Wednesday, October 23 , 2019
ಸಂಚಾರಿ ನಿಯಮ ಉಲ್ಲಂಘನೆ | ದಂಡದ ಪ್ರಮಾಣ ಇಳಿಕೆ | ಇಳಿಕೆಯಾದ ಪ್ರಮಾಣ ಎಷ್ಟು?

ಬೆಂಗಳೂರು(21.09.2019): ಹೊಸ ಮೋಟಾರು ವಾಹನ ಕಾಯ್ದೆ ಪ್ರಕಾರ ಭಾರೀ ದಂಡದಿಂದ ರೋಸಿ ಹೋಗಿದ್ದ ಜನರಿಗೆ ಸ್ವಲ್ಪ ರಿಲೀಫ್ ದೊರೆತಿದ್ದು, ಗುಜರಾತ್ ಬಳಿಕ ಕರ್ನಾಟಕ ಸರ್ಕಾರ ಇದೀಗ ದುಬಾರಿ ದಂಡದ ಪ್ರಮಾಣವನ್ನು ಇಳಿಸಿದೆ.

ಈ ಬಗ್ಗೆ ಇಂದು ರಾಜ್ಯ ಸರಕಾರ ಗೆಜೆಟ್ ನೋಟಿಫಿಕೇಶನ್ ಹೊರಡಿಸಿದ್ದು,  ಕುಡಿದು ವಾಹನ ಚಾಲನೆ ಮಾಡಿದವರಿಗೆ 10 ಸಾವಿರ ದಂಡವನ್ನು ಖಾಯಂಗೊಳಿಸಲಾಗಿದ್ದು, ಉಳಿದ ದಂಡಗಳ ಪ್ರಮಾಣವನ್ನು ಕೊಂಚ ಇಳಿಸಲಾಗಿದೆ.

ಹೆಲ್ಮೆಟ್ ರಹಿತ ಚಾಲನೆಗೆ 1 ಸಾವಿರ ದಂಡ ಹಾಕಲಾಗುತ್ತಿತ್ತು. ಈಗ ಈ ದಂಡದ ಪ್ರಮಾಣವನ್ನು 500ಕ್ಕೆ ಇಳಿಸಲಾಗಿದೆ.

ಸೀಟ್ ಬೆಲ್ಟ್ ರಹಿತ ಪ್ರಯಾಣಕ್ಕೆ 1 ಸಾವಿರ ದಂಡ ವಿಧಿಸಲಾಗುತ್ತಿತ್ತು. ಈಗ 500ಕ್ಕೆ ಇಳಿಸಲಾಗಿದೆ.

  ► ಪರವಾನಗಿ ರಹಿತ ಬೈಕ್ ಗೆ 5 ಸಾವಿರ ದಂಡ ವಿಧಿಸಲಾಗಿತ್ತು. ಈಗ 1 ಸಾವಿರಕ್ಕೆ ಇಳಿಸಲಾಗಿದೆ.

ಪರವಾನಗಿ ರಹಿತ ಕಾರು, ಜೀಪಿಗೆ 5 ಸಾವಿರ ದಂಡ ವಿಧಿಸಲಾಗಿತ್ತು. ಈಗ 2 ಸಾವಿರಕ್ಕೆ ಇಳಿಸಲಾಗಿದೆ.

ಪರವಾನಗಿ ರಹಿತ ಭಾರೀ ವಾಹನಗಳಿಗೆ 5 ಸಾವಿರ ದಂಡ ವಿಧಿಸಲಾಗಿತ್ತು. ಈಗ 4 ಸಾವಿರ ದಂಡ ಇಳಿಸಲಾಗಿದೆ.

ನೋಂದಣಿಯಾಗದ ಬೈಕ್ ಗ 5 ಸಾವಿರ ದಂಡ ವಿಧಿಸಲಾಗಿತ್ತು. ಈಗ 2 ಸಾವಿರಕ್ಕೆ ಇಳಿಸಲಾಗಿದೆ.

ಕುಡಿದು ವಾಹನ ಚಲಾಯಿಸಿದವರಿಗೆ 10 ಸಾವಿರ ದಂಡ ವಿಧಿಸಲಾಗಿತ್ತು. ಈ ದಂಡದಲ್ಲಿ ಯಾವುದೇ ಬದಲಾವಣೆ ಮಾಡಲಾಗಿಲ್ಲ.

Like us on facebook
Disclaimer:

ರಾಷ್ಟ್ರಧ್ವನಿ ಅಂತಾರ್ಜಾಲ ಸುದ್ದಿ ವಾಹಿನಿಯಲ್ಲಿ ಪ್ರಕಟವಾಗುವ ಸುದ್ದಿಗಳ ಕುರಿತು ಸಾರ್ವಜನಿಕರು ಆರೋಗ್ಯಕರ ಚರ್ಚೆ, ಕಮೆಂಟ್ ಗಳನ್ನು ಮಾಡಬಹುದಾಗಿದೆ. ಧರ್ಮ, ಜಾತಿ ನಿಂದನೆಯಾಗುವಂತಹ ಮತ್ತು ಸಾಮರಸ್ಯ ಕೆಡಿಸುವಂತಹ ದುರುದ್ದೇಶಪೂರಿತ ಕಮೆಂಟ್ ಹಾಗೂ ಚರ್ಚೆ ಕಾನೂನು ರೀತಿಯಲ್ಲಿ ಅಪರಾಧವಾಗಿರುತ್ತದೆ. ದೇಶದ ಕಾನೂನು ಸುವ್ಯವಸ್ಥೆಗೆ ಧಕ್ಕೆ ತರುವಂತಹ ಯಾವುದೇ ಕಮೆಂಟ್ ಗಳನ್ನು ಹಾಕಿದ್ದಲ್ಲಿ, ಅದಕ್ಕೆ ಕಮೆಂಟ್ ಹಾಕುವವರೇ ಹೊಣೆಗಾರರಾಗಿರುತ್ತಾರೆ. ಅಂತಹವರ ಹೆಸರು ಮತ್ತು ಐಪಿ ಅಡ್ರೆಸ್ ಗಳನ್ನು ಸಂಬಂಧಪಟ್ಟ ಇಲಾಖೆಗೆ ಒದಗಿಸಲು ರಾಷ್ಟ್ರಧ್ವನಿ ಬದ್ಧವಾಗಿರುತ್ತದೆ.

ಸಿನಿಮಾ
ಸಂಪಾದಕೀಯ ಮತ್ತಷ್ಟು
ಕನ್ನಡ ಉಳಿಸುವ ಜವಾಬ್ದಾರಿ ಬಡ ಮಕ್ಕಳಿಗೆ..
ಸರಕಾರಿ ಆಂಗ್ಲ ಮಾಧ್ಯಮ ಶಾಲೆಯ ಆದೇಶವನ್ನು ಹಿಂಪಡೆಯಲು ಕರ್ನಾಟಕ ಕೈಗಾರಿಕಾ ಮತ್ತು ವಾಣಿಜ್ಯೋದ್ಯಮ ಕನ್ನಡ...
POLL

[democracy id="1"]