Saturday, May 25 , 2019
BREAKING NEWS
 
ಮಾಧ್ಯಮಗಳಿಂದ ಕಲ್ಲೆಸೆದು ನೋಡುವ ತಂತ್ರ | ಎನ್.ಮಹೇಶ್ ವಿರುದ್ಧ ಮತ್ತೊಂದು ಸುತ್ತಿನ ಸುಳ್ಳು ಸುದ್ದಿ! ,          ಸಮ್ಮಿಶ್ರ ಸರಕಾರಕ್ಕೆ ಕೆಟ್ಟ ಮೇಲೆ ಬುದ್ಧಿ ಬಂತೇ? | ಲೋಕ ಸೋಲಿನ ಬಳಿಕ ಶಾಸಕರ ಅಸಮಾಧಾನ ಶಮನಕ್ಕೆ ಕೈ ಪಡೆ ಒಲವು ,          ಬಿಜೆಪಿ ಗೆಲುವಿನ ಬೆನ್ನಲ್ಲೇ ಗೋಭಯೋತ್ಪಾದಕರ ಅಟ್ಟಹಾಸ | ಮಹಿಳೆ ಸೇರಿದಂತೆ ಮೂವರ ಮೇಲೆ ಅಮಾನವೀಯ ಹಲ್ಲೆ ,          ಉತ್ತರಪ್ರದೇಶದಲ್ಲಿ ಬಿಜೆಪಿ ಗೆಲುವಿಗೆ ನೇರ ಕಾರಣವಾದ ಕಾಂಗ್ರೆಸ್ | ಕಾಂಗ್ರೆಸ್-ಬಿಜೆಪಿ ಸಂಬಂಧದ ಸುತ್ತ ಅನುಮಾನಗಳ ಹುತ್ತ! ,          ಚುನಾವಣೆ ಗೆದ್ದ ಬಳಿಕ ಬಿಜೆಪಿಯ ಚೌಕಿದಾರರು ನಾಪತ್ತೆ ! | ಫಲಿತಾಂಶ ಬಂದು ಒಂದೇ ದಿನದಲ್ಲಿ ಚೌಕಿದಾರನನ್ನು ಕಿತ್ತೆಸೆದ ಬಿಜೆಪಿ ,          ಚುನಾವಣೆ ಗೆದ್ದ ಬಳಿಕ ಆಡ್ವಾಣಿಯನ್ನು ಭೇಟಿ ಮಾಡಿದ ಮೋದಿ-ಅಮಿತ್ ಶಾ ,         
ಪೊಲೀಸ್ ಠಾಣೆಯಲ್ಲಿ ಧರಣಿ ಕುಳಿತ ಪ್ರಧಾನಿ ಮೋದಿ ಸಹೋದರ

ಜೈಪುರ್(15/05/2019): ಪ್ರಧಾನಿ ಮೋದಿ ಸಹೋದರೊಬ್ಬರು ಜೈಪುರ್-ಅಜ್ಮೀರ್ ರಾಷ್ಟ್ರೀಯ ಹೆದ್ದಾರಿ ಪಕ್ಕದಲ್ಲಿರುವ ಬಗ್ರು ಪೊಲೀಸ್ ಠಾಣೆಯಲ್ಲಿ ಸುಮಾರು ಒಂದು ಗಂಟೆಗೂ ಹೆಚ್ಚು ಕಾಲ ಧರಣಿ ಕುಳಿತ ಘಟನೆ ನಡೆದಿದೆ.

ಜೈಪುರ್-ಅಜ್ಮೀರ್ ರಾಷ್ಟ್ರೀಯ ಹೆದ್ದಾರಿ ಪಕ್ಕದಲ್ಲಿರುವ ಬಗ್ರು ಪೊಲೀಸ್ ಠಾಣೆಯಲ್ಲಿ ಧರಣಿ ಕುಳಿತು ತಮ್ಮ ಅಂಗರಕ್ಷಕರಿಗೆ ಪ್ರತ್ಯೇಕ ವಾಹನ ವ್ಯವಸ್ಥೆ ಮಾಡಬೇಕೆಂದು ಆಗ್ರಹಿಸಿ ಮೋದಿ ಸಹೋದರ ಪ್ರಹ್ಲಾದ್ ಮೋದಿ ದರಣಿ ಕೂತಿದ್ದಾರೆ.

ಪ್ರಹ್ಲಾದ್ ಮೋದಿಗೆ ಬೆಂಗಾವಲಾಗಿ ತೆರಳಲು ಬಗ್ರು ಠಾಣೆಯಲ್ಲಿ ಇಬ್ಬರು ಪೊಲೀಸ್ ಸಿಬ್ಬಂದಿ ಸಿದ್ಧರಾಗಿದ್ದರು, ನಿಯಮ ಪ್ರಕಾರ ಅವರು ತಾವು ರಕ್ಷಣೆ ನೀಡಬೇಕಾದವರ ವಾಹನದಲ್ಲಿಯೇ ಸಾಗಬೇಕಾಗಿದೆ ಎಂದು ಜೈಪುರ್ ಪೊಲೀಸ್ ಆಯುಕ್ತ ಆನಂದ್ ಶ್ರೀವಾಸ್ತವ ಹೇಳಿದ್ದಾರೆ.

”ಈ ಕುರಿತಾದ ಆದೇಶಪತ್ರವನ್ನು ಅವರಿಗೆ ತೋರಿಸಿದರೂ ತಮ್ಮ ವಾಹನದಲ್ಲಿ ಅಂಗರಕ್ಷಕರನ್ನು ಕರೆದುಕೊಂಡು ಹೋಗಲು ನಿರಾಕರಿಸಿ ಅವರಿಗೆ ಪ್ರತ್ಯೇಕ ವಾಹನ ಒದಗಿಸಬೇಕೆಂದು ಆಗ್ರಹಿಸಿದರು. ನಂತರ ಹೇಗಾದರೂ ಅವರ ಮನವೊಲಿಸಿ ಅವರ ಜತೆಗೆ ಇಬ್ಬರು ಅಂಗರಕ್ಷಕರನ್ನು ಕಳುಹಿಸಿಕೊಡಲಾಯಿತು” ಎಂದು ಆಯುಕ್ತರು ತಿಳಿಸಿದ್ದಾರೆ.

ಪ್ರಹ್ಲಾದ್ ಮೋದಿ ಸುಮಾರು ಒಂದು ಗಂಟೆಗೂ ಹೆಚ್ಚು ಕಾಲ ಧರಣಿ ಕುಳಿತಿದ್ದರೆಂದು ಪೊಲೀಸರು ಹೇಳಿದ್ದಾರೆ.

Like us on facebook
Disclaimer:

ರಾಷ್ಟ್ರಧ್ವನಿ ಅಂತಾರ್ಜಾಲ ಸುದ್ದಿ ವಾಹಿನಿಯಲ್ಲಿ ಪ್ರಕಟವಾಗುವ ಸುದ್ದಿಗಳ ಕುರಿತು ಸಾರ್ವಜನಿಕರು ಆರೋಗ್ಯಕರ ಚರ್ಚೆ, ಕಮೆಂಟ್ ಗಳನ್ನು ಮಾಡಬಹುದಾಗಿದೆ. ಧರ್ಮ, ಜಾತಿ ನಿಂದನೆಯಾಗುವಂತಹ ಮತ್ತು ಸಾಮರಸ್ಯ ಕೆಡಿಸುವಂತಹ ದುರುದ್ದೇಶಪೂರಿತ ಕಮೆಂಟ್ ಹಾಗೂ ಚರ್ಚೆ ಕಾನೂನು ರೀತಿಯಲ್ಲಿ ಅಪರಾಧವಾಗಿರುತ್ತದೆ. ದೇಶದ ಕಾನೂನು ಸುವ್ಯವಸ್ಥೆಗೆ ಧಕ್ಕೆ ತರುವಂತಹ ಯಾವುದೇ ಕಮೆಂಟ್ ಗಳನ್ನು ಹಾಕಿದ್ದಲ್ಲಿ, ಅದಕ್ಕೆ ಕಮೆಂಟ್ ಹಾಕುವವರೇ ಹೊಣೆಗಾರರಾಗಿರುತ್ತಾರೆ. ಅಂತಹವರ ಹೆಸರು ಮತ್ತು ಐಪಿ ಅಡ್ರೆಸ್ ಗಳನ್ನು ಸಂಬಂಧಪಟ್ಟ ಇಲಾಖೆಗೆ ಒದಗಿಸಲು ರಾಷ್ಟ್ರಧ್ವನಿ ಬದ್ಧವಾಗಿರುತ್ತದೆ.

ಸಿನಿಮಾ
ಸಂಪಾದಕೀಯ ಮತ್ತಷ್ಟು
ಅಪಾಯಕಾರಿ ಅಣಕು ಕಾರ್ಯಾಚರಣೆಗಳಲ್ಲಿ ವಿದ್ಯಾರ್ಥಿಗಳನ್ನು ಬಳಕೆ..
ವಿಪತ್ತಿನ ಸಂದರ್ಭದಲ್ಲಿ ಅದರಿಂದ ಪಾರಾಗುವುದು ಹೇಗೆ ಎನ್ನುವುದರ ಬಗ್ಗೆ ವಿದ್ಯಾರ್ಥಿಗಳಲ್ಲಿ ಜಾಗೃತಿ ಮೂಡಿಸುವುದು ಒಳ್ಳೆಯ...