Saturday, September 19 , 2020
BREAKING NEWS
 
ಸೇತುವೆ ಕೊಚ್ಚಿ ಹೋಗಿ 30 ವರ್ಷವಾದರೂ ಸರ್ಕಾರ ನಿರ್ಮಿಸಲಿಲ್ಲ | ಸರ್ಕಾರಕ್ಕೆ ಮುಖಭಂಗವಾಗುವಂತೆ ತಾವೇ ಸೇತುವೆ ನಿರ್ಮಿಸಿದ ಗ್ರಾಮಸ್ಥರು ,          ಸೈಕಲ್ ನಲ್ಲಿ ತೆರಳಿದ್ದ ಬಾಲಕಿ ರಾತ್ರಿಯಾದರೂ ಬರಲಿಲ್ಲ! | ಬೆಳಗ್ಗೆ ಕಾದಿತ್ತು ಪೋಷಕರಿಗೆ ಶಾಕ್ | ಒಂದು ಮನಕರಗಿಸುವ ಘಟನೆ ,          ಕೊರೊನಾ ಹಾಟ್ ಸ್ಪಾಟ್ ಆದ ನಾಗಪುರದ ಆರೆಸ್ಸೆಸ್ ಕಚೇರಿ; 9 ಹಿರಿಯ ನಾಯಕರಿಗೆ ಕೋವಿಡ್ ಪಾಸಿಟಿವ್ ,          ಅಕುಲ್ ಬಾಲಾಜಿ ರೆಸಾರ್ಟ್ ನಲ್ಲಿ ನಡೆಯುತ್ತಿತ್ತಾ ಮತ್ತಿನ ದಂಧೆ | ಸ್ಟಾರ್ ನಟರ ಮೋಜು ಮಸ್ತಿಯ ಪಾರ್ಟಿಯಲ್ಲಿ ಡ್ರಗ್ಸ್ ನದ್ದೇ ಕಾರುಬಾರು! ,          ಈ ಬಾರಿಯ ದೆಹಲಿ ಪ್ರಯಾಣದಲ್ಲಿ ಆದ ಅನುಭವವೇನು? | ಸಿಎಂ ಯಡಿಯೂರಪ್ಪ ಏನು ಹೇಳಿದರು? ,          ಅಲ್ ಖೈದಾ ಭಯೋತ್ಪಾದಕರೆಂದು 9 ಮಂದಿಯ ಬಂಧಿಸಿದ ಎನ್ ಐಎ ,         
ಸಸ್ಯಾಹಾರಿಗಳಿಗಿಂತ ಮಾಂಸಾಹಾರಿಗಳೇ ಅತ್ಯಂತ ಆರೋಗ್ಯವಂತರು!

ಭಾರತದ ಮಾಧ್ಯಮಗಳ ಬಹುತೇಕ ವರದಿಗಳು ಮಾಂಸ ಆಹಾರಕ್ಕೆ ವಿರುದ್ಧವಾಗಿಯೇ ಇರುತ್ತದೆ. ಮಾಂಸ ಆಹಾರ ಕೆಟ್ಟದ್ದು, ಈ ಆಹಾರದಿಂದ ರೋಗಗಳು ಬರುತ್ತವೆ ಎನ್ನುವಂತಹ ಹಲವು ವರದಿಗಳನ್ನು ನೀವೂ ಓದಿರಬಹುದು. ಹೀಗಾಗಿ ಮಾಂಸ ಆಹಾರವನ್ನು ಸಂಶಯದಿಂದಲೇ ಸೇವಿಸುವಂತಹ ಪರಿಸ್ಥಿತಿ ಸದ್ಯ ಇದೆ. ಆದರೆ,  ಇದೀಗ ಮಾಂಸಾಹಾರಿಗಳಿಗೆ ಖುಷಿಯನ್ನುಂಟು ಮಾಡುವ ಸುದ್ದಿಯೊಂದು ದೊರೆತಿದ್ದು, ಅಮೆರಿಕನ್ ಕಾಲೇ ಆಫ್ ಫಿಸಿಶಿಯನ್ಸ್ ಪ್ರಕಟಿಸಿರುವ ‘ಅನ್ನಲ್ ಆಫ್ ಇಂಟರ್ನಲ್ ಮೆಡಿಸಿನ್ ಎಂಬ ವೈದ್ಯಕೀಯ ಅಧ್ಯಯನ ನಿಯತಕಾಲಿಕ ಸಂಶೋಧನಾ ವರದಿಯೊಂದನ್ನು ಪ್ರಕಟಿಸಿದ್ದು, ಈ ವರದಿಯ ಪ್ರಕಾರ ಮಾಂಸಾಹಾರಿಗಳೇ ನಿಜವಾಗಿಯೂ ಆರೋಗ್ಯವಂತರು ಎನ್ನುವ ಸತ್ಯ ಹೊರಹೊಮ್ಮಿದೆ.

ರೆಡ್ ಮೀಟ್ ಅಂದರೆ, ಕುರಿ, ಹಂದಿ ಮಾಂಸ ಹಾಗೂ ದನದ ಮಾಂಸ(ಬೀಫ್) ಆರೋಗ್ಯಕ್ಕೆ ಅತ್ಯುತ್ತಮ ಆಹಾರ. ಈ ಮಾಂಸಗಳಿಂದ ಆರೋಗ್ಯಕ್ಕೆ ಆಗುವ ಸಮಸ್ಯೆಗಳು ಬಹಳ ಕಡಿಮೆ ಎಂದು ವರದಿಯು ಹೇಳಿದೆ. ಮಾಂಸಾಹಾರದಿಂದ ಆರೋಗ್ಯಕ್ಕೆ ತೀರಾ ಕಡಿಮೆ ಪ್ರಮಾಣದ ಅಡ್ಡ ಪರಿಣಾಮಗಳಿರುತ್ತದೆ. ಈ ಬಗ್ಗೆ ಲಕ್ಷಾಂತರ ರೋಗಿಗಳ ಆರೋಗ್ಯವನ್ನು ಪರಿಶೀಲಿಸಿ ವರದಿ ತಯಾರಿಸಲಾಗಿದೆ ಎಂದು ವರದಿಯು ಹೇಳಿದೆ.

ಮಾಂಸಾಹಾರದಿಂದ ಆರೋಗ್ಯಕ್ಕೆ ಹಾನಿಯಾಗುತ್ತದೆ ಎಂದು ವಾದಿಸುವವರ ಬಳಿಯಲ್ಲಿ ಬಲವಾದ  ಸಾಕ್ಷ್ಯಗಳಿಲ್ಲ. ಆದರೆ, ಈ ವರದಿಯಲ್ಲಿ ಜನರ ಆಹಾರ ಕ್ರಮದಿಂದ ಮರಣ ಪ್ರಮಾಣ ಹಾಗೂ ಹೃದಯ ಸಂಬಂಧಿ ಸಮಸ್ಯೆಗಳು, ಕ್ಯಾನ್ಸರ್ ರೋಗ ಮತ್ತಿತರ ವಿಚಾರಗಳ ಮೇಲೆ ಹೇಗೆ ಪರಿಣಾಮ ಬೀರುತ್ತದೆ ಎನ್ನುವುದನ್ನು ಹೇಳಲಾಗಿದೆ.

ಮಾಂಸಾಹಾರದಿಂದ ಯಾವುದೇ ತೊಂದರೆಗಳಿಲ್ಲ. ಶುದ್ಧವಾಗಿ ಅಡುಗೆ ಮಾಡುವುದರಿಂದ ಯಾವುದೇ ತೊಂದರೆಗಳು ಬರುವುದಿಲ್ಲ. ಆ ರೀತಿಯಾಗಿ ಸಸ್ಯಾಹಾರವೇ ಶ್ರೇಷ್ಠ ಎನ್ನುವುದಾದರೆ ಪ್ರಸ್ತುತ ಕೀಟನಾಶಕಗಳ ಬಳಕೆಯಿಂದ ಬೆಳೆಯುತ್ತಿರುವ ಸಸ್ಯಗಳೇ ನಿಜವಾಗಿಯೂ ಮಾಂಸಾಹಾರಕ್ಕಿಂತ ಅಜಗಜಾಂತರ ವ್ಯತ್ಯಾಸದಲ್ಲಿ ಆರೋಗ್ಯಕ್ಕೆ ಪರಿಣಾಮ ಬೀರಬಹುದು. ಈ ವರದಿಯ ಪ್ರಕಾರ ಸಸ್ಯಾಹಾರಕ್ಕಿಂತ ಮಾಂಸಾಹಾರವೇ ಶ್ರೇಷ್ಠ ಆಹಾರ.

Like us on facebook
Disclaimer:

ರಾಷ್ಟ್ರಧ್ವನಿ ಅಂತಾರ್ಜಾಲ ಸುದ್ದಿ ವಾಹಿನಿಯಲ್ಲಿ ಪ್ರಕಟವಾಗುವ ಸುದ್ದಿಗಳ ಕುರಿತು ಸಾರ್ವಜನಿಕರು ಆರೋಗ್ಯಕರ ಚರ್ಚೆ, ಕಮೆಂಟ್ ಗಳನ್ನು ಮಾಡಬಹುದಾಗಿದೆ. ಧರ್ಮ, ಜಾತಿ ನಿಂದನೆಯಾಗುವಂತಹ ಮತ್ತು ಸಾಮರಸ್ಯ ಕೆಡಿಸುವಂತಹ ದುರುದ್ದೇಶಪೂರಿತ ಕಮೆಂಟ್ ಹಾಗೂ ಚರ್ಚೆ ಕಾನೂನು ರೀತಿಯಲ್ಲಿ ಅಪರಾಧವಾಗಿರುತ್ತದೆ. ದೇಶದ ಕಾನೂನು ಸುವ್ಯವಸ್ಥೆಗೆ ಧಕ್ಕೆ ತರುವಂತಹ ಯಾವುದೇ ಕಮೆಂಟ್ ಗಳನ್ನು ಹಾಕಿದ್ದಲ್ಲಿ, ಅದಕ್ಕೆ ಕಮೆಂಟ್ ಹಾಕುವವರೇ ಹೊಣೆಗಾರರಾಗಿರುತ್ತಾರೆ. ಅಂತಹವರ ಹೆಸರು ಮತ್ತು ಐಪಿ ಅಡ್ರೆಸ್ ಗಳನ್ನು ಸಂಬಂಧಪಟ್ಟ ಇಲಾಖೆಗೆ ಒದಗಿಸಲು ರಾಷ್ಟ್ರಧ್ವನಿ ಬದ್ಧವಾಗಿರುತ್ತದೆ.

ಸಿನಿಮಾ
ಸಂಪಾದಕೀಯ ಮತ್ತಷ್ಟು
ಸಂವಿಧಾನಾತ್ಮಕ ಸದನಗಳಲ್ಲಿ ಪಾಸ್ ಆಗುತ್ತಿದೆ ‘ಹಿಂದೂ..
ದ್ವೇಷಪೂರಿತ, ಅಸಂವಿಧಾನಿಕ ಪೌರತ್ವ ತಿದ್ದುಪಡಿ ಮಸೂದೆ ಉಭಯ ಸದನಗಳಲ್ಲಿ ಅಂಗೀಕಾರವಾಗಿದೆ. ಇನ್ನು ರಾಷ್ಟ್ರಪತಿ ಅಂಕಿತ...
POLL

[democracy id="1"]