Friday, August 23 , 2019
ಸಿನಿಮಾದಲ್ಲಿ ಕೆಳವರ್ಗಗಳನ್ನು ನಿಂದಿಸಿದರೆ ಅದು ಕಾಮಿಡಿ | ಬ್ರಾಹ್ಮಣ್ಯವನ್ನು ವ್ಯಂಗ್ಯವಾಡಿದರೆ ಅದು ಸಾಮಾಜಿಕ ಪಿಡುಗು!

ಬಹುತೇಕ ಸಿನಿಮಾಗಳಲ್ಲಿ ಬಡವರ ಬದುಕುಗಳನ್ನು ಕಾಮಿಡಿಯಾಗಿ ತೋರಿಸಲಾಗುತ್ತದೆ. ಕೆಳ ಜಾತಿಯವರನ್ನು ಪರೋಕ್ಷವಾಗಿ ನಿಂದಿಸಲಾಗುತ್ತದೆ. ಯಾವುದೋ ಪಕ್ಷಗಳ ಸಿದ್ಧಾಂತಗಳನ್ನು ಪ್ರಚಾರ ಮಾಡಲಾಗುತ್ತದೆ. ಕೆಳ ಸಮುದಾಯದ ವ್ಯಕ್ತಿಗಳ ಪಾತ್ರಗಳನ್ನು ಬಹಳ ಕೆಟ್ಟದಾಗಿ ನಡೆಸಿಕೊಳ್ಳಲಾಗುತ್ತದೆ. ಇಂತಹ ಸಂದರ್ಭದಲ್ಲಿ ಕಾಡದ ಸಮುದಾಯ ಪ್ರಶ್ನೆಗಳು ಬ್ರಾಹ್ಮಣ್ಯಕ್ಕೆ ಪೆಟ್ಟು ಬೀಳುತ್ತಿದೆ ಎನ್ನುವುದು ತಿಳಿಯುತ್ತಿದ್ದಂತೆಯೇ ಎದ್ದು ನಿಲ್ಲುವುದು ದುರಂತ.

ನಾತಿಚರಾಮಿ ಎನ್ನುವ ಚಿತ್ರದಲ್ಲಿ ಬ್ರಾಹ್ಮಣ್ಯವನ್ನು ಗೇಲಿ ಮಾಡುವ ಅನಿವಾರ್ಯವಿತ್ತೇ? ಎಂದು ಕೆಲವು ಮಾಧ್ಯಮಗಳು ಪ್ರಶ್ನಿಸಲು ಆರಂಭಿಸಿವೆ. ಈ ಕಾಳಜಿಗಳು ಕೆಳವರ್ಗಗಳನ್ನು ಗೇಲಿ ಮಾಡುವಾಗ ಮಾಧ್ಯಮಗಳಿಗೆ ತಿಳಿದಿರಲಿಲ್ಲವೇ? ಎನ್ನುವ ಪ್ರಶ್ನೆಗಳನ್ನು ಹುಟ್ಟು ಹಾಕಿವೆ. ಬಹುತೇಕ ಕನ್ನಡ ಸಿನಿಮಾಗಳಲ್ಲಿ ಕೆಳವರ್ಗಗಳೇ ಕಾಮಿಡಿ ಪಾತ್ರಗಳು. ಒಬ್ಬ ಕುಡಿತದ ದಾಸನಾಗಿರುವವನೇ ಕಾಮಿಡಿಯನ್! ಬೆಳಗ್ಗೆಯಿಡೀ ದುಡಿದು ರಾತ್ರಿ ಮನೆಯಲ್ಲಿ ಬಂದು ಜಗಳ ಆಡುವವನೇ ಸಿನಮಾದ ಕಾಮಿಡಿ ಕಿಂಗ್! ಇವೆಲ್ಲ ಒಂದು ಸಾಮಾಜಿಕ ಪಿಡುಗು ಎಂದು ಮಾಧ್ಯಮಗಳಿಗೆ ಈವರೆಗೂ ಅನ್ನಿಸಲೇ ಇಲ್ಲ ಪಾಪಾ!

ನಾತಿಚರಾಮಿ ಚಿತ್ರದಲ್ಲಿ ಓರ್ವ ಬ್ರಾಹ್ಮಣ ಜನಿವಾರ ಧರಿಸಿ ಬಾರ್ ಗೆ ಹೋಗಿ ಕುಳಿತು ಗೋಪಿಚಂದನ, ಅಂಗಾರ-ಅಕ್ಷತೆ ಚಿಹ್ನೆಗಳು ಇರುವಾಗಲೇ ಮಾಂಸ ಸೇವನೆ ಮಾಡುತ್ತಾ ಬ್ರಾಹ್ಮಣ್ಯವನ್ನು ಗೇಲಿ ಮಾಡುವ ದೃಶ್ಯವಿದೆ ಎಂದು ಮಾಧ್ಯಮಗಳು ಈ ಚಿತ್ರದ ನಿರ್ದೇಶಕರನ್ನು, ಚಿತ್ರ ತಂಡವನ್ನು ಪ್ರಶ್ನಿಸಲು ಮುಂದಾಗಿವೆ. ಕೆಳವರ್ಗಗಳ ಸಂಸ್ಕೃತಿಯನ್ನು ಇದೇ ಸಿನಿಮಾ ಮಾಧ್ಯಮಗಳು ವ್ಯಂಗ್ಯವಾಡಿದಾಗ, ಗೇಲಿ ಮಾಡಿದಾಗ ಇಲ್ಲದ ಸಮುದಾಯ ಕಾಳಜಿ ಈಗ ಎಲ್ಲಿಂದ ಬಂತು? ಅಷ್ಟಕ್ಕೂ ಯಾವುದೇ ಒಂದು ಸಮುದಾಯದ ವ್ಯಕ್ತಿ ಮಾಂಸಾಹಾರ ಮಾಡುವುದಿಲ್ಲ ಎಂದು ಇವರು ನಿರ್ದಿಷ್ಟವಾಗಿ ಹೇಗೆ ಹೇಳುತ್ತಾರೆ? ಇವೆಲ್ಲ ಪ್ರಶ್ನೆಗಳು ಎದ್ದಿವೆ.

ಯಾರೇ ಆಗಲಿ ಇನ್ನೊಂದು ಸಮುದಾಯದ ಸಂಸ್ಕೃತಿಯನ್ನು ವ್ಯಂಗ್ಯ ಮಾಡುವುದು, ಗೇಲಿ ಮಾಡುವುದು ಅದು ತಪ್ಪು ಎನ್ನುವುದು ಸರಿ. ಆದರೆ ಈ ದೇಶದ ಕೆಳ ವರ್ಗಗಳು ಈ ಮಾಧ್ಯಮಗಳಿಗೆ ಯಾವ ಮಹಾದ್ರೋಹ ಮಾಡಿದವೆಂದು ಅವರ ಮೇಲಿನ ಕಾಳಜಿಯನ್ನು ಮಾಧ್ಯಮಗಳು ಬಿಟ್ಟು ಬಿಟ್ಟಿದ್ದಾವೆ ಎನ್ನುವುದೇ ಇಲ್ಲೀಗ ಉತ್ತರಿಸಬೇಕಾದ ಪ್ರಶ್ನೆಯಾಗಿವೆ.

ಕುಲದಲ್ಲಿ ಕೀಳ್ಯಾವುದೋ ಹುಚ್ಚಪ್ಪಾ ಎನ್ನುವ ಹಾಡುಗಳು ನಮಗೆ ಕೆಳವರ್ಗಗಳ ನಿಂದನೆಯ ಸಂದರ್ಭದಲ್ಲಿ ನೆನಪಿಗೆ ಬಾರದೇ ಇರುವುದು ನಿಜವಾಗಿಯೂ ದೊಡ್ಡ ದುರಂತ. ಈ ದೇಶದ ಮಾಧ್ಯಮಗಳು ಬ್ರಾಹ್ಮಣ್ಯಕ್ಕೆ ದೊಡ್ಡದಾದ ಕಾವಲು ಎನ್ನುವುದು ಮತ್ತೆ ಮತ್ತೆ ಸಾಬೀತಾಗುತ್ತಲೇ ಇದೆ. ಮೇಲ್ವರ್ಗದ ನಿಮ್ಮ ಆ ಕಾಳಜಿಯಲ್ಲಿ ಒಂದು ಪ್ರಮಾಣದ ಕಾಳಜಿಯನ್ನಾದರೂ ಕೆಳವರ್ಗಗಳ ಸಂಸ್ಕೃತಿಗೆ, ನ್ಯಾಯಕ್ಕೆ ನೀಡಿ. ಆಗ ನಿಮ್ಮ ಪ್ರಶ್ನೆಗಳು ನ್ಯಾಯ ಎಂದೆನಿಸಿಕೊಳ್ಳುತ್ತದೆ ಅಲ್ಲವೇ?

Like us on facebook
Disclaimer:

ರಾಷ್ಟ್ರಧ್ವನಿ ಅಂತಾರ್ಜಾಲ ಸುದ್ದಿ ವಾಹಿನಿಯಲ್ಲಿ ಪ್ರಕಟವಾಗುವ ಸುದ್ದಿಗಳ ಕುರಿತು ಸಾರ್ವಜನಿಕರು ಆರೋಗ್ಯಕರ ಚರ್ಚೆ, ಕಮೆಂಟ್ ಗಳನ್ನು ಮಾಡಬಹುದಾಗಿದೆ. ಧರ್ಮ, ಜಾತಿ ನಿಂದನೆಯಾಗುವಂತಹ ಮತ್ತು ಸಾಮರಸ್ಯ ಕೆಡಿಸುವಂತಹ ದುರುದ್ದೇಶಪೂರಿತ ಕಮೆಂಟ್ ಹಾಗೂ ಚರ್ಚೆ ಕಾನೂನು ರೀತಿಯಲ್ಲಿ ಅಪರಾಧವಾಗಿರುತ್ತದೆ. ದೇಶದ ಕಾನೂನು ಸುವ್ಯವಸ್ಥೆಗೆ ಧಕ್ಕೆ ತರುವಂತಹ ಯಾವುದೇ ಕಮೆಂಟ್ ಗಳನ್ನು ಹಾಕಿದ್ದಲ್ಲಿ, ಅದಕ್ಕೆ ಕಮೆಂಟ್ ಹಾಕುವವರೇ ಹೊಣೆಗಾರರಾಗಿರುತ್ತಾರೆ. ಅಂತಹವರ ಹೆಸರು ಮತ್ತು ಐಪಿ ಅಡ್ರೆಸ್ ಗಳನ್ನು ಸಂಬಂಧಪಟ್ಟ ಇಲಾಖೆಗೆ ಒದಗಿಸಲು ರಾಷ್ಟ್ರಧ್ವನಿ ಬದ್ಧವಾಗಿರುತ್ತದೆ.

ಸಿನಿಮಾ
ಸಂಪಾದಕೀಯ ಮತ್ತಷ್ಟು
ಅಪಾಯಕಾರಿ ಅಣಕು ಕಾರ್ಯಾಚರಣೆಗಳಲ್ಲಿ ವಿದ್ಯಾರ್ಥಿಗಳನ್ನು ಬಳಕೆ..
ವಿಪತ್ತಿನ ಸಂದರ್ಭದಲ್ಲಿ ಅದರಿಂದ ಪಾರಾಗುವುದು ಹೇಗೆ ಎನ್ನುವುದರ ಬಗ್ಗೆ ವಿದ್ಯಾರ್ಥಿಗಳಲ್ಲಿ ಜಾಗೃತಿ ಮೂಡಿಸುವುದು ಒಳ್ಳೆಯ...
POLL

[democracy id="1"]