Saturday, August 24 , 2019
ಸಾರ್ವಜನಿಕ ಆಟದ ಮೈದಾನ  ಸಿ ಎ ನಿವೇಶನವಾಗಿ ಹಂಚಿಕೆ | ಕಾಂಗ್ರೆಸ್ ಸಂಸದ ಬಿ.ಎನ್.ಚಂದ್ರಪ್ಪ ಕೈವಾಡ?

ಬೆಂಗಳೂರು(08.02.2019): ಬಿಬಿಎಂಪಿ ಅಧಿಕಾರಿಗಳು ಸಾರ್ವಜನಿಕ ಕಂದಾಯ ಹಣವನ್ನು ವ್ಯಯ ಮಾಡಿ ನಿರ್ಮಿಸಿದ್ದ ಮೈದಾನವನ್ನು ಇದೀಗ ಅಕ್ರಮವಾಗಿ ಸಿ ಎ ನಿವೇಶನವಾಗಿ ಹಂಚಲಾಗಿದ್ದು, ಈ ಮೈದಾನದಲ್ಲಿ ಇದೀಗ ಬಿಡಿಎ ತುಂಗಭದ್ರಾ ವಿದ್ಯಾಸಂಸ್ಥೆಯ ಕಟ್ಟಡವನ್ನು ನಿರ್ಮಿಸುತ್ತಿದ್ದು, ಚಿತ್ರದುರ್ಗ ಸಂಸದ ಬಿ.ಎನ್.ಚಂದ್ರಪ್ಪರವರು ತಮ್ಮ ಪ್ರಭಾವ ಬಳಸಿ ಕಟ್ಟಡ ನಿರ್ಮಿಸಲು ಕಾಮಗಾರಿ ಆರಂಭಿಸಿದ್ದಾರೆ ಎಂದು  ರಾಮಕೃಷ್ಣ ಮಕ್ಕಳ ಆಟದ ಮೈದಾನ ರಕ್ಷಣಾ ಸಮಿತಿ ಆರೋಪಿಸಿದ್ದು, ಸರಕಾರವು ತಕ್ಷಣವೇ ಈ ಕಾಮಗಾರಿಯನ್ನು ನಿಲ್ಲಿಸಿ ಸಂಬಂಧಪಟ್ಟವರ ವಿರುದ್ಧ ಕ್ರಮಕೈಗೊಳ್ಳುವಂತೆ ಆಗ್ರಹಿಸಿದೆ.

ನಂದಿನಿ ಬಡಾವಣೆ-ರಾಮಕೃಷ್ಣನಗರ ರೈಲ್ವೆಮೆನ್ ಎಚ್ ಬಿ ಸಿಎಸ್ ಲೇಔಟ್ ನಲ್ಲಿರುವ ಬಿಡಿಎಗೆ ಸೇರಿರುವ ಮಕ್ಕಳ ಆಟದ ಮೈದಾನವನ್ನು ಸಿಎ ನಿವೇಶನದಲ್ಲಿ  ಮೂವರು ಪ್ರಧಾವಿ ವ್ಯಕ್ತಿಗಳ ಸಂಸ್ಥೆಗಳಿಗೆ ಅಕ್ರಮವಾಗಿ ಹಂಚಲಾಗಿದೆ ಎನ್ನಲಾಗಿದೆ. ಇದರಿಂದಾಗಿ ಬಿಡಿಎ ತುಂಗಭದ್ರಾ ವಿದ್ಯಾಸಂಸ್ಥೆಯ ಬಿ.ಎನ್.ಚಂದ್ರಪ್ಪ  ತಮ್ಮ ಪ್ರಭಾವವನ್ನು ಬಳಸಿಕೊಂಡು  ಅಕ್ರಮವಾಗಿ ಕಟ್ಟಡ ನಿರ್ಮಾಣ ಮಾಡುವ ಮೂಲಕ ಸಾರ್ವಜನಿಕರ ವಿರುದ್ಧ ದೌರ್ಜನ್ಯ ನಡೆಸುತ್ತಿದ್ದು, ಇದರಲ್ಲಿ ಬಿಡಿಎ ಅಧಿಕಾರಿಗಳು ಶಾಮೀಲಾಗಿದ್ದಾರೆನ್ನುವ ಶಂಕೆಯನ್ನು ಸಮಿತಿಯು ವ್ಯಕ್ತಪಡಿಸಿದೆ.

10-12 ವರ್ಷಗಳ ಹಿಂದೆ ಬಿಡಿಎಗೆ ವ್ಯಾಪ್ತಿಗೆ ಸೇರಿದ್ದ ಖಾಲಿ ಮೈದಾನವನ್ನು ಸಾರ್ವಜನಿಕ ಕಂದಾಯ ಹಣವನ್ನು ವ್ಯಯ ಮಾಡಿ ಮಕ್ಕಳ ಆಟದ ಮೈದಾನವಾಗಿ ಬಿಬಿಎಂಪಿ ಅಧಿಕಾರಿಗಳು ಪರಿವರ್ತಿಸಿದ್ದರು. ಇದರಿಂದಾಗಿ ಇಲ್ಲಿನ ಸಾರ್ವಜನಿಕರು ಸ್ಥಳೀಯ ಶಾಲಾ ಮಕ್ಕಳಿಗೆ ಈ ಆಟದ ಮೈದಾನ ಬಹಳ ಉಪಯುಕ್ತವಾಗಿತ್ತು. ಇದಲ್ಲದೇ ಇಲ್ಲಿನ ಸ್ಥಳೀಯ ನಿವಾಸಿಗಳಿಗೆ ಈ ಮೈದಾನವನ್ನು ಬಿಟ್ಟರೆ ಬೇರಾವುದೇ ಮೈದಾನವೂ ಇಲ್ಲ. ಹೀಗಿರುವಾಗ ಇತ್ತೀಚೆಗೆ ಬಿಡಿಎ ವತಿಯಿಂದ ಬಿಡಿಎ ತುಂಗಭದ್ರಾ ವಿದ್ಯಾಸಂಸ್ಥೆ, ಮಹಾಲಕ್ಷ್ಮೀಪುರ ಬ್ರಾಹ್ಮಣ ಸಭಾ ಹಾಗೂ ತುಮಕೂರು ಹಾಲು ಉತ್ಪಾದಕರ ಸಂಘಗಳ ಒಕ್ಕೂಟ ಈ ಮೂರು ಪ್ರಭಾವಿ ಸಂಸ್ಥೆಗಳಿಗೆ ಅಕ್ರಮವಾಗಿ ಸಿ ಎ ನಿವೇಶನವಾಗಿ ಅಕ್ರಮವಾಗಿ ಹಂಚುವ ಮೂಲಕ ಇಲ್ಲಿನ ಸಾರ್ವಜನಿಕರಿಗೆ ಅನ್ಯಾಯ ಮಾಡಿದೆ.

ಈ ವ್ಯಾಪ್ತಿಯಲ್ಲಿರುವ ಏಕೈಕ ಆಟದ ಮೈದಾನವನ್ನು ಇಲ್ಲಿನ ಮಕ್ಕಳು, ಸಾರ್ವಜನಿಕರು ಅವಲಂಬಿಸಿದ್ದಾರೆ. ಓರ್ವ ಜನಪ್ರತಿನಿಧಿಯಾಗಿರುವ ಕಾಂಗ್ರೆಸ್ ಸಂಸದ ಬಿ.ಎನ್.ಚಂದ್ರಪ್ಪ ತಮ್ಮ ಪ್ರಭಾವವನ್ನು ಸಾರ್ವಜನಿಕ ಆಸ್ತಿಯನ್ನು ಸರ್ವನಾಶ ಮಾಡಲು ಬಳಸಿಕೊಳ್ಳುತ್ತಿರುವುದು ಎಷ್ಟು ಸರಿ? ಸಾರ್ವಜನಿಕರಿಗೆ ಉಪಯುಕ್ತವಾಗಿರುವ ಮೈದಾನದಲ್ಲಿ ಅಕ್ರಮವಾಗಿ ನಡೆಯುತ್ತಿರುವ ಕಾಮಕಾರಿಯನ್ನು ತಕ್ಷಣವೇ ನಿಲ್ಲಿಸಬೇಕು. ಇಲ್ಲವಾದಲ್ಲಿ ಇದರ ತೀವ್ರ ಪ್ರತಿಭಟನೆಯನ್ನು ಎದುರಿಸಬೇಕಾದೀತು ಎಂದು ರಾಮಕೃಷ್ಣ ಮಕ್ಕಳ ಆಟದ ಮೈದಾನ ರಕ್ಷಣಾ ಸಮಿತಿ ಎಚ್ಚರಿಕೆ ನೀಡಿದೆ.

Like us on facebook
Disclaimer:

ರಾಷ್ಟ್ರಧ್ವನಿ ಅಂತಾರ್ಜಾಲ ಸುದ್ದಿ ವಾಹಿನಿಯಲ್ಲಿ ಪ್ರಕಟವಾಗುವ ಸುದ್ದಿಗಳ ಕುರಿತು ಸಾರ್ವಜನಿಕರು ಆರೋಗ್ಯಕರ ಚರ್ಚೆ, ಕಮೆಂಟ್ ಗಳನ್ನು ಮಾಡಬಹುದಾಗಿದೆ. ಧರ್ಮ, ಜಾತಿ ನಿಂದನೆಯಾಗುವಂತಹ ಮತ್ತು ಸಾಮರಸ್ಯ ಕೆಡಿಸುವಂತಹ ದುರುದ್ದೇಶಪೂರಿತ ಕಮೆಂಟ್ ಹಾಗೂ ಚರ್ಚೆ ಕಾನೂನು ರೀತಿಯಲ್ಲಿ ಅಪರಾಧವಾಗಿರುತ್ತದೆ. ದೇಶದ ಕಾನೂನು ಸುವ್ಯವಸ್ಥೆಗೆ ಧಕ್ಕೆ ತರುವಂತಹ ಯಾವುದೇ ಕಮೆಂಟ್ ಗಳನ್ನು ಹಾಕಿದ್ದಲ್ಲಿ, ಅದಕ್ಕೆ ಕಮೆಂಟ್ ಹಾಕುವವರೇ ಹೊಣೆಗಾರರಾಗಿರುತ್ತಾರೆ. ಅಂತಹವರ ಹೆಸರು ಮತ್ತು ಐಪಿ ಅಡ್ರೆಸ್ ಗಳನ್ನು ಸಂಬಂಧಪಟ್ಟ ಇಲಾಖೆಗೆ ಒದಗಿಸಲು ರಾಷ್ಟ್ರಧ್ವನಿ ಬದ್ಧವಾಗಿರುತ್ತದೆ.

ಸಿನಿಮಾ
ಸಂಪಾದಕೀಯ ಮತ್ತಷ್ಟು
ಅಪಾಯಕಾರಿ ಅಣಕು ಕಾರ್ಯಾಚರಣೆಗಳಲ್ಲಿ ವಿದ್ಯಾರ್ಥಿಗಳನ್ನು ಬಳಕೆ..
ವಿಪತ್ತಿನ ಸಂದರ್ಭದಲ್ಲಿ ಅದರಿಂದ ಪಾರಾಗುವುದು ಹೇಗೆ ಎನ್ನುವುದರ ಬಗ್ಗೆ ವಿದ್ಯಾರ್ಥಿಗಳಲ್ಲಿ ಜಾಗೃತಿ ಮೂಡಿಸುವುದು ಒಳ್ಳೆಯ...
POLL

[democracy id="1"]