Tuesday, July 14 , 2020
ಅರ್ಚಕನ ಜಾತಿ ಚಪಲಕ್ಕೆ ಬಲಿಯಾದ ಸುಸಂಸ್ಕೃತ ದಲಿತ ಯುವಕ | ದೇವಸ್ಥಾನಕ್ಕೆ ಪ್ರವೇಶಿಸಿದ್ದಕ್ಕೆ ದಲಿತ ಯುವಕನ ಬೆತ್ತಲೆ ಮೆರವಣಿಗೆ

ಗುಂಡ್ಲುಪೇಟೆ(11.06.2019): ದೇವಸ್ಥಾನ ಪ್ರವೇಶಿಸಿದ ದಲಿತ ಯುವಕನೋರ್ವನನ್ನು ಜಾತಿಯ ಕಾರಣಕ್ಕಾಗಿ ಹಲ್ಲೆ ನಡೆಸಿ ಬೆತ್ತಲೆ ಮೆರವಣಿಗೆ ನಡೆಸಿರುವ ಘಟನೆ ತಡವಾಗಿ ಬೆಳಕಿಗೆ ಬಂದಿದ್ದು, ಯುವಕನ ಮೈ ಹಾಗೂ ತಲೆಯಿಂದ ರಕ್ತ ಸೋರುತ್ತಿದ್ದರೂ ಬಿಡದೇ ತೀವ್ರವಾಗಿ ಹಲ್ಲೆ ನಡೆಸಲಾಗಿದೆ. ದೇವಸ್ಥಾನದ ಅರ್ಚಕನ ನೇತೃತ್ವದಲ್ಲಿ ಹಲ್ಲೆ ನಡೆಸಲಾಗಿದೆ ಎಂದು ಹೇಳಲಾಗಿದೆ. ಈ ಕುರಿತ ವಿಡಿಯೋ ಸಾಮಾಜಿಕ ಜಾಲತಾಣಗಳಲ್ಲಿ ವೈರಲ್ ಆದ ಬಳಿಕ ಯುವಕನ ಮೇಲೆ ಇನ್ನಿಲ್ಲದ ಆರೋಪಗಳನ್ನು ಹಾಕಿ ಪ್ರಕರಣದ ದಿಕ್ಕು ತಪ್ಪಿಸಲು ಪ್ರಯತ್ನಿಸಲಾಗುತ್ತಿದೆ ಎಂದು ತಿಳಿದು ಬಂದಿದೆ.

ಶ್ಯಾನಾಡ್ರಹಳ್ಳಿ ಗುಂಡ್ಲು ಪೇಟೆ ನಿವಾಸಿ ಯುವಕ ಎಸ್.ಪ್ರತಾಪ್ ಎನ್ನುವವರು ಹಲ್ಲೆಗೊಳಗಾದ ಯುವಕನೆಂದು ಗುರುತಿಸಲಾಗಿದೆ. ಇವರು ಜೂನ್ 2ರಂದು ಐಎಎಸ್ ಪರೀಕ್ಷೆ ಬರೆಯಲೆಂದು ಮೈಸೂರಿನ ಮರಿಮಲ್ಲಪ್ಪ ಹಿರಿಯ ಪ್ರಾಥಮಿಕ ಶಾಲೆಗೆ ಬಂದಿದ್ದು, ಆದರೆ, ಪರೀಕ್ಷಾ ಕೊಠಡಿಗೆ ಸಮಯಕ್ಕೆ ಸರಿಯಾಗಿ ತಲುಪಲು ಸಾಧ್ಯವಾಗದ ಕಾರಣ ಅವರು ಪರೀಕ್ಷೆ ವಂಚಿತರಾಗಿದ್ದರು. ಈ ಶಾಕ್ ನಿಂದಾಗಿ ಅವರು ಮನೆಯ ಕಡೆಗೆ ವಾಪಸ್ ತೆರಳುತ್ತಿದ್ದ ಸಂದರ್ಭದಲ್ಲಿ ರಾಘವಾಪುರ ಗ್ರಾಮದ ಬಳಿಯಲ್ಲಿ ಪ್ರತಾಪ್ ಅವರ ಬೈಕ್ ಕೆಟ್ಟು ನಿಂತಿತ್ತು. ಬೈಕ್ ನ್ನು ಪರಿಶೀಲನೆ ನಡೆಸುತ್ತಿದ್ದ ಸಂದರ್ಭದಲ್ಲಿ ಸ್ಥಳಕ್ಕೆ ಬಂದ ಅಪರಿಚಿತರಿಬ್ಬರು ಮಾತನಾಡುತ್ತಾ ನಂಬಿಸಿ ಏಕಾಏಕಿ ಪ್ರತಾಪ್ ಬಳಿಯಿರುವವ ವಸ್ತುಗಳನ್ನು ದೋಚಿದ್ದಾರೆ. ಮೊದಲೇ ಪರೀಕ್ಷಾ ವಂಚಿತದಾಗಿದ್ದ ಪ್ರತಾಪ್ ಈ ಘಟನೆಯಿಂದ ತೀವ್ರವಾಗಿ ನೊಂದಿದ್ದು, ಏನು ಮಾಡಲೂ ತೋಚದೇ ರಾತ್ರಿಯಿಡೀ ಅಲ್ಲೇ ಕಾಲ ಕಳೆಯುವಂತಾಗಿತ್ತು. ಜೂನ್ 3ರಂದು ಬೆಳಗ್ಗೆ 6 ಗಂಟೆಯ ವೇಳೆಗೆ ಅವರು ವೀರನಪುರ ಗೇಟ್ ಬಳಿಯಿರುವ ಶನಿಮಹಾತ್ಮನ ದೇವಸ್ಥಾನಕ್ಕೆ ಹೋಗಿದ್ದು, ಈ ವೇಳೆ ಅವರನ್ನು ಕಂಡ ದೇವಸ್ಥಾನದ ಅರ್ಚಕ, ಪ್ರತಾಪ್ ಬಳಿಯಲ್ಲಿ ಯಾರು? ಎಂದು ಪ್ರಶ್ನಿಸಿದ್ದಾನೆ, ಬಳಿಕ ಜಾತಿ ಕೇಳಿದ್ದಾನೆ. ಪ್ರತಾಪ್ ಪರಿಶಿಷ್ಟ ಜಾತಿ ಎಂದು ಹೇಳುತ್ತಿದ್ದಂತೆಯೇ ಅವರ ಮೇಲೆ ಹಲ್ಲೆ ನಡೆಸಿ, ಜನಗಳನ್ನು ಕರೆದು, ಬಟ್ಟೆಗಳನ್ನು ಬಿಚ್ಚಿ ಊಟಿ-ಮೈಸೂರು ರಸ್ತೆಯ ಮುಖ್ಯರಸ್ತೆಯವರೆಗೂ ಹೊಡೆಯುತ್ತಾ ಬೆತ್ತಲೆಯಾಗಿ ಮೆರವಣಿಗೆ ನಡೆಸಿದ್ದಾರೆ ಎಂದು ಆರೋಪಿಸಲಾಗಿದೆ.

ದಲಿತನೊಬ್ಬ ದೇವಸ್ಥಾನಕ್ಕೆ ಪ್ರವೇಶಿಸಿದನೆಂದು ಅರ್ಚಕ ಈ ದುಷ್ಕೃತ್ಯ ನಡೆಸಿದ್ದಾನೆ ಎಂದು ದಲಿತರು ಆರೋಪಿಸುತ್ತಿದ್ದಾರೆ. ಯುವಕನ ಮೇಲೆ ದೌರ್ಜನ್ಯ ನಡೆಸಿದ ಬಳಿಕ ಯುವಕ ದೇವಸ್ಥಾನದ ವಿಗ್ರಹಗಳ ಮೇಲೆ ಮೂತ್ರ ಮಾಡಿದ್ದಾನೆ ಎಂದು ಕೃತ್ಯದಲ್ಲಿ ಭಾಗಿಯಾದವರೇ ಕೆಲವರು ಗುಂಡ್ಲುಪೇಟೆ ಪೊಲೀಸರಿಗೆ ದೂರು ನೀಡಿದ್ದಾರೆ. ಎಸ್ಸಿ-ಎಸ್ಟಿ ದೌರ್ಜನ್ಯ ಕಾಯ್ದೆಯಡಿಯಲ್ಲಿ ಪ್ರಕರಣ ದಾಖಲಾಗುವ ಸಾಧ್ಯತೆಗಳಿರುವ ಹಿನ್ನೆಲೆಯಲ್ಲಿ ದೌರ್ಜನ್ಯಕೋರರು ಇಂತಹ ದೂರು ನೀಡಿದ್ದಾರೆ ಎಂದು ಇಲ್ಲಿನ ದಲಿತರು ಆರೋಪಿಸಿದ್ದಾರೆ. ಸದ್ಯ ಹಲ್ಲೆಗೊಳಗಾದ ಪ್ರತಾಪ್ ಅವರ ಸ್ಥಿತಿ ಗಂಭೀರವಾಗಿದೆ. ಮೈಸೂರಿನ ಸೆಂಟ್ ಮೇರಿಸ್ ಸೈಕಿಯಾಟ್ರಿಕ್ ಡಿ- ಅಡಿಕ್ಸನ್ ಮತ್ತು ಪುನರ್ವಸತಿ ಕೇಂದ್ರದಲ್ಲಿ ಅವರು ಚಿಕಿತ್ಸೆ ಪಡೆಯುತ್ತಿದ್ದಾರೆ.

ಇದೀಗ ಈ ಘಟನೆಗಳ ಬಗ್ಗೆ ಕೆಲವು ಮಾಧ್ಯಮಗಳು ವಿಗ್ರಹದ ಮೇಲೆ ಮೂತ್ರ ಮಾಡಿದ ಎಂದು ಹೊಡೆದಿದ್ದಾರೆ ಎಂದು ಹೇಳುತ್ತಿವೆ. ಆದರೆ ಇವು ಸುಳ್ಳು ಎಂದು ಇಲ್ಲಿನ ನಿವಾಸಿಗಳು ಹೇಳುತ್ತಿದ್ದಾರೆ. ದೇವಸ್ಥಾನದ ಅರ್ಚಕರು ಇಂತಹದ್ದೊಂದು ಆರೋಪಗಳನ್ನು ಮಾಡುತ್ತಿವೆ. ನೊಂದವರ ಪರವಾಗಿ ನಿಲ್ಲಬೇಕಾದ ಮಾಧ್ಯಮಗಳು ಪ್ರಕರಣವನ್ನು ತಿರುಚಿ, ದೌರ್ಜನ್ಯಕೋರರಿಗೆ ರಕ್ಷಣೆ ನೀಡಲು ಯತ್ನಿಸುತ್ತಿವೆ ಎಂದು ದಲಿತರು ಆಕ್ರೋಶ ವ್ಯಕ್ತಪಡಿಸಿದ್ದಾರೆ.

ಅರ್ಚಕನ ಜಾತಿ ಚಪಲದಿಂದಾಗಿ ದುಡಿಯುವ ಸಾಮರ್ಥ್ಯಕ್ಕೆ ಬಂದಿರುವ ಯುವಕ ಆಸ್ಪತ್ರೆಗೆ ಸೇರುವಂತಾಗಿದೆ. ಸಂತ್ರಸ್ತ ಯುವಕನ ತಂದೆ ನಿವೃತ್ತ ಬಿಇಒ ಅಧಿಕಾರಿಯಾಗಿದ್ದು, ಮಗನನ್ನು ಬಹಳ ಶಿಸ್ತಿನಿಂದ ಬೆಳೆಸಿದ್ದರು. ಈತ ಯಾವುದೇ ಕಾರಣಕ್ಕೂ ಬೇರೆಯವರ ತಂಟೆಗೆ ಹೋಗುವವನಲ್ಲ ಎಂದು ಸ್ಥಳೀಯರು ಹೇಳುತ್ತಾರೆ. ಮಗನನ್ನು ಬೆತ್ತಲೆಯಾಗಿ ಮೆರವಣಿಗೆ ಮಾಡುತ್ತಿರುವ ಸಂದರ್ಭದಲ್ಲಿಯೂ ಅವರು ಆತನನನ್ನು ರಕ್ಷಿಸಲು ಹೋಗಿದ್ದರು. ಈ ವೇಳೆ ಜಾತಿ ಭಯೋತ್ಪಾದಕರು ಅವರನ್ನೂ ಕಂಬಕ್ಕೆ ಕಟ್ಟಲು ಪ್ರಯತ್ನಿಸಿದ್ದಾರೆ. ಇದರಿಂದಾಗಿ ಅವರು ಮಾನಸಿಕವಾಗಿ ತೀವ್ರವಾಗಿ ಕುಗ್ಗಿ ಹೋಗಿ ಅಸ್ವಸ್ಥರಾಗಿದ್ದು ಅವರನ್ನು ಮೈಸೂರಿನ ಆಸ್ಪತ್ರೆಗೆ ಕರೆದುಕೊಂಡು ಹೋಗಲಾಯಿತು ಎಂದು ತಿಳಿದು ಬಂದಿದೆ.

Like us on facebook
Disclaimer:

ರಾಷ್ಟ್ರಧ್ವನಿ ಅಂತಾರ್ಜಾಲ ಸುದ್ದಿ ವಾಹಿನಿಯಲ್ಲಿ ಪ್ರಕಟವಾಗುವ ಸುದ್ದಿಗಳ ಕುರಿತು ಸಾರ್ವಜನಿಕರು ಆರೋಗ್ಯಕರ ಚರ್ಚೆ, ಕಮೆಂಟ್ ಗಳನ್ನು ಮಾಡಬಹುದಾಗಿದೆ. ಧರ್ಮ, ಜಾತಿ ನಿಂದನೆಯಾಗುವಂತಹ ಮತ್ತು ಸಾಮರಸ್ಯ ಕೆಡಿಸುವಂತಹ ದುರುದ್ದೇಶಪೂರಿತ ಕಮೆಂಟ್ ಹಾಗೂ ಚರ್ಚೆ ಕಾನೂನು ರೀತಿಯಲ್ಲಿ ಅಪರಾಧವಾಗಿರುತ್ತದೆ. ದೇಶದ ಕಾನೂನು ಸುವ್ಯವಸ್ಥೆಗೆ ಧಕ್ಕೆ ತರುವಂತಹ ಯಾವುದೇ ಕಮೆಂಟ್ ಗಳನ್ನು ಹಾಕಿದ್ದಲ್ಲಿ, ಅದಕ್ಕೆ ಕಮೆಂಟ್ ಹಾಕುವವರೇ ಹೊಣೆಗಾರರಾಗಿರುತ್ತಾರೆ. ಅಂತಹವರ ಹೆಸರು ಮತ್ತು ಐಪಿ ಅಡ್ರೆಸ್ ಗಳನ್ನು ಸಂಬಂಧಪಟ್ಟ ಇಲಾಖೆಗೆ ಒದಗಿಸಲು ರಾಷ್ಟ್ರಧ್ವನಿ ಬದ್ಧವಾಗಿರುತ್ತದೆ.

ಸಿನಿಮಾ
ಸಂಪಾದಕೀಯ ಮತ್ತಷ್ಟು
ಸಂವಿಧಾನಾತ್ಮಕ ಸದನಗಳಲ್ಲಿ ಪಾಸ್ ಆಗುತ್ತಿದೆ ‘ಹಿಂದೂ..
ದ್ವೇಷಪೂರಿತ, ಅಸಂವಿಧಾನಿಕ ಪೌರತ್ವ ತಿದ್ದುಪಡಿ ಮಸೂದೆ ಉಭಯ ಸದನಗಳಲ್ಲಿ ಅಂಗೀಕಾರವಾಗಿದೆ. ಇನ್ನು ರಾಷ್ಟ್ರಪತಿ ಅಂಕಿತ...
POLL

[democracy id="1"]