Friday, August 23 , 2019
ವಿಶ್ವದ ಅತೀ ವೇಗದ ಬುಲೆಟ್‌ ರೈಲಿನ ಪರೀಕ್ಷಾರ್ಥ ಸಂಚಾರ ಆರಂಭಿಸಿದ ಜಪಾನ್‌

ಟೋಕಿಯೊ(13/05/2019):  ವಿಶ್ವದ ಅತೀವೇಗದ ಹಾಗೂ ಗಂಟೆಗೆ 400 ಕಿ.ಮೀ ವೇಗದಲ್ಲಿ ಕ್ರಮಿಸಬಲ್ಲ, ಹೊಸ ತಲೆಮಾರಿನ ಬುಲೆಟ್‌ ರೈಲಿನ ಪರೀಕ್ಷಾರ್ಥ ಸಂಚಾರವನ್ನು ಜಪಾನ್‌  ಆರಂಭಿಸಿದೆ.

ಆಲ್ಫಾ-ಎಕ್ಸ್‌ ಹೆಸರಿನ ಈ ರೈಲು ಜಪಾನ್‌ನ ಹಳಿಗಳ ಮೇಲೆ ಇನ್ನೂ ಮೂರು ವರ್ಷಗಳ ಕಾಲ ಪ್ರಯೋಗಾರ್ಥ ಸಂಚಾರ ನಡೆಸಲಿದೆ. 2030ರ ವೇಳೆಗೆ ಈ ರೈಲು ನಾಗರಿಕರ ಪ್ರಯಾಣಕ್ಕೆ ಲಭ್ಯವಾಗಲಿದೆ. ಈ ರೈಲಿನ ವೇಗ ಮಿತಿಯು ಕ್ರಮೇಣ ಗಂಟೆಗೆ 360 ಕಿ.ಮೀಗೆ ಮಿತಿಗೊಳಿಸಲಾಗುತ್ತದೆ ಎಂದು ಹೇಳಲಾಗಿದೆ. ಆದರೂ, ಜಗತ್ತಿನ ಅತೀ ವೇಗದ ರೈಲು ಎಂಬ ಹೆಗ್ಗಳಿಕೆಗೆ ಅಲ್ಫಾ-ಎಕ್ಸ್‌ ಪಾತ್ರವಾಗಿದೆ. ಸದ್ಯ ಚೀನಾದಲ್ಲಿರುವ ಫುಕ್ಸಿಂಗ್‌ ಎಂಬ ಬುಲೆಟ್‌ ರೈಲು ಆಲ್ಫಾಗಿಂತಲೂ 10 ಕಿ.ಮೀ ಕಡಿಮೆ ವೇಗವಾಗಿ ಕ್ರಮಿಸುತ್ತದಷ್ಟೆ.

ಈ ರೈಲನನ್ನು ಜಪಾನ್‌ನ ಸೆಂಡೈ ಮತ್ತು ಅಮೋರಿ ನಗರಗಳ ನಡುವೆ ಪರೀಕ್ಷಾರ್ಥವಾಗಿ ಓಡಿಸಲಾಗುತ್ತಿದೆ.

Like us on facebook
Disclaimer:

ರಾಷ್ಟ್ರಧ್ವನಿ ಅಂತಾರ್ಜಾಲ ಸುದ್ದಿ ವಾಹಿನಿಯಲ್ಲಿ ಪ್ರಕಟವಾಗುವ ಸುದ್ದಿಗಳ ಕುರಿತು ಸಾರ್ವಜನಿಕರು ಆರೋಗ್ಯಕರ ಚರ್ಚೆ, ಕಮೆಂಟ್ ಗಳನ್ನು ಮಾಡಬಹುದಾಗಿದೆ. ಧರ್ಮ, ಜಾತಿ ನಿಂದನೆಯಾಗುವಂತಹ ಮತ್ತು ಸಾಮರಸ್ಯ ಕೆಡಿಸುವಂತಹ ದುರುದ್ದೇಶಪೂರಿತ ಕಮೆಂಟ್ ಹಾಗೂ ಚರ್ಚೆ ಕಾನೂನು ರೀತಿಯಲ್ಲಿ ಅಪರಾಧವಾಗಿರುತ್ತದೆ. ದೇಶದ ಕಾನೂನು ಸುವ್ಯವಸ್ಥೆಗೆ ಧಕ್ಕೆ ತರುವಂತಹ ಯಾವುದೇ ಕಮೆಂಟ್ ಗಳನ್ನು ಹಾಕಿದ್ದಲ್ಲಿ, ಅದಕ್ಕೆ ಕಮೆಂಟ್ ಹಾಕುವವರೇ ಹೊಣೆಗಾರರಾಗಿರುತ್ತಾರೆ. ಅಂತಹವರ ಹೆಸರು ಮತ್ತು ಐಪಿ ಅಡ್ರೆಸ್ ಗಳನ್ನು ಸಂಬಂಧಪಟ್ಟ ಇಲಾಖೆಗೆ ಒದಗಿಸಲು ರಾಷ್ಟ್ರಧ್ವನಿ ಬದ್ಧವಾಗಿರುತ್ತದೆ.

ಸಿನಿಮಾ
ಸಂಪಾದಕೀಯ ಮತ್ತಷ್ಟು
ಅಪಾಯಕಾರಿ ಅಣಕು ಕಾರ್ಯಾಚರಣೆಗಳಲ್ಲಿ ವಿದ್ಯಾರ್ಥಿಗಳನ್ನು ಬಳಕೆ..
ವಿಪತ್ತಿನ ಸಂದರ್ಭದಲ್ಲಿ ಅದರಿಂದ ಪಾರಾಗುವುದು ಹೇಗೆ ಎನ್ನುವುದರ ಬಗ್ಗೆ ವಿದ್ಯಾರ್ಥಿಗಳಲ್ಲಿ ಜಾಗೃತಿ ಮೂಡಿಸುವುದು ಒಳ್ಳೆಯ...
POLL

[democracy id="1"]