Tuesday, October 22 , 2019
ರಾಷ್ಟ್ರಧ್ವನಿ ಫಲಶ್ರುತಿ | ಪೊಲಿಯೋ ಲಸಿಕೆಯಲ್ಲಿ ವೈರಸ್ ವದಂತಿಗೆ ಸ್ಪಷ್ಟನೆ ನೀಡಿದ ಮಹಿಳಾ ಮತ್ತು ಮಕ್ಕಳ ಕಲ್ಯಾಣ ಇಲಾಖೆ

ಬೆಂಗಳೂರು(21.09.2019): ಪೊಲಿಯೋ ಲಸಿಕೆಯಲ್ಲಿ ವೈರಸ್ ಬೆರೆಸಿದೆ ಎನ್ನುವ ವಾಟ್ಸಾಪ್ ಸುಳ್ಳು ಸಂದೇಶದ ಬಗ್ಗೆ ನಿನ್ನೆಯಷ್ಟೇ ರಾಷ್ಟ್ರಧ್ವನಿ ವರದಿ ಮಾಡಿದ್ದು, ಈ ಸಂಬಂಧ ಎಚ್ಚೆತ್ತುಕೊಂಡಿರುವ ಅಧಿಕಾರಿಗಳು ಈ ಬಗ್ಗೆ ಸ್ಪಷ್ಟನೆ ನೀಡಿದ್ದಾರೆ.

2018ರಲ್ಲಿ ಉತ್ತರಪ್ರದೇಶದಲ್ಲಿ ನಡೆದಿದ್ದ ಘಟನೆಯನ್ನು ಮುಂದಿಟ್ಟುಕೊಂಡು ಸಾಮಾಜಿಕ ಜಾಲತಾಣಗಳಲ್ಲಿ, ಪೊಲಿಯೋ ಲಸಿಕೆಯಲ್ಲಿ ವೈರಸ್ ಬೆರೆಸಲಾಗಿದೆ ಎನ್ನುವ ತಪ್ಪು ಸಂದೇಶಗಳನ್ನು ಹರಡಲಾಗುತ್ತಿತ್ತು. ಈ ಸಂಬಂಧ ಇದೀಗ ಮಹಿಳಾ ಮತ್ತು ಮಕ್ಕಳ ಕಲ್ಯಾಣ ಇಲಾಖೆ ಎಚ್ಚೆತ್ತುಕೊಂಡಿದ್ದು, ಈ ಸಂದೇಶ ಸುಳ್ಳಾಗಿದ್ದು, ಇಂತಹ ವದಂತಿಗಳಿಗೆ ಯಾರೂ ಕಿವಿ ಕೊಡಬಾರದು ಎಂದು ಹೇಳಿದೆ.

ಸಾಮಾಜಿಕ ಜಾಲತಾಣಗಳಲ್ಲಿ ಹಲವು ದಿನಗಳಿಂದ ತಪ್ಪು ಸಂದೇಶಗಳು ಹರಡುತ್ತಿದ್ದು, ಈ ಬಗ್ಗೆ ಮಾಹಿತಿ ಕಳೆಹಾಕಿದ ರಾಷ್ಟ್ರಧ್ವನಿ ನಿನ್ನೆ ಪೊಲಿಯೋ ಲಸಿಕೆಯಲ್ಲಿ ವೈರಸ್ ಬೆರೆಸಲಾಗಿದೆ ಎಂಬ ವದಂತಿಯ ಹಿಂದಿನ ಸತ್ಯಾಂಶ ಏನು? ಎಂಬ ಶೀರ್ಷಿಕೆಯೊಂದಿಗೆ ಸಂಬಂಧಿತ ವಿವರಗಳೊಂದಿಗೆ ವರದಿ ಮಾಡಿತ್ತು. ಈ ಬಗ್ಗೆ ಇಲಾಖೆ ಸೂಕ್ತ ಕ್ರಮಕೈಗೊಳ್ಳುವಂತೆ ಮನವಿ ಮಾಡಿತ್ತು. ಇಂದು ಇಲಾಖೆಯು ಎಚ್ಚೆತ್ತುಕೊಂಡಿದ್ದು, ಸ್ಪಷ್ಟನೆ ನೀಡಿದೆ.

ತಪ್ಪು ಸಂದೇಶದ ಸಂಬಂಧ ಅಂಗನವಾಡಿ ಫಲಾನುಭವಿಗಳಿಗೆ, ಪೋಷಕರಿಗೆ ಅರಿವು ಮೂಡಿಸುವಂತೆ ಎಲ್ಲಾ ಶಿಶು ಅಭಿವೃದ್ಧಿ ಯೋಜನಾಧಿಕಾರಿಗಳಿಗೆ, ಮೇಲ್ವಿಚಾರಕಿಯರಿಗೆ ಮತ್ತು ಅಂಗನವಾಡಿ ಕಾರ್ಯಕರ್ತೆಯರಿಗೆ ಹಾಗೂ ಸಹಾಯಕಿಯರಿಗೆ ಸೂಚಿಸಲು ಇಲಾಖೆಯು ಕೋರಿದೆ.

ಇದನ್ನು ಓದಿ…

►ಪೊಲಿಯೋ ಲಸಿಕೆಯಲ್ಲಿ ವೈರಸ್ ಬೆರೆಸಲಾಗಿದೆ ಎಂಬ ವದಂತಿಯ ಹಿಂದಿನ ಸತ್ಯಾಂಶ ಏನು?
► ತಪ್ಪದೇ ಓದಿ | ನಿಮ್ಮವರಿಗೂ ಶೇರ್ ಮಾಡಿ
https://rashtradhwani.com/ಪೊಲಿಯೋ-ಲಸಿಕೆಯಲ್ಲಿ-ವೈರಸ್/

Like us on facebook
Disclaimer:

ರಾಷ್ಟ್ರಧ್ವನಿ ಅಂತಾರ್ಜಾಲ ಸುದ್ದಿ ವಾಹಿನಿಯಲ್ಲಿ ಪ್ರಕಟವಾಗುವ ಸುದ್ದಿಗಳ ಕುರಿತು ಸಾರ್ವಜನಿಕರು ಆರೋಗ್ಯಕರ ಚರ್ಚೆ, ಕಮೆಂಟ್ ಗಳನ್ನು ಮಾಡಬಹುದಾಗಿದೆ. ಧರ್ಮ, ಜಾತಿ ನಿಂದನೆಯಾಗುವಂತಹ ಮತ್ತು ಸಾಮರಸ್ಯ ಕೆಡಿಸುವಂತಹ ದುರುದ್ದೇಶಪೂರಿತ ಕಮೆಂಟ್ ಹಾಗೂ ಚರ್ಚೆ ಕಾನೂನು ರೀತಿಯಲ್ಲಿ ಅಪರಾಧವಾಗಿರುತ್ತದೆ. ದೇಶದ ಕಾನೂನು ಸುವ್ಯವಸ್ಥೆಗೆ ಧಕ್ಕೆ ತರುವಂತಹ ಯಾವುದೇ ಕಮೆಂಟ್ ಗಳನ್ನು ಹಾಕಿದ್ದಲ್ಲಿ, ಅದಕ್ಕೆ ಕಮೆಂಟ್ ಹಾಕುವವರೇ ಹೊಣೆಗಾರರಾಗಿರುತ್ತಾರೆ. ಅಂತಹವರ ಹೆಸರು ಮತ್ತು ಐಪಿ ಅಡ್ರೆಸ್ ಗಳನ್ನು ಸಂಬಂಧಪಟ್ಟ ಇಲಾಖೆಗೆ ಒದಗಿಸಲು ರಾಷ್ಟ್ರಧ್ವನಿ ಬದ್ಧವಾಗಿರುತ್ತದೆ.

ಸಿನಿಮಾ
ಸಂಪಾದಕೀಯ ಮತ್ತಷ್ಟು
ಕನ್ನಡ ಉಳಿಸುವ ಜವಾಬ್ದಾರಿ ಬಡ ಮಕ್ಕಳಿಗೆ..
ಸರಕಾರಿ ಆಂಗ್ಲ ಮಾಧ್ಯಮ ಶಾಲೆಯ ಆದೇಶವನ್ನು ಹಿಂಪಡೆಯಲು ಕರ್ನಾಟಕ ಕೈಗಾರಿಕಾ ಮತ್ತು ವಾಣಿಜ್ಯೋದ್ಯಮ ಕನ್ನಡ...
POLL

[democracy id="1"]