Tuesday, January 28 , 2020
ಸೀರಿಯಲ್ ನಲ್ಲಿ ನಡೆದೇ ಹೋಯಿತು ದುರ್ಘಟನೆ!

ಹಿಂದಿಯಲ್ಲಿ ಪ್ರಸಾರವಾಗುತ್ತಿರುವ ‘ಸುಸುರಾಲ್ ಸಿಮರ್ ಕಾ’ ಎನ್ನುವ ಸೀರಿಯಲ್ ನಲ್ಲಿ ಒಂದು ಅಚಾತುರ್ಯ ನಡೆದೇ ಹೋಗಿದೆ. ಅತ್ತೆ ತನ್ನ ಸೊಸೆಗೆ ಕಪಾಳಕ್ಕೆ ಭಾರಿಸಿದ್ದು, ಈ ವೇಳೆ ಸೊಸೆ ಬುಗುರಿಯಂತೆ ಸುತ್ತಿ ಬಾಗಿಲಿನ ಬಳಿ ಇದ್ದ ಕರ್ಟನ್ ಬಳಿಗೆ ಹೋಗಿ ಬಿದ್ದಿದ್ದಾಳೆ. ಈ ವೇಳೆ ಆಕೆಯ ಕೊರಳಿಗೆ ಕರ್ಟನ್ ಸುತ್ತು ಹಾಕಿಕೊಂಡಿದೆ.  ಅಯ್ಯೋ … ದುರ್ವಿಧಿಯೇ… ಏನಿದು ಅಮಾನವೀಯ? ಅತ್ತೆಯ ಕಾರ್ಯವನ್ನು ಯಾರೂ ಕೇಳುವವರಿಲ್ಲವೇ? ಏನೋ…  ಆಕೆಯ ಪ್ರಾಣ ಹೋಗುವಷ್ಟರಲ್ಲಿ ಅಲ್ಲಿದ್ದವರು ಬಂದು ಕಾಪಾಡಿದ್ದಾರೆ.

ಇದು ಸೀರಿಯಲ್ ಒಂದು ದೃಶ್ಯ. ಸೀರಿಯಲ್ ಗಳ ನಿರ್ದೇಶಕರುಗಳು ಎಷ್ಟು ಪ್ರಬುದ್ಧರಿದ್ದಾರೆ ನೋಡಿ. ಕನಿಷ್ಟ ಸಾಮಾನ್ಯ ಜ್ಞಾನವೂ ಇಲ್ಲದೇ ತೆಗೆದ ಸೀರಿಯಲ್ ನಂತಿದೆ. ಈ ಸೀರಿಯಲ್ ನ ದೃಶ್ಯ ಆದರೂ ಈ ಸೀರಿಯಲ್ ನೋಡುವವರೇನೂ ಕಡಿಮೆ ಇಲ್ಲ.

ಎಂತೆಂಹದ್ದೋ ಸೀರಿಯಲ್ ಗಳನ್ನು ನೋಡಿಯಾಯಿತು. ಕನ್ನಡದಲ್ಲಿ ಪ್ರಸಾರವಾಗುತ್ತಿದ್ದ ಪುಟ್ಟಗೌರಿ ಮದುವೆ ಸೀರಿಯಲ್ ನಲ್ಲಿ ಜನ ನೋಡಬಾರದ ದೃಶ್ಯಗಳನ್ನೆಲ್ಲ ನೋಡಿದರು. ವ್ಯಾಪಕ ಟ್ರೋಲ್ ಕೂಡ ಆಯಿತು. ಇದೀಗ ಪುಟ್ಟಗೌರಿಗೆ ಸ್ಪರ್ಧೆ ನೀಡುವಂತಹ ಸೀರಿಯಲ್ ‘ಸುಸುರಾಲ್ ಸಿಮರ್ ಕಾ’ ಹಿಂದಿಯಲ್ಲಿ ಕಾಣ ಸಿಕ್ಕಿದೆ. ಸದ್ಯ ಈ ದೃಶ್ಯ ಸಾಮಾಜಿಕ ಜಾಲತಾಣಗಳಲ್ಲಿ ಭಾರೀ ವೈರಲ್ ಆಗಿದೆ.

ಸೀರಿಯಲ್

ಅಯ್ಯೋ… ಸೀರಿಯಲ್ ನಲ್ಲಿ ನಡೆದೇ ಹೋಯ್ತು ದುರ್ಘಟನೆ

Posted by Rashtradhwani News on Sunday, 17 November 2019
Like us on facebook
Disclaimer:

ರಾಷ್ಟ್ರಧ್ವನಿ ಅಂತಾರ್ಜಾಲ ಸುದ್ದಿ ವಾಹಿನಿಯಲ್ಲಿ ಪ್ರಕಟವಾಗುವ ಸುದ್ದಿಗಳ ಕುರಿತು ಸಾರ್ವಜನಿಕರು ಆರೋಗ್ಯಕರ ಚರ್ಚೆ, ಕಮೆಂಟ್ ಗಳನ್ನು ಮಾಡಬಹುದಾಗಿದೆ. ಧರ್ಮ, ಜಾತಿ ನಿಂದನೆಯಾಗುವಂತಹ ಮತ್ತು ಸಾಮರಸ್ಯ ಕೆಡಿಸುವಂತಹ ದುರುದ್ದೇಶಪೂರಿತ ಕಮೆಂಟ್ ಹಾಗೂ ಚರ್ಚೆ ಕಾನೂನು ರೀತಿಯಲ್ಲಿ ಅಪರಾಧವಾಗಿರುತ್ತದೆ. ದೇಶದ ಕಾನೂನು ಸುವ್ಯವಸ್ಥೆಗೆ ಧಕ್ಕೆ ತರುವಂತಹ ಯಾವುದೇ ಕಮೆಂಟ್ ಗಳನ್ನು ಹಾಕಿದ್ದಲ್ಲಿ, ಅದಕ್ಕೆ ಕಮೆಂಟ್ ಹಾಕುವವರೇ ಹೊಣೆಗಾರರಾಗಿರುತ್ತಾರೆ. ಅಂತಹವರ ಹೆಸರು ಮತ್ತು ಐಪಿ ಅಡ್ರೆಸ್ ಗಳನ್ನು ಸಂಬಂಧಪಟ್ಟ ಇಲಾಖೆಗೆ ಒದಗಿಸಲು ರಾಷ್ಟ್ರಧ್ವನಿ ಬದ್ಧವಾಗಿರುತ್ತದೆ.

ಸಿನಿಮಾ
ಸಂಪಾದಕೀಯ ಮತ್ತಷ್ಟು
ಸಂವಿಧಾನಾತ್ಮಕ ಸದನಗಳಲ್ಲಿ ಪಾಸ್ ಆಗುತ್ತಿದೆ ‘ಹಿಂದೂ..
ದ್ವೇಷಪೂರಿತ, ಅಸಂವಿಧಾನಿಕ ಪೌರತ್ವ ತಿದ್ದುಪಡಿ ಮಸೂದೆ ಉಭಯ ಸದನಗಳಲ್ಲಿ ಅಂಗೀಕಾರವಾಗಿದೆ. ಇನ್ನು ರಾಷ್ಟ್ರಪತಿ ಅಂಕಿತ...
POLL

[democracy id="1"]