Saturday, June 15 , 2019
ಸಿ++ನ ಅಸಲಿ ಕಥೆ ಏನು ಗೊತ್ತಾ? | ಸುರೇಶ್ ಲಿಯಾನ್ ರೇ ಹೇಳಲು ಹೊರಟಿರುವ ಆ ಅಂಡರ್ ವರ್ಲ್ಡ್ ಯಾವುದು?

ಬಹುಭಾಷೆಗಳಲ್ಲಿ ಬಿಡುಗಡೆಯಾಗಲಿರುವ ಕನ್ನಡದ ಚಿತ್ರ ಸಿ++ನ ಎರಡನೇಯ ಟ್ರೈಲರ್ ಬಿಡುಗಡೆಯಾಗಿದ್ದು, ಹಳೆಯ ಟ್ರೈಲರ್ ಗಿಂತ ಹೆಚ್ಚಿನ ವಿಚಾರಗಳು ಚಿತ್ರದ ಬಗ್ಗೆ ಎರಡನೇಯ ಟ್ರೈಲರ್ ನಲ್ಲಿ ತೆರೆದುಕೊಳ್ಳುತ್ತದೆ. ಸೈಬರ್  ಅಂಡರ್ ವರ್ಲ್ಡ್(ಡಾರ್ಕ್ ನೆಟ್)ನ ಮುಖವಾಡವನ್ನು ಕಳಚುವ ಪ್ರಯತ್ನ ಸಿ++ ಬಿಡುಗಡೆ ಮಾಡಿರುವ 2ನೇ ಟ್ರೈಲರ್ ನಲ್ಲಿ ಕಂಡು ಬಂದಿದೆ.

ಕೆಜಿಎಫ್ ಬಿಡುಗಡೆಯ ಸಂದರ್ಭದಲ್ಲಿಯೇ ಸಿ++ ಬಿಡುಗಡೆಯಾಗಲಿದೆ ಎಂದು ಹೇಳಲಾಗಿತ್ತು. ಆದರೆ, ಚಿತ್ರದ ಗುಣಮಟ್ಟವನ್ನು ಇನ್ನಷ್ಟು ಹೆಚ್ಚಿಸುವ ಉದ್ದೇಶದಿಂದ ಚಿತ್ರ ತಂಡವು ಬಿಡುಗಡೆಗೆ ಇನ್ನಷ್ಟು ಕಾಲಾವಕಾಶ ತೆಗೆದುಕೊಂಡಿದೆ ಎಂದು ಹೇಳಲಾಗಿದೆ.  ಚಿತ್ರದ ಟ್ರೈಲರ್ ನಲ್ಲಿ ಕ್ರೌರ್ಯ, ಚಿತ್ರಹಿಂಸೆ ಹೀಗೆ ಹಲವು ಬಗೆಯ ದೃಶ್ಯಗಳು ಕಂಡು ಬಂದಿದೆ. ಈ ದೃಶ್ಯಕಂಡು ಕೆಲವರು ಇದೊಂದು ಹಿಂಸೆ ಪ್ರಚೋದಕ ಚಿತ್ರ ಎಂದೇ ವಿಶ್ಲೇಷಿಸಿದ್ದಾರೆ. ಈ ವಿಶ್ಲೇಷಣೆಗೆ ಸಿ++ನ 2ನೇ ಟ್ರೈಲರ್ ಉತ್ತರಿಸಿದೆ.

ಸಿ++ನಲ್ಲಿ ವಾಸ್ತವಕ್ಕೆ ವಿರುದ್ಧವಾದ ರಂಜನೆಯಾಗಲಿ, ಓವರ್ ಬಿಲ್ಡಪ್ ಗಳಾಗಲೀ ಕಂಡು ಬರುತ್ತಿಲ್ಲ. ಚಿತ್ರದ ಎರಡೂ ಟ್ರೈಲರ್ ಗಳನ್ನು ಗಮನಿಸಿದರೆ, ಇಲ್ಲಿ ಕಥೆಯನ್ನು ನೇರವಾಗಿ ಹೇಳುವ ಪ್ರಯತ್ನವನ್ನು ನಿರ್ದೇಶಕರು ಮಾಡಿದ್ದಾರೆ. ಈ ಕಥೆಯನ್ನು ಬರೆದು, ನಿರ್ದೇಶಿಸಿರುವ ಸುರೇಶ್ ಲಿಯಾನ್ ರೇ ಕಥೆಗೆ ಹೆಚ್ಚಿನ ಗಮನವನ್ನು ನೀಡಿದ್ದಾರೆ. ಹಿಂಸೆ, ರಕ್ತದ ಮಡುವಿನ ದೃಶ್ಯಗಳ ಹಿಂದೆ ಅವರೇನೋ ಹೇಳಲು ಹೊರಟಿದ್ದಾರೆ. ಅದು ಏನು ಎನ್ನುವುದೇ ಚಿತ್ರದ ಅಸಲಿ ಕಥೆ.

ಸಿ++ ಬಿಡುಗಡೆಗೊಳಿಸಿರುವ ಎರಡೂ ಟ್ರೈಲರ್ ಗಳಲ್ಲೂ ಎಲ್ಲೂ ಕಥೆಯ ಸುಳಿವನ್ನು ಬಿಟ್ಟುಕೊಟ್ಟಿಲ್ಲ. ಮೊದಲ ಟ್ರೈಲರ್ ನಲ್ಲಿ ಹಾರ್ಡ್ ವೇರ್ ಇಂಜಿನಿಯರ್ ಆಗಿರುವ ಕಥಾ ನಾಯಕನನ್ನು ಕಿಡ್ನಾಪ್ ಮಾಡಲಾಗುತ್ತದೆ. ಆತನ ಮುಂದೆಯೇ ಮತ್ತೋರ್ವ ವ್ಯಕ್ತಿಯನ್ನು ಚಿತ್ರಹಿಂಸೆ ನೀಡಿ ಕೊಲೆ ಮಾಡಲಾಗುತ್ತದೆ. ಈತ ಆ ಜಾಗದಿಂದ ಹೇಗೋ ತಪ್ಪಿಸಿಕೊಂಡು ಬಂದರೂ, ಅವರು ಅಟ್ಟಿಸಿಕೊಂಡು ಬರುತ್ತಾರೆ. ಇವರೆಲ್ಲ ಯಾರು ? ಎಂದು ಆತ ಪ್ರಶ್ನೆ ಮಾಡುತ್ತಾನೆ. 2ನೇ ಟ್ರೈಲರ್ ನಲ್ಲಿ ಸೈಬರ್ ಅಂಡರ್ ವರ್ಲ್ಡ್ ನ ಹೆಸರು ಅಲ್ಲಲ್ಲಿ ಕೇಳಿ ಬರುತ್ತದೆ. ಡ್ರಗ್ಸ್ ದಂಧೆಗಳೂ ಸದ್ದು ಮಾಡುತ್ತದೆ. ಈ ಆಧಾರದಲ್ಲಿ ಇದೊಂದು ಹಿಂಸಾತ್ಮಕ ಚಿತ್ರ ಎಂದು ಕಂಡು ಬರುತ್ತದೆ. ಅದೇ ಸಮಯದಲ್ಲಿ ಕಥಾ ನಾಯಕ “ ಜನರಿಗೆ ಕ್ರೈಂಗಳ ಬಗ್ಗೆ ಎಚ್ಚರಿಕೆ ನೀಡುವುದು ನನ್ನ ಕೆಲಸ. ನನಗೂ ಸಾಮಾಜಿಕ ಜವಾಬ್ದಾರಿಯಿದೆ” ಎನ್ನುವ ಡೈಲಾಗ್ ಹೊಡೆಯುತ್ತಾರೆ. ಇವೆಲ್ಲವೂ ಚಿತ್ರದೊಳಗೆ ಯಾವುದೋ ಒಂದು ಸಂದೇಶವನ್ನು ಇಡಲಾಗಿದೆ. ಆ ಸಂದೇಶ ಏನು? ಈ ಚಿತ್ರ ಬೇರೆ ಕ್ರೈಂ ಚಿತ್ರಗಳಿಗಿಂತ ಭಿನ್ನ ಹೇಗೆ? ಎನ್ನುವ ಎಲ್ಲ ಪ್ರಶ್ನೆಗಳಿಗೆ ಉತ್ತರ ಪಡೆಯಲು ಈ ಚಿತ್ರವನ್ನು ನೋಡಲೇ ಬೇಕಿದೆ.

ಚಿತ್ರ ತಂಡ ಹೇಳುವ ಪ್ರಕಾರ ಜೂನ್ ಇಲ್ಲವೇ ಜುಲೈ ಒಳಗಡೆ ಸಿ++ ತೆರೆ ಕಾಣಲಿದೆ. ಚಿತ್ರದ ನಿರ್ದೇಶಕ, ಕಥೆಗಾರ ಸುರೇಶ್ ಲಿಯಾನ್ ರೇ ಹೇಳುವ ಭೀಕರ ಕ್ರೈಂ ಕಥೆ ಏನು? ಇಂತಹ ಕ್ರೈಂಗಳು ಅಸಲಿಗೆ ಭಾರತದಲ್ಲಿ ಇದೆಯೇ? ಮನುಷ್ಯರನ್ನು ಹಿಂಸಿಸಲು ನಿಜಕ್ಕೂ ಇಂತಹ ಮಾರಕಾಯುಧಗಳನ್ನು ಬಳಸುತ್ತಾರಾ? ಇಷ್ಟೊಂದು ಭೀಕರ ಮನಸ್ಥಿತಿ ಹುಟ್ಟಲು ಕಾರಣ ಏನು? ಇವೇ ಮೊದಲಾದ ಪ್ರಶ್ನೆಗಳಿಗೆ ಉತ್ತರ ದೊರೆಯಬೇಕಾದರೆ ಈ ಚಿತ್ರವನ್ನು ನೋಡಲೇ ಬೇಕು. ಅಂದ ಹಾಗೆ, ಪದೇ ಪದೇ ಚಿತ್ರ ನಿರ್ದೇಶಕ ಸುರೇಶ್ ಲಿಯೋನ್ ರೇ  ಹೇಳುವಂತೆ “ಹೃದಯ ಗಟ್ಟಿ ಇರುವವರು ಮಾತ್ರ ಈ ಚಿತ್ರ ವೀಕ್ಷಿಸಿ”.

Like us on facebook
Disclaimer:

ರಾಷ್ಟ್ರಧ್ವನಿ ಅಂತಾರ್ಜಾಲ ಸುದ್ದಿ ವಾಹಿನಿಯಲ್ಲಿ ಪ್ರಕಟವಾಗುವ ಸುದ್ದಿಗಳ ಕುರಿತು ಸಾರ್ವಜನಿಕರು ಆರೋಗ್ಯಕರ ಚರ್ಚೆ, ಕಮೆಂಟ್ ಗಳನ್ನು ಮಾಡಬಹುದಾಗಿದೆ. ಧರ್ಮ, ಜಾತಿ ನಿಂದನೆಯಾಗುವಂತಹ ಮತ್ತು ಸಾಮರಸ್ಯ ಕೆಡಿಸುವಂತಹ ದುರುದ್ದೇಶಪೂರಿತ ಕಮೆಂಟ್ ಹಾಗೂ ಚರ್ಚೆ ಕಾನೂನು ರೀತಿಯಲ್ಲಿ ಅಪರಾಧವಾಗಿರುತ್ತದೆ. ದೇಶದ ಕಾನೂನು ಸುವ್ಯವಸ್ಥೆಗೆ ಧಕ್ಕೆ ತರುವಂತಹ ಯಾವುದೇ ಕಮೆಂಟ್ ಗಳನ್ನು ಹಾಕಿದ್ದಲ್ಲಿ, ಅದಕ್ಕೆ ಕಮೆಂಟ್ ಹಾಕುವವರೇ ಹೊಣೆಗಾರರಾಗಿರುತ್ತಾರೆ. ಅಂತಹವರ ಹೆಸರು ಮತ್ತು ಐಪಿ ಅಡ್ರೆಸ್ ಗಳನ್ನು ಸಂಬಂಧಪಟ್ಟ ಇಲಾಖೆಗೆ ಒದಗಿಸಲು ರಾಷ್ಟ್ರಧ್ವನಿ ಬದ್ಧವಾಗಿರುತ್ತದೆ.

ಸಿನಿಮಾ
ಸಂಪಾದಕೀಯ ಮತ್ತಷ್ಟು
ಅಪಾಯಕಾರಿ ಅಣಕು ಕಾರ್ಯಾಚರಣೆಗಳಲ್ಲಿ ವಿದ್ಯಾರ್ಥಿಗಳನ್ನು ಬಳಕೆ..
ವಿಪತ್ತಿನ ಸಂದರ್ಭದಲ್ಲಿ ಅದರಿಂದ ಪಾರಾಗುವುದು ಹೇಗೆ ಎನ್ನುವುದರ ಬಗ್ಗೆ ವಿದ್ಯಾರ್ಥಿಗಳಲ್ಲಿ ಜಾಗೃತಿ ಮೂಡಿಸುವುದು ಒಳ್ಳೆಯ...