Sunday, May 31 , 2020
ವಿದೇಶಿ ನೆರವುಗಳನ್ನು ನಿರಾಕರಿಸಿದ ಮೋದಿಯನ್ನು ವಿಡಂಬನೆ ಮಾಡಿದ ಕೇರಳಿಗರು

ಕೇರಳಕ್ಕೆ ವಿದೇಶಗಳ ಸಹಾಯವನ್ನು ನಿರಾಕರಿಸಿದ ಪ್ರಧಾನಿ ಮೋದಿ ನಡೆಯನ್ನು ಕೇರಳೀಯರು ವಿಡಂಬನೆ ಮಾಡಿದ್ದು, ಈ ಬಗ್ಗೆ ಒಂದು ವಿಡಿಯೋವನ್ನು ಸಾಮಾಜಿಕ ಜಾಲತಾಣಗಳಲ್ಲಿ ಹರಿಬಿಟ್ಟಿದ್ದು ವಿಡಿಯೋ ಇದೀಗ ಭಾರೀ  ವೈರಲ್ ಆಗಿದೆ.

ವಿದೇಶದಿಂದ ಕೇರಳಕ್ಕೆ ಕೋಟಿಗಟ್ಟಲೆ ನೆರವು ಬರುವುದನ್ನು ನಿರಾಕರಿಸಿರುವ ಮೋದಿ ಅವರನ್ನೂ ಕೊಡಲು ಬಿಡದೇ, ತಾನು ಕೇರಳದ ಅಭಿವೃದ್ಧಿಗೆ ನೀಡಿರುವ ಹಣ ಎಲ್ಲಿಗೂ ಸಾಕಾಗುತ್ತಿಲ್ಲ ಎಂದು ಈ ದೃಶ್ಯದಲ್ಲಿ ಚಿತ್ರಿಸಲಾಗಿದೆ.

ದೃಶ್ಯದಲ್ಲಿರುವಂತೆ, ಕೇರಳೀಯರು ಪ್ರವಾಹದಿಂದ ಕಂಗಾಲಾಗಿ ಕುಳಿತಿರುತ್ತಾರೆ. ಈ ವೇಳೆ ಅರೇಬಿಯೊಬ್ಬ ನೆರವಿನ ಹಣವನ್ನು ಹೊತ್ತು ತರುತ್ತಾನೆ. ಈ ವೇಳೆ ಮೋದಿಯ ಪಾತ್ರಧಾರಿಯೊಬ್ಬ ಅಡ್ಡ ಬರುತ್ತಾನೆ. ಮೋದಿಯ ಹಿಂದೆಯೇ ಒಬ್ಬ ಕೇಸರಿ ಧರಿಸಿದ ಕಾರ್ಯಕರ್ತನೋರ್ವ ಬರುತ್ತಾನೆ. ಅರೇಬಿಯನ್ನು ದೊಣ್ಣ ಹಿಡಿದು ಓಡಿಸುತ್ತಾನೆ. ಬಳಿಕ ಮೋದಿ ಪಾತ್ರಧಾರಿ ತನ್ನ ಜೇಬಿನಿಂದ ಹಣವನ್ನು ಲೆಕ್ಕ ಮಾಡಿ ಬರೇ ಇಪ್ಪತ್ತು ರೂಪಾಯಿ ನೀಡಿ ಮುಂದೆ ಸಾಗುತ್ತಾನೆ. ಇದನ್ನು ನೋಡಿ ಕೇರಳೀರು ಶಾಕ್ ಆದ್ರೆ, ಕೇಸರಿ ಕಾರ್ಯಕರ್ತ ಭಾರೀ ಮೆಚ್ಚುಗೆಯಿಂದ ಮೋದಿ ಕಡೆಗೆ ನೋಡುತ್ತಾನೆ.

 ವೈರಲ್ ವಿಡಿಯೋ…

 

Like us on facebook
Disclaimer:

ರಾಷ್ಟ್ರಧ್ವನಿ ಅಂತಾರ್ಜಾಲ ಸುದ್ದಿ ವಾಹಿನಿಯಲ್ಲಿ ಪ್ರಕಟವಾಗುವ ಸುದ್ದಿಗಳ ಕುರಿತು ಸಾರ್ವಜನಿಕರು ಆರೋಗ್ಯಕರ ಚರ್ಚೆ, ಕಮೆಂಟ್ ಗಳನ್ನು ಮಾಡಬಹುದಾಗಿದೆ. ಧರ್ಮ, ಜಾತಿ ನಿಂದನೆಯಾಗುವಂತಹ ಮತ್ತು ಸಾಮರಸ್ಯ ಕೆಡಿಸುವಂತಹ ದುರುದ್ದೇಶಪೂರಿತ ಕಮೆಂಟ್ ಹಾಗೂ ಚರ್ಚೆ ಕಾನೂನು ರೀತಿಯಲ್ಲಿ ಅಪರಾಧವಾಗಿರುತ್ತದೆ. ದೇಶದ ಕಾನೂನು ಸುವ್ಯವಸ್ಥೆಗೆ ಧಕ್ಕೆ ತರುವಂತಹ ಯಾವುದೇ ಕಮೆಂಟ್ ಗಳನ್ನು ಹಾಕಿದ್ದಲ್ಲಿ, ಅದಕ್ಕೆ ಕಮೆಂಟ್ ಹಾಕುವವರೇ ಹೊಣೆಗಾರರಾಗಿರುತ್ತಾರೆ. ಅಂತಹವರ ಹೆಸರು ಮತ್ತು ಐಪಿ ಅಡ್ರೆಸ್ ಗಳನ್ನು ಸಂಬಂಧಪಟ್ಟ ಇಲಾಖೆಗೆ ಒದಗಿಸಲು ರಾಷ್ಟ್ರಧ್ವನಿ ಬದ್ಧವಾಗಿರುತ್ತದೆ.

ಸಿನಿಮಾ
ಸಂಪಾದಕೀಯ ಮತ್ತಷ್ಟು
ಸಂವಿಧಾನಾತ್ಮಕ ಸದನಗಳಲ್ಲಿ ಪಾಸ್ ಆಗುತ್ತಿದೆ ‘ಹಿಂದೂ..
ದ್ವೇಷಪೂರಿತ, ಅಸಂವಿಧಾನಿಕ ಪೌರತ್ವ ತಿದ್ದುಪಡಿ ಮಸೂದೆ ಉಭಯ ಸದನಗಳಲ್ಲಿ ಅಂಗೀಕಾರವಾಗಿದೆ. ಇನ್ನು ರಾಷ್ಟ್ರಪತಿ ಅಂಕಿತ...
POLL

[democracy id="1"]