Tuesday, July 14 , 2020
ಬೆತ್ತಲೆ ಮೆರವಣಿಗೆ ಪ್ರಕರಣ | ಇನ್ನೂ ನಾಲ್ವರು ಆರೋಪಿಗಳ ಬಂಧನಕ್ಕೆ ಎನ್.ಮಹೇಶ್ ಒತ್ತಾಯ | ಸಿಎಂ ಕುಮಾರಸ್ವಾಮಿಗೆ ಮಾಹಿತಿ | ಸಂತ್ರಸ್ತನಿಗೆ ಪರಿಹಾರ ನೀಡಲು ಒತ್ತಾಯ

ರಾಯಚೂರು(12.06.2019): ಗುಂಡ್ಲುಪೇಟೆಯಲ್ಲಿ ದಲಿತ ಯುವಕನನ್ನು ಬೆತ್ತಲೆ ಮೆರವಣಿಗೆ ಮಾಡಿಸಿದ ಪ್ರಕರಣಕ್ಕೆ ಸಂಬಂಧಿಸಿದಂತೆ ಇಬ್ಬರು ಆರೋಪಿಗಳನ್ನು ಈಗಾಗಲೇ ಬಂಧಿಸಲಾಗಿದ್ದು, ಪ್ರಕರಣದಲ್ಲಿ ಶಾಮೀಲಾಗಿರುವ ಇನ್ನೂ ನಾಲ್ವರು ಆರೋಪಿಗಳನ್ನು ತಕ್ಷಣ ಬಂಧಿಸಬೇಕು ಎಂದು ಮಾಜಿ ಸಚಿವ, ಕೊಳ್ಳೇಗಾಲದ ಹಾಲಿ ಸಚಿವ ಎನ್.ಮಹೇಶ್ ಪೊಲೀಸರನ್ನು ಒತ್ತಾಯಿಸಿದ್ದಾರೆ.

ಗುಂಡ್ಲುಪೇಟೆಯಲ್ಲಿ ದಲಿತ ಯುವಕನನ್ನು ಜಾತಿಯ ಕಾರಣಕ್ಕಾಗಿ ಥಳಿಸಿ, ಬೆತ್ತಲೆ ಮೆರವಣಿಗೆ ಮಾಡಿದ ಘಟನೆಯ ಬಗ್ಗೆ ರಾಷ್ಟ್ರಧ್ವನಿಯ ಜೊತೆಗೆ ಮಾತನಾಡಿದ ಅವರು, ಘಟನೆಯ ಮಾಹಿತಿ ನನಗೆ ದೊರೆಯುತ್ತಿದ್ದಂತೆಯೇ ನಾನು ಎಸ್ ಪಿ ಜೊತೆಗೆ ಈ ಬಗ್ಗೆ ಮಾತನಾಡಿದ್ದು, ಆರೋಪಿಗಳನ್ನು ತಕ್ಷಣ ಬಂಧಿಸಿ ತನಿಖೆಗೊಳಪಡಿಸಲು ಒತ್ತಾಯಿಸಿದ್ದೆ. ಜೊತೆಗೆ ಮುಖ್ಯಮಂತ್ರಿ ಕುಮಾರಸ್ವಾಮಿ ಅವರ ಜೊತೆಗೂ ಈ ಬಗ್ಗೆ ಮಾತನಾಡಿ, ಪ್ರಕರಣದ ತೀವ್ರತೆಯ ಬಗ್ಗೆ ಮನವರಿಕೆ ಮಾಡಿದ್ದೇನೆ. ಸಂತ್ರಸ್ತನಿಗೆ ಸರಕಾರ ಸೂಕ್ತ ಪರಿಹಾರ ನೀಡಿ, ಆತ್ಮಸ್ತೈರ್ಯ ತುಂಬುವಂತೆ ಒತ್ತಾಯಿಸಿದ್ದೇನೆ ಎಂದು ಅವರು ತಿಳಿಸಿದರು.

ಬೆತ್ತಲೆ ಮೆರವಣಿಗೆಯಂತಹ ಘಟನೆ ಕರ್ನಾಟಕದಲ್ಲಿ ನಡೆದಿರುವುದು ನಿಜಕ್ಕೂ ದುರಂತ. ಇಂತಹ ಘಟನೆಗಳ ವಿರುದ್ಧ ಪೊಲೀಸರು ತಕ್ಷಣ ಕ್ರಮಕೈಗೊಂಡು ಮೊಳಕೆಯಲ್ಲೇ ಇವುಗಳನ್ನು ಚಿವುಟಿ ಹಾಕಬೇಕು. ರಸ್ತೆಯಲ್ಲಿ ಒಬ್ಬ ವ್ಯಕ್ತಿಯನ್ನು ಬೆತ್ತಲೆ ಮೆರವಣಿಗೆ ಮಾಡಲು ಇದೇನು ಬಿಹಾರವೋ ಇಲ್ಲ ಕರ್ನಾಟಕವೋ? ಎಂದು ಎನ್.ಮಹೇಶ್ ಪ್ರಶ್ನಿಸಿದರು. ನನಗೆ ಸುದ್ದಿವಾಹಿನಿಯೊಂದು ಕರೆ ಮಾಡಿ ಈ ಬಗ್ಗೆ ಮಾಹಿತಿ ನೀಡಿತು. ಈ ವೇಳೆ ನಾನು ಘಟನೆಯನ್ನು ಖಂಡಿಸಿ ತಕ್ಷಣವೇ ಎಸ್ ಪಿ ಜೊತೆಗೆ ಮಾತನಾಡಿ ಆರೋಪಿಗಳನ್ನು ಬಂಧಿಸಲು ಹೇಳಿದ್ದೆ ಎಂದು ಅವರು ತಿಳಿಸಿದರು.

ಪೊಲೀಸರ ಕೆಲಸ ಮಾಡಲು ಇವರು ಯಾರು?

ಸಂತ್ರಸ್ತ ಯುವಕನ ಬಗ್ಗೆ ಆರೋಪಿಗಳು ಮಾನಸಿಕ ಅಸ್ವಸ್ಥ ಎಂಬಂತೆ ಆರೋಪಿಸುತ್ತಿರುವ ಬಗ್ಗೆ ರಾಷ್ಟ್ರಧ್ವನಿ ಕೇಳಿದ ಪ್ರಶ್ನೆಗೆ ಉತ್ತರಿಸಿದ ಅವರು, ನಾನು ಮೊದಲು ಈ ಘಟನೆಯ ಬಗ್ಗೆ ಎಸ್ ಪಿ ಜೊತೆಗೆ ಮಾತನಾಡುವಾಗಲೂ ಇಂತಹದ್ದೇ ಕಾರಣಗಳನ್ನು ಅವರೂ ನೀಡಿದರು. ಆದರೆ ಸಂತ್ರಸ್ತನೇ ತಪ್ಪು ಮಾಡಿದ್ದಾನೆ ಎಂದು ಇವರು ಹೇಳುವುದಾದರೂ ಪೊಲೀಸರ ಕೆಲಸ ಮಾಡಲು ಇವರು ಯಾರು ಎಂದು ನಾನು ಪ್ರಶ್ನಿಸಿದ್ದೆ. ನಿಜವಾಗಿಯೂ ಆ ರೀತಿ ಏನಾದರೂ ನಡೆದಿದ್ದರೆ, ಪೊಲೀಸರಿಗೆ ಮೊದಲು ದೂರು ನೀಡಬಹುದಿತ್ತಲ್ಲವೇ? ಬೆತ್ತಲೆ ಮೆರವಣಿಗೆ ಮಾಡಿ ಶಿಕ್ಷೆ ನೀಡಲು ಇವರು ಯಾರು? ಎಂದು ಎನ್.ಮಹೇಶ್ ಪ್ರಶ್ನಿಸಿದರು.

ಸಂತ್ರಸ್ತನ ಪರ ನಿಂತ ಬಿಎಸ್ ಪಿ

ಘಟನೆಯಲ್ಲಿ ನೊಂದ ಸಂತ್ರಸ್ತನ ಪರವಾಗಿ ಬಿಎಸ್ ಪಿ ನಿಂತಿದೆ. ಬಿಎಸ್ ಪಿ ಕಾರ್ಯಕರ್ತರು ಸಂತ್ರಸ್ತನ ಕುಟುಂಬಕ್ಕೆ ನ್ಯಾಯ ದೊರಕಿಸಿಕೊಡಲು ನಿರಂತರ ಪ್ರಯತ್ನ ನಡೆಸಿದ್ದಾರೆ ಎಂದು ತಿಳಿಸಿದ ಎನ್.ಮಹೇಶ್, ತಾನು ಸದ್ಯ ಕಾರ್ಯನಿಮಿತ್ತ, ರಾಯಚೂರಿನಲ್ಲಿದ್ದು ಅಲ್ಲಿಂದ ಮರಳಿದ ತಕ್ಷಣ ಮತ್ತೊಮ್ಮೆ ಈ ಬಗ್ಗೆ ಅಧಿಕಾರಿಗಳ ಬಳಿ ಮಾತನಾಡಿ, ಶೀಘ್ರಗತಿಯಲ್ಲಿ ಪ್ರಕರಣದ ತನಿಖೆ ನಡೆಯುವಂತೆ ಒತ್ತಾಯಿಸುತ್ತೇನೆ ಎಂದು ತಿಳಿಸಿದರು.

Like us on facebook
Disclaimer:

ರಾಷ್ಟ್ರಧ್ವನಿ ಅಂತಾರ್ಜಾಲ ಸುದ್ದಿ ವಾಹಿನಿಯಲ್ಲಿ ಪ್ರಕಟವಾಗುವ ಸುದ್ದಿಗಳ ಕುರಿತು ಸಾರ್ವಜನಿಕರು ಆರೋಗ್ಯಕರ ಚರ್ಚೆ, ಕಮೆಂಟ್ ಗಳನ್ನು ಮಾಡಬಹುದಾಗಿದೆ. ಧರ್ಮ, ಜಾತಿ ನಿಂದನೆಯಾಗುವಂತಹ ಮತ್ತು ಸಾಮರಸ್ಯ ಕೆಡಿಸುವಂತಹ ದುರುದ್ದೇಶಪೂರಿತ ಕಮೆಂಟ್ ಹಾಗೂ ಚರ್ಚೆ ಕಾನೂನು ರೀತಿಯಲ್ಲಿ ಅಪರಾಧವಾಗಿರುತ್ತದೆ. ದೇಶದ ಕಾನೂನು ಸುವ್ಯವಸ್ಥೆಗೆ ಧಕ್ಕೆ ತರುವಂತಹ ಯಾವುದೇ ಕಮೆಂಟ್ ಗಳನ್ನು ಹಾಕಿದ್ದಲ್ಲಿ, ಅದಕ್ಕೆ ಕಮೆಂಟ್ ಹಾಕುವವರೇ ಹೊಣೆಗಾರರಾಗಿರುತ್ತಾರೆ. ಅಂತಹವರ ಹೆಸರು ಮತ್ತು ಐಪಿ ಅಡ್ರೆಸ್ ಗಳನ್ನು ಸಂಬಂಧಪಟ್ಟ ಇಲಾಖೆಗೆ ಒದಗಿಸಲು ರಾಷ್ಟ್ರಧ್ವನಿ ಬದ್ಧವಾಗಿರುತ್ತದೆ.

ಸಿನಿಮಾ
ಸಂಪಾದಕೀಯ ಮತ್ತಷ್ಟು
ಸಂವಿಧಾನಾತ್ಮಕ ಸದನಗಳಲ್ಲಿ ಪಾಸ್ ಆಗುತ್ತಿದೆ ‘ಹಿಂದೂ..
ದ್ವೇಷಪೂರಿತ, ಅಸಂವಿಧಾನಿಕ ಪೌರತ್ವ ತಿದ್ದುಪಡಿ ಮಸೂದೆ ಉಭಯ ಸದನಗಳಲ್ಲಿ ಅಂಗೀಕಾರವಾಗಿದೆ. ಇನ್ನು ರಾಷ್ಟ್ರಪತಿ ಅಂಕಿತ...
POLL

[democracy id="1"]