Saturday, September 19 , 2020
BREAKING NEWS
 
ಭಾರತದ ರಹಸ್ಯಗಳನ್ನು ಚೀನಾಕ್ಕೆ ಸೋರಿಕೆ ಮಾಡುತ್ತಿದ್ದ ರಾಜೀವ್ ಶರ್ಮಾ ,          ಮದುವೆ ಮನೆಯಲ್ಲಿ ‘ಮಹಾನಾಯಕ’ ಫ್ಲೆಕ್ಸ್ | “ನಾವು ಬದಲಾದರೆ ಸಮಾಜ ಬದಲಾಗುತ್ತದೆ” ಎಂದ ಪ್ರೊ.ಹರಿರಾಮ್ ,          ಸೇತುವೆ ಕೊಚ್ಚಿ ಹೋಗಿ 30 ವರ್ಷವಾದರೂ ಸರ್ಕಾರ ನಿರ್ಮಿಸಲಿಲ್ಲ | ಸರ್ಕಾರಕ್ಕೆ ಮುಖಭಂಗವಾಗುವಂತೆ ತಾವೇ ಸೇತುವೆ ನಿರ್ಮಿಸಿದ ಗ್ರಾಮಸ್ಥರು ,          ಸೈಕಲ್ ನಲ್ಲಿ ತೆರಳಿದ್ದ ಬಾಲಕಿ ರಾತ್ರಿಯಾದರೂ ಬರಲಿಲ್ಲ! | ಬೆಳಗ್ಗೆ ಕಾದಿತ್ತು ಪೋಷಕರಿಗೆ ಶಾಕ್ | ಒಂದು ಮನಕರಗಿಸುವ ಘಟನೆ ,          ಕೊರೊನಾ ಹಾಟ್ ಸ್ಪಾಟ್ ಆದ ನಾಗಪುರದ ಆರೆಸ್ಸೆಸ್ ಕಚೇರಿ; 9 ಹಿರಿಯ ನಾಯಕರಿಗೆ ಕೋವಿಡ್ ಪಾಸಿಟಿವ್ ,          ಅಕುಲ್ ಬಾಲಾಜಿ ರೆಸಾರ್ಟ್ ನಲ್ಲಿ ನಡೆಯುತ್ತಿತ್ತಾ ಮತ್ತಿನ ದಂಧೆ | ಸ್ಟಾರ್ ನಟರ ಮೋಜು ಮಸ್ತಿಯ ಪಾರ್ಟಿಯಲ್ಲಿ ಡ್ರಗ್ಸ್ ನದ್ದೇ ಕಾರುಬಾರು! ,         
ಬೀದಿಯಲ್ಲಿ ಸಿಕ್ಕಿದ ಬೆಕ್ಕಿನ ಮರಿಯನ್ನು ಮಹಿಳೆ ಸಾಕಿದರು | ಆದರೆ ಅದು ಬೆಕ್ಕೇ ಅಲ್ಲ! | ಏನದು? ಈ ಸುದ್ದಿ ಓದಿ

ನವದೆಹಲಿ(28.11.2019): ರಸ್ತೆಯಲ್ಲಿ ನಡೆದುಕೊಂಡು ಹೋಗುತ್ತಿದ್ದ ಸಂದರ್ಭ ಮಹಿಳೆಯೊಬ್ಬರಿಗೆ ಬೆಕ್ಕಿನ ಮರಿಗಳು ರಸ್ತೆ ಬದಿಯಲ್ಲಿ ಅಸ್ವಸ್ಥವಾಗಿ ಬಿದ್ದಿರುವುದು ಕಂಡು ಬಂತು. ಮೊದಲೇ ಬೆಕ್ಕುಗಳೆಂದರೆ ಬಹಳ ಇಷ್ಟಪಡುತ್ತಿದ್ದ ಮಹಿಳೆ ಆ ಬೆಕ್ಕಿನ ಮರಿಗಳನ್ನು ಮನೆಗೆ ಕೊಂಡು ಹೋಗಿ ಸಾಕಿದರು. ಆ ಬಳಿಕ ನಡೆದ ಕಥೆಯೇ ಬೇರೆ.

ಈ ಘಟನೆ ನಡೆದಿರುವುದು ಅರ್ಜೆಂಟಿನಾದಲ್ಲಿ. ಫ್ಲೋರೆನ್ಸಿಯಾ ಲೋಬೋ ಎಂಬ ಮಹಿಳೆ ಬೆಕ್ಕಿನ ಮರಿಗಳನ್ನು ಮನೆಗೆ ಕೊಂಡು ಹೋಗಿ ಸಾಕಿದ ಮಹಿಳೆಯಾಗಿದ್ದಾರೆ. ತೀರಾ ದುರ್ಬಲ ಸ್ಥಿತಿಯಲ್ಲಿದ್ದ ಬೆಕ್ಕಿನ ಮರಿಗಳನ್ನು ಮನೆಗೆ ಕೊಂಡು ಸಾಕಿದರೂ ಅದರಲ್ಲಿ ಒಂದು ಮರಿ ಮಾತ್ರ ಬದುಕುಳಿಯಿತು. ಬದುಕುಳಿದ ಬೆಕ್ಕನ್ನು ತಾವೇ ಸಾಕಲು ಲೋಬೋ ಇಚ್ಛಿಸಿದರು. ಹಾಗೆಯೇ ಅದಕ್ಕೆ ಟಿಟೋ ಎಂಬ ಮುದ್ದಾದ ಹೆಸರಿಟ್ಟು ಸಾಕಿದರು. ಮರಿಯೂ ಬಹಳ ದಷ್ಟಪುಷ್ಟವಾಗಿ ಬೆಳೆಯಿತು.

ಟಿಟೋ ಎಲ್ಲಾ ಬೆಕ್ಕುಗಳಿಗಿಂತ ಬಹಳ ಚುರುಕಾಗಿತ್ತು. ಓಡುವ ವೇಗವೂ ಹೆಚ್ಚಾಗಿತ್ತು.  ಹೀಗೆ ಏನೋ ಮಾಡಲು ಹೋಗಿ ಒಂದು ದಿನ ಟಿಟೋ ತನ್ನ ಕಾಲಿಗೆ ಗಾಯ ಮಾಡಿಕೊಂಡಿತು. ಇದನ್ನು ಗಮನಿಸಿದ ಲೋಬೋ ಅವರು ಬೆಕ್ಕನ್ನು ಪಶು ವೈದ್ಯರ ಬಳಿಗೆ ಕರೆದುಕೊಂಡು ಹೋದರು.

ಬೆಕ್ಕನ್ನು ಪರಿಶೀಲಿಸಿದ ವೈದ್ಯರು ಇದು ಬೆಕ್ಕೇ ಅಲ್ಲ ಅಂದು ಬಿಟ್ಟರು. ಇದನ್ನು ಕೇಳಿ ಲೋಬೋ ಅವರು ಶಾಕ್ ಆದ್ರು. ಬೆಕ್ಕಿನ ಮರಿ ಎಂದು ಭಾವಿಸಿ ಲೋಬೋ ಅವರು ತೆಗೆದುಕೊಂಡು ಬಂದಿದ್ದ ಬೆಕ್ಕು ಬೆಕ್ಕೇ ಆಗಿರಲಿಲ್ಲ. ಅದು ಜಾಗ್ವಾರುಂಡಿ ಕಾಡು ಬೆಕ್ಕಾಗಿತ್ತು. ಇದು ಸಾಕು ಬೆಕ್ಕುಗಳಿಗಿಂತಲೂ ದೊಡ್ಡದಾಗಿ ಇರುತ್ತವೆ. ಇದು ಸಾಮಾನ್ಯ ಬೆಕ್ಕಿನಂತೆ ಕಂಡು ಬರುವುದರಿಂದಾಗಿ ಮರಿಗಳನ್ನು ಕಂಡು ಲೋಬೋ ಬೆಕ್ಕು ಎಂದೇ ಭಾವಿಸಿದ್ದರು.

ಬಹಳ ಇಷ್ಟಪಟ್ಟ ಟಿಟೋವನ್ನು ಸಾಕಿದ್ದ ಲೋಬೋ ಅವರು ಕೊನೆಗೂ ಅಗತ್ಯ ಚಿಕಿತ್ಸೆ ಕೊಡಿಸಿ,  ಪ್ರಾಣಿ ರಕ್ಷಣಾ ಸಂಸ್ಥೆಗೆ ಹಸ್ತಾಂತರಿಸಿದ್ದಾರೆ. ಜಾಗ್ವಾರುಡಿ ಪುಮಾ(ಟಿಟೋ)ವನ್ನು ಸದ್ಯ ಕಾಡಿಗೆ ಬಿಡಲು ಸಂಸ್ಥೆ ನಿರ್ಧರಿಸಿದೆ.

ಈ ಬೆಕ್ಕುಗಳು  ಚಿರತೆಗಳಿಗಿಂತ ಸ್ವಲ್ಪ ಕಡಿಮೆ ಗಾತ್ರದಲ್ಲಿರುತ್ತವೆ. ಮತ್ತು ಸೌಮ್ಯ ಪ್ರಾಣಿಗಳಲ್ಲ. ಪ್ರಾಣಿಗಳ ಮೇಲೆ ಮನುಷ್ಯರ ಮೇಲೆ ಇದು ಮಾರಕ ದಾಳಿಗಳನ್ನೂ ಮಾಡುತ್ತವೆ. ಲೋಬೋ ಅವರು ಮನೆಗೆ ತೆಗೆದುಕೊಂಡು ಹೋಗಿರುವ ಟಿಟೋ  ಬೆಕ್ಕಿನ ಸಂತತಿಗಳು ಹೆಚ್ಚಾಗಿ ದಕ್ಷಿಣ ಅಮೆರಿಕದ ಕಾಡುಗಳಲ್ಲ ಕಂಡು ಬರುತ್ತವೆ. ಭಾರತದಲ್ಲೂ ಇಂತಹ ಪ್ರಬೇಧದ ಕಾಡುಬೆಕ್ಕುಗಳಿವೆ. ಆದರೆ ಇವುಗಳ ಸಂತತಿ ಬಹುತೇಕ ನಶಿಸಿ ಹೋಗಿವೆ.

Like us on facebook
Disclaimer:

ರಾಷ್ಟ್ರಧ್ವನಿ ಅಂತಾರ್ಜಾಲ ಸುದ್ದಿ ವಾಹಿನಿಯಲ್ಲಿ ಪ್ರಕಟವಾಗುವ ಸುದ್ದಿಗಳ ಕುರಿತು ಸಾರ್ವಜನಿಕರು ಆರೋಗ್ಯಕರ ಚರ್ಚೆ, ಕಮೆಂಟ್ ಗಳನ್ನು ಮಾಡಬಹುದಾಗಿದೆ. ಧರ್ಮ, ಜಾತಿ ನಿಂದನೆಯಾಗುವಂತಹ ಮತ್ತು ಸಾಮರಸ್ಯ ಕೆಡಿಸುವಂತಹ ದುರುದ್ದೇಶಪೂರಿತ ಕಮೆಂಟ್ ಹಾಗೂ ಚರ್ಚೆ ಕಾನೂನು ರೀತಿಯಲ್ಲಿ ಅಪರಾಧವಾಗಿರುತ್ತದೆ. ದೇಶದ ಕಾನೂನು ಸುವ್ಯವಸ್ಥೆಗೆ ಧಕ್ಕೆ ತರುವಂತಹ ಯಾವುದೇ ಕಮೆಂಟ್ ಗಳನ್ನು ಹಾಕಿದ್ದಲ್ಲಿ, ಅದಕ್ಕೆ ಕಮೆಂಟ್ ಹಾಕುವವರೇ ಹೊಣೆಗಾರರಾಗಿರುತ್ತಾರೆ. ಅಂತಹವರ ಹೆಸರು ಮತ್ತು ಐಪಿ ಅಡ್ರೆಸ್ ಗಳನ್ನು ಸಂಬಂಧಪಟ್ಟ ಇಲಾಖೆಗೆ ಒದಗಿಸಲು ರಾಷ್ಟ್ರಧ್ವನಿ ಬದ್ಧವಾಗಿರುತ್ತದೆ.

ಸಿನಿಮಾ
ಸಂಪಾದಕೀಯ ಮತ್ತಷ್ಟು
ಸಂವಿಧಾನಾತ್ಮಕ ಸದನಗಳಲ್ಲಿ ಪಾಸ್ ಆಗುತ್ತಿದೆ ‘ಹಿಂದೂ..
ದ್ವೇಷಪೂರಿತ, ಅಸಂವಿಧಾನಿಕ ಪೌರತ್ವ ತಿದ್ದುಪಡಿ ಮಸೂದೆ ಉಭಯ ಸದನಗಳಲ್ಲಿ ಅಂಗೀಕಾರವಾಗಿದೆ. ಇನ್ನು ರಾಷ್ಟ್ರಪತಿ ಅಂಕಿತ...
POLL

[democracy id="1"]