Sunday, May 31 , 2020
ಸುದೀಪರನ್ನು ಹೈಲೈಟ್ ಮಾಡಲು ಶಿವಣ್ಣನ ಪಾತ್ರಕ್ಕೆ ಮೋಸ | ಸಾಮಾಜಿಕ ಜಾಲತಾಣದಲ್ಲಿ ಕಿಡಿ ಹತ್ತಿಸಿದ ಲೇಖನ

ದಿ ವಿಲನ್ ಚಿತ್ರಕ್ಕೆ ಸಂಬಂಧಿಸಿದಂತೆ ಶಿವರಾಜ್ ಕುಮಾರ್ ಪಾತ್ರಕ್ಕೆ ಪ್ರಾಮುಖ್ಯತೆ ನೀಡಿಲ್ಲ ಎನ್ನುವ ವಿಚಾರವಾಗಿ ಅವರ ಅಭಿಮಾನಿಗಳು ಮಾಡುತ್ತಿರುವ ಆರೋಪ ಮತ್ತು ಕಿಚ್ಚ ಸುದೀಪ್ ಮತ್ತು ಪ್ರೇಮ್ ನೀಡುತ್ತಿರುವ ಸ್ಪಷ್ಟನೆಗಳಿಗೆ ಸಂಬಂಧಿಸಿದಂತೆ ಸಾಗರ್ ಮನಸು ಎನ್ನುವವರು ಬರೆದ ಲೇಖನ ಇದೀಗ ಸಾಮಾಜಿಕ ಜಾಲತಾಣಗಳಲ್ಲಿ ಕಿಡಿ ಹತ್ತಿಸಿದ್ದು, ದಿ ವಿಲನ್ ನಿರ್ದೇಶಕ ಪ್ರೇಮ್ ಅವರು ಈ ಪ್ರಶ್ನೆಗೆ ಉತ್ತರಿಸಲು ಸಾಧ್ಯವೇ ಎನ್ನುವ ಅನುಮಾನಗಳು ಮೂಡಿವೆ.

ಸಾಗರ್ ಅವರು ಬರೆದ ಲೇಖನ ಇಲ್ಲಿ ಯಥಾವತ್ತಾಗಿ ನೀಡಲಾಗಿದೆ.

ನನಗನಿಸಿದ್ದು ಪೂರ್ತಿ ಓದಿ – ಶಿವಣ್ಣ ಫ್ಯಾನ್ಸ್ ಸರಿಯಿಲ್ಲ ಅನ್ನೋರು, ದಿ ವಿಲನ್ ನ ಗಂಧದಗುಡಿಗೆ ಕಂಪೇರ್ ಮಾಡೋರು , ಕನ್ನಡ ಚಿತ್ರನ ಕನ್ನಡದವರೇ ಹಾಳು ಮಾಡ್ತಿದಾರೆ ಅಂತ ಬೊಬ್ಬೆ ಹೊಡೆಯೋರು, ಸಿನಿಮಾನ ಸಿನಿಮಾ ಥರ ನೋಡಿ ಅನ್ನೋರು ಈ ನನ್ನಂತ ಒಬ್ಬ ಸಾಮಾನ್ಯನಿಗೆ ಅನಿಸೋ ಮನದಾಳವನ್ನು ಕೇಳಿ ಆಮೇಲೆ ನಿಮ್ಮ ಅಭಿಪ್ರಾಯ ತಿಳಿಸಿ
“ದಿ ವಿಲನ್” ಕಳೆದ ಎರಡು ವರ್ಷಗಳಿಂದ ಅಭಿಮಾನಿಗಳು ತುದಿಗಾಲಲ್ಲಿ ಕಾದಿದ್ದ ಬಹು ನಿರೀಕ್ಷಿತ ಕನ್ನಡದ ಸಿನಿಮಾ. ಡಾ.ಶಿವರಾಜಕುಮಾರ್ ಎಂಬ ನಟನ ಸಿನಿಮಾ ಅಂದರೇನೆ ನಿರೀಕ್ಷೆ ಗರಿಗೆದರುತ್ತೆ ಅಂತದ್ದರಲ್ಲಿ ಜೋಗಿ ಯಂತ ಇಂಡಸ್ಟ್ರಿ ಹಿಟ್ ಕೊಟ್ಟಿದ್ದ , ಜೋಗಯ್ಯನಂತ ಅದ್ಬುತವಾದ ಓಪನಿಂಗ್ ಸಿನಿಮಾ ಕೊಟ್ಡಿದ್ದ ಪ್ರೇಮ್ ಎಂಬ ನಿರ್ದೇಶಕ ಮತ್ತೆ ಶಿವರಾಜಕುಮಾರ್ ಅವರಿಗೆ ಸಿನಿಮಾ ಮಾಡ್ತಾರೆ ಎಂದಾಗ ನಿರೀಕ್ಷೆ ಡಬಲ್ ಆಗಿತ್ತು ಜೊತೆಗೆ ಸುದೀಪ್ ಎಂಬ ಸ್ಟಾರ್ ನಟನನ್ನೂ ದಿ ವಿಲನ್ ಒಳಗೊಂಡಾಗ ನಿರೀಕ್ಷೆ ದುಪ್ಪಟ್ಡಾಗೋದು ತೀರಾ ಸಹಜ. ಇಂತಹ ಮಲ್ಟಿ ಸ್ಟಾರ್ ನಿರ್ದೇಶನದ ಹೊಣೆ ಹೊತ್ತ ನಿರ್ದೇಶಕ ಪ್ರೇಮ್ ಮೇಲೆ ಜವಾಬ್ದಾರಿ ಹೆಚ್ಚೇ ಇರಬೇಕಿತ್ತು. ಆದರೆ ನಿಜಕ್ಕೂ ಪ್ರೇಮ್ ಮಾಡಿದ್ದೇನು ಅಂತ ಹೊರಟರೆ ಅಲ್ಲಿ ಮೇಲ್ನೋಟಕ್ಕೆ ಕಂಡಿದ್ದು ಮಾತ್ರ ಹುಲಿ ಹಿಡಿಯಲು ಹೋಗಿ ಇಲಿ ಹಿಡಿದವನ ಕಥೆ. ಸಿನಿಮಾ ಬಿಡುಗಡೆಯಾದಾಗ ಪ್ರತಿಯೊಬ್ಬರೂ ಸಿನಿಮಾ ಬಗೆಗಿನ ವೈಯುಕ್ತಿಕ ಅಭಿಪ್ರಾಯ ವ್ಯಕ್ತಪಡಿಸುತ್ತಾರೆ.! ಆಫ್ಕೋರ್ಷ್ 200 ರೂ ಕಾಸು ಕೊಟ್ಟು ಸಿನಿಮಾ ನೋಡೋ ಪ್ರೇಕ್ಷಕ ಪ್ರಭುವಿಗೆ ಅವನ ಅಭಿಪ್ರಾಯ ವ್ಯಕ್ತಪಡಿಸೋ ಸ್ವಾತಂತ್ರ್ಯ ಇದೆ. ಅಂತಹವರನ್ನು ಟೀಕಿಸೋ ಅಧಿಕಾರ ಯಾರಿಗೂ ಇಲ್ಲ ಎಂಬುದು ಪ್ರೇಮ್ ಸಹಿತ ಎಲ್ಲರಿಗೂ ತಿಳಿದಿರಲಿ. ಶಿವರಾಜಕುಮಾರ್ ಅಭಿಮಾನಿಯಾಗದೆ ಒಬ್ಬ ಸಾಮಾನ್ಯ ಪ್ರೇಕ್ಷಕನಾಗಿ ನಾನು ಎರಡು ಬಾರಿ ಸಿನಿಮಾ ನೋಡಿದ್ದೇನೆ‌ ಹಾಗಂತ ಇದು ಅದ್ಬುತವಾದ ಸಿನಿಮಾನ ಅಂತ ನೀವು ಅಂದುಕೊಂಡರೆ ಅದು ನನ್ನ ತಪ್ಪಲ್ಲ ಏನು ಎತ್ತ ಅಂತ ಕಾರಣವೇ ಇಲ್ಲದೆ ಅಣ್ಣಾ ನನ್ನ ಊರು ಅಂತ ಎಂಟ್ರಿಯಾಗುವ ಶಿವರಾಜಕುಮಾರ್ ತನ್ನ ಕಣ್ಣಿನ ನೋಟ , ಆಕರ್ಷಕ ಕುಣಿತ ,ಮನೋಜ್ಞ ಅಭಿನಯದ ಮೂಲಕ ಪ್ರೇಕ್ಷಕರ ಆವರಿಸಿಕೊಳ್ಳೋವಷ್ಟರಲ್ಲಿ ಮಾಯವಾಗಿರುತ್ತಾರೆ. ಅಭಿನಯದ ಮೂಲಕ ಮನೆಮಾತಾಗಿರೋ ಸುದೀಪ್ ಅಭಿನಯದ ಮೂಲಕ ಗಮನಸೆಳೆಯುತ್ತಾರೆ. ನೆನಪಿರಲಿ ಮೊದಲಾರ್ಧದಲ್ಲಿ ಶಿವಣ್ಣ ಬರೋದೇ ಇಪ್ಪತ್ತು ನಿಮಿಷ. ದ್ವಿತೀಯಾರ್ಧದಲ್ಲಿ ಮುಂದುವರೆಯುವ ಲಂಡನ್ ಕಥೆಯಲ್ಲೂ ಸುದೀಪ್ ಗೆ ಕೊಟ್ಟಿರುವ ಮಹತ್ವ ಶಿವರಾಜಕುಮಾರ್ ಅವರಿಗೆ ಇಲ್ಲ ಅಷ್ಟಕ್ಕೂ ಇಬ್ಬರು ಸೂಪರ್ ಸ್ಟಾರ್ ಚಿತ್ರ ಮಾಡುವಾಗ ಇಬ್ಬರು ನಟರನ್ನು ಹೆಚ್ಚಾಗಿ ಮುಖಾಮುಖಿಯಾಗಿ ಮಾಡಿ ಇಬ್ಬರ ನಟರ ಅಭಿಮಾನಿಗಳಿಗೆ ಮನೋರಂಜನೆ ಕೊಡೋದು ವಾಡಿಕೆ. ಆದರೆ ಇಲ್ಲಿ ಸುದೀಪ್ ಗೆ ಹೆಚ್ಚು ಬೇಡಿಕೆ ಕಾರಣ ಬೆಸಗರಳ್ಳಿ ಪ್ರೇಮಪ್ಪನೇ ಹೇಳಬೇಕು. ಅಸಲಿ ವಿಷಯಕ್ಕೆ ಬರೋಣ ಶಿವಣ್ಣ ಅಭಿಮಾನಿಗಳು ಸಿಟ್ಟಾಗಿದ್ದಾರೆ ಅಂದ್ರೆ ಅಲ್ಲಿ ಬಹಳ ಕಾರಣಗಳಿವೆ. ಈಗ ನಾವು ಹೇಳ ಹೊರಟಿರೋ ವಿಷಯಗಳಿಗೆ ಪ್ರೇಮ್ ಉತ್ತರಿಸಬೇಕಿದೆ.
ಶಿವರಾಜಕುಮಾರ್ ಅಂತ ಲಿಜೆಂಡ್ ನಟನನ್ನು ಅಷ್ಟೇನು ಮಹತ್ವವಲ್ಲದ ಚಿತ್ರದ ಪಾತ್ರಕ್ಕೆ ಆಯ್ಕೆ ಮಾಡಿದ ಪ್ರೇಮ್ ಇರುವಷ್ಟು ಕಾಲ ಶಿವಣ್ಣರನ್ನ ಸರಿಯಾಗಿ ಯಾಕೆ ತೋರಿಸಿಲ್ಲ. ಅದೇ ಜೋಗಿ , ಜೋಗಯ್ಯ ದಂತಹ ಹಾರಾಡೋ ಕೂದಲು , ಕೆಟ್ಟದಾದ ವಸ್ತ್ರಾಲಂಕಾರದ ಜೊತೆಗೆ ಶಿವಣ್ಣರ ಇಮೇಜ್ ಗೆ ಡ್ಯಾಮೇಜ್ ಮಾಡಿದ್ದಾದರು ಏಕೆ.?
ಕನ್ನಡ ಚಿತ್ರರಂಗದ ಒಗ್ಗಟ್ಟಿನ ದೃಷ್ಟಿಯಿಂದ ಶಿವರಾಜಕುಮಾರ್ ಆಗಲಿ ಸುದೀಪ್ ಆಗಲಿ ಪ್ರೇಮ್ ನಂಬಿ ಚಿತ್ರಕ್ಕೆ ಸಹಿಯಾಕಿದ್ದರು. ಅದೇ ಚಿತ್ರರಂಗದ ಒಗ್ಗಟ್ಟಿನ ಬಗ್ಗೆ ಮಾತಾಡೋ ಪ್ರೇಮ್ ಗೆ ಶಿವರಾಜಕುಮಾರ್ ಅವರಿಗೆ ಮಹತ್ವದ ಪಾತ್ರ ಕೊಡದೇ ಇದ್ದರೆ ಮತ್ತೆ ಅಭಿಮಾನಿಗಳು ಆಕ್ರೋಶಗೊಳ್ಳುತ್ತಾರೆ ಎಂಬ ದೃಶ್ಯ ತಿಳಿದಿರಲಿಲ್ಲವಾ.?
ಅಮ್ಮ ಮಗನ ಒಂದು ಮಾಡಲು ಬಂದ ರಾಮಯ್ಯ ಅಲಿಯಾಸ್ ಶಿವರಾಜಕುಮಾರ್ ಅವರಿಗೆ ರಾಮ್ ಅಲಿಯಾಸ್ ಸುದೀಪ್ ಏಕಾ ಏಕಿ ಹೊಡೆಯೋದ್ಯಾಕೆ. ( ಸುದೀಪ್ ಜ್ಯೂನಿಯರ್ ಆರ್ಟಿಸ್ಟ್ಸ್ ಗೆ ಹೊಡೆಯೋ ಮಾದರಿಯಲ್ಲೇ ಶಿವಣ್ಣಂಗೆ ಹೊಡೆಯೋದು ಶಿವರಾಜಕುಮಾರ್ ಮೈಲು ದೂರ ಹೋಗಿ ಬೀಳೋದು ) ಒಬ್ಬ ಲೆಜೆಂಡ್ ಗೆ ಹೊಡಿಸೋ ನಿಮ್ಮ ನಿರ್ಧಾರ ಸರಿಯೇ ಆಗಿದ್ದರೆ ಅದಕ್ಕೂ ಒಂದು ರೀತಿ ಇರಬೇಕಲ್ಲವೇ. ಅವನು ನನ್ನ ತಮ್ಮನಿದ್ದ ಹಾಗೆ ನಾ ಬದುಕಿರುವ ವರೆಗೂ ಅವನಿಗೆ ಯಾರು ಏನು ಮಾಡೋಕಾಗಲ್ಲ ಎನ್ನುವ ಶಿವಣ್ಣ ಪಾತ್ರಕ್ಕೆ ಏಕಾ ಏಕೀ ಸುದೀಪ್ ಎಂಬ ಪಾತ್ರ ಶಿವರಾಜಕುಮಾರ್ ಪಾತ್ರದ ಅರ್ಥ ತಿಳಿಯದೇ ಮೂರೇಟು ಹೊಡೆಯುತ್ತದೆ ಅದನ್ನು ನಾನು ವೈಯುಕ್ತಿಕವಾಗಿ ಪಾತ್ರವಾಗಿಯೆ ತೆಗೆದುಕೊಂಡರೂ ಈಗ ನನ್ನ ಪ್ರೆಶ್ನೆಗೆ ನೀವು ಉತ್ತರಿಸೋ ಪ್ರಯತ್ನ ಮಾಡಿ ಪ್ರೇಮ್ ಸುದೀಪ್ ಗೆ ಶಿವಣ್ಣ ಅವರಮ್ಮನನ್ನು ಒಂದು ಮಾಡಲು ಬಂದಿರುವ ವ್ಯಕ್ತಿ ಎಂದು ತಿಳಿಯದೇ ಹೊಡೆಯುತ್ತಾರೆ ಆದರೆ ನಂತರದ ದೃಶ್ಯದಲ್ಲಿ ಸತ್ಯ ಅರಿಯುವ ಸುದೀಪ್ ಸೀದಾ ಅವರಮ್ಮನ ಬಳಿಗೆ ಬರುತ್ತಾರೆ ಆಗ ನನ್ನ ಮನಸ್ಸಲ್ಲಿದ್ದಿದ್ದು ಅರಿಯದೇ ಹೊಡೆದ ಸುದೀಪ್ ಸತ್ಯ ತಿಳಿದಾಗ ಬಂದು ಶಿವರಾಜಕುಮಾರ್ ಬಳಿ ಕ್ಷಮೆಯಾಚಿಸಬಹುದು ( ಸಿನಿಮಾ ರೀತಿಯಲ್ಲಿಯೇ ) ಅಂತ ಆದರೆ ಒಂದು ಮಾಡುವ ಶಿವಣ್ಣ ರ ಬಳಿ ಸುದೀಪ್ ಮಾತನಾಡುವ ಗೋಜಿಗೂ ಹೋಗಲ್ಲ ಕಡೇ ಪಕ್ಷ ಕೃತಘ್ನತೆಲಿ ನೋಡಲ್ಲ.! ಈಗ ಹೇಳಿ ನಾನು ಸಿನಿಮಾನ ಸಿನಿಮಾ ಥರನೇ ನೋಡಿದಿ‌ನಿ ಆದ್ರು ತಮ್ಮ ಲಾಜಿಕ್ಕು ಅರ್ಥ ಆಗಿಲ್ಲ.! ಇಡೀ ಸಿನಿಮಾದಲ್ಲಿ ಶಿವರಾಜಕುಮಾರ್ ಗೆ ಕೊಟ್ಟಿರೋ ಮೂರರಷ್ಟು ಬಿಲ್ಡಪ್ಪು , ಸ್ಟೈಲು , ಸಂಭಾಷಣೆಗಳನ್ನ ಜೊತೆ ಎರಡು ಎಕ್ಸ್ಟ್ರಾ ಹಾಡುಗಳನ್ನ ಕೊಟ್ಟು ಸುದೀಪ್ ಹೈಲೈಟ್ಸ್ ಮಾಡಿರೋ ನೀವು ಇದೀಗ ಶಿವರಾಜಕುಮಾರ್ ಅಭಿಮಾನಿಗಳಿಗೆ ಪಾಠ ಹೇಳೋದು ಎಷ್ಟು ಸರಿ. ಅಷ್ಟಕ್ಕೂ ನಾಲ್ಕರಿಂದ ನಾಲ್ಕೂ ವರೆ ಗಂಟೆ ಇದ್ದ ಸಿನಿನಾ ದೃಶ್ಯಗಳಲ್ಲಿ 2 ಗಂಟೆ ಐವತ್ತು ನಿಮಿಷ ತಂದು ನಿಲ್ಲಿಸಿರೋ ನೀವು ಎಡಿಟಿಂಗ್ ಟೇಬಲಲ್ಲಿ ಶಿವಣ್ಣ ಇದ್ದ ಮುಖ್ಯ ದೃಶ್ಯಗಳಿಗೆ ಕತ್ತರಿ ಹಾಕಿದೀರ ಅನ್ನೋ ಅನುಮಾನ ನಂಗಿದೆ. ಅದಕ್ಕೆ ಉತ್ತರ ನಿಮ್ಮ ಬಳಿಯೇ ಇರುತ್ತೆ ಬಿಡಿ. ಶಿವರಾಜಕುಮಾರ್ ಎಂಬ ಒಳ್ಳೆಯ ಕಲಾವಿದರನ್ನ ಪೂರ್ತಿಯಾಗೆ ಬಳಸಿಕೊಳ್ಳುವ ಬದಲು ಇನ್ನೊಬ್ಬರಿಗೆ ಬಿಲ್ಡಪ್ ಕೊಡಲು ಬೇಯಿಸಿಕೊಂಡಿರೋ ಹಾಗಿದೆ. ಇದು ನಾನು ಹೇಳ್ತಿರೋ ಮಾತಲ್ಲ ಸಿನಿಮಾ ನೋಡಿದ ಪ್ರತಿಯೊಬ್ಬ ಪ್ರೇಕ್ಷಕ ಕೂಡ ಕೇಳ್ತಿರೋ ಪ್ರೆಶ್ನೆ.! ಇನ್ನು ಸಿನಿಮಾ ಚೆನ್ನಾಗಿಲ್ಲ ಅಂತ ಅಭಿಪ್ರಾಯ ವ್ಯಕ್ತ ಪಡಿಸ್ತಿರೋರನ್ನ ಒಂದಷ್ಟು ತಿಕ್ಕಲುಗಳು ವೀಡಿಯೋ ಮಾಡಿ ಕನ್ನಡ ದ್ರೋಹಿಗಳು ಅಂತಿರೋದು ಮಾತ್ರ ವಿಪರ್ಯಾಸ.! ಇನ್ನು ಅಪೂರ್ವ ಸಂಗಮದಲ್ಲಿ ಶಂಕರನಾಗ್ ಅಣ್ಣಾವ್ರಿಗೆ ಹೊಡೆದದ್ದನ್ನ ಇನ್ನೊಂದಷ್ಟು ಸಿನಿಮಾಗಳಲ್ಲಿ ಪ್ರಭಾಕರ್ ವಿಷ್ಣುವರ್ಧನ್ ಅವರಿಗೆ ಹೊಡೆಯೋದನ್ನ , ಕಂಪೇರ್ ಮಾಡ್ತಿರೋರು ಆ ಚಿತ್ರಗಳ ಕಥೆಯಾಗಲಿ , ಚಿತ್ರಕಥೆಯನ್ನಾಗಲಿ ಆ ದೃಶ್ಯಗಳ ಮಹತ್ವವನ್ನಾಗಲಿ ಅಥವಾ ಹೊಡೆದಾಟದ ನಂತರ ಆಗುವ ಕ್ಷಮೆಯ ವಿಷಯಗಳನ್ನಾಗಲಿ ಒಮ್ಮೆ ಪರಿಶೀಲಿಸಿ. ಗಂಧದ ಗುಡಿಯಂತ ಚಿತ್ರದಲ್ಲಿ ಕೂಡ ಅಣ್ಣಾವ್ರಿಗೆ ವಿಷ್ಣು ಹೊಡೆಯುವ ದೃಶ್ಯಗಳಿಲ್ಲ ಆದರೂ ವಿಷ್ಣು ಪಾತ್ರ ಅಣ್ಣಾವ್ರ ಪಾತ್ರಕ್ಕೆ ಕ್ಷಮೆಯಾಚಿಸುತ್ತದೆ. ನಂತರ ಇಬ್ಬರೂ ಕೈ ಹಿಡಿದು ಮರಗುವ ದೃಶ್ಯಗಳಿವೆ ಅವೆಲ್ಲ ಕಣ್ಣಿಗೆ ಮನಸ್ಸಿಗೆ ಸೋದರತ್ವದ ಮಹತ್ವ ತಿಳಿಸುತ್ತವೆ ಅದರ ಉದ್ದೇಶ ಬೇರೆ ಏನಿಲ್ಲ ತಪ್ಪು ಮಾಡಿದ ವ್ಯಕ್ತಿ ಕ್ಷಮೆಯಾಚಿಸಬೇಕು ಇಲ್ಲವಾದರೆ ಅದು ದವಲತ್ತಿನ ಪ್ರತೀಕವಾಗಿಬಿಡುತ್ತದೆ. ಮಾತೆತ್ತಿದರೆ ಹಾಗೆ ಹೀಗೆ ಅನ್ನುವ ಪ್ರೇಮ್ ಅಥವಾ ಅವರ ಪರ ವಾದಿಸೋರಿಗೆ ಕನಿಷ್ಟ ಪ್ರಜ್ಞೆ ಇರಬೇಕು. ಅದೆಲ್ಲದರ ಹೊರತೂ ಹೆಣ ಹೊರುವಾಗ ಹಣ ಕೇಳಿಸಿ , ರಾಮನ ಅವತಾರದಲ್ಲಿ ಜೂಜಾಡಿಸಿ, ಹೆಣ್ಣಿಗೆ ಗೌರವಿಸೋ ವ್ಯಕ್ತಿಯೇ ಇನ್ನೊಬ್ಬರ ಬಳಿ ನಗ್ನಳಾಗುವಂತೆ ಮಾಡಿಸಿದರೂ ಕೂಡ ಸಹಿಸಿಕೊಂಡ ಅಭಿಮಾನಿಗಳು ಅವರ ನೆಚ್ಚಿನ ನಟನಿಗೆ ಪಾತ್ರದಲ್ಲಿ ಹೊಡೆದರೂ ಇನ್ನೊಂದು ಪಾತ್ರ ಯಾಕೆ ಕ್ಷಮೆ ಕೇಳಿಲ್ಲ ಈಗ ಹೇಳಿ

ಪ್ರೇಮ್ ಶಿವಣ್ಣಂಗೆ ಯಾಕೆ ಮಹತ್ವ ಕೊಟ್ಟಿಲ್ಲ .?

ಆಮೇಲೆ ಸುದೀಪ್ ಸಿನಿಮಾನ ಸಿನಿಮಾ ಥರ ನೋಡಿ ಶಿವಣ್ಣ ಹೇಳಿದ್ರೆ ಆ ಸೀನ್ ತೆಗೆಯಲಾಗುತ್ತೆ ಆ ಸೀನ್ ಮಾಡಿರೋ ಶಿವಣ್ಣ ಏನ್ ದಡ್ರಾ ಅಂತ ಹೇಳಿದ್ರಿ ಓಕೆ ಅದಕ್ಕೂ ಮೊದಲು ನಿಮಗೊಂದು ವಿಷಯ ನೆನಪಲ್ಲಿರಲಿ ಈ ಹಿಂದೆ ಅಂಬರೀಶ್ ಅಣ್ಣಾವ್ರ ಜೊತೆ ಸಿನಿಮಾ ಮಾಡೋ ಮೊದಲು ನಾನು ಅಣ್ಣಾವ್ರಿಗೆ ಹೊಡೆಯೋ ದೃಶ್ಯಗಳಿದ್ರೆ ಅಥವಾ ಅವಮಾನಿಸೋ ಅಥವಾ ಬೈಯುವಂತಹ ದೃಶ್ಯಗಳಿದ್ರೆ ನಾನು ಆ ಸಿನಿಮಾ ಮಾಡಲ್ಲ ಅಂತ ಹೇಳಿದ್ರು ಯಾಕಂದ್ರೆ ಅದು ಒಬ್ಬ ಕಲಾವಿದ ತನಗಿಂತ ಹಿರಿಯ ಕಲಾವಿದರನ್ನ ಗೌರವಿಸೋ ಗುಣ.
ನೀವೇ ಹೇ ಪ್ರೇಮ್ ಇದೆಲ್ಲ ಚನ್ನಾಗಿರಲ್ಲ ಬೇಡ ಅಂದಿದ್ರೆ ಇವತ್ತು ಕನ್ನಡಿಗರ ಹೃದಯದಲ್ಲಿ ನೀವು ಇನ್ನೊಬ್ಬ ಅಂಬರೀಶ್ ಆಗ್ತಿದ್ರಿ ಅಂತ ಅವಕಾಶ ನೀವು ಕಳಕೊಂಡ್ರಿ.! ಓಕೆ ಶಿವಣ್ಣರೇ ಮಾಡಿ ಮಾಡಿ ಅಂದ್ರು ನೀವು ಮಾಡಿದೀರ ಆದರೆ ಆ ನಂತರದ ದೃಶ್ಯಗಳನ್ನ ನೀವು ಬಳಸಿಕೊಳ್ಳಬಹುದಿತ್ತು. ಆ ಪ್ರೇಮ್ ನಿಮಗೆ ಆ ಅವಕಾಶಗಳನ್ನೂ ಕೊಟ್ಟಿಲ್ಲ ಅನಿಸುತ್ತೆ ಬಿಡಿ..
ಈ ಎಲ್ಲ ಬೆಳವಣಿಗೆಗಳ ನಂತರ Ultimate ಆಗಿ ಸಿನಿಮಾ ಮಾಡೋದೆ ಪ್ರೇಕ್ಷಕರಿಗೋಸ್ಕರ ಬಹಳಷ್ಟು ಪ್ರೇಕ್ಷಕರು ಆ ದೃಶ್ಯಗಳನ್ನ ತೆಗೀರಿ ಅಂದಾಗ ನೀವು ತೆಗೆದು ಬಿಟ್ಟಿದ್ರೂ ಅದರಿಂದ ಚಿತ್ರದ ಕಥೆಗೆ ಯಾವುದೇ ರೀತಿ ತೊಡಕಾಗ್ತಿರಲಿಲ್ಲ. ಯಾಕಂದ್ರೆ ಸಿನಿಮಾಗೆ ಪ್ರೇಕ್ಷಕರೇ ಜೀವಾಳ ಅವರ ವಿರುದ್ಧ ಹೋಗಿ ನೀವು ಸಾಧಿಸಬೇಕಾದದ್ದು ಏನೂ ಇಲ್ಲ.
ಇದು ನನ್ನ ವೈಯುಕ್ತಿಕ ಅಭಿಪ್ರಾಯ ಇದರಿಂದ ನಾ ಪ್ರೀತಿಸೋ ಡಾ.ಶಿವರಾಜಕುಮಾರ್ ಅವರಿಗಾಗಲೀ ಕಿಚ್ಚ ಸುದೀಪ್ ಅವರಿಗಾಗಲೀ ,ಅಥವಾ ನಿರ್ದೇಶಕ ಪ್ರೇಮ್ ಅವರಿಗಾಗಲಿ ಅಥವಾ ಆ ಸ್ಟಾರುಗಳ ಅಭಿಮಾನಿಗಳಿಗಾಗಲಿ ಬೇಸರವಾದರೆ ಐ ಯಾಮ್ ವೆರೀ ಸಾರಿ

ಸಿನಿಮಾನ ಸಿನಿಮಾ ಥರ ನೋಡಿ ನನಗನಿಸಿದ ಅಭಿಪ್ರಾಯ ಇದು. ಯಾಕಂದ್ರೆ ಸಿನಿಮಾಗೂ ಒಂದು ರೀತಿ ನೀತಿ ಪ್ರೀತಿ ಅಂತ ಇರುತ್ತೆ.! ಯಾಕಂದ್ರೆ ಅಪೂರ್ವ ಸಂಗಮದ ಹಾಗೆ ಒಡಹುಟ್ಟಿದವರ ಹಾಗೆ ಗಂಧದಗುಡಿಯ ಹಾಗೆ ದಿಗ್ಗಜರ ಹಾಗೆ ಕೋದಂಡರಾಮರ ಹಾಗೆ ಬೆಂಕಿ ಬಿರುಗಾಳಿಯ ಹಾಗೆ ಇಲ್ಲಿ ಯಾರು ಕ್ಲೈಮ್ಯಾಕ್ಸ್ ದೃಶ್ಯಗಳಲ್ಲಿ ಸ್ಟಾರುಗಳು ಒಂದಾಗೋದೆ ಅಲ್ಲ ಅಪ್ಪಿಕೊಳ್ಳೋದೆ ಇಲ್ಲ ಕಡೇ ಪಕ್ಷ ಒಬ್ಬರನ್ನೊಬ್ಬರು ನೋಡೋದು ಇಲ್ಲ ಇದು ಬರಿ ಶಿವಣ್ಣ ಅಭಿಮಾನಿಗಳಿಗಷ್ಟೇ ಅಲ್ಲ ಸುದೀಪ್ ಫ್ಯಾನ್ಸಿಗೂ ಏನೋ ಇದು ಅನ್ನಿಸೋವಷ್ಟು ಬೇಸರದ ವಿಷಯ.!!! –

ಸಾಗರ್ ಮನಸು
ಜೈ ಕನ್ನಡ ಸಿನಿಮಾ – ಜೈ ಕರ್ನಾಟಕ ಮಾತೆ

Like us on facebook
Disclaimer:

ರಾಷ್ಟ್ರಧ್ವನಿ ಅಂತಾರ್ಜಾಲ ಸುದ್ದಿ ವಾಹಿನಿಯಲ್ಲಿ ಪ್ರಕಟವಾಗುವ ಸುದ್ದಿಗಳ ಕುರಿತು ಸಾರ್ವಜನಿಕರು ಆರೋಗ್ಯಕರ ಚರ್ಚೆ, ಕಮೆಂಟ್ ಗಳನ್ನು ಮಾಡಬಹುದಾಗಿದೆ. ಧರ್ಮ, ಜಾತಿ ನಿಂದನೆಯಾಗುವಂತಹ ಮತ್ತು ಸಾಮರಸ್ಯ ಕೆಡಿಸುವಂತಹ ದುರುದ್ದೇಶಪೂರಿತ ಕಮೆಂಟ್ ಹಾಗೂ ಚರ್ಚೆ ಕಾನೂನು ರೀತಿಯಲ್ಲಿ ಅಪರಾಧವಾಗಿರುತ್ತದೆ. ದೇಶದ ಕಾನೂನು ಸುವ್ಯವಸ್ಥೆಗೆ ಧಕ್ಕೆ ತರುವಂತಹ ಯಾವುದೇ ಕಮೆಂಟ್ ಗಳನ್ನು ಹಾಕಿದ್ದಲ್ಲಿ, ಅದಕ್ಕೆ ಕಮೆಂಟ್ ಹಾಕುವವರೇ ಹೊಣೆಗಾರರಾಗಿರುತ್ತಾರೆ. ಅಂತಹವರ ಹೆಸರು ಮತ್ತು ಐಪಿ ಅಡ್ರೆಸ್ ಗಳನ್ನು ಸಂಬಂಧಪಟ್ಟ ಇಲಾಖೆಗೆ ಒದಗಿಸಲು ರಾಷ್ಟ್ರಧ್ವನಿ ಬದ್ಧವಾಗಿರುತ್ತದೆ.

ಸಿನಿಮಾ
ಸಂಪಾದಕೀಯ ಮತ್ತಷ್ಟು
ಸಂವಿಧಾನಾತ್ಮಕ ಸದನಗಳಲ್ಲಿ ಪಾಸ್ ಆಗುತ್ತಿದೆ ‘ಹಿಂದೂ..
ದ್ವೇಷಪೂರಿತ, ಅಸಂವಿಧಾನಿಕ ಪೌರತ್ವ ತಿದ್ದುಪಡಿ ಮಸೂದೆ ಉಭಯ ಸದನಗಳಲ್ಲಿ ಅಂಗೀಕಾರವಾಗಿದೆ. ಇನ್ನು ರಾಷ್ಟ್ರಪತಿ ಅಂಕಿತ...
POLL

[democracy id="1"]