Thursday, December 12 , 2019
ವಿಶ್ವದಲ್ಲೇ ಮೊದಲು; ಪುರುಷರಿಗಾಗಿ ಗರ್ಭ ನಿರೋಧಕ ಚುಚ್ಚುಮದ್ದು ಆವಿಷ್ಕಾರ

ನವದೆಹಲಿ(21-11-2019): ಪುರುಷರಿಗಾಗಿ ಗರ್ಭ ನಿರೋಧಕ ಚುಚ್ಚುಮದ್ದನ್ನು ಭಾರತೀಯ ವಿಜ್ಞಾನಿಗಳು ಕಂಡು ಹಿಡಿದಿದ್ದು, ವೈದ್ಯಕೀಯ ಲೋಕಕ್ಕೆ ಸವಾಲಾಗಿದ್ದ ಪುರುಷರ ಮೂಲಕ ಸಾಧ್ಯವಾಗುವ ಗರ್ಭ ನಿರೋಧಕ ಚುಚ್ಚುಮದ್ದು ಆವಿಷ್ಕಾರ ಮಾಡಲಾಗಿದೆ.

ಈ ಕುರಿತು ಐಸಿಎಂಆರ್ ವಿಜ್ಞಾನಿ ಡಾ.ಆರ್ ಎಸ್ ಶರ್ಮಾ ಮಾಹಿತಿ ನೀಡಿದ್ದು,  ಈ ಮೊದಲು ವ್ಯಾಸೆಕ್ಟಮಿ ಎಂಬ ಸಂತಾನ ಹರಣ ಶಸ್ತ್ರಚಿಕಿತ್ಸೆ ಮಾತ್ರ ಮಾಡಲಾಗುತ್ತಿತ್ತು. ಇದಕ್ಕೆ ಪುರುಷರು ಮುಂದಾಗುತ್ತಿರಲಿಲ್ಲ. ಹೊಸ ಆವಿಷ್ಕಾರಗೊಂಡ ಚುಚ್ಚುಮದ್ದಿನ್ನು ವೃಷಣದ ಬಳಿ ವೀರ್ಯಾಣು ಹೊಂದಿದ ಕೊಳವೆಗೆ ಚುಚ್ಚ ಬೇಕಾಗುತ್ತದೆ. ಒಮ್ಮೆ ಈ ಇಂಜೆಕ್ಷನ್ ತೆಗೆದರೆ 13 ವರ್ಷಗಳ ಕಾಲ ಲೈಂಗಿಕ ಕ್ರಿಯೆ ನಡೆಸಿದರೂ, ಸಂತೋನೋತ್ಪತ್ತಿಯಾಗುವುದಿಲ್ಲ ಎಂದು ತಿಳಿಸಿದ್ದಾರೆ.

ಭಾರತೀಯ ವೈದ್ಯಕೀಯ ಸಂಶೋಧನಾ ಮಂಡಳಿಯ ಆವಿಷ್ಕಾರ ವಿಶ್ವದಲ್ಲೇ ಮೊದಲ ಪ್ರಯತ್ನ ಎನ್ನಲಾಗಿದ್ದು, ಔಷಧೀಯ ನಿಯಂತ್ರಣ ನಿರ್ದೇಶನಾಲಯದ ಅನುಮತಿ ದೊರೆತರೆ ಈ ಔಷಧಿ ಉತ್ಪಾದನೆಯಾಗಿ ಮಾರುಕಟ್ಟೆಗೆ ಬರಲಿದೆ.

Like us on facebook
Disclaimer:

ರಾಷ್ಟ್ರಧ್ವನಿ ಅಂತಾರ್ಜಾಲ ಸುದ್ದಿ ವಾಹಿನಿಯಲ್ಲಿ ಪ್ರಕಟವಾಗುವ ಸುದ್ದಿಗಳ ಕುರಿತು ಸಾರ್ವಜನಿಕರು ಆರೋಗ್ಯಕರ ಚರ್ಚೆ, ಕಮೆಂಟ್ ಗಳನ್ನು ಮಾಡಬಹುದಾಗಿದೆ. ಧರ್ಮ, ಜಾತಿ ನಿಂದನೆಯಾಗುವಂತಹ ಮತ್ತು ಸಾಮರಸ್ಯ ಕೆಡಿಸುವಂತಹ ದುರುದ್ದೇಶಪೂರಿತ ಕಮೆಂಟ್ ಹಾಗೂ ಚರ್ಚೆ ಕಾನೂನು ರೀತಿಯಲ್ಲಿ ಅಪರಾಧವಾಗಿರುತ್ತದೆ. ದೇಶದ ಕಾನೂನು ಸುವ್ಯವಸ್ಥೆಗೆ ಧಕ್ಕೆ ತರುವಂತಹ ಯಾವುದೇ ಕಮೆಂಟ್ ಗಳನ್ನು ಹಾಕಿದ್ದಲ್ಲಿ, ಅದಕ್ಕೆ ಕಮೆಂಟ್ ಹಾಕುವವರೇ ಹೊಣೆಗಾರರಾಗಿರುತ್ತಾರೆ. ಅಂತಹವರ ಹೆಸರು ಮತ್ತು ಐಪಿ ಅಡ್ರೆಸ್ ಗಳನ್ನು ಸಂಬಂಧಪಟ್ಟ ಇಲಾಖೆಗೆ ಒದಗಿಸಲು ರಾಷ್ಟ್ರಧ್ವನಿ ಬದ್ಧವಾಗಿರುತ್ತದೆ.

ಸಿನಿಮಾ
ಸಂಪಾದಕೀಯ ಮತ್ತಷ್ಟು
ಸಂವಿಧಾನಾತ್ಮಕ ಸದನಗಳಲ್ಲಿ ಪಾಸ್ ಆಗುತ್ತಿದೆ ‘ಹಿಂದೂ..
ದ್ವೇಷಪೂರಿತ, ಅಸಂವಿಧಾನಿಕ ಪೌರತ್ವ ತಿದ್ದುಪಡಿ ಮಸೂದೆ ಉಭಯ ಸದನಗಳಲ್ಲಿ ಅಂಗೀಕಾರವಾಗಿದೆ. ಇನ್ನು ರಾಷ್ಟ್ರಪತಿ ಅಂಕಿತ...
POLL

[democracy id="1"]