Wednesday, October 23 , 2019
ಸಿ++ 20 ನಿಮಿಷಗಳ ದೃಶ್ಯ ಯೂಟ್ಯೂಬ್ ನಲ್ಲಿ ಬಿಡುಗಡೆ | 20 ನಿಮಿಷಗಳ ದೃಶ್ಯದಲ್ಲಿ ಏನೇನು ಇದೆ ಗೊತ್ತಾ?

ಬಹುಭಾಷೆಗಳಲ್ಲಿ ಬಿಡುಗಡೆಯಾಗಲು ಕನ್ನಡದ ಇನ್ನೊಂದು ಚಿತ್ರ ಸಿ++ ಸಿದ್ಧವಾಗಿದ್ದು, ಈಗಾಗಲೇ ಚಿತ್ರದ 20 ನಿಮಿಷಗಳ ದೃಶ್ಯ ಯೂಟ್ಯಬ್ ನಲ್ಲಿ ಬಿಡುಗಡೆಗೊಂಡು ಜನರಲ್ಲಿ ಇನ್ನಷ್ಟು ಕುತೂಹಲ ಮೂಡಿಸಿದೆ. ಈ 20 ನಿಮಿಷಗಳ ದೃಶ್ಯಕ್ಕೆ ಜನರು ಬೆರಗಾಗಿದ್ದು, ಈ ಚಿತ್ರ ಸಕ್ಸಸ್ ರನ್ನಿಂಗ್ ಆಗಲಿದೆ ಎಂದು ಜನ ಅಭಿಪ್ರಾಯಪಟ್ಟಿದ್ದಾರೆ.

ಚಿತ್ರದಲ್ಲಿ ನಾಯಕ ನಟನನ್ನು ಅಪಹರಿಸಲಾಗುತ್ತದೆ. ಅಲ್ಲಿಂದ ಹೊಸ ಕಥೆಗಳು ಆರಂಭವಾಗುತ್ತಾ ಹೋಗುತ್ತದೆ. ಚಿತ್ರದ ಪ್ರತಿಯೊಂದು ದೃಶ್ಯಗಳು ಹೊಸ ಕಥೆಗಳನ್ನು ಹುಟ್ಟುಹಾಕುತ್ತಾ ಹೋಗುತ್ತದೆ. ಅದು ಅಂತಿಮವಾಗಿ ಎಲ್ಲಿ ತಲುಪುತ್ತದೋ ಅದು ಚಿತ್ರದ ಮುಖ್ಯ ಕಥೆಯಾಗಲಿದೆ ಎನ್ನುವುದು 20 ನಿಮಿಷಗಳ ದೃಶ್ಯದಲ್ಲಿ ಕಂಡು ಬರುತ್ತದೆ. ನಾಯಕ ನಟನನ್ನು ಅಪಹರಿಸಿದ್ದಲ್ಲಿಂದ ವಿಲನ್ ಗಳ ಹೊಸ ಮುಖದ ಪರಿಚಯವಾಗುತ್ತಾ ಹೋಗುತ್ತದೆ. ಹೀಗೆ ಒಂದೊಂದು ದೃಶ್ಯವೂ ಕ್ಷಣಕ್ಕೊಮ್ಮೆ ಕುತೂಹಲವನ್ನುಂಟು ಮಾಡುತ್ತಾ ಮುಖ್ಯ ಕಥೆಯತ್ತ ಸಾಗುತ್ತದೆ.

ವಿಲನ್ ಹಾಗೂ ನಾಯಕನ ನಡುವೆ ವಿಲನ್ ಗಳೇ ಸ್ಟ್ರಾಂಗ್ ಆಗಿ ಕಾಣಿಸಲಾಗಿದೆ. ನಾಯಕನ ಎದುರೇ ಒಬ್ಬ ಅಮಾಯಕನನ್ನು ಚಿತ್ರ ಹಿಂಸೆ ನೀಡಿ ಕೊಲೆ ಮಾಡಲಾಗುತ್ತದೆ. ಅಲ್ಲಿಂದ ಹೊಸ ಕಥೆ ಆರಂಭವಾಗುತ್ತದೆ. ನಾಯಕ ವಿಲನ್ ಗಳ ಹಿಡಿತದಿಂದ ತಪ್ಪಿಸಿಕೊಂಡು ಓಡುತ್ತಾನೆ. ಅಲ್ಲಿಂದ ನಾಯಕ ನಟನನ್ನು ವಿಲನ್ ಗಳು ಹುಡುಕಲು ಆರಂಭಿಸುತ್ತಾರೆ. ಹೀಗೆ ಕಥೆಗಳು ಕುತೂಹಲಕಾರಿಯಾಗಿ ಮುಂದುವರಿಯುತ್ತದೆ.

20 ನಿಮಿಷಗಳ ದೃಶ್ಯ ಬಿಡುಗಡೆಯಾಗಿದ್ದು ಹೇಗೆ?

ಯೂಟ್ಯೂಬ್ ನಲ್ಲಿ 20 ನಿಮಿಷಗಳ ದೃಶ್ಯ ಬಿಡುಗಡೆಯಾಗಿರುವುದು ಹೇಗೆ ಎನ್ನುವ ವಿಚಾರ ಇನ್ನೂ ಗೌಪ್ಯವಾಗಿದೆ. ಚಿತ್ರ ಪ್ರಿಯರು ಇದು ಹೊಸ ರೀತಿಯ ಪ್ರಚಾರವಾಗಿದೆ ಎಂದು ಅಭಿಪ್ರಾಯಪಟ್ಟಿದ್ದಾರೆ. ಇನ್ನು ಕೆಲವರು ಚಿತ್ರದ ಕಥೆಯನ್ನು ಇದೊಂದು ಹೊಸ ಆಲೋಚನೆ ಎಂದು ಹೇಳಿದ್ದಾರೆ. 20 ನಿಮಿಷಗಳ ದೃಶ್ಯವನ್ನು ಸುಮಾರು 1 ಲಕ್ಷದ ಮೂವತ್ತ ನಾಲ್ಕು ಸಾವಿರಕ್ಕೂ ಅಧಿಕ ಜನರು ವೀಕ್ಷಿಸಿದ್ದಾರೆ. 

ಸ್ಯಾಂಡಲ್ ವುಡ್ ನಲ್ಲೇ ಹೊಸ ಪ್ರಯತ್ನ ಅಂತಾರೆ ಜನ

ಚಿತ್ರದಲ್ಲಿ ಹಾಡು ಇಲ್ಲ, ಫೈಟ್ ಗಳಿಲ್ಲ, ಆಸಕ್ತಿಕರವಾದ ಕಾನ್ಸೆಪ್ಟ್, ಕನ್ನಡ ಇಂಡಸ್ಟ್ರಿಯಲ್ಲೇ ಡಿಫರೆಂಟ್ ಆಗಿರುವ ಸ್ಕ್ರೀನ್ ಪ್ಲೇ ಎಂದು ಚಿತ್ರಕ್ಕೆ ಜನ ಮೆಚ್ಚುಗೆ ವ್ಯಕ್ತಪಡಿಸಿದ್ದಾರೆ. ಈ ಚಿತ್ರವನ್ನು ನೋಡಲು ನಾವು ಕಾಯುತ್ತಿರುತ್ತೇವೆ ಎಂದು ಕೆಲವರು ಕಮೆಂಟ್ ಮಾಡಿದ್ದಾರೆ.  ಈ ದೃಶ್ಯಗಳು ಚಿತ್ರವನ್ನು ನೋಡಲು ಪ್ರೇರೇಪಿಸುತ್ತಿವೆ ಎಂದು ಕೆಲವರು ಹೇಳಿದ್ದಾರೆ. 20 ನಿಮಿಷಗಳ ದೃಶ್ಯ ನೋಡಿದರೆ, ಸ್ಟೋರಿ ಸಕ್ಕತ್ ಆಗಿದೆ ಎಂದು ಅನ್ನಿಸುತ್ತಿದೆ.  ಡೈರೆಕ್ಷನ್ ತುಂಬಾ ಚೆನ್ನಾಗಿದೆ. ಎಲ್ಲಿಯೂ ಓವರ್ ಆ್ಯಕ್ಟಿಂಗ್ ಇಲ್ಲ, ಎಕ್ಸಲೆಂಟ್ ಎಂದು ಕೆಲವರು ವಿಡಿಯೋಗೆ ಕಮೆಂಟ್ ಮಾಡಿದ್ದಾರೆ.

ಒಟ್ಟಿನಲ್ಲಿ ಸಿ++ ಚಿತ್ರ ಹೊಸತೊಂದು ಪ್ರಪಂಚವನ್ನು ತೆರೆದಿಡಲು ಹೊರಟಿದ್ದು, ಸಿನಿ ಪ್ರಿಯರಲ್ಲಿ ಕುತೂಹಲ ಮೂಡಿಸಲು ಯಶಸ್ವಿಯಾಗಿದೆ. ಚಿತ್ರವು ಅಕ್ಟೋಬರ್ ನಲ್ಲಿ ಬಿಡುಗಡೆಯಾಗಲಿದೆ ಎಂದು ಹೇಳಲಾಗುತ್ತಿದೆ. ಚಿತ್ರದ ವಿಡಿಯೋಗೆ ಡಿ ಬಾಸ್ ದರ್ಶನ್ ಅಭಿಮಾನಿಗಳು ಆಲ್ ದ ಬೆಸ್ಟ್ ಹೇಳಿದ್ದಾರೆ. ಇನ್ನು ಚಿತ್ರದ ಟ್ರೈಲರ್ ಹಾಕಿ, 20 ನಿಮಿಷಗಳ ಸೀನ್ ಯಾಕೆ ಹಾಕಿದ್ದೀರಿ, ಚಿತ್ರಕ್ಕೆ ಇದರಿಂದ ತೊಂದರೆಯಾಗುವುದಿಲ್ಲವೇ ಎಂದು ಕೆಲವರು ಪ್ರಶ್ನಿಸಿದ್ದಾರೆ. ಹೊಸ ಬರ ಪ್ರಯತ್ನ ಇದು ತುಂಬಾ ಭಿನ್ನವಾದ ಸಿನಿಮಾ ಇದು, ಚಿತ್ರ ಯಶಸ್ವಿಯಾಗಲಿ ಎಂದು ಜನ ಹಾರೈಸಿದ್ದಾರೆ.

Like us on facebook
Disclaimer:

ರಾಷ್ಟ್ರಧ್ವನಿ ಅಂತಾರ್ಜಾಲ ಸುದ್ದಿ ವಾಹಿನಿಯಲ್ಲಿ ಪ್ರಕಟವಾಗುವ ಸುದ್ದಿಗಳ ಕುರಿತು ಸಾರ್ವಜನಿಕರು ಆರೋಗ್ಯಕರ ಚರ್ಚೆ, ಕಮೆಂಟ್ ಗಳನ್ನು ಮಾಡಬಹುದಾಗಿದೆ. ಧರ್ಮ, ಜಾತಿ ನಿಂದನೆಯಾಗುವಂತಹ ಮತ್ತು ಸಾಮರಸ್ಯ ಕೆಡಿಸುವಂತಹ ದುರುದ್ದೇಶಪೂರಿತ ಕಮೆಂಟ್ ಹಾಗೂ ಚರ್ಚೆ ಕಾನೂನು ರೀತಿಯಲ್ಲಿ ಅಪರಾಧವಾಗಿರುತ್ತದೆ. ದೇಶದ ಕಾನೂನು ಸುವ್ಯವಸ್ಥೆಗೆ ಧಕ್ಕೆ ತರುವಂತಹ ಯಾವುದೇ ಕಮೆಂಟ್ ಗಳನ್ನು ಹಾಕಿದ್ದಲ್ಲಿ, ಅದಕ್ಕೆ ಕಮೆಂಟ್ ಹಾಕುವವರೇ ಹೊಣೆಗಾರರಾಗಿರುತ್ತಾರೆ. ಅಂತಹವರ ಹೆಸರು ಮತ್ತು ಐಪಿ ಅಡ್ರೆಸ್ ಗಳನ್ನು ಸಂಬಂಧಪಟ್ಟ ಇಲಾಖೆಗೆ ಒದಗಿಸಲು ರಾಷ್ಟ್ರಧ್ವನಿ ಬದ್ಧವಾಗಿರುತ್ತದೆ.

ಸಿನಿಮಾ
ಸಂಪಾದಕೀಯ ಮತ್ತಷ್ಟು
ಕನ್ನಡ ಉಳಿಸುವ ಜವಾಬ್ದಾರಿ ಬಡ ಮಕ್ಕಳಿಗೆ..
ಸರಕಾರಿ ಆಂಗ್ಲ ಮಾಧ್ಯಮ ಶಾಲೆಯ ಆದೇಶವನ್ನು ಹಿಂಪಡೆಯಲು ಕರ್ನಾಟಕ ಕೈಗಾರಿಕಾ ಮತ್ತು ವಾಣಿಜ್ಯೋದ್ಯಮ ಕನ್ನಡ...
POLL

[democracy id="1"]