Saturday, June 15 , 2019
ಬಿಜೆಪಿ ಗೆಲುವಿನ ಬೆನ್ನಲ್ಲೇ ಗೋಭಯೋತ್ಪಾದಕರ ಅಟ್ಟಹಾಸ | ಮಹಿಳೆ ಸೇರಿದಂತೆ ಮೂವರ ಮೇಲೆ ಅಮಾನವೀಯ ಹಲ್ಲೆ

ಭೋಪಾಲ್(25.05.2019): ದೇಶದಲ್ಲಿ ಬಿಜೆಪಿ ಗೆಲುವಿನ ಬೆನ್ನಲ್ಲೇ, ಬಿಜೆಪಿ ಪರ ಸಂಘಟನೆಗಳ ಅಟ್ಟಹಾಸ ಮುಂದುವರಿದ್ದಿದ್ದು, ಮೂವರು ಮುಸ್ಲಿಮರ ಮೇಲೆ ಗೋರಕ್ಷಣೆಯ ನೆಪದಲ್ಲಿ ಅಮಾನವೀಯವಾಗಿ ಹಲ್ಲೆ ನಡೆಸಿದ ಘಟನೆ ನಡೆದಿದೆ. ಹಲ್ಲೆಗೊಳಗಾದವರ ಪೈಕಿ ಓರ್ವ ಮಹಿಳೆಯೂ ಸೇರಿದ್ದಾರೆ.

ಹಲ್ಲೆ ನಡೆಸಿದ ವೇಳೆ ದೃಶ್ಯವನ್ನು ಚಿತ್ರಿಸಿಕೊಂಡಿದ್ದ ದುಷ್ಕರ್ಮಿಗಳು, ಸಾಮಾಜಿಕ ಜಾಲತಾಣಗಳಲ್ಲಿ ಶೇರ್ ಮಾಡಿದ್ದಾರೆ. ಈ ವಿಡಿಯೋ ವ್ಯಾಪಕ ವೈರಲ್ ಆಗಿದ್ದು, ಭಾರೀ ಆಕ್ರೋಶವನ್ನುಂಟು ಮಾಡಿದೆ. ಜೈ ಶ್ರೀರಾಮ್ ಎಂದು ಹೇಳುವಂತೆ ಮುಸ್ಲಿಮರನ್ನು ಪೀಡಿಸಿಯೂ ಹಲ್ಲೆ ನಡೆಸಿರುವುದು ಕಂಡು ಬಂದಿದೆ. ಮರವೊಂದಕ್ಕೆ ಮುಸ್ಲಿಮ್ ವ್ಯಕ್ತಿಯನ್ನು ಹಿಮ್ಮುಖವಾಗಿ ಒರಗಿಸಿ ನಿಲ್ಲಿಸಿ ಮರದ ದೊಣ್ಣೆಯಿಂದ ಮನಸೋ ಇಚ್ಛೆ ಥಳಿಸಲಾಗಿದೆ. ಆತ ನೋವಿನಿಂದ ಚೀರುತ್ತಿದ್ದರೂ ಸ್ವಲ್ಪವೂ ಕರುಣೆ ತೋರದೇ ಮೃಗಗಳಂತೆ ಮತ್ತೆ ಮತ್ತೆ ಆತನ ಮೇಲೆ ದಾಳಿ ನಡೆಸಲಾಗಿದೆ. ಲೈಟ್ ಕಂಬವೊಂದಕ್ಕೆ ಕಟ್ಟಿ ಹಾಕಿ ಹೊಡೆಯಲು ಪ್ರಯತ್ನಿಸಿದ್ದಾರೆ. ಆದರ ಆ ವ್ಯಕ್ತಿ ತೀವ್ರ ಪ್ರತಿರೋಧ ತೋರಿದ್ದರಿಂದ ಕಟ್ಟಿಹಾಕಲು ವಿಫಲರಾದರೂ ಕಂಬಕ್ಕೆ ಒರಗಿಸಿ ನಿಲ್ಲಿಸಿ ತೀವ್ರ ಹಲ್ಲೆ ನಡೆಸಿದ್ದಾರೆ. ಜೊತೆಗೆ ಅಸಭ್ಯ ಮತ್ತು ಅನಾಗರಿಕ ಭಾಷೆಗಳನ್ನು ಬಳಸಿ ಬೈದಿರುವುದು ಕಂಡು ಬಂದಿದೆ.

ಇಷ್ಟೊಂದು ಅಮಾನವೀಯ ಹಲ್ಲೆ ನಡೆದಿರುವುದು ಸಾರ್ವಜನಿಕ ಪ್ರದೇಶದಲ್ಲಿ. ಸಾರ್ವಜನಿಕರು ಈ ಘಟನೆಯನ್ನು ನೋಡಿಯೂ ನೋಡದಂತೆ ಹೋಗುತ್ತಿರುವುದು ಮತ್ತು ಬಿಟ್ಟಿ ಮನರಂಜನೆ ಪಡೆದುಕೊಳ್ಳುವುದು ವಿಡಿಯೋದಲ್ಲಿ ಕಂಡು ಬಂದಿದೆ. ಜೊತೆಗೆ ಹಲ್ಲೆಗೊಳಗಾದ ವ್ಯಕ್ತಿಯಿಂದಲೇ ಚಪ್ಪಲಿಯಲ್ಲಿ ಮಹಿಳೆಗೆ ಬಲಾತ್ಕಾರವಾಗಿ ಹಲ್ಲೆ ನಡೆಸಿರುವುದೂ ಕಂಡು ಬಂದಿದೆ.

ಈ ದುಷ್ಕೃತ್ಯಕ್ಕೆ ಸಂಬಂಧಿಸಿದಂತೆ ಆರೋಪಿಗಳಾದ ಯೋಗೇಶ್, ದೀಪೇಶ್ ನಾಮ್ ದೇವ್, ರೋಹಿತ್ ಯಾದವ್ ಹಾಗೂ ಶ್ಯಾಮ್ ನನ್ನು  ಪೊಲೀಸರು ಬಂಧಿಸಿದ್ದು, ಐಪಿಸಿ ಸೆಕ್ಷನ್ 143, 148, 149,341, 294, 323 ಹಾಗೂ 506 ಹಾಗೂ ಸಶಸ್ತ್ರ ಕಾಯ್ದೆ 25ನ್ನು ವಿಧಿಸಲಾಗಿದೆ ಎಂದು ಡುಂಡಾ ಸೆಯೊನಿ ಪೊಲೀಸರು ತಿಳಿಸಿದ್ದಾರೆ. ಆರೋಪಿಗಳ ಸಂಬಂಧಿಕರು ನೀಡಿರುವ ದೂರಿನ ಹಿನ್ನೆಲೆಯಲ್ಲಿ ಈ ಸೆಕ್ಷನ್ ಗಳನ್ನು ಹಾಕಲಾಗಿದೆ ಎಂದು ತಿಳಿದು ಬಂದಿದೆ.

Like us on facebook
Disclaimer:

ರಾಷ್ಟ್ರಧ್ವನಿ ಅಂತಾರ್ಜಾಲ ಸುದ್ದಿ ವಾಹಿನಿಯಲ್ಲಿ ಪ್ರಕಟವಾಗುವ ಸುದ್ದಿಗಳ ಕುರಿತು ಸಾರ್ವಜನಿಕರು ಆರೋಗ್ಯಕರ ಚರ್ಚೆ, ಕಮೆಂಟ್ ಗಳನ್ನು ಮಾಡಬಹುದಾಗಿದೆ. ಧರ್ಮ, ಜಾತಿ ನಿಂದನೆಯಾಗುವಂತಹ ಮತ್ತು ಸಾಮರಸ್ಯ ಕೆಡಿಸುವಂತಹ ದುರುದ್ದೇಶಪೂರಿತ ಕಮೆಂಟ್ ಹಾಗೂ ಚರ್ಚೆ ಕಾನೂನು ರೀತಿಯಲ್ಲಿ ಅಪರಾಧವಾಗಿರುತ್ತದೆ. ದೇಶದ ಕಾನೂನು ಸುವ್ಯವಸ್ಥೆಗೆ ಧಕ್ಕೆ ತರುವಂತಹ ಯಾವುದೇ ಕಮೆಂಟ್ ಗಳನ್ನು ಹಾಕಿದ್ದಲ್ಲಿ, ಅದಕ್ಕೆ ಕಮೆಂಟ್ ಹಾಕುವವರೇ ಹೊಣೆಗಾರರಾಗಿರುತ್ತಾರೆ. ಅಂತಹವರ ಹೆಸರು ಮತ್ತು ಐಪಿ ಅಡ್ರೆಸ್ ಗಳನ್ನು ಸಂಬಂಧಪಟ್ಟ ಇಲಾಖೆಗೆ ಒದಗಿಸಲು ರಾಷ್ಟ್ರಧ್ವನಿ ಬದ್ಧವಾಗಿರುತ್ತದೆ.

ಸಿನಿಮಾ
ಸಂಪಾದಕೀಯ ಮತ್ತಷ್ಟು
ಅಪಾಯಕಾರಿ ಅಣಕು ಕಾರ್ಯಾಚರಣೆಗಳಲ್ಲಿ ವಿದ್ಯಾರ್ಥಿಗಳನ್ನು ಬಳಕೆ..
ವಿಪತ್ತಿನ ಸಂದರ್ಭದಲ್ಲಿ ಅದರಿಂದ ಪಾರಾಗುವುದು ಹೇಗೆ ಎನ್ನುವುದರ ಬಗ್ಗೆ ವಿದ್ಯಾರ್ಥಿಗಳಲ್ಲಿ ಜಾಗೃತಿ ಮೂಡಿಸುವುದು ಒಳ್ಳೆಯ...