Saturday, June 15 , 2019
ನೋಟ್ ಬ್ಯಾನ್ ನಿಂದ ಜೀವನವನ್ನೆ ಕಳೆದುಕೊಂಡ ಕುಟುಂಬ | ದಯಾಮರಣಕ್ಕೆ ರಾಷ್ಟ್ರಪತಿಗೆ ಅರ್ಜಿ

ಮೈಸೂರು(14.06.2019: ಪ್ರಧಾನಿ ನರೇಂದ್ರ ಮೋದಿ ಅವರ ಆತುರದ ನಿರ್ಧಾರವಾದ ನೋಟ್ ಬ್ಯಾನ್ ಇನ್ನೂ ಜನತೆಯನ್ನು ಕಾಡುತ್ತಲೇ ಇದೆ. ನೋಟ್ ಬ್ಯಾನ್ ನಿಂದ ಹಲವಾರು ಸಣ್ಣ ವ್ಯಾಪಾರಿಗಳು ಈಗಲೂ ಚೇತರಿಸಿಕೊಂಡಿಲ್ಲ. ಇದೀಗ ಕುಟುಂಬವೊಂದು ನಮಗೆ ದಯಾಮರಣ ನೀಡಿ ಎಂದು ರಾಷ್ಟ್ರಪತಿಗೆ ಮನವಿ ಸಲ್ಲಿಸಿದ್ದಾರೆ.

ಹುಣಸೂರು ತಾಲೂಕಿನ ಮನಗುನಹಳ್ಳಿ ಗ್ರಾಮದ ಶೇಖರ್ ಎಂಬವರ ಕುಟುಂಬ ದಯಾ ಮರಣಕ್ಕೆ ಅರ್ಜಿ ಸಲ್ಲಿಸಿದವರು. ಈ ಅರ್ಜಿದಾರರು ಈಗಾಗಲೇ ಒಂದು ಬಾರಿ ಆತ್ಮಹತ್ಯೆಗೆ ಯತ್ನಿಸಿದ್ದರು. ಈ ಬಗ್ಗೆ ಬಿಳಿಕೆರೆ ಪೊಲೀಸ್ ಠಾಣೆಯಲ್ಲಿ ಪ್ರಕರಣವೂ ದಾಖಲಾಗಿತ್ತು.

ಪರೋಟ ವ್ಯಾಪಾರ ಮಾಡುತ್ತಿದ್ದ ಶೇಖರ್ ಹಾಗೂ ಕುಟುಂಬಸ್ಥರು‌ ನೋಟ್ ಬ್ಯಾನ್ ನ ಬಳಿಕ ತೀವ್ರ ಆರ್ಥಿಕ ಮುಗ್ಗಟ್ಟಿಗೆ ಜಾರಿದ್ದರು. ಇದರಿಂದಾಗಿ ಜೀವನ ನಡೆಸುವುದೇ ಕಷ್ಟಕರವಾದ ಸ್ಥಿತಿಗೆ ಅವರು ತಲುಪಿದ್ದರು. ಆರ್ಥಿಕ ಸಂಕಷ್ಟ ನಿಭಾಯಿಸಲು ಫೈನಾನ್ಸ್ ಕಂಪೆನಿಗಳಿಂದ ಸಾಲವೂ ಪಡೆದಿದ್ದ ಅವರು, ದಿನದಿಂದ ದಿನಕ್ಕೆ ವ್ಯಾಪಾರವಿಲ್ಲದೇ ಮತ್ತಷ್ಟು ಸಾಲಗಾರರಾಗಿಯೇ ಉಳಿದಿದ್ದಾರೆ. ಆತ್ಮಹತ್ಯೆಗೆ ಯತ್ನಿಸಿ ಒಂದು ಬಾರಿ ಅವರ ಕುಟುಂಬ ವಿಫಲವಾಗಿತ್ತು. ಈ ಬಗ್ಗೆ ಪ್ರಕರಣವೂ ದಾಖಲಾಗಿದೆ. ಹಾಗಾಗಿ‌ ಅವರು ತಮ್ಮ ಕುಟುಂಬಕ್ಕೆ ದಯಾಮರಣ ನೀಡಬೇಕು ಎಂದು ರಾಷ್ಟ್ರಪತಿಗೆ‌ ಮನವಿ ಮಾಡಿಕೊಂಡಿದ್ದಾರೆ.

ನೋಟ್ ಬ್ಯಾನ್ ಆಗಿ ವರ್ಷವೇ ಕಳೆದರೂ ಮೋದಿ ನೇತೃತ್ವದ ಬಿಜೆಪಿಯ‌ ಆತುರದ ನಿರ್ಧಾರದಿಂದಾಗಿ ಇಂದಿಗೂ ಸಣ್ಣಪುಟ್ಟ ವ್ಯಾಪಾರಿಗಳು, ಬಿಝಿನೆಸ್ ಮ್ಯಾನ್ ಗಳು ಇನ್ನೂ ಚೇತರಿಸಿಕೊಂಡಿಲ್ಲ. ಬಿಜೆಪಿ ಪರ ನಿಲುವು ಉಳ್ಳವರು ಅತ್ತ ವಿರೋಧಿಸಲೂ ಆಗದೇ, ಇತ್ತ ಸಮರ್ಥಿಸಲೂ ಆಗದೇ ಒಳಗೇ ಸಂಕಟಪಡುತ್ತಿದ್ದಾರೆ. ಬಿಜೆಪಿ ವಿರೋಧಿಗಳು ವಿರೋಧಿಸಿ ತಮ್ಮದಲ್ಲದ ತಪ್ಪಿಗೆ ಕೆಟ್ಟವರು ಅನ್ನಿಸಿಕೊಳ್ಳುತ್ತಿದ್ದಾರೆ ಎನ್ನುವ ಆಕ್ರೋಶಗಳು ಕೇಳಿ ಬಂದಿವೆ.

ಇನ್ನು ನೋಟ್ ಬ್ಯಾನ್ ನಿಂದ ದೇಶ ಬಹಳಷ್ಟು ಕಳೆದುಕೊಂಡಿದ್ದರೂ, ಬಿಜೆಪಿ ತನ್ನ ಐಟಿಸೆಲ್ ನ್ನು ಬಳಸಿಕೊಂಡು, ನೋಟ್ ಬ್ಯಾನ್ ನಿಂದ ದೇಶಕ್ಕೆ ಒಳ್ಳೆಯದ್ದಾಗಿದೆ ಎಂದು ಬಿಂಬಿಸಿ ಸುಳ್ಳು ಸುದ್ದಿ ಹಬ್ಬಿಸುತ್ತಿದ್ದಾರೆ. ಇದು ದೇಶಕ್ಕೆ ಮಾರಕವಾಗಿದ್ದು, ಮೋದಿ ಆಡಳಿತದಲ್ಲಿ ಭಾರತದ ಆರ್ಥಿಕ, ಸಾಮಾಜಿಕ ಮತ್ತು ಸಾಂಸ್ಕೃತಿಕ ಹಾಗೂ ಒಟ್ಟಾರೆ ಇಡೀ ದೇಶವೇ ಅಸಮತೋಲನ ಕಾಯ್ದುಕೊಂಡಿದೆ. ರಾಷ್ಟ್ರೀಯತೆ, ಸೈನ್ಯ, ರಾಮಮಂದಿರ, ಧಾರ್ಮಿಕತೆ ಮೊದಲಾದವುಗಳನ್ನು ಬಳಸಿಕೊಂಡು ಬಿಜೆಪಿ ಜನರನ್ನು ಯಾಮಾರಿಸುತ್ತಿದೆ ಎನ್ನುವ ಆರೋಪಗಳು ಕೇಳಿ ಬಂದಿವೆ.

Like us on facebook
Disclaimer:

ರಾಷ್ಟ್ರಧ್ವನಿ ಅಂತಾರ್ಜಾಲ ಸುದ್ದಿ ವಾಹಿನಿಯಲ್ಲಿ ಪ್ರಕಟವಾಗುವ ಸುದ್ದಿಗಳ ಕುರಿತು ಸಾರ್ವಜನಿಕರು ಆರೋಗ್ಯಕರ ಚರ್ಚೆ, ಕಮೆಂಟ್ ಗಳನ್ನು ಮಾಡಬಹುದಾಗಿದೆ. ಧರ್ಮ, ಜಾತಿ ನಿಂದನೆಯಾಗುವಂತಹ ಮತ್ತು ಸಾಮರಸ್ಯ ಕೆಡಿಸುವಂತಹ ದುರುದ್ದೇಶಪೂರಿತ ಕಮೆಂಟ್ ಹಾಗೂ ಚರ್ಚೆ ಕಾನೂನು ರೀತಿಯಲ್ಲಿ ಅಪರಾಧವಾಗಿರುತ್ತದೆ. ದೇಶದ ಕಾನೂನು ಸುವ್ಯವಸ್ಥೆಗೆ ಧಕ್ಕೆ ತರುವಂತಹ ಯಾವುದೇ ಕಮೆಂಟ್ ಗಳನ್ನು ಹಾಕಿದ್ದಲ್ಲಿ, ಅದಕ್ಕೆ ಕಮೆಂಟ್ ಹಾಕುವವರೇ ಹೊಣೆಗಾರರಾಗಿರುತ್ತಾರೆ. ಅಂತಹವರ ಹೆಸರು ಮತ್ತು ಐಪಿ ಅಡ್ರೆಸ್ ಗಳನ್ನು ಸಂಬಂಧಪಟ್ಟ ಇಲಾಖೆಗೆ ಒದಗಿಸಲು ರಾಷ್ಟ್ರಧ್ವನಿ ಬದ್ಧವಾಗಿರುತ್ತದೆ.

ಸಿನಿಮಾ
ಸಂಪಾದಕೀಯ ಮತ್ತಷ್ಟು
ಅಪಾಯಕಾರಿ ಅಣಕು ಕಾರ್ಯಾಚರಣೆಗಳಲ್ಲಿ ವಿದ್ಯಾರ್ಥಿಗಳನ್ನು ಬಳಕೆ..
ವಿಪತ್ತಿನ ಸಂದರ್ಭದಲ್ಲಿ ಅದರಿಂದ ಪಾರಾಗುವುದು ಹೇಗೆ ಎನ್ನುವುದರ ಬಗ್ಗೆ ವಿದ್ಯಾರ್ಥಿಗಳಲ್ಲಿ ಜಾಗೃತಿ ಮೂಡಿಸುವುದು ಒಳ್ಳೆಯ...