೆಪಿ ಬಹುಮತ ಸಾಬೀತಿಗೆ ಒತ್ತಾಯ ಮಾಡದೇ, ಸಿಎಂ ಕುಮಾರಸ್ವಾಮಿ ರಾಜೀನಾಮೆ ನೀಡಬೇಕು ಎಂದಷ್ಟೇ ಒತ್ತಾಯ ಮಾಡುತ್ತಿದೆ ಎಂದು ತಿಳಿದು ಬಂದಿದೆ.

 

Like us on facebook
Disclaimer:

ರಾಷ್ಟ್ರಧ್ವನಿ ಅಂತಾರ್ಜಾಲ ಸುದ್ದಿ ವಾಹಿನಿಯಲ್ಲಿ ಪ್ರಕಟವಾಗುವ ಸುದ್ದಿಗಳ ಕುರಿತು ಸಾರ್ವಜನಿಕರು ಆರೋಗ್ಯಕರ ಚರ್ಚೆ, ಕಮೆಂಟ್ ಗಳನ್ನು ಮಾಡಬಹುದಾಗಿದೆ. ಧರ್ಮ, ಜಾತಿ ನಿಂದನೆಯಾಗುವಂತಹ ಮತ್ತು ಸಾಮರಸ್ಯ ಕೆಡಿಸುವಂತಹ ದುರುದ್ದೇಶಪೂರಿತ ಕಮೆಂಟ್ ಹಾಗೂ ಚರ್ಚೆ ಕಾನೂನು ರೀತಿಯಲ್ಲಿ ಅಪರಾಧವಾಗಿರುತ್ತದೆ. ದೇಶದ ಕಾನೂನು ಸುವ್ಯವಸ್ಥೆಗೆ ಧಕ್ಕೆ ತರುವಂತಹ ಯಾವುದೇ ಕಮೆಂಟ್ ಗಳನ್ನು ಹಾಕಿದ್ದಲ್ಲಿ, ಅದಕ್ಕೆ ಕಮೆಂಟ್ ಹಾಕುವವರೇ ಹೊಣೆಗಾರರಾಗಿರುತ್ತಾರೆ. ಅಂತಹವರ ಹೆಸರು ಮತ್ತು ಐಪಿ ಅಡ್ರೆಸ್ ಗಳನ್ನು ಸಂಬಂಧಪಟ್ಟ ಇಲಾಖೆಗೆ ಒದಗಿಸಲು ರಾಷ್ಟ್ರಧ್ವನಿ ಬದ್ಧವಾಗಿರುತ್ತದೆ.

ಸಿನಿಮಾ
ಸಂಪಾದಕೀಯ ಮತ್ತಷ್ಟು
ಕನ್ನಡ ಉಳಿಸುವ ಜವಾಬ್ದಾರಿ ಬಡ ಮಕ್ಕಳಿಗೆ..
ಸರಕಾರಿ ಆಂಗ್ಲ ಮಾಧ್ಯಮ ಶಾಲೆಯ ಆದೇಶವನ್ನು ಹಿಂಪಡೆಯಲು ಕರ್ನಾಟಕ ಕೈಗಾರಿಕಾ ಮತ್ತು ವಾಣಿಜ್ಯೋದ್ಯಮ ಕನ್ನಡ...
POLL

[democracy id="1"]