Saturday, June 15 , 2019
ಐಎಂಎ ಜ್ಯುವೆಲ್ಲರಿ ವಂಚನೆ ಪ್ರಕರಣ | ಸಿಬಿಐ ತನಿಖೆಗೆ ಒತ್ತಾಯಿಸಿದ ಶಾಸಕ ರೋಷನ್ ಬೇಗ್

ಬೆಂಗಳೂರು(12.06.2019): ಐಎಂಎ ಜ್ಯುವೆಲ್ಲರಿ ವಂಚನೆ ಪ್ರಕರಣದಲ್ಲಿ ನನ್ನ ಯಾವುದೇ ಪಾತ್ರವಿಲ್ಲ. ನನಗೂ ಐಎಂಎಗೂ ಯಾವುದೇ ಸಂಬಂಧವಿಲ್ಲ. ಈ ಪ್ರಕರಣವನ್ನು ಸಿಬಿಐಗೆ ತನಿಖೆಗೆ ಒಳಪಡಿಸಬೇಕು ಎಂದು ಶಾಸಕ ರೋಷನ್ ಬೇಗ್ ಒತ್ತಾಯಿಸಿದ್ದಾರೆ.

ಐಎಂಎ ಜ್ಯುವೆಲ್ಲರಿ ಪ್ರಕರಣದಲ್ಲಿ ತಮ್ಮ ಹೆಸರು ಕೇಳಿ ಬಂದ ಕಾರಣ ಇಂದು ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಅವರು, ಯಾರೋ ಒಬ್ಬ ಫ್ರಾಡ್ ನನಗೆ ನಾಲ್ಕು ನೂರು ಕೋಟಿ ಹಣ ನೀಡಿದ್ದಾನೆ ಎಂದು ಹೇಳಿದ ತಕ್ಷಣ ಅದನ್ನು ನಂಬುವುದು ಎಷ್ಟು ಸರಿ ಎಂದು ಪ್ರಶ್ನಿಸಿದರು.

ಮನ್ಸೂರ್‍ ಖಾನ್ ಜೊತೆ ಯಾರೆಲ್ಲ ಸಂಪರ್ಕದಲ್ಲಿದ್ದರು, ವಾಟ್ಸಾಪ್ ನಲ್ಲಿ ಆತನ ಜೊತೆ ಯಾರೆಲ್ಲ ಸಂಪರ್ಕದಲ್ಲಿದ್ದರು, ಕೊನೆಯದ್ದಾಗಿ ಆತನ ಜೊತೆ ಯಾರೆಲ್ಲ ಸಂಪರ್ಕದಲ್ಲಿದ್ದರು ಎನ್ನುವುದರ ಬಗ್ಗೆ ತನಿಖೆ ನಡೆಸಿದರೆ ಸತ್ಯ ತಿಳಿಯುತ್ತದೆ. ವಿಕೆಒ ಶಾಲೆ ಅಭಿವೃದ್ಧಿ ವಿಚಾರದಲ್ಲಿ ನಾನು ಶ್ರಮಿಸಿದ್ದೇನೆ. ಅದಕ್ಕೆ ಅವರು ಸಹಾಯ ಮಾಡಲು ಬಂದಿದ್ದರು ಅಷ್ಟೆ. ನಾನು ಯಾವುದೇ ಸಂಸ್ಥೆಯಿಂದ ನಾಲ್ಕು ಕೋಟಿ ಹಣವನ್ನು ಪಡೆದುಕೊಂಡಿಲ್ಲ. ಇದರ ಬಗ್ಗೆ ನನ್ನ ಬಳಿಯಲ್ಲಿ ದಾಖಲೆಯಿದೆ ಎಂದು ಅವರು ಹೇಳಿದರು.

ಪ್ರಕರಣವನ್ನು ರಾಜ್ಯ ಸರಕಾರ ಎಸ್ ಐಟಿಗೆ ವಹಿಸಿದೆ. ಎಸ್ ಐಟಿ ತನಿಖೆಗೆ ನಾನು ಸಹಕರಿಸುತ್ತೇನೆ. ಈ ಪ್ರಕರಣವನ್ನು ಸಿಬಿಐಗೆ ವಹಿಸಿದರೆ ಸತ್ಯ ಹೊರಬರುತ್ತದೆ. ಮನ್ಸೂರ್‍ ಖಾತೆಯಿಂದ ಸಾವಿರ ಕೋಟಿ ವರ್ಗಾವಣೆಯಾಗಿದೆ. ಮನ್ಸೂರ್‍ ಅಕೌಂಟ್ ಸೀಝ್ ಮಾಡಿ ಎಂದು ಬೇಗ್ ಒತ್ತಾಯಿಸಿದರು.

Like us on facebook
Disclaimer:

ರಾಷ್ಟ್ರಧ್ವನಿ ಅಂತಾರ್ಜಾಲ ಸುದ್ದಿ ವಾಹಿನಿಯಲ್ಲಿ ಪ್ರಕಟವಾಗುವ ಸುದ್ದಿಗಳ ಕುರಿತು ಸಾರ್ವಜನಿಕರು ಆರೋಗ್ಯಕರ ಚರ್ಚೆ, ಕಮೆಂಟ್ ಗಳನ್ನು ಮಾಡಬಹುದಾಗಿದೆ. ಧರ್ಮ, ಜಾತಿ ನಿಂದನೆಯಾಗುವಂತಹ ಮತ್ತು ಸಾಮರಸ್ಯ ಕೆಡಿಸುವಂತಹ ದುರುದ್ದೇಶಪೂರಿತ ಕಮೆಂಟ್ ಹಾಗೂ ಚರ್ಚೆ ಕಾನೂನು ರೀತಿಯಲ್ಲಿ ಅಪರಾಧವಾಗಿರುತ್ತದೆ. ದೇಶದ ಕಾನೂನು ಸುವ್ಯವಸ್ಥೆಗೆ ಧಕ್ಕೆ ತರುವಂತಹ ಯಾವುದೇ ಕಮೆಂಟ್ ಗಳನ್ನು ಹಾಕಿದ್ದಲ್ಲಿ, ಅದಕ್ಕೆ ಕಮೆಂಟ್ ಹಾಕುವವರೇ ಹೊಣೆಗಾರರಾಗಿರುತ್ತಾರೆ. ಅಂತಹವರ ಹೆಸರು ಮತ್ತು ಐಪಿ ಅಡ್ರೆಸ್ ಗಳನ್ನು ಸಂಬಂಧಪಟ್ಟ ಇಲಾಖೆಗೆ ಒದಗಿಸಲು ರಾಷ್ಟ್ರಧ್ವನಿ ಬದ್ಧವಾಗಿರುತ್ತದೆ.

ಸಿನಿಮಾ
ಸಂಪಾದಕೀಯ ಮತ್ತಷ್ಟು
ಅಪಾಯಕಾರಿ ಅಣಕು ಕಾರ್ಯಾಚರಣೆಗಳಲ್ಲಿ ವಿದ್ಯಾರ್ಥಿಗಳನ್ನು ಬಳಕೆ..
ವಿಪತ್ತಿನ ಸಂದರ್ಭದಲ್ಲಿ ಅದರಿಂದ ಪಾರಾಗುವುದು ಹೇಗೆ ಎನ್ನುವುದರ ಬಗ್ಗೆ ವಿದ್ಯಾರ್ಥಿಗಳಲ್ಲಿ ಜಾಗೃತಿ ಮೂಡಿಸುವುದು ಒಳ್ಳೆಯ...