Saturday, May 25 , 2019
BREAKING NEWS
 
ಮಾಧ್ಯಮಗಳಿಂದ ಕಲ್ಲೆಸೆದು ನೋಡುವ ತಂತ್ರ | ಎನ್.ಮಹೇಶ್ ವಿರುದ್ಧ ಮತ್ತೊಂದು ಸುತ್ತಿನ ಸುಳ್ಳು ಸುದ್ದಿ! ,          ಸಮ್ಮಿಶ್ರ ಸರಕಾರಕ್ಕೆ ಕೆಟ್ಟ ಮೇಲೆ ಬುದ್ಧಿ ಬಂತೇ? | ಲೋಕ ಸೋಲಿನ ಬಳಿಕ ಶಾಸಕರ ಅಸಮಾಧಾನ ಶಮನಕ್ಕೆ ಕೈ ಪಡೆ ಒಲವು ,          ಬಿಜೆಪಿ ಗೆಲುವಿನ ಬೆನ್ನಲ್ಲೇ ಗೋಭಯೋತ್ಪಾದಕರ ಅಟ್ಟಹಾಸ | ಮಹಿಳೆ ಸೇರಿದಂತೆ ಮೂವರ ಮೇಲೆ ಅಮಾನವೀಯ ಹಲ್ಲೆ ,          ಉತ್ತರಪ್ರದೇಶದಲ್ಲಿ ಬಿಜೆಪಿ ಗೆಲುವಿಗೆ ನೇರ ಕಾರಣವಾದ ಕಾಂಗ್ರೆಸ್ | ಕಾಂಗ್ರೆಸ್-ಬಿಜೆಪಿ ಸಂಬಂಧದ ಸುತ್ತ ಅನುಮಾನಗಳ ಹುತ್ತ! ,          ಚುನಾವಣೆ ಗೆದ್ದ ಬಳಿಕ ಬಿಜೆಪಿಯ ಚೌಕಿದಾರರು ನಾಪತ್ತೆ ! | ಫಲಿತಾಂಶ ಬಂದು ಒಂದೇ ದಿನದಲ್ಲಿ ಚೌಕಿದಾರನನ್ನು ಕಿತ್ತೆಸೆದ ಬಿಜೆಪಿ ,          ಚುನಾವಣೆ ಗೆದ್ದ ಬಳಿಕ ಆಡ್ವಾಣಿಯನ್ನು ಭೇಟಿ ಮಾಡಿದ ಮೋದಿ-ಅಮಿತ್ ಶಾ ,         
ಕರಾವಳಿಯಲ್ಲಿ ಬಿಜೆಪಿ ಬಿಲ್ಲವರನ್ನು ಕಡೆಗಣಿಸುತ್ತಿದೆಯೇ ?

ಮಂಗಳೂರು(24.01.2018): ಪರಿವರ್ತನಾ ಯಾತ್ರೆಯ ಬೆನ್ನಲ್ಲೇ ಬಿಜೆಪಿಯ ವಿರುದ್ಧ ಬಿಲ್ಲವರು ಅಸಮಾಧಾನಗೊಂಡಿದ್ದು, ಬಿಲ್ಲವ ಸಮುದಾಯವನ್ನು ಬಿಜೆಪಿ ಕಡೆಗಣಿಸುತ್ತಿದೆ ಎಂದು ಆಕ್ರೋಶ ವ್ಯಕ್ತವಾಗಿದೆ.

ಬಂಟ್ವಾಳದಲ್ಲಿ ಕಾಂಗ್ರೆಸ್ ಎದುರು 17 ಸಾವಿರಕ್ಕಿಂತಲೂ ಹೆಚ್ಚು ಮತಗಳಿಂದ ಸೋಲುಂಡವರಿಗೆ ಟಿಕೆಟ್ ಪರಿವರ್ತನಾ ಯಾತ್ರೆಯಲ್ಲೆ ಘೋಷಣೆಯಾಗುತ್ತದೆ. ಆದರೆ ಮೂಡಬಿದ್ರೆಯಲ್ಲಿ ಕಾಂಗ್ರೇಸ್ ಎದುರು 4,500ಸಾವಿರ ಮತಗಳ ಅಂತರದಿಂದ ಸೋತವರ ಹೆಸರನ್ನು ಪರಿವರ್ತನಾ ಯಾತ್ರೆಯಲ್ಲಿ ಪ್ರಸ್ತಾಪಿಸುತ್ತಿಲ್ಲ ಎಂದು ‘ನಮ್ಮ ಬಿಲ್ಲವೆರ್’ ಎಂಬ ಅಂತರ್ಜಾಲ ಸುದ್ದಿ ಮಾಧ್ಯಮ ವರದಿ ಮಾಡಿದೆ.

ಬಂಟ್ವಾಳದಂತಹ ಕ್ಷೇತ್ರದಲ್ಲಿ ಬಿಲ್ಲವರಿಗೆ ಟಿಕೆಟ್ ಸಿಗುತ್ತಿಲ್ಲ. ಪಕ್ಷ, ಸಂಘಟನೆ ಕೆಲಸಗಳಿಗೆ ಅತೀ ಹೆಚ್ಚು ಸಂಖ್ಯೆಯಲ್ಲಿ ಬಿಲ್ಲವ ಯುವಕರನ್ನು ಬಳಸಿಕೊಳ್ಳುವ ಬಿಜೆಪಿ, ಸ್ಥಾನಮಾನದ ವಿಚಾರ ಬಂದಾಗ ಬಿಲ್ಲವರ ಕಡೆಗೆ ಕಣ್ಣೆತ್ತಿಯೂ ನೋಡುತ್ತಿಲ್ಲ ಎಂಬ ಆರೋಪಗಳು ಇದೀಗ ಕೇಳಿ ಬರುತ್ತಿವೆ.

ಬಂಟ್ವಾಳದ ಪ್ರಭಾವಿ ರಾಜಕಾರಣಿ ಎಂದೇ ಹೇಳಲಾಗುತ್ತಿರುವ ರಮಾನಾಥ ರೈಗೆ ರಾಜಕೀಯವಾಗಿ ತಿರುಗೇಟು ನೀಡಲೂ ಸಾಧ್ಯವಾಗದವರಿಗೆ ಟಿಕೆಟ್ ನೀಡಲಾಗುತ್ತದೆ. ಆದರೆ ಮೂಡಬಿದ್ರೆಯಲ್ಲಿ  ಅಭಯಚಂದ್ರ ಜೈನ್ ರನ್ನು ರಾಜಕೀಯವಾಗಿ ಸಮರ್ಥವಾಗಿ ಎದುರಿಸಿದ  ಉಮಾನಾಥ್ ಕೊಟ್ಯಾನ್ ಗೆ ಪರಿವರ್ತನೆ ಯಾತ್ರೆಯಲ್ಲಿ ಟಿಕೆಟ್ ಘೋಷಣೆಯಾಗಲಿಲ್ಲ. ಅಲ್ಲದೆ ಕಳೆದ ತಾಲೂಕ್ ಮತ್ತು ಜಿಲ್ಲಾ ಪಂಚಾಯತ್ ಚುನಾವಣಾ ಸಂದರ್ಭ ಉಮಾನಾಥ್ ಕೋಟ್ಯಾನ್ ಅವರಿಗೆ ಮುಲ್ಕಿ ಮೂಡಬಿದ್ರೆ ಕ್ಷೇತ್ರದ ಉಸ್ತುವಾರಿ ನೀಡದೆ ದೂರ ಇಡಲಾಗಿದೆ ಎಂಬ ವಿಚಾರಗಳು ಇದೀಗ ಚರ್ಚೆಯಲ್ಲಿದೆ.

ಬಿಲ್ಲವರಿಗೆ ರಾಜಕೀಯದಲ್ಲಿ ಹೆಚ್ಚಿನ ಪ್ರಾತಿನಿಧ್ಯ ನೀಡಬೇಕು ಎಂಬ ಒತ್ತಾಯಗಳು ಒಂದೆಡೆಯಿಂದ ಕೇಳಿ ಬರುತ್ತಿರುವ ಜೊತೆಗೆ, ಬಿಲ್ಲವರನ್ನು ಕಡೆಗಣಿಸಿದಲ್ಲಿ ಅದಕ್ಕೆ ಬಿಜೆಪಿ ಸರಿಯಾದ ಬೆಲೆ ತೆರಬೇಕಾಗುತ್ತದೆ ಎನ್ನುವ ಮಾತುಗಳೂ ಕೇಳಿ ಬಂದಿವೆ.

Like us on facebook
Disclaimer:

ರಾಷ್ಟ್ರಧ್ವನಿ ಅಂತಾರ್ಜಾಲ ಸುದ್ದಿ ವಾಹಿನಿಯಲ್ಲಿ ಪ್ರಕಟವಾಗುವ ಸುದ್ದಿಗಳ ಕುರಿತು ಸಾರ್ವಜನಿಕರು ಆರೋಗ್ಯಕರ ಚರ್ಚೆ, ಕಮೆಂಟ್ ಗಳನ್ನು ಮಾಡಬಹುದಾಗಿದೆ. ಧರ್ಮ, ಜಾತಿ ನಿಂದನೆಯಾಗುವಂತಹ ಮತ್ತು ಸಾಮರಸ್ಯ ಕೆಡಿಸುವಂತಹ ದುರುದ್ದೇಶಪೂರಿತ ಕಮೆಂಟ್ ಹಾಗೂ ಚರ್ಚೆ ಕಾನೂನು ರೀತಿಯಲ್ಲಿ ಅಪರಾಧವಾಗಿರುತ್ತದೆ. ದೇಶದ ಕಾನೂನು ಸುವ್ಯವಸ್ಥೆಗೆ ಧಕ್ಕೆ ತರುವಂತಹ ಯಾವುದೇ ಕಮೆಂಟ್ ಗಳನ್ನು ಹಾಕಿದ್ದಲ್ಲಿ, ಅದಕ್ಕೆ ಕಮೆಂಟ್ ಹಾಕುವವರೇ ಹೊಣೆಗಾರರಾಗಿರುತ್ತಾರೆ. ಅಂತಹವರ ಹೆಸರು ಮತ್ತು ಐಪಿ ಅಡ್ರೆಸ್ ಗಳನ್ನು ಸಂಬಂಧಪಟ್ಟ ಇಲಾಖೆಗೆ ಒದಗಿಸಲು ರಾಷ್ಟ್ರಧ್ವನಿ ಬದ್ಧವಾಗಿರುತ್ತದೆ.

ಸಿನಿಮಾ
ಸಂಪಾದಕೀಯ ಮತ್ತಷ್ಟು
ಅಪಾಯಕಾರಿ ಅಣಕು ಕಾರ್ಯಾಚರಣೆಗಳಲ್ಲಿ ವಿದ್ಯಾರ್ಥಿಗಳನ್ನು ಬಳಕೆ..
ವಿಪತ್ತಿನ ಸಂದರ್ಭದಲ್ಲಿ ಅದರಿಂದ ಪಾರಾಗುವುದು ಹೇಗೆ ಎನ್ನುವುದರ ಬಗ್ಗೆ ವಿದ್ಯಾರ್ಥಿಗಳಲ್ಲಿ ಜಾಗೃತಿ ಮೂಡಿಸುವುದು ಒಳ್ಳೆಯ...