Friday, August 23 , 2019
ಗುಂಡ್ಲುಪೇಟೆ ಜಾತಿ ಭಯೋತ್ಪಾದನೆ | ಪ್ರಮುಖ ಆರೋಪಿ ಅರ್ಚಕನ ರಕ್ಷಣೆಗೆ ನಿಂತ್ರಾ ಪೊಲೀಸರು?

ಗುಂಡ್ಲುಪೇಟೆ(14.06.2019): ಇಲ್ಲಿನ ವೀರನಪುರ ಕಬ್ಬೆಕಟ್ಟೆ ಶನೇಶ್ವರ ದೇವಸ್ಥಾನದಲ್ಲಿ ದಲಿತ ಯುವಕನಿಗೆ ಹಲ್ಲೆ, ಬೆತ್ತಲೆ ಮೆರವಣಿಗೆ ನಡೆಸಿದ ಪ್ರಕರಣಕ್ಕೆ ಸಂಬಂಧಿಸಿದಂತೆ ಪೊಲೀಸರ ಮೇಲೆಯೇ ಹಲವು ಅನುಮಾನಗಳು ಮೂಡಿದ್ದು, ಪ್ರಮುಖ ಆರೋಪಿ ಅರ್ಚಕ ಶಿವಪ್ಪನನ್ನು ಪೊಲೀಸರೇ ರಕ್ಷಿಸುತ್ತಿದ್ದಾರೆ ಎನ್ನುವ ಆರೋಪಗಳು ಕೇಳಿ ಬಂದಿದೆ.

ದೂರುದಾರ, ಸಂತ್ರಸ್ತ ಪ್ರತಾಪ್ ಅವರ ಚಿಕ್ಕಪ್ಪನ ಮಗ ಕಾಂತರಾಜು ಅವರು ನೀಡಿರುವ ದೂರಿನಲ್ಲಿ ದೇವಸ್ಥಾನದ ಅರ್ಚಕ ಶಿವಪ್ಪ ಪ್ರಮುಖ ಆರೋಪಿ ಎಂದು ಹೆಸರಿಸಲಾಗಿದೆ. ಒಟ್ಟು ಆರು ಜನರ ವಿರುದ್ಧ ಆರೋಪ ಮಾಡಲಾಗಿದ್ದರೂ ಪೊಲೀಸರು ಒತ್ತಡಕ್ಕೆ ಮಣಿದು ಅರ್ಚಕ ಶಿವಪ್ಪನನ್ನು ರಕ್ಷಿಸಿದ್ದಾರೆ ಎನ್ನುವ ಆರೋಪ ಕೇಳಿ ಬಂದಿದೆ.

ಅರ್ಚಕನ ರಕ್ಷಣೆಯ ಹಿಂದೆ ಮಾಜಿ ಸಂಸದ ಸಿದ್ದರಾಜು ಕೈವಾಡವಿದೆ ಎನ್ನುವ ಬಗ್ಗೆ ಶಂಕೆ ವ್ಯಕ್ತವಾಗಿದೆ. ಘಟನೆಯ ಬಗ್ಗೆ‌ ಮೊದಲು ದೂರು ನೀಡಲು ಹೋದಾಗ ಅವರು ಕರೆ ಮಾಡಿ ದೂರು ನೀಡದಂತೆ ಒತ್ತಡ ಹಾಕಿದ್ದರು ಎನ್ನುವ ಆರೋಪ ಕೇಳಿ ಬಂದಿದೆ.

ದೇವಸ್ಥಾನದವರಿಗೆ ಸಂತ್ರಸ್ತ ಪ್ರತಾಪ್ ನ ತಂದೆ, ತಾಯಿ, ತಾತ ಎಲ್ಲರ ಬಗ್ಗೆಯೂ ಮಾಹಿತಿ ಇತ್ತು. ಆದರೆ ಇದ್ಯಾವುದೂ ಗೊತ್ತಿಲ್ಲ ಎಂದು ಹೇಳುತ್ತಿದ್ದಾರೆ. ಪ್ರತಾಪ್ ಗೆ ಅಂಗವೈಕಲ್ಯವಿದೆ. ಆದರೆ, ಮಾನಸಿಕ ಕಾಯಿಲೆ ಇಲ್ಲ ಎಂದು ಕುಟುಂಬಸ್ಥರು ಹೇಳುತ್ತಿದ್ದಾರೆ.

ಸೌಜನ್ಯಕ್ಕೂ ಸಂತ್ರಸ್ತನನ್ನು ಭೇಟಿ ಮಾಡದ ಸಂಸದ ಶ್ರೀನಿವಾಸ್ ಪ್ರಸಾದ್

ಘಟನೆ ನಡೆದು ಇಷ್ಟು ದಿನವಾದರೂ ಸಂಸದ ಶ್ರೀನಿವಾಸ್ ಪ್ರಸಾದ್ ಘಟನೆಯನ್ನು ಗಂಭೀರವಾಗಿ ಪರಿಗಣಿಸಿಲ್ಲ. ಈವರೆಗೆ ಸೌಜನ್ಯಕ್ಕೂ ಸಂತ್ರಸ್ತನ ಕುಟುಂಬಸ್ಥರನ್ನು ಭೇಟಿ ಮಾಡಿಲ್ಲ. ಕೇವಲ ತೋರಿಕೆಯ ಸಂತಾಪ ತೋರಿಸುತ್ತಿದ್ದಾರೆ ಎನ್ನುವ ಆಕ್ರೋಶಗಳು ಕೇಳಿ ಬಂದಿವೆ. ಗುಂಡ್ಲುಪೇಟೆಯಲ್ಲಿ‌ ನಡೆದಿರುವ ಘಟನೆಯ ಕುರಿತು ಬಿಜೆಪಿಯ ನಿಲುವೇನು? ಶ್ರೀನಿವಾಸ್ ಪ್ರಸಾದ್ ಸಂಸದರಾಗಿದ್ದಾರೆ. ಆದರೆ ಸಂತ್ರಸ್ತನ ಪರವಾಗಿ ಬಿಎಸ್ ಪಿ ನಿಂತಿದೆ. ಹಲವಾರು ದಲಿತ ಸಂಘಟನೆಗಳು ನಿಂತಿವೆ. ಸಂಸದರು ಮೊದಲು ತಮ್ಮ ನಿಲುವಿನ ಬಗ್ಗೆ ಬಹಿರಂಗವಾಗಿ ಮೌನ ತೊರೆಯಲಿ ಎನ್ನುವ ಒತ್ತಾಯ ಕೇಳಿ ಬಂದಿದೆ.

Like us on facebook
Disclaimer:

ರಾಷ್ಟ್ರಧ್ವನಿ ಅಂತಾರ್ಜಾಲ ಸುದ್ದಿ ವಾಹಿನಿಯಲ್ಲಿ ಪ್ರಕಟವಾಗುವ ಸುದ್ದಿಗಳ ಕುರಿತು ಸಾರ್ವಜನಿಕರು ಆರೋಗ್ಯಕರ ಚರ್ಚೆ, ಕಮೆಂಟ್ ಗಳನ್ನು ಮಾಡಬಹುದಾಗಿದೆ. ಧರ್ಮ, ಜಾತಿ ನಿಂದನೆಯಾಗುವಂತಹ ಮತ್ತು ಸಾಮರಸ್ಯ ಕೆಡಿಸುವಂತಹ ದುರುದ್ದೇಶಪೂರಿತ ಕಮೆಂಟ್ ಹಾಗೂ ಚರ್ಚೆ ಕಾನೂನು ರೀತಿಯಲ್ಲಿ ಅಪರಾಧವಾಗಿರುತ್ತದೆ. ದೇಶದ ಕಾನೂನು ಸುವ್ಯವಸ್ಥೆಗೆ ಧಕ್ಕೆ ತರುವಂತಹ ಯಾವುದೇ ಕಮೆಂಟ್ ಗಳನ್ನು ಹಾಕಿದ್ದಲ್ಲಿ, ಅದಕ್ಕೆ ಕಮೆಂಟ್ ಹಾಕುವವರೇ ಹೊಣೆಗಾರರಾಗಿರುತ್ತಾರೆ. ಅಂತಹವರ ಹೆಸರು ಮತ್ತು ಐಪಿ ಅಡ್ರೆಸ್ ಗಳನ್ನು ಸಂಬಂಧಪಟ್ಟ ಇಲಾಖೆಗೆ ಒದಗಿಸಲು ರಾಷ್ಟ್ರಧ್ವನಿ ಬದ್ಧವಾಗಿರುತ್ತದೆ.

ಸಿನಿಮಾ
ಸಂಪಾದಕೀಯ ಮತ್ತಷ್ಟು
ಅಪಾಯಕಾರಿ ಅಣಕು ಕಾರ್ಯಾಚರಣೆಗಳಲ್ಲಿ ವಿದ್ಯಾರ್ಥಿಗಳನ್ನು ಬಳಕೆ..
ವಿಪತ್ತಿನ ಸಂದರ್ಭದಲ್ಲಿ ಅದರಿಂದ ಪಾರಾಗುವುದು ಹೇಗೆ ಎನ್ನುವುದರ ಬಗ್ಗೆ ವಿದ್ಯಾರ್ಥಿಗಳಲ್ಲಿ ಜಾಗೃತಿ ಮೂಡಿಸುವುದು ಒಳ್ಳೆಯ...
POLL

[democracy id="1"]