Friday, August 23 , 2019
90000 ಹುದ್ದೆಗಳ ರೈಲ್ವೆ ನೇಮಕಾತಿ: ಅಭ್ಯರ್ಥಿಗಳ ವಯೋ ಮಿತಿ ಏರಿಕೆ

ನವದೆಹಲಿ: ಭಾರತೀಯ ರೈಲ್ವೆ ನಡೆಸಲಿರುವ ಭಾರೀ ನೇಮಕಾತಿಯಲ್ಲಿ ಹಲವು ಹುದ್ದೆಗಳ ಅರ್ಜಿದಾರರ ವಯೋಮಿತಿ ಏರಿಕೆ ಮಾಡಿದೆ. ಇತ್ತೀಚೆಗಷ್ಟೇ ಸುಮಾರು 90,000 ಹುದ್ದೆಗಳ ಭಾರೀ ನೇಮಕಾತಿಗೆ ರೈಲ್ವೆ ಇಲಾಖೆ ಅರ್ಜಿ ಆಹ್ವಾನಿಸಿತ್ತು. ವಿವಿಧ ವಲಯಗಳಿಂದ ಮನವಿಗಳು ಬಂದಿರುವುದರಿಂದ ಕೆಲವೊಂದು ವಿಭಾಗದ ಹುದ್ದೆಗಳಿಗೆ ಕನಿಷ್ಠ ಎರಡು ವರ್ವ ವಯೋಮಿತಿ ಏರಿಕೆ ಮಾಡಿ ಹೊಸ ಸುತ್ತೋಲೆ ಬಿಡುಗಡೆ ಮಾಡಲಾಗಿದೆ.
ಇದೇ ವೇಳೆ ಬಂಗಾಳ ಮತ್ತು ಕೇರಳ ರಾಜ್ಯಗಳ ಆಗ್ರಹದ ಹಿನ್ನೆಲೆಯಲ್ಲಿ ಬಂಗಾಳ ಮತ್ತು ಮಲೆಯಾಳಂ ಸೇರಿದಂತೆ ಪ್ರಾದೇಶಿಕ ಭಾಷೆಗಳಲ್ಲಿ ನೇಮಕಾತಿ ಪರೀಕ್ಷೆ ನಡೆಸಲೂ ಸಮ್ಮತಿಸಿದೆ.
ಸಹಾಯಕ ಲೋಕೊ ಪೈಲಟ್ ಮತ್ತು ಲೋಕೊ ಪೈಲಟ್ ಹುದ್ದೆಗೆ ನಿಗದಿ ಪಡಿಸಲಾಗಿದ್ದ ಎಲ್ಲ ವಿಭಾಗಗಳ ಮೀಸಲು ವಿಭಾಗದಲ್ಲೂ ವಯೋಮಿತಿ ಎರಡು ವರ್ಷ ಏರಿಕೆ ಮಾಡಲಾಗಿದೆ. ಸಾಮಾನ್ಯ ವರ್ಗ ಪ್ರಸ್ತುತ 28 ವರ್ಷ ಇದ್ದಿದ್ದುದು 30 ವರ್ಷಕ್ಕೆ, ಒಬಿಸಿ 31ರಿಂದ 33, ಎಸ್ಸಿ/ಎಸ್ಟಿ 33ರಿಂದ 35 ವರ್ಷಕ್ಕೆ ಏರಿಕೆ ಮಾಡಲಾಗಿದೆ.
ಅದೇ ರೀತಿ ಗ್ರೂಪ್ ಡಿ ಹುದ್ದೆಗೆ ಸಾಮಾನ್ಯ ವರ್ಗಕ್ಕಿದ್ದ 28 ವರ್ಷಗಳಿಂದ 30, ಒಬಿಸಿಗಳಿಗೆ 34ರಿಂದ 36 ಮತ್ತು ಎಸ್ಸಿ/ಎಸ್ಟಿಗೆ 36ರಿಂದ 38ಕ್ಕೆ ಏರಿಕೆಯಾಗಿದೆ.

Like us on facebook
Disclaimer:

ರಾಷ್ಟ್ರಧ್ವನಿ ಅಂತಾರ್ಜಾಲ ಸುದ್ದಿ ವಾಹಿನಿಯಲ್ಲಿ ಪ್ರಕಟವಾಗುವ ಸುದ್ದಿಗಳ ಕುರಿತು ಸಾರ್ವಜನಿಕರು ಆರೋಗ್ಯಕರ ಚರ್ಚೆ, ಕಮೆಂಟ್ ಗಳನ್ನು ಮಾಡಬಹುದಾಗಿದೆ. ಧರ್ಮ, ಜಾತಿ ನಿಂದನೆಯಾಗುವಂತಹ ಮತ್ತು ಸಾಮರಸ್ಯ ಕೆಡಿಸುವಂತಹ ದುರುದ್ದೇಶಪೂರಿತ ಕಮೆಂಟ್ ಹಾಗೂ ಚರ್ಚೆ ಕಾನೂನು ರೀತಿಯಲ್ಲಿ ಅಪರಾಧವಾಗಿರುತ್ತದೆ. ದೇಶದ ಕಾನೂನು ಸುವ್ಯವಸ್ಥೆಗೆ ಧಕ್ಕೆ ತರುವಂತಹ ಯಾವುದೇ ಕಮೆಂಟ್ ಗಳನ್ನು ಹಾಕಿದ್ದಲ್ಲಿ, ಅದಕ್ಕೆ ಕಮೆಂಟ್ ಹಾಕುವವರೇ ಹೊಣೆಗಾರರಾಗಿರುತ್ತಾರೆ. ಅಂತಹವರ ಹೆಸರು ಮತ್ತು ಐಪಿ ಅಡ್ರೆಸ್ ಗಳನ್ನು ಸಂಬಂಧಪಟ್ಟ ಇಲಾಖೆಗೆ ಒದಗಿಸಲು ರಾಷ್ಟ್ರಧ್ವನಿ ಬದ್ಧವಾಗಿರುತ್ತದೆ.

ಸಿನಿಮಾ
ಸಂಪಾದಕೀಯ ಮತ್ತಷ್ಟು
ಅಪಾಯಕಾರಿ ಅಣಕು ಕಾರ್ಯಾಚರಣೆಗಳಲ್ಲಿ ವಿದ್ಯಾರ್ಥಿಗಳನ್ನು ಬಳಕೆ..
ವಿಪತ್ತಿನ ಸಂದರ್ಭದಲ್ಲಿ ಅದರಿಂದ ಪಾರಾಗುವುದು ಹೇಗೆ ಎನ್ನುವುದರ ಬಗ್ಗೆ ವಿದ್ಯಾರ್ಥಿಗಳಲ್ಲಿ ಜಾಗೃತಿ ಮೂಡಿಸುವುದು ಒಳ್ಳೆಯ...
POLL

[democracy id="1"]