Saturday, September 19 , 2020
BREAKING NEWS
 
ಮದುವೆ ಮನೆಯಲ್ಲಿ ‘ಮಹಾನಾಯಕ’ ಫ್ಲೆಕ್ಸ್ | “ನಾವು ಬದಲಾದರೆ ಸಮಾಜ ಬದಲಾಗುತ್ತದೆ” ಎಂದ ಪ್ರೊ.ಹರಿರಾಮ್ ,          ಸೇತುವೆ ಕೊಚ್ಚಿ ಹೋಗಿ 30 ವರ್ಷವಾದರೂ ಸರ್ಕಾರ ನಿರ್ಮಿಸಲಿಲ್ಲ | ಸರ್ಕಾರಕ್ಕೆ ಮುಖಭಂಗವಾಗುವಂತೆ ತಾವೇ ಸೇತುವೆ ನಿರ್ಮಿಸಿದ ಗ್ರಾಮಸ್ಥರು ,          ಸೈಕಲ್ ನಲ್ಲಿ ತೆರಳಿದ್ದ ಬಾಲಕಿ ರಾತ್ರಿಯಾದರೂ ಬರಲಿಲ್ಲ! | ಬೆಳಗ್ಗೆ ಕಾದಿತ್ತು ಪೋಷಕರಿಗೆ ಶಾಕ್ | ಒಂದು ಮನಕರಗಿಸುವ ಘಟನೆ ,          ಕೊರೊನಾ ಹಾಟ್ ಸ್ಪಾಟ್ ಆದ ನಾಗಪುರದ ಆರೆಸ್ಸೆಸ್ ಕಚೇರಿ; 9 ಹಿರಿಯ ನಾಯಕರಿಗೆ ಕೋವಿಡ್ ಪಾಸಿಟಿವ್ ,          ಅಕುಲ್ ಬಾಲಾಜಿ ರೆಸಾರ್ಟ್ ನಲ್ಲಿ ನಡೆಯುತ್ತಿತ್ತಾ ಮತ್ತಿನ ದಂಧೆ | ಸ್ಟಾರ್ ನಟರ ಮೋಜು ಮಸ್ತಿಯ ಪಾರ್ಟಿಯಲ್ಲಿ ಡ್ರಗ್ಸ್ ನದ್ದೇ ಕಾರುಬಾರು! ,          ಈ ಬಾರಿಯ ದೆಹಲಿ ಪ್ರಯಾಣದಲ್ಲಿ ಆದ ಅನುಭವವೇನು? | ಸಿಎಂ ಯಡಿಯೂರಪ್ಪ ಏನು ಹೇಳಿದರು? ,         
ಸಿ++ ನೋಡಿ ಅಚ್ಚರಿಗೊಂಡ ಪ್ರಥಮ್ | ಹೀರೋ ಸುರೇಶ್ ಲಿಯೋನ್ ರೇ ಸನ್ನಿಲಿಯೋನ್ ತಮ್ಮನಾ?

ಸಿನಿಡೆಸ್ಕ್: ಸಿ++ ಸೈಬರ್ ಕ್ರೈಂನ್ನೊಳಗೊಂಡ ಕಥೆಯ ಚಿತ್ರ ನಿಧಾನವಾಗಿ ಸಿನಿ ಪ್ರಿಯರಿಗೆ ಇಷ್ಟವಾಗುತ್ತಾ ಹೋಗುತ್ತಿದೆ. ನಿನ್ನ ಈ ಚಿತ್ರ ವೀಕ್ಷಿಸಲು  ಬಿಗ್ ಬಾಸ್ ಖ್ಯಾತಿಯ ನಟ ಪ್ರಥಮ್ ಆಗಮಿಸಿದ್ದರು. ಚಿತ್ರ ನೋಡಿದ ಅವರು ಚಿತ್ರದ ಕಥೆಯನ್ನು ನೋಡಿ ಹೀಗೂ ಕ್ರೈಂ ಇದೆಯಾ? ಅಂತ ಅಚ್ಚರಿ ವ್ಯಕ್ತಪಡಿಸಿದ್ದಾರೆ.

ಈ ಸಂದರ್ಭದಲ್ಲಿ ಚಿತ್ರದ ಬಗ್ಗೆ ಮಾತನಾಡಿದ ಅವರು, ಸಿ++ ಡೈರೆಕ್ಟರ್ ಸುರೇಶ್ ಲಿಯೋನ್ ರೇ, ಸನ್ನಿಲಿಯೋನ್ ತಮ್ಮ ಅಂತ ಅಂದುಕೊಂಡೆ, ಡೈರೆಕ್ಟರ್ ನನಗೆ ವೈಯಕ್ತಿಕವಾಗಿ ಬಹಳ ಇಷ್ಟ ಆದ್ರು.  ಅವರ ಕಾನ್ಫಿಡೆಂಟ್ ನನಗೆ ಬಹಳ ಇಷ್ಟ ಆಯ್ತು.  ಸೈಬರ್ ನಲ್ಲಿ ಈ ರೇಂಜ್ ಗೆ ಕ್ರೈಂ ಇದೆಯಾ ಅಂತ ಅವರು ತೋರಿಸಿದ್ದಾರೆ ಎಂದರು.

ಸೈಬರ್ ಕ್ರೈಂ ಬಗ್ಗೆ ಅವರು ಬಹಳಷ್ಟು ಮಾಹಿತಿ ಈ ಚಿತ್ರದಲ್ಲಿ ನೀಡಿದ್ದಾರೆ. ಕ್ರೈಂನಲ್ಲಿ ಏನೇನು ಬರುತ್ತದೋ ಅದರ ಇನ್ನೊಂದು ಆಯಾಮವನ್ನು ಅವರು ಚಿತ್ರದಲ್ಲಿ ತೋರಿಸಿದ್ದಾರೆ. ಕ್ರೈಂ ನಲ್ಲಿ ಇಂತಹದ್ದೊಂದೂ ವಿಧ ಇದೆ ಎನ್ನುವುದನ್ನು ಅವರು ತೋರಿಸಿದ್ದಾರೆ ಎಂದು ಪ್ರಥಮ್ ಹೇಳಿದರು.

ಮನೋರಂಜನೆ ಎನ್ನುವುದಕ್ಕಿಂತಲೂ ಈ ಚಿತ್ರದಲ್ಲಿ ಎಲ್ಲವೂ ಚೆನ್ನಾಗಿದೆ. ಅವರು ಏನು ಹೇಳಲು ಹೊರಟಿದ್ದಾರೆಯೋ ಅದೆಲ್ಲವೂ ಚೆನ್ನಾಗಿದೆ. ಈ ಚಿತ್ರದ ಕ್ಯಾಮರಮ್ಯಾನ್ ನನ್ನ ಚಿತ್ರಕ್ಕೂ ಕ್ಯಾಮರಾಮ್ಯಾನ್ ಆಗಿದ್ದ ಸಂದೀಪ್ ಅವರು. ವಿಲನ್ ವಿರಾಜ್  ಅವರೂ ಬಹಳ ಚೆನ್ನಾಗಿ ಮಾಡಿದ್ದಾರೆ.  ಸಾಯಿ ಕುಮಾರ್ ಅವರ ಲಾ ಆ್ಯಂಡ್ ಆರ್ಡರ್ ಸಿನಿಮಾದ ಬಳಿಕ ಕನ್ನಡದಲ್ಲಿ ಹೀರೋಯಿನ್ ಇಲ್ಲದ ಚಿತ್ರ ಸಿ++.  ಕನ್ನಡದಲ್ಲಿ ಇಂತಹ ಚಿತ್ರದಲ್ಲಿ ಸಿ++ ಎರಡನೇಯ ಸಿನಿಮಾ. ಹೀರೋಯಿನ್ ಮುಖ ತೋರಿಸದೆನೂ ಡೈರೆಕ್ಟರ್ ಸಿನಿಮಾ ಮಾಡಬಹುದು ಅಂತ ಸುರೇಶ್ ಲಿಯೋನ್ ರೇ ತೋರಿಸಿಕೊಟ್ಟಿದ್ದಾರೆ. ಈ ಟ್ಯಾಲೆಂಟ್ ಸುರೇಶ್ ಲಿಯೋನ್ ರೇ ಅವರ ಬಳಿಯಲ್ಲಿದೆ.

 ನಿರ್ದೇಶಕರು ಬಹಳ ಕ್ರಿಯಾಶೀಲ ಎನ್ನುವುದನ್ನು ಚಿತ್ರದಲ್ಲಿ ತೋರಿಸಿದ್ದಾರೆ.  ಕ್ಯಾಮರಮ್ಯಾನ್ ಅಂತೂ ಇರುವ ಸೋರ್ಸ್ ನಲ್ಲಿ ಏನು ತೆಗೆಯ ಬಹುದೋ ಅದನ್ನು ತೆಗೆದಿದ್ದಾರೆ.  ಸೈಬರ್ ಗೆ ನಾವು ಎಷ್ಟು ಹತ್ತಿರವಾಗಿದ್ದೇವೋ ಅವರಿಗೆಲ್ಲ ಒಂದು ಮೆಸೆಜ್ ಇದರಲ್ಲಿದೆ ಎಂದ ಅವರು, ಸುರೇಶ್ ಲಿಯೋನ್ ರೇ ರನ್ನಿಂಗ್ ಸ್ಟಾರ್ ಎಂದು ಹೇಳಿದರು.

ಸಿ++ ಚಿತ್ರ ನೋಡಿ ನಟಭಯಂಕರ ಪ್ರಥಮ್ ಏನಂದ್ರು ನೀವೇ ನೋಡಿ…

Gepostet von Rashtradhwani News am Sonntag, 3. November 2019
Like us on facebook
Disclaimer:

ರಾಷ್ಟ್ರಧ್ವನಿ ಅಂತಾರ್ಜಾಲ ಸುದ್ದಿ ವಾಹಿನಿಯಲ್ಲಿ ಪ್ರಕಟವಾಗುವ ಸುದ್ದಿಗಳ ಕುರಿತು ಸಾರ್ವಜನಿಕರು ಆರೋಗ್ಯಕರ ಚರ್ಚೆ, ಕಮೆಂಟ್ ಗಳನ್ನು ಮಾಡಬಹುದಾಗಿದೆ. ಧರ್ಮ, ಜಾತಿ ನಿಂದನೆಯಾಗುವಂತಹ ಮತ್ತು ಸಾಮರಸ್ಯ ಕೆಡಿಸುವಂತಹ ದುರುದ್ದೇಶಪೂರಿತ ಕಮೆಂಟ್ ಹಾಗೂ ಚರ್ಚೆ ಕಾನೂನು ರೀತಿಯಲ್ಲಿ ಅಪರಾಧವಾಗಿರುತ್ತದೆ. ದೇಶದ ಕಾನೂನು ಸುವ್ಯವಸ್ಥೆಗೆ ಧಕ್ಕೆ ತರುವಂತಹ ಯಾವುದೇ ಕಮೆಂಟ್ ಗಳನ್ನು ಹಾಕಿದ್ದಲ್ಲಿ, ಅದಕ್ಕೆ ಕಮೆಂಟ್ ಹಾಕುವವರೇ ಹೊಣೆಗಾರರಾಗಿರುತ್ತಾರೆ. ಅಂತಹವರ ಹೆಸರು ಮತ್ತು ಐಪಿ ಅಡ್ರೆಸ್ ಗಳನ್ನು ಸಂಬಂಧಪಟ್ಟ ಇಲಾಖೆಗೆ ಒದಗಿಸಲು ರಾಷ್ಟ್ರಧ್ವನಿ ಬದ್ಧವಾಗಿರುತ್ತದೆ.

ಸಿನಿಮಾ
ಸಂಪಾದಕೀಯ ಮತ್ತಷ್ಟು
ಸಂವಿಧಾನಾತ್ಮಕ ಸದನಗಳಲ್ಲಿ ಪಾಸ್ ಆಗುತ್ತಿದೆ ‘ಹಿಂದೂ..
ದ್ವೇಷಪೂರಿತ, ಅಸಂವಿಧಾನಿಕ ಪೌರತ್ವ ತಿದ್ದುಪಡಿ ಮಸೂದೆ ಉಭಯ ಸದನಗಳಲ್ಲಿ ಅಂಗೀಕಾರವಾಗಿದೆ. ಇನ್ನು ರಾಷ್ಟ್ರಪತಿ ಅಂಕಿತ...
POLL

[democracy id="1"]