Tuesday, July 14 , 2020
ದೇವಸ್ಥಾನ ಅಪವಿತ್ರಗೊಳಿಸಿದನೆಂದು ದಲಿತ ಯುವಕನ ಬೆತ್ತಲೆ ಮೆರವಣಿಗೆ | ಆರೋಪಿಗಳ ವಿರುದ್ಧ ದೂರು ದಾಖಲು

ಗುಂಡ್ಲುಪೇಟೆ(11.06.2019): ದೇವಸ್ಥಾನ ಅಪವಿತ್ರಗೊಳಿಸಿದನೆಂದು ಆರೋಪಿಸಿ, ಜಾತಿ ನಿಂದನೆ ಮಾಡಿ, ಸಾರ್ವಜನಿಕ ರಸ್ತೆಯಲ್ಲಿ ದಲಿತ ಯುವಕನನ್ನು ಬೆತ್ತಲೆ ಮೆರವಣಿಗೆ ಮಾಡಿರುವ ಪ್ರಕರಣಕ್ಕೆ ಸಂಬಂಧಿಸಿದಂತೆ ಇದೀಗ ಬಹುಜನ ಚಳುವಳಿ ಮುಖಂಡರು ಹಾಗೂ ಕಾರ್ಯಕರ್ತರು ಗುಂಡ್ಲೂಪೇಟೆ ಪೊಲೀಸ್ ಠಾಣೆಯಲ್ಲಿ ದೂರು ನೀಡಿದ್ದು, ತಪ್ಪಿತಸ್ಥರಿಗೆ ಕಠಿಣ ಶಿಕ್ಷೆ ನೀಡುವಂತೆ ಒತ್ತಾಯಿಸಿದ್ದಾರೆ.

ಜೂನ್ 9ರಂದು ರಾತ್ರಿ ಸುಮಾರು 12 ಗಂಟೆಗೆ ಸಂತ್ರಸ್ತ ಎಸ್.ಪ್ರತಾಪ್ ಅವರು ಮೈಸೂರಿನಿಂದ ತಮ್ಮ ಗ್ರಾಮ ಶ್ಯಾನಾಡ್ರಹಳ್ಳಿಗೆ ಬರುತ್ತಿದ್ದ ವೇಳೆ ರಾಘವಾಪುರದ ಬಳಿಯಲ್ಲಿ ದುಷ್ಕರ್ಮಿಗಳು ಪ್ರತಾಪ್ ನ ಮೊಬೈಲ್, ಹಣ, ಕತ್ತಿನಲ್ಲಿದ್ದ ಸರವನ್ನು ದೋಚಿದ್ದಾರೆ. ಇದನ್ನು ಪ್ರತಿಭಟಿಸಿದ ಸಂದರ್ಭ ಅವರು ಪ್ರತಾಪ್ ಮೇಲೆ ಹಲ್ಲೆ ನಡೆಸಲು ಯತ್ನಿಸಿದ್ದು, ಈ ವೇಳೆ ಆತ್ಮರಕ್ಷಣೆಗಾಗಿ ಪಕ್ಕದ ತೋಟವೊಂದಕ್ಕೆ ಪ್ರತಾಪ್ ಓಡಿ ಹೋಗಿದ್ದಾರೆ. ಅಲ್ಲಿಂದ ನಡೆದುಕೊಂಡು ಬಂದ ಅವರು ಜೂನ್ 3ರಂದು ಬೆಳಗ್ಗೆ ಸುಮಾರು 6 ಗಂಟೆಗೆ ಮಾಡ್ರಹಳ್ಳಿ ಸಮೀಪವಿರುವ ಕಬ್ಬೆಕಟ್ಟೆ ಪಕ್ಕದ ಆವರಣದಲ್ಲಿ ವಿಶ್ರಾಂತಿ ಪಡೆಯುತ್ತಿದ್ದು, ಈ ವೇಳೆ ಸ್ಥಳಕ್ಕೆ ಬಂದ ದೇವಸ್ಥಾನದ ಅರ್ಚಕ ಶಿವಪ್ಪ ನೀನು ಯಾವ ಊರು? ಯಾವ ಜಾತಿಯವನು ಎಂದು ಪ್ರಶ್ನಿಸಿದ್ದಾನೆ. ಈತ ತಾನು ಎಸ್ ಸಿ ಸಮುದಾಯದವನು ಎಂದು ಹೇಳಿದ ಸಂದರ್ಭ ಮನೆಗೆ ತೆರಳಿ ಇನ್ನಿಬ್ಬರನ್ನು ಕರೆದುಕೊಂಡು ಬಂದು ಹಲ್ಲೆ ನಡೆಸಿದ್ದಾನೆ ಬಳಿಕ, ದೇವಸ್ಥಾನವನ್ನು ಅಪವಿತ್ರಗೊಳಿಸಿದ್ದಾನೆ ಎಂದು ಪ್ರತಾಪ್ ನ ಕೈಗಳನ್ನು ಕಟ್ಟಿ ಥಳಿಸಿದ್ದು, ಕೈ ಕಾಲುಗಳಿಗೆ ಒದ್ದು ಹಲ್ಲೆ ನಡೆಸಿದ್ದಾರೆ. ಬಳಿಕ ತಲೆಗೆ ಹಿಡಿ ಗಾತ್ರದ ಕಲ್ಲಿನಿಂದ ಬಲವಾಗಿ ಹೊಡೆದಿದ್ದಾರೆ. ದೊಣ್ಣೆಗಳಿಂದಲೂ ಹೊಡೆದಿದ್ದಾರೆ. ಬಳಿಕ ಬೆತ್ತಲೆ ಮೆರವಣಿಗೆ ನಡೆಸಿದ್ದಾರೆ ಎಂದು ದೂರಿನಲ್ಲಿ ತಿಳಿಸಲಾಗಿದೆ.

ದೇವಸ್ಥಾನದ ಅರ್ಚಕ ಶಿವಪ್ಪ, ಮಾಣಿಕ್ಯ, ಸತೀಶ್, ಮೂರ್ತಿ, ಬಸವರಾಜು, ಪುಟ್ಟಸ್ವಾಮಿ ಮೊದಲಾದವರು ಪ್ರಕರಣದ ಆರೋಪಿಗಳಾಗಿದ್ದು,  ಸಂತ್ರಸ್ತ ಯುವಕ ಪ್ರತಾಪ್ ನನ್ನು ಬೆತ್ತಲೆ ಮೆರವಣಿಗೆ ನಡೆಸುತ್ತಿರುವ ದೃಶ್ಯವನ್ನು ಸತೀಶ್ ಮತ್ತು ಮೂರ್ತಿ ವಿಡಿಯೋ ಮಾಡಿ ಸಾಮಾಜಿಕ ಜಾಲತಾಣಗಳಲ್ಲಿ ಹರಿಬಿಟ್ಟಿದ್ದಾರೆ. ಪ್ರತಾಪ್ ಅವರಿಗೆ ಹಲ್ಲೆ ನಡೆಸುವುದು ಮತ್ತು ಮೆರವಣಿಗೆ ನಡೆಸಿರುವುದನ್ನು ಇಬ್ಬರು ವ್ಯಕ್ತಿಗಳು ನೋಡಿದ್ದಾರೆ ಎಂದು ಸಾಕ್ಷಿ ಸಹಿತ ದೂರನ್ನು ಬಹುಜನ ಚಳುವಳಿಯ ಮುಖಂಡರು ನೀಡಿದ್ದು, ಈ ಬಗ್ಗೆ ತಕ್ಷಣವೇ ಕಾನೂನು ಕ್ರಮ ಜರಗಿಸುವಂತೆ ಕೋರಿದ್ದಾರೆ. ಮುಖಂಡರು ನೀಡಿದ ದೂರಿನಂತೆ ಪ್ರಕರಣ ದಾಖಲಿಸಿಕೊಂಡಿರುವ ಪೊಲೀಸರು ತನಿಖೆ ಮುಂದುವರಿಸಿದ್ದಾರೆ.

ಗುಂಡ್ಲುಪೇಟೆ ಪೊಲೀಸ್ ಠಾಣೆಗೆ ಇಂದು ಭೇಟಿ ನೀಡಿದ ಬಹುಜನ ವಿದ್ಯಾರ್ಥಿ ಸಂಘದ ಮುಖಂಡರು, ಬಹುಜನ ಸಮಾಜಪಾರ್ಟಿಯ ಮುಖಂಡರು ಹಾಗೂ ಕಾರ್ಯಕರ್ತರು ಪೊಲೀಸರಿಗೆ ದೂರು ನೀಡಿದರು. ಬಹುಜನ ವಿದ್ಯಾರ್ಥಿ ಸಂಘದ ಜಿಲ್ಲಾ ಸಂಯೋಜಕರು, ಬಿಎಸ್ಪಿ ಚಾಮರಾಜನಗರ ಜಿಲ್ಲಾ ಸಮಿತಿ, ಮತ್ತು ಗುಂಡ್ಲುಪೇಟೆ ತಾಲ್ಲೂಕು ಸಮಿತಿ ಹಾಗೂ ಕಾರ್ಯಕರ್ತರು ಜೊತೆಗಿದ್ದರು.

Like us on facebook
Disclaimer:

ರಾಷ್ಟ್ರಧ್ವನಿ ಅಂತಾರ್ಜಾಲ ಸುದ್ದಿ ವಾಹಿನಿಯಲ್ಲಿ ಪ್ರಕಟವಾಗುವ ಸುದ್ದಿಗಳ ಕುರಿತು ಸಾರ್ವಜನಿಕರು ಆರೋಗ್ಯಕರ ಚರ್ಚೆ, ಕಮೆಂಟ್ ಗಳನ್ನು ಮಾಡಬಹುದಾಗಿದೆ. ಧರ್ಮ, ಜಾತಿ ನಿಂದನೆಯಾಗುವಂತಹ ಮತ್ತು ಸಾಮರಸ್ಯ ಕೆಡಿಸುವಂತಹ ದುರುದ್ದೇಶಪೂರಿತ ಕಮೆಂಟ್ ಹಾಗೂ ಚರ್ಚೆ ಕಾನೂನು ರೀತಿಯಲ್ಲಿ ಅಪರಾಧವಾಗಿರುತ್ತದೆ. ದೇಶದ ಕಾನೂನು ಸುವ್ಯವಸ್ಥೆಗೆ ಧಕ್ಕೆ ತರುವಂತಹ ಯಾವುದೇ ಕಮೆಂಟ್ ಗಳನ್ನು ಹಾಕಿದ್ದಲ್ಲಿ, ಅದಕ್ಕೆ ಕಮೆಂಟ್ ಹಾಕುವವರೇ ಹೊಣೆಗಾರರಾಗಿರುತ್ತಾರೆ. ಅಂತಹವರ ಹೆಸರು ಮತ್ತು ಐಪಿ ಅಡ್ರೆಸ್ ಗಳನ್ನು ಸಂಬಂಧಪಟ್ಟ ಇಲಾಖೆಗೆ ಒದಗಿಸಲು ರಾಷ್ಟ್ರಧ್ವನಿ ಬದ್ಧವಾಗಿರುತ್ತದೆ.

ಸಿನಿಮಾ
ಸಂಪಾದಕೀಯ ಮತ್ತಷ್ಟು
ಸಂವಿಧಾನಾತ್ಮಕ ಸದನಗಳಲ್ಲಿ ಪಾಸ್ ಆಗುತ್ತಿದೆ ‘ಹಿಂದೂ..
ದ್ವೇಷಪೂರಿತ, ಅಸಂವಿಧಾನಿಕ ಪೌರತ್ವ ತಿದ್ದುಪಡಿ ಮಸೂದೆ ಉಭಯ ಸದನಗಳಲ್ಲಿ ಅಂಗೀಕಾರವಾಗಿದೆ. ಇನ್ನು ರಾಷ್ಟ್ರಪತಿ ಅಂಕಿತ...
POLL

[democracy id="1"]