Tuesday, January 28 , 2020
ಒಂಟಿ ಸಲಗ ಮೈಕೊಡವಿ ಎದ್ದು ನಿಂತಿದೆ | ಪಾತಾಳಕ್ಕೆ ತಳ್ಳಿದರೂ ಮತ್ತೆ ಎದ್ದು ಬಂದ ದುನಿಯಾ ವಿಜಯ್

ವೈಯಕ್ತಿಕ ಜೀವನದ ಏಳು ಬೀಳಿನಲ್ಲಿ ಏಟುಗಳ ಮೇಲೆ ಏಟು ತಿಂದ ಸಲಗ ಕೊನೆಗೆ ಒಂಟಿಯಾಯಿತು. ಒಂಟಿಯಾದರೂ ಹಠ ಬಿಡದ ಸಲಗ ಮತ್ತೆ ಎದ್ದು ನಿಂತಿದೆ. ಈಗ ಒಂಟಿ ಸಲಗಕ್ಕೆ ಹಲವು ನಂಟುಗಳು ದೊರಕಿದೆ. ಹೌದು…! ದುನಿಯಾ ಚಿತ್ರದ ಮೂಲಕ ಚಿತ್ರರಂಗಕ್ಕೆ ನಾಯಕ ನಟನಾಗಿ ಎಂಟ್ರಿ ಕೊಟ್ಟ ದುನಿಯಾ ವಿಜಯ್, ಆ ಬಳಿಕ ಯಶಸ್ವಿ ನಾಯಕನಾಗಿ ಜರ್ನಿ ಮುಂದುವರಿಸಿದ್ದರು. ಮಾಸ್ತಿ ಗುಡಿ ಚಿತ್ರದಲ್ಲಿ ನಡೆದ ಅಚಾತುರ್ಯವೊಂದು ಅವರ ವೃತ್ತಿ ಜೀವನದಲ್ಲಿ ಬಿರುಗಾಳಿ ಎಬ್ಬಿಸಿತು. ತಾನು ಪ್ರಾಣಕ್ಕಿಂತ ಪ್ರೀತಿಸುತ್ತಿದ್ದ ಇಬ್ಬರು ಸ್ನೇಹಿತರನ್ನು ಕಳೆದುಕೊಂಡ ನೋವು ಒಂದೆಡೆಯಾದರೆ, “ಇವರನ್ನು ನೀನೇ ಕೊಂದಿ” ಎನ್ನುವ ಹಣೆ ಪಟ್ಟಿ ಇನ್ನೊಂದೆಡೆಯಾಗಿತ್ತು. ಆದರೂ ಕೊನೆಗೂ ಮಾಸ್ತಿಗುಡಿ ಸಿನಿಮಾ ರಿಲೀಸ್ ಆಯಿತು. ಇದಾದ ಬಳಿಕ ದುನಿಯಾ ವಿಜಯ್ ಅನುಭವಿಸಿದ ಕಷ್ಟ, ನಷ್ಟಗಳು ಒಂದೆರಡಲ್ಲ.

ಬಾಡಿ ಬಿಲ್ಡರ್ ಶೋನಲ್ಲಿ ನಡೆದ ಒಂದು ಘಟನೆಯಿಂದಾಗಿ ದುನಿಯಾ ವಿಜಯ್ ಪೊಲೀಸ್ ಠಾಣೆ ಮೆಟ್ಟಿಲೇರಬೇಕಾಯಿತು. ಹಲವು ಆರೋಪಗಳನ್ನು ಹೊರಿಸಿಕೊಳ್ಳಬೇಕಾಯಿತು. ಈ ನಡುವೆ ತಮ್ಮ ಮೊದಲ ಪತ್ನಿಯೂ ಏಕಾ ಏಕಿ ವಿಜಯ್ ಮೇಲೆ ತಿರುಗಿ ಬಿದ್ದರು. ಇದು ವಿಜಯ್ ತನ್ನ ವೈಯಕ್ತಿಕ ಮತ್ತು ವೃತ್ತಿ ಬದುಕು ಇವೆರಡನ್ನೂ ಸಮತೋಲನ ಮಾಡಿಕೊಳ್ಳಲು ಸಾಧ್ಯವಾಗದ ಪರಿಸ್ಥಿತಿಯನ್ನುಂಟು ಮಾಡಿತು. ಇದೂ ಸಾಲದು ಎಂಬಂತೆ. ಕೆಲವು ಕನ್ನಡ ಸುದ್ದಿವಾಹಿನಿಗಳು ವಿಜಯ್ ಹಿಂದೆ ಬಿದ್ದು, ನಿರಂತರ ಮಸಾಲೆ ಬೆರೆಸಿದ ಸುದ್ದಿಗಳನ್ನು ಪ್ರಸಾರ ಮಾಡುವ ಮೂಲಕ ಕುಸಿದಿದ್ದ ವಿಜಯ್ ದುನಿಯಾವನ್ನು ಇನ್ನಷ್ಟು ಕರಾಬ್ ಮಾಡುವಲ್ಲಿ ಯಶಸ್ವಿಯಾಗಿತ್ತು. ಇಷ್ಟೆಲ್ಲ ನೋವುಗಳಿಂದ ತತ್ತರಿಸಿದ್ದ ದುನಿಯಾ ವಿಜಯ್ ಒಂಟಿ ಸಲಗವೇ ಆಗಿದ್ದರು. ತನ್ನ ಜೊತೆಗಾಗಿ ತುಂಬಿದ ಧೈರ್ಯ, ಆತ್ಮವಿಶ್ವಾಸದೊಂದಿಗೆ ಒಂಟಿಯಾಗಿದ್ದ ವಿಜಯ್ ಈಗ ಸಲಗನಾಗಿ ತೆರೆಗೆ ಬರಲು ಸಿದ್ಧವಾಗಿದ್ದಾರೆ.

ಈಗ ದುನಿಯಾ ವಿಜಯ್ ಕೇವಲ ನಟನಾಗಿ ಜನರ ಮುಂದೆ ಬರುತ್ತಿಲ್ಲ. ಅವರು ಮೊದಲನೆ ಬಾರಿಗೆ ನಿರ್ದೇಶಕ, ನಟನಾಗಿಯೂ ಜನರ ಮುಂದೆ ಬರಲಿದ್ದಾರೆ. ಜೂನ್ 6ರಂದು ಚಿತ್ರಕ್ಕೆ ಮುಹೂರ್ತ ಫಿಕ್ಸ್ ಮಾಡಿದ್ದಾರೆ. ಮಾಜಿ ಸಿಎಂ ಸಿದ್ದರಾಮಯ್ಯ, ಕಿಚ್ಚ ಸುದೀಪ್, ರಾಘವೇಂದ್ರ ರಾಜ್ ಕುಮಾರ್, ಸಂಸದ ಡಿಕೆ ಸುರೇಶ್ ಸೇರಿದಂತೆ ಹಲವು ಗಣ್ಯರು ದುನಿಯಾ ವಿಜಯ್ ಗೆ ಶುಭ ಹಾರೈಸಿದ್ದಾರೆ.

ಕಷ್ಟದಲ್ಲಿರುವವರೆಂದರೆ ಮನಮಿಡಿಯುವ ನಾಯಕ ಎಂದೇ ಹೆಸರಾಗಿರುವ ದುನಿಯಾ ವಿಜಯ್ ಈಗ ತಾವು ಕಷ್ಟವನ್ನು ಗೆದ್ದು ಮತ್ತೆ ಚೇತರಿಸಿಕೊಂಡು ಎದ್ದು ನಿಂತಿದ್ದಾರೆ. ಮಾಧ್ಯಮಗಳ ಅಪಪ್ರಚಾರದಿಂದ ದುನಿಯಾ ವಿಜಯ್ ಅಭಿಮಾನಿಗಳೂ ಗೊಂದಲಕ್ಕೀಡಾಗಿದ್ದರು. ಇದೀಗ ಇವೆಲ್ಲವನ್ನು ಮೀರಿ ಚಿತ್ರರಂಗದಲ್ಲಿ ದುನಿಯಾ ವಿಜಯ್ ಮರು ಜನ್ಮ ಪಡೆಯಲಿದ್ದಾರೆ. ಸಲಗ ಚಿತ್ರದ ಕಥೆಯಂತೂ ಈಗಾಗಲೇ ಹಲವು ಬಗೆಯ ವಿಮರ್ಶೆಗಳಿಗೆ ಒಳಗಾಗಿದೆ. ಏನೇ ಆಗಲಿ, ದುನಿಯಾ ವಿಜಯ್ ಓರ್ವ ಅದ್ಭುತ ನಟ. ಅವರ ಚಿತ್ರರಂಗದ ಎರಡನೇಯ ಅಧ್ಯಾಯ ಅವರಿಗೆ ಯಶಸ್ಸನ್ನುಂಟು ಮಾಡಲಿ ಎನ್ನುವುದೇ ಅಭಿಮಾನಿಗಳ ಆಶಯವಾಗಿದೆ.

Like us on facebook
Disclaimer:

ರಾಷ್ಟ್ರಧ್ವನಿ ಅಂತಾರ್ಜಾಲ ಸುದ್ದಿ ವಾಹಿನಿಯಲ್ಲಿ ಪ್ರಕಟವಾಗುವ ಸುದ್ದಿಗಳ ಕುರಿತು ಸಾರ್ವಜನಿಕರು ಆರೋಗ್ಯಕರ ಚರ್ಚೆ, ಕಮೆಂಟ್ ಗಳನ್ನು ಮಾಡಬಹುದಾಗಿದೆ. ಧರ್ಮ, ಜಾತಿ ನಿಂದನೆಯಾಗುವಂತಹ ಮತ್ತು ಸಾಮರಸ್ಯ ಕೆಡಿಸುವಂತಹ ದುರುದ್ದೇಶಪೂರಿತ ಕಮೆಂಟ್ ಹಾಗೂ ಚರ್ಚೆ ಕಾನೂನು ರೀತಿಯಲ್ಲಿ ಅಪರಾಧವಾಗಿರುತ್ತದೆ. ದೇಶದ ಕಾನೂನು ಸುವ್ಯವಸ್ಥೆಗೆ ಧಕ್ಕೆ ತರುವಂತಹ ಯಾವುದೇ ಕಮೆಂಟ್ ಗಳನ್ನು ಹಾಕಿದ್ದಲ್ಲಿ, ಅದಕ್ಕೆ ಕಮೆಂಟ್ ಹಾಕುವವರೇ ಹೊಣೆಗಾರರಾಗಿರುತ್ತಾರೆ. ಅಂತಹವರ ಹೆಸರು ಮತ್ತು ಐಪಿ ಅಡ್ರೆಸ್ ಗಳನ್ನು ಸಂಬಂಧಪಟ್ಟ ಇಲಾಖೆಗೆ ಒದಗಿಸಲು ರಾಷ್ಟ್ರಧ್ವನಿ ಬದ್ಧವಾಗಿರುತ್ತದೆ.

ಸಿನಿಮಾ
ಸಂಪಾದಕೀಯ ಮತ್ತಷ್ಟು
ಸಂವಿಧಾನಾತ್ಮಕ ಸದನಗಳಲ್ಲಿ ಪಾಸ್ ಆಗುತ್ತಿದೆ ‘ಹಿಂದೂ..
ದ್ವೇಷಪೂರಿತ, ಅಸಂವಿಧಾನಿಕ ಪೌರತ್ವ ತಿದ್ದುಪಡಿ ಮಸೂದೆ ಉಭಯ ಸದನಗಳಲ್ಲಿ ಅಂಗೀಕಾರವಾಗಿದೆ. ಇನ್ನು ರಾಷ್ಟ್ರಪತಿ ಅಂಕಿತ...
POLL

[democracy id="1"]