Saturday, June 15 , 2019
ಸರ್ವಜ್ಞ ನಗರದಲ್ಲಿ ಹಿದಾಯತ್ ಉಲ್ಲಾಗೆ ಟಿಪ್ಪು ಕ್ರಾಂತಿ ಸೇನೆ ಬೆಂಬಲ

ಬೆಂಗಳೂರು(04.05.2018): ಸರ್ವಜ್ಞ ನಗರದಿಂದ ಸ್ಪರ್ಧಿಸುತ್ತಿರುವ ಎಸ್.ಸೈಯದ್ ಹಿದಾಯತ್ ಉಲ್ಲಾ ಅವರಿಗೆ ಟಿಪ್ಪು ಕ್ರಾಂತಿ ಸೇನೆ ಕರ್ನಾಟಕ ಬೆಂಗಳೂರು ಸಮಿತಿ ಬೆಂಬಲ ನೀಡುತ್ತದೆ ಎಂದು ಸೇನೆಯ ರಾಜ್ಯಾಧ್ಯಕ್ಷ ಖಾಲೀದ್ ಖಾನ್ ಮತ್ತು ಬೆಂಗಳೂರು ನಗರಾಧ್ಯಕ್ಷ ಸೈಯದ್ ತನ್ ಜೀರ್ ತಿಳಿಸಿದ್ದಾರೆ.

ಕರ್ನಾಟಕ ವಿಧಾನಸಭಾ ಚುನಾವಣೆಯಲ್ಲಿ ಟಿಪ್ಪು ಕ್ರಾಂತಿ ಸೇನೆ ಬೆಂಗಳೂರು ಸಮಿತಿಯು ಜಾತ್ಯತೀತ ಅಭ್ಯರ್ಥಿಗಳನ್ನು ಬೆಂಬಲಿಸಲು ಉದ್ದೇಶಿಸಿದ್ದು, ಬೆಂಗಳೂರಿನಲ್ಲಿ ಎಂಇಪಿ ಪಕ್ಷದಿಂದ ಸ್ಪರ್ಧಿಸುತ್ತಿರುವ ಎಸ್.ಸೈಯದ್ ಹಿದಾಯತ್ತುಲ್ಲಾ ಅವರಿಗೆ ಟಿಪ್ಪು ಕ್ರಾಂತಿ ಸೇನೆ ಬೆಂಬಲವನ್ನು ನೀಡುತ್ತದೆ ಎಂದು ಅವರು ತಿಳಿಸಿದ್ದಾರೆ.

ಹಿದಾಯತ್‍ಉಲ್ಲಾ ಅವರು ಒಬ್ಬ ಜಾತ್ಯತೀತ ವ್ಯಕ್ತಿಯಾಗಿದ್ದಾರೆ. ಎಲ್ಲಾ ಸಮುದಾಯಗಳ ಪರವಾಗಿ ಧ್ವನಿಯೆತ್ತುವವರಾಗಿದ್ದಾರೆ. ಸಮಾನ ಸಮಾಜವನ್ನು ನಿರ್ಮಿಸಲು ಸೈಯದ್ ಹಿದಾಯತ್ತುಲ್ಲಾ ಅವರಂತಹ ಅಭ್ಯರ್ಥಿಗಳು ಚುನಾವಣಾ ಕಣಕ್ಕೆ ಇಳಿದಿರುವುದು ಸ್ವಾಗತಾರ್ಹವಾಗಿದೆ. ರಾಜ್ಯದಲ್ಲಿ ಬಡವರ, ಹಿಂದುಳಿದವರ, ಎಸ್‍ಸಿ-ಎಸ್‍ಟಿ, ಅಲ್ಪಸಂಖ್ಯಾತರ ಪರವಾಗಿ ಧ್ವನಿಯೆತ್ತುವ ಅಭ್ಯರ್ಥಿಗಳು ಕಡಿಮೆಯಿದ್ದು, ಕೇವಲ ಆರೋಪ ಮತ್ತು ಪ್ರತ್ಯಾರೋಪಗಳನ್ನು ಮಾಡುತ್ತ ಮತಗಳಿಸುವ ಬೇಟೆ ಮಾತ್ರವೇ ನಡೆಯುತ್ತಿದೆ. ಇಂತಹ ಸಂದರ್ಭದಲ್ಲಿ ಟಿಪ್ಪು ಕ್ರಾಂತಿ ಸೇನೆಯು ಯಾವುದೇ ಪಕ್ಷವನ್ನು ಬೆಂಬಲಿಸದೇ ಜಾತ್ಯತೀತ ಅಭ್ಯರ್ಥಿಗಳನ್ನು ಮಾತ್ರವೇ ಬೆಂಬಲಿಸುತ್ತದೆ ಎಂದು ಅವರು ಹೇಳಿದ್ದಾರೆ.

ಸರ್ವಜ್ಞ ನಗರದಿಂದ ಸ್ಪರ್ಧಿಸುತ್ತಿರುವ ಹಿದಾಯತ್‍ಉಲ್ಲಾ ಅವರು ಸದಾ ಜನರೊಂದಿಗೆ ಬೆರೆಯುವ ವ್ಯಕ್ತಿಯಾಗಿದ್ದು, ಎಲ್ಲಾ ಸಮುದಾಯ, ಧರ್ಮದ ಜನರೊಂದಿಗೆ ಆತ್ಮೀಯವಾಗಿದ್ದು, ಸರ್ವಜ್ಞ ನಗರದಲ್ಲಿ ಜನಪ್ರಿಯರಾಗಿದ್ದಾರೆ. ಹೀಗಾಗಿ ಈ ಬಾರಿ ಅವರು ಗೆಲುವು ಸಾಧಿಸುವುದರಲ್ಲಿ ಯಾವುದೇ ಸಂಶಯವಿಲ್ಲ ಎಂದು ಅವರು ಪ್ರಕಟಣೆಯಲ್ಲಿ ತಿಳಿಸಿದ್ದಾರೆ.

Like us on facebook
Disclaimer:

ರಾಷ್ಟ್ರಧ್ವನಿ ಅಂತಾರ್ಜಾಲ ಸುದ್ದಿ ವಾಹಿನಿಯಲ್ಲಿ ಪ್ರಕಟವಾಗುವ ಸುದ್ದಿಗಳ ಕುರಿತು ಸಾರ್ವಜನಿಕರು ಆರೋಗ್ಯಕರ ಚರ್ಚೆ, ಕಮೆಂಟ್ ಗಳನ್ನು ಮಾಡಬಹುದಾಗಿದೆ. ಧರ್ಮ, ಜಾತಿ ನಿಂದನೆಯಾಗುವಂತಹ ಮತ್ತು ಸಾಮರಸ್ಯ ಕೆಡಿಸುವಂತಹ ದುರುದ್ದೇಶಪೂರಿತ ಕಮೆಂಟ್ ಹಾಗೂ ಚರ್ಚೆ ಕಾನೂನು ರೀತಿಯಲ್ಲಿ ಅಪರಾಧವಾಗಿರುತ್ತದೆ. ದೇಶದ ಕಾನೂನು ಸುವ್ಯವಸ್ಥೆಗೆ ಧಕ್ಕೆ ತರುವಂತಹ ಯಾವುದೇ ಕಮೆಂಟ್ ಗಳನ್ನು ಹಾಕಿದ್ದಲ್ಲಿ, ಅದಕ್ಕೆ ಕಮೆಂಟ್ ಹಾಕುವವರೇ ಹೊಣೆಗಾರರಾಗಿರುತ್ತಾರೆ. ಅಂತಹವರ ಹೆಸರು ಮತ್ತು ಐಪಿ ಅಡ್ರೆಸ್ ಗಳನ್ನು ಸಂಬಂಧಪಟ್ಟ ಇಲಾಖೆಗೆ ಒದಗಿಸಲು ರಾಷ್ಟ್ರಧ್ವನಿ ಬದ್ಧವಾಗಿರುತ್ತದೆ.

ಸಿನಿಮಾ
ಸಂಪಾದಕೀಯ ಮತ್ತಷ್ಟು
ಅಪಾಯಕಾರಿ ಅಣಕು ಕಾರ್ಯಾಚರಣೆಗಳಲ್ಲಿ ವಿದ್ಯಾರ್ಥಿಗಳನ್ನು ಬಳಕೆ..
ವಿಪತ್ತಿನ ಸಂದರ್ಭದಲ್ಲಿ ಅದರಿಂದ ಪಾರಾಗುವುದು ಹೇಗೆ ಎನ್ನುವುದರ ಬಗ್ಗೆ ವಿದ್ಯಾರ್ಥಿಗಳಲ್ಲಿ ಜಾಗೃತಿ ಮೂಡಿಸುವುದು ಒಳ್ಳೆಯ...