Saturday, June 15 , 2019
ಮಾಧ್ಯಮಗಳಿಂದ ಕಲ್ಲೆಸೆದು ನೋಡುವ ತಂತ್ರ | ಎನ್.ಮಹೇಶ್ ವಿರುದ್ಧ ಮತ್ತೊಂದು ಸುತ್ತಿನ ಸುಳ್ಳು ಸುದ್ದಿ!

ಬೆಂಗಳೂರು(25.05.2019): ಕೇಸರಿ ಪಾಳಯದ ಆಪರೇಶನ್ ಕಮಲಕ್ಕೆ ಕನ್ನಡದ ಕೆಲವು ಸುದ್ದಿವಾಹಿನಿಗಳು ಸಾಥ್ ನೀಡುತ್ತಿದ್ದು, ಎನ್.ಮಹೇಶ್ ವಿರುದ್ಧ ಮತ್ತೊಂದು ಸುತ್ತಿನ ಸುಳ್ಳು ಸುದ್ದಿಗಳನ್ನು ಬಿತ್ತರಿಸಿವೆ. ಬಿಜೆಪಿ ನಾಯಕರು ಎನ್.ಮಹೇಶ್ ಜೊತೆಗೆ ಮಾತುಕತೆ ನಡೆಸಿವೆ ಎಂದು ಲೋಕಸಭಾ ಚುನಾವಣೆಗೂ ಮೊದಲೇ ಬಿಜೆಪಿ ಪರ ಕನ್ನಡ ಸುದ್ದಿವಾಹಿನಿಗಳು ವರದಿ ಪ್ರಸಾರ ಮಾಡಿತ್ತು. ಈ ಬಗ್ಗೆ  ಸ್ಪಷ್ಟನೆ ನೀಡಿದ್ದ ಎನ್.ಮಹೇಶ್  ತಾನು ಯಾರಿಗೆ ಬೆಂಬಲ ನೀಡಬೇಕು ಎನ್ನುವ ನಿರ್ಧಾರ ಬಿಎಸ್ ಪಿ ವರಿಷ್ಠೆ ಮಾಯಾವತಿ ಅವರದ್ದು, ಹೈಕಮಾಂಡ್ ಯಾವುದೇ ತೀರ್ಮಾನ ಕೈಗೊಂಡರೂ ಅದಕ್ಕೆ ತಾನು ಬದ್ಧನಾಗಿ ನಡೆಯುತ್ತೇನೆ ಎಂದು ಹೇಳಿದ್ದರು. ಲೋಕಸಭಾ ಚುನಾವಣೆಯಲ್ಲಿ ಬಿಜೆಪಿ ಬಹುಮತ ಪಡೆದ ಬೆನ್ನಲ್ಲೇ, ರಾಜ್ಯದಲ್ಲಿ ಮತ್ತೊಮ್ಮೆ ಆಪರೇಷನ್ ಕಮಲಕ್ಕೆ ಬಿಜೆಪಿ ಸಿದ್ಧತೆ ನಡೆಸಿದೆ. ಇಂತಹ ಸಂದರ್ಭದಲ್ಲಿ ಎನ್.ಮಹೇಶ್ ಅವರ ವಿರುದ್ಧ ಮತ್ತೊಂದು ಸುತ್ತಿನ ಸುಳ್ಳು ಸುದ್ದಿಯನ್ನು ಮಾಧ್ಯಮಗಳು ಬಿತ್ತರಿಸಿವೆ ಎಂದು ಆಕ್ರೋಶ ಕೇಳಿ ಬಂದಿದೆ.

ಲೋಕಸಭಾ ಚುನಾವಣೆಗೂ ಮುನ್ನ ದಿಗ್ವಿಜಯ ಕನ್ನಡ ಸುದ್ದಿವಾಹಿನಿ ಇಂತಹದ್ದೇ ಸುಳ್ಳು ಸುದ್ದಿ ಪ್ರಸಾರ ಮಾಡಿತ್ತು. ಇದರ ವಿರುದ್ಧ ಎನ್.ಮಹೇಶ್ ಚಾನೆಲ್ ನ ಪ್ರತಿನಿಧಿಗೂ ಭಾಗಿಯಾಗಿದ್ದ ಬಿಎಸ್ ಪಿ ಕಾರ್ಯಕ್ರಮವೊಂದರಲ್ಲಿ ಬಹಿರಂಗವಾಗಿ ಆಕ್ರೋಶ ಹೊರ ಹಾಕಿದ್ದರು. ಚಾನೆಲ್ ನ ಸುದ್ದಿಯನ್ನು ವೇದಿಕೆಯಲ್ಲಿಯೇ ಹಾಸ್ಯ ಮಾಡಿದ್ದರು. ಇದಾದ ಬಳಿಕ ಇದೀಗ ಟಿವಿ 9 ಇಂತಹದ್ದೇ ಒಂದು ಸುದ್ದಿಯನ್ನು ಪ್ರಸಾರ ಮಾಡಿದೆ. “ಆನೆಗೆ ಕೇಸರಿ ಖೆಡ್ಡಾ” ಎನ್ನುವ ಶೀರ್ಷಿಕೆಯಲ್ಲಿ ವರದಿ ಪ್ರಸಾರ ಮಾಡಿರುವ ಚಾನೆಲ್, ಕ್ಷೇತ್ರದಲ್ಲಿ ಇಂತಹದ್ದೊಂದು ವದಂತಿ ಕೇಳಿ ಬಂದಿದೆ ಎನ್ನುವ ನೆಪದಲ್ಲಿ ಎನ್.ಮಹೇಶ್ ಅವರನ್ನು ಮಾತನಾಡಿಸಿದ್ದಾರೆ. ಆದರೆ ಈ ವಿಚಾರವನ್ನು ಎನ್.ಮಹೇಶ್ ತಳ್ಳಿ ಹಾಕಿದ್ದಾರೆ. ಬಿಜೆಪಿಗೆ ನಾವು ಬೆಂಬಲ ನೀಡಲು ಸಾಧ್ಯವೇ ಇಲ್ಲ ಎಂದು ಸ್ಪಷ್ಟಪಡಿಸಿದ್ದಾರೆ.

ಈ ಬಗ್ಗೆ ಪವರ್ ಟಿವಿ ಕೂಡ ಎನ್.ಮಹೇಶ್ ಅವರ ಜೊತೆಗೆ ಮಾತನಾಡಿದೆ. ಪವರ್ ಟಿವಿ ಸುದ್ದಿ ಮುಖ್ಯಸ್ಥ ಚಂದನ್ ಶರ್ಮಾ ಬಿಜೆಪಿ ಜೊತೆಗೆ ಹೋಗುತ್ತೀರಾ ಇವೇ ಮೊದಲಾದ ಪ್ರಶ್ನೆಗಳನ್ನು ತಿರುವಿ ತಿರುವಿ ಎನ್.ಮಹೇಶ್ ಅವರ ಬಳಿಯಲ್ಲಿ ಕೇಳಿದ್ದಾರೆ. ತಮಗೆ ಬಿಜೆಪಿಯಲ್ಲಿ ಉತ್ತಮ ಸ್ನೇಹಿತ ಯಾರು? ನಿಮಗೆ ಯಾರಾದರೂ ಆಫರ್ ನೀಡಿದ್ದಾರಾ? ಯಡಿಯೂರಪ್ಪ ಕಾಲ್ ಮಾಡಿದ್ದಾರಾ? ಇವೇ ಮೊದಲಾದ ಪ್ರಶ್ನೆಗಳನ್ನು ಎನ್.ಮಹೇಶ್ ಅವರನ್ನು ಅಪರಾಧಿ ಸ್ಥಾನದಲ್ಲಿ ನಿಲ್ಲಿಸಿ ಕೇಳಿರುವುದು ಬಿಎಸ್ ಪಿ ಕಾರ್ಯಕರ್ತರ ಆಕ್ರೋಶಕ್ಕೆ ಕಾರಣವಾಗಿದೆ.

ಮಾಧ್ಯಮಗಳಿಗೆ ಎನ್.ಮಹೇಶ್ ನೀಡಿದ ಸ್ಪಷ್ಟ ಮಾಹಿತಿ ಏನು?

ಮಾಧ್ಯಮಗಳು ಎನ್.ಮಹೇಶ್ ಬಿಜೆಪಿಗೆ ಬೆಂಬಲ ನೀಡಲಿದ್ದಾರೆ ಎನ್ನುವುದನ್ನು ಸಾಬೀತುಪಡಿಸಲೋ, ಅಥವಾ ಇನ್ಯಾವುದೋ ಕಾರಣಕ್ಕೆ ಹಲವಾರು ಪ್ರಶ್ನೆಗಳನ್ನು ಹಾಕಿದ್ದಾರೆ. ಆದರೆ ಎನ್.ಮಹೇಶ್ ಎಲ್ಲ ಮಾಧ್ಯಮಗಳಿಗೂ ಸ್ಪಷ್ಟ ಹೇಳಿಕೆಯನ್ನು ನೀಡಿದ್ದಾರೆ. ಲೋಕಸಭಾ ಚುನಾವಣೆಯಲ್ಲಿ ಬಿಎಸ್ ಪಿಯು ಕಾಂಗ್ರೆಸ್ ಹಾಗೂ ಜೆಡಿಎಸ್ ವಿರುದ್ಧ ಅಭ್ಯರ್ಥಿಯನ್ನು ಕಣಕ್ಕಿಳಿಸಿದೆ. ಹಾಗಾಗಿ ಬಿಎಸ್ ಪಿ ಈಗ ಸಮ್ಮಿಶ್ರ ಸರಕಾರದ ಭಾಗವಲ್ಲ. ನಾವು ವಿರೋಧ ಪಕ್ಷದ ಸ್ಥಾನದಲ್ಲಿದ್ದೇವೆ. ಬಿಜೆಪಿಗೆ ಯಾವುದೇ ಕಾರಣಕ್ಕೂ ಬೆಂಬಲ ನೀಡುವ ಪ್ರಶ್ನೆಯೇ ಇಲ್ಲ. ನಾನು ಯಾರಿಗೆ ಬೆಂಬಲ ನೀಡುವುದು ಅಥವಾ ನೀಡದಿರುವುದು ಅದು ಬಿಎಸ್ ಪಿ ವರಿಷ್ಠೆ ಮಾಯಾವತಿ ಅವರ ನಿರ್ಧಾರದಂತೆ ನಡೆಯುತ್ತದೆ. ಆದರೆ ರಾಜ್ಯದಲ್ಲಿ ಬಿಎಸ್ ಪಿ ಬಿಜೆಪಿಗೆ ಬೆಂಬಲ ನೀಡಲು ಸಾಧ್ಯವಿಲ್ಲ ಎನ್ನುವುದನ್ನು ಸ್ಪಷ್ಟಪಡಿಸಿದ್ದಾರೆ.

ಕಲ್ಲೆಸೆದು ನೋಡುವ ತಂತ್ರಗಾರಿಕೆ!

ಲೋಕಸಭಾ ಚುನಾವಣೆಯ ಬೆನ್ನಲ್ಲೇ ಕನ್ನಡದ ಕೆಲವು ಸುದ್ದಿವಾಹಿನಿಗಳು ಆಪರೇಷನ್ ಕಮಲ ಮತ್ತೆ ನಡೆಸುವ ಬಗ್ಗೆ ಶಾಸಕರುಗಳಿಗೆ ಕಲ್ಲೆಸೆದು ನೋಡುವ ತಂತ್ರಗಾರಿಕೆಯನ್ನು ಅನುಸರಿಸುತ್ತಿರುವುದು ಕಂಡು ಬಂದಿದೆ. ಬಿಜೆಪಿ ಆಪರೇಷನ್ ನಲ್ಲಿ ಮಾಧ್ಯಮಗಳೂ ಭಾಗಿಯಾಗುತ್ತಿವೆಯೇ ಎನ್ನುವ ಅನುಮಾನಗಳು ಈ ಎಲ್ಲ ವಿದ್ಯಮಾನಗಳ ಹಿಂದೆ ಕಂಡು ಬಂದಿದೆ. ಎನ್.ಮಹೇಶ್ ವಿರುದ್ಧ ಹಲವು ವದಂತಿಗಳನ್ನು ಹರಡಿದ್ದ ಮಾಧ್ಯಮಗಳೂ ಇಂದೂ ವದಂತಿಗಳ ನೆಪದಲ್ಲಿ ಎನ್.ಮಹೇಶ್ ಅವರ ಹಿಂದೆ ಬಿದ್ದಿದೆ. ಎನ್.ಮಹೇಶ್ ಅವರಿಗೆ ಸಚಿವ ಸ್ಥಾನದ ಭರವಸೆಯನ್ನು ಬಿಜೆಪಿ ನೀಡಿದೆ ಎಂದು ಮಾಧ್ಯಮಗಳು ವರದಿ ಮಾಡಿವೆ. ಆದರೆ ವಾಸ್ತವವಾಗಿ ರಾಜ್ಯ ಸಮ್ಮಿಶ್ರ ಸರಕಾರದಲ್ಲೂ ಎನ್.ಮಹೇಶ್ ಸಚಿವರಾಗಿದ್ದವರು. ಪಕ್ಷ ಸಂಘಟನೆಯ ವಿಚಾರ ಬಂದಾಗ ತಮ್ಮ ಸ್ಥಾನಕ್ಕೆ ರಾಜೀನಾಮೆ ನೀಡಿ ಹೊರ ಬಂದಿದ್ದರು.

Like us on facebook
Disclaimer:

ರಾಷ್ಟ್ರಧ್ವನಿ ಅಂತಾರ್ಜಾಲ ಸುದ್ದಿ ವಾಹಿನಿಯಲ್ಲಿ ಪ್ರಕಟವಾಗುವ ಸುದ್ದಿಗಳ ಕುರಿತು ಸಾರ್ವಜನಿಕರು ಆರೋಗ್ಯಕರ ಚರ್ಚೆ, ಕಮೆಂಟ್ ಗಳನ್ನು ಮಾಡಬಹುದಾಗಿದೆ. ಧರ್ಮ, ಜಾತಿ ನಿಂದನೆಯಾಗುವಂತಹ ಮತ್ತು ಸಾಮರಸ್ಯ ಕೆಡಿಸುವಂತಹ ದುರುದ್ದೇಶಪೂರಿತ ಕಮೆಂಟ್ ಹಾಗೂ ಚರ್ಚೆ ಕಾನೂನು ರೀತಿಯಲ್ಲಿ ಅಪರಾಧವಾಗಿರುತ್ತದೆ. ದೇಶದ ಕಾನೂನು ಸುವ್ಯವಸ್ಥೆಗೆ ಧಕ್ಕೆ ತರುವಂತಹ ಯಾವುದೇ ಕಮೆಂಟ್ ಗಳನ್ನು ಹಾಕಿದ್ದಲ್ಲಿ, ಅದಕ್ಕೆ ಕಮೆಂಟ್ ಹಾಕುವವರೇ ಹೊಣೆಗಾರರಾಗಿರುತ್ತಾರೆ. ಅಂತಹವರ ಹೆಸರು ಮತ್ತು ಐಪಿ ಅಡ್ರೆಸ್ ಗಳನ್ನು ಸಂಬಂಧಪಟ್ಟ ಇಲಾಖೆಗೆ ಒದಗಿಸಲು ರಾಷ್ಟ್ರಧ್ವನಿ ಬದ್ಧವಾಗಿರುತ್ತದೆ.

ಸಿನಿಮಾ
ಸಂಪಾದಕೀಯ ಮತ್ತಷ್ಟು
ಅಪಾಯಕಾರಿ ಅಣಕು ಕಾರ್ಯಾಚರಣೆಗಳಲ್ಲಿ ವಿದ್ಯಾರ್ಥಿಗಳನ್ನು ಬಳಕೆ..
ವಿಪತ್ತಿನ ಸಂದರ್ಭದಲ್ಲಿ ಅದರಿಂದ ಪಾರಾಗುವುದು ಹೇಗೆ ಎನ್ನುವುದರ ಬಗ್ಗೆ ವಿದ್ಯಾರ್ಥಿಗಳಲ್ಲಿ ಜಾಗೃತಿ ಮೂಡಿಸುವುದು ಒಳ್ಳೆಯ...