Thursday, December 12 , 2019
ಸಿ++ ಚಿತ್ರ ನೋಡಿ ಅಬ್ಬಬ್ಬಾ… ಇಂತಹ ಕ್ರೈಂ ಕೂಡ ಇದ್ಯಾ ಅಂದ್ರು ಜನ!

ಸಿನಿಡೆಸ್ಕ್: ಸಿ++ ಚಿತ್ರ ನೋಡಿ ಹೀಗೂ ಇದ್ಯಾ ಅಂದು ಬಿಟ್ರು ಸಿನಿ ಪ್ರೇಕ್ಷಕರು. ಲಾಂಗು, ಮಚ್ಚುಗಳ ಕ್ರೈಸ್ಟೋರಿಗಳ ಚಿತ್ರ ವೀಕ್ಷಿಸಿ ಅಭ್ಯಾಸವಾಗಿರುವ ಪ್ರೇಕ್ಷಕರ ಮಟ್ಟಿಗೆ ಸಿ++ ಒಂದು ಕೇಳದ, ಕಾಣದ ಚಿತ್ರವಾಗಿದೆ. ಸೈಬರ್ ಅಂಡರ್ ವರ್ಲ್ಡ್ ನೊಳಗಿನ ಒಂದೊಂದು ಬಿಲವನ್ನು ಹೊಕ್ಕು ಸುರೇಶ್ ಲಿಯೋನ್ ರೇ ಅವರು ಈ ಕಥೆಯನ್ನು ನಿರ್ಮಿಸಿದಂತೆ ಕಂಡು ಬಂದಿದೆ.

ಚಿತ್ರದ ಮೊದಲನೆಯ ಭಾಗ ಸ್ವಲ್ಪ ಸ್ಲೋ ಅನ್ನಿಸಿತಾದರೂ ಎರಡನೇಯ ಭಾಗದಲ್ಲಿ ಅದಕ್ಕೆ ಕಾರಣಗಳು ಸಿಗುತ್ತಾ ಹೋಗುತ್ತದೆ. ಮೊದಲನೆಯ ಭಾಗ ಆರಂಭದಲ್ಲಿ ಸ್ವಲ್ಪ ಬೋರ್ ಅನ್ನಿಸಿದರೂ, ಆ ಕಥೆಗೆ ಇದು ಅನಿವಾರ್ಯ ಎನ್ನುವುದು ಎರಡನೇ ಭಾಗ ನೋಡಿದ ಪ್ರೇಕ್ಷಕನಿಗೆ ಅರ್ಥವಾಗುತ್ತಾ ಹೋಗುತ್ತದೆ. ಚಿತ್ರದ ನಾಯಕನ ಕಿಡ್ನ್ಯಾಪ್ ನ ಬಳಿಕ ಚಿತ್ರ ಒಂದೊಂದು ತಿರುವು ಪಡೆದುಕೊಂಡು ಹೋಗುತ್ತದೆ.

ಹಾರ್ಡ್ ವೇರ್ ಇಂಜಿನಿಯರ್ ಸುರೇಶ್ ಲಿಯೋನ್ ರೇ ಅವರನ್ನು ಗುಂಪೊಂದು ಕಿಡ್ನ್ಯಾಪ್ ಮಾಡುತ್ತದೆ. ಬಳಿಕ ಕತ್ತಲ ಅಡ್ಡಾವೊಂದರಲ್ಲಿ ಕೂಡಿ ಹಾಕುತ್ತದೆ. ಅವರ ಕಣ್ಣ ಮುಂದೆಯೇ ವ್ಯಕ್ತಿಯೋರ್ವನನ್ನು ಚಿತ್ರ ಹಿಂಸೆ ನೀಡುತ್ತದೆ. ಅಲ್ಲಿನ ಚಿತ್ರ ಹಿಂಸೆಯನ್ನು ನೋಡಲು ಸಾಧ್ಯವಾಗದೇ ನಾಯಕ ತೀವ್ರ ಹೆಣಗಾಡುತ್ತಾನೆ. ಕೊನೆಗೆ ಹೇಗೋ ಅಲ್ಲಿಂದ ತಪ್ಪಿಸಿಕೊಂಡು ಓಡುತ್ತಾನೆ. ಹೀಗೆ ಮುಂದುವರಿಯುವ ಕಥೆ ಹಲವು ತಿರುವುಗಳನ್ನು ನೀಡುತ್ತಲೇ ಹೋಗುತ್ತದೆ.

ಚಿತ್ರದ ಹಿನ್ನೆಲೆ ಸಂಗೀತ ಅದ್ಭುತವಾಗಿ ಮೂಡಿ ಬಂದಿದೆ. ಎರಡನೆ ಭಾಗ ಚಿತ್ರ ಹೇಗೆ ಮುಗಿದು ಹೋಯಿತು ಎನ್ನುವುದೇ ತಿಳಿದಷ್ಟು ವೇಗವಾಗಿ ಹೋಗುತ್ತದೆ. ಇಂತಹ ಕ್ರೈಂ ಕೂಡ ಇದೆಯೇ? ಎನ್ನುವ ಅನುಮಾನ, ಕುತೂಹಲ, ಭಯವನ್ನು ಚಿತ್ರ ಮೂಡಿಸುವಲ್ಲಿ ಯಶಸ್ವಿಯಾಗಿದೆ. ಸೈಬರ್ ಕ್ರೈಂ ವಿಚಾರಗಳ ಬಗ್ಗೆ ಕೆಲವೊಂದು ಸಿನಿಮಾಗಳಲ್ಲಿ ಅಲ್ಪಸ್ವಲ್ಪ ನೀವು ನೋಡಿರ ಬಹುದು. ಆದರೆ ಸಿ++ನ ಕಥಾವಸ್ತುವೇ ಸೈಬರ್ ಕ್ರೈಂ ಆಗಿರುವುದರಿಂದ ಸೈಬರ್ ಕ್ರೈಂ ಬಗ್ಗೆ ಉತ್ತಮ ಮಾಹಿತಿಯೂ ಚಿತ್ರದಲ್ಲಿ ದೊರೆಯುತ್ತದೆ.

Like us on facebook
Disclaimer:

ರಾಷ್ಟ್ರಧ್ವನಿ ಅಂತಾರ್ಜಾಲ ಸುದ್ದಿ ವಾಹಿನಿಯಲ್ಲಿ ಪ್ರಕಟವಾಗುವ ಸುದ್ದಿಗಳ ಕುರಿತು ಸಾರ್ವಜನಿಕರು ಆರೋಗ್ಯಕರ ಚರ್ಚೆ, ಕಮೆಂಟ್ ಗಳನ್ನು ಮಾಡಬಹುದಾಗಿದೆ. ಧರ್ಮ, ಜಾತಿ ನಿಂದನೆಯಾಗುವಂತಹ ಮತ್ತು ಸಾಮರಸ್ಯ ಕೆಡಿಸುವಂತಹ ದುರುದ್ದೇಶಪೂರಿತ ಕಮೆಂಟ್ ಹಾಗೂ ಚರ್ಚೆ ಕಾನೂನು ರೀತಿಯಲ್ಲಿ ಅಪರಾಧವಾಗಿರುತ್ತದೆ. ದೇಶದ ಕಾನೂನು ಸುವ್ಯವಸ್ಥೆಗೆ ಧಕ್ಕೆ ತರುವಂತಹ ಯಾವುದೇ ಕಮೆಂಟ್ ಗಳನ್ನು ಹಾಕಿದ್ದಲ್ಲಿ, ಅದಕ್ಕೆ ಕಮೆಂಟ್ ಹಾಕುವವರೇ ಹೊಣೆಗಾರರಾಗಿರುತ್ತಾರೆ. ಅಂತಹವರ ಹೆಸರು ಮತ್ತು ಐಪಿ ಅಡ್ರೆಸ್ ಗಳನ್ನು ಸಂಬಂಧಪಟ್ಟ ಇಲಾಖೆಗೆ ಒದಗಿಸಲು ರಾಷ್ಟ್ರಧ್ವನಿ ಬದ್ಧವಾಗಿರುತ್ತದೆ.

ಸಿನಿಮಾ
ಸಂಪಾದಕೀಯ ಮತ್ತಷ್ಟು
ಸಂವಿಧಾನಾತ್ಮಕ ಸದನಗಳಲ್ಲಿ ಪಾಸ್ ಆಗುತ್ತಿದೆ ‘ಹಿಂದೂ..
ದ್ವೇಷಪೂರಿತ, ಅಸಂವಿಧಾನಿಕ ಪೌರತ್ವ ತಿದ್ದುಪಡಿ ಮಸೂದೆ ಉಭಯ ಸದನಗಳಲ್ಲಿ ಅಂಗೀಕಾರವಾಗಿದೆ. ಇನ್ನು ರಾಷ್ಟ್ರಪತಿ ಅಂಕಿತ...
POLL

[democracy id="1"]