Friday, August 23 , 2019
ಬಿಇಎಲ್‌ ನಲ್ಲಿ ವಿವಿಧ ಹುದ್ದೆಗಳು

ಬೆಂಗಳೂರು(16-01-2018):ಭಾರತ್‌ ಎಲೆಕ್ಟ್ರಾನಿಕ್‌ ಲಿಮಿಟೆಡ್‌ (ಬಿಇಎಲ್‌) ಬೆಂಗಳೂರಿನ ‘ಪ್ರಾಡಕ್ಟ್ ಡೆವಲಪ್‌ಮೆಂಟ್‌ ಆ್ಯಂಡ್‌ ಇನ್ನೋವೇಷನ್‌ ಸೆಂಟರ್‌’ ಗೆ ಎಂಜಿನಿಯರ್‌ ಮತ್ತು ಮ್ಯಾನೇಜರ್‌ಗಳನ್ನು ನೇಮಕ ಮಾಡಿಕೊಳ್ಳಲು ಅರ್ಹ ಅಭ್ಯರ್ಥಿಗಳಿಂದ ಅರ್ಜಿ ಆಹ್ವಾನಿಸಲಾಗಿದೆ.

ಈ ಸಂಬಂಧ ಎರಡು ಪ್ರತ್ಯೇಕ ಪ್ರಕಟಣೆಗಳನ್ನು ಹೊರಡಿಸಿರುವ ಬಿಇಎಲ್‌ ಒಟ್ಟು 35 ಹುದ್ದೆಗಳಿಗೆ ನೇಮಕ ಮಾಡಿಕೊಳ್ಳುತ್ತಿದೆ. ಗುತ್ತಿಗೆ ಆಧಾರದಲ್ಲಿ ಈ ನೇಮಕಾತಿ ನಡೆಯುತ್ತಿದ್ದು, ಅರ್ಜಿ ಸಲ್ಲಿಸಲು ಜನವರಿ 20 ಕೊನೆಯ ದಿನವಾಗಿದೆ.

ಎಂಜಿನಿಯರ್‌ ಹುದ್ದೆ: ಒಂದು ಪ್ರಕಟಣೆಯ ಪ್ರಕಾರ 27 ಎಂಜಿನಿಯರ್‌ ನೇಮಕ ಮಾಡಿಕೊಳ್ಳಲಾಗುತ್ತಿದೆ. ಎಲೆಕ್ಟ್ರಾನಿಕ್ಸ್‌ ವಿಭಾಗದಲ್ಲಿ 9, ಮೆಕ್ಯಾನಿಕಲ್‌-ಪ್ರಾಡಕ್ಟ್ ಡಿಸೈನ್‌-6, ಮೆಕ್ಯಾನಿಕಲ್‌-ಮೆಟೀರಿಯಲ್‌ ಮ್ಯಾನೇಜ್‌ಮೆಂಟ್‌-2, ಕಂಪ್ಯೂಟರ್‌ ಸೈನ್ಸ್‌-5, ಆಪ್ಟಿಕ್ಸ್‌-3 ಮತ್ತು ಲೇಸರ್‌- 2 ಹುದ್ದೆಗಳಿಗೆ ನೇಮಕ ನಡೆಯಲಿದೆ.

ಆಯಾ ಹುದ್ದೆಗಳಿಗೆ ಸಂಬಂಧಪಟ್ಟಂತೆ ಬಿಇ/ಬಿಟೆಕ್‌ ವಿದ್ಯಾರ್ಹತೆ ಇರುವ ಅಭ್ಯರ್ಥಿಗಳು ಅರ್ಜಿ ಸಲ್ಲಿಸಲು ಅರ್ಹರು. ನಿಗದಿತ ವಿದ್ಯಾರ್ಹತೆಯಲ್ಲಿ ಅಭ್ಯರ್ಥಿಗಳು ಮೊದಲ ದರ್ಜೆಯಲ್ಲಿ (ಎಸ್‌ಸಿ/ಎಸ್‌ಟಿ ಅಭ್ಯರ್ಥಿಗಳು ಜಸ್ಟ್‌ ಪಾಸ್‌ ಆಗಿದ್ದರೆ ಸಾಕು) ತೇರ್ಗಡೆಯಾಗಿರಬೇಕು.

ಆದರೆ, ಆಪ್ಟಿಕ್ಸ್‌ ಅಥವಾ ಲೇಸರ್‌ ವಿಭಾಗದಲ್ಲಿ ಎಂಜಿನಿಯರ್‌ ಹುದ್ದೆಗೆ ಅರ್ಜಿ ಸಲ್ಲಿಸುವವರು ಕ್ರಮವಾಗಿ ಎಂಎಸ್ಸಿ (ಆಪ್ಟಿಕ್ಸ್‌) ಅಥವಾ ಎಂಟೆಕ್‌ (ಟೆಕ್‌ ಫೋಟೋನಿಕ್ಸ್‌, ಅಪ್ಲೈಡ್‌ ಫೋಟೋನಿಕ್ಸ್‌, ಆಪ್ಟಿಕಲ್‌ ಎಂಜಿನಿಯರಿಂಗ್‌ ಅಥವಾ ಫೋಟೋನಿಕ್ಸ್‌) ವಿದ್ಯಾರ್ಹತೆ ಹೊಂದಿರಬೇಕು. ಇವುಗಳ ಜೊತೆಗೆ ಆಯಾ ಹುದ್ದೆಗಳಿಗೆ ಸಂಬಂಧಪಟ್ಟಂತೆ ಕನಿಷ್ಠ ಒಂದು ವರ್ಷ ಕೆಲಸ ಮಾಡಿರುವ ಅನುಭವ ಹೊಂದಿರಬೇಕು. ಅಭ್ಯರ್ಥಿಗಳ ಗರಿಷ್ಠ ವಯೋಮಿತಿ 25 ವರ್ಷ.

ಮ್ಯಾನೇಜರ್‌ ಹುದ್ದೆ: ಇನ್ನೊಂದು ಪ್ರಕಟಣೆ ಪ್ರಕಾರ ಡೆಪ್ಯುಟಿ ಮ್ಯಾನೇಜರ್‌ ಮತ್ತು ಡೆಪ್ಯುಟಿ ಎಂಜಿನಿಯರ್‌ ತಲಾ ಎರಡು ಹುದ್ದೆಗಳು ಹಾಗೂ ನಾಲ್ಕು ಎಂಜಿನಿಯರ್‌ ಹುದ್ದೆಗಳಿಗೆ ನೇಮಕ ಮಾಡಿಕೊಳ್ಳಲಾಗುತ್ತಿದೆ.

ಸಂಬಂಧಿಸಿದ ಎಂಜಿನಿಯರಿಂಗ್‌ ವಿಷಯಗಳಲ್ಲಿ ಬಿಇ/ಬಿಟೆಕ್‌ ಅಥವಾ ಎಂಇ/ಎಂಟೆಕ್‌ ವಿದ್ಯಾರ್ಹತೆ ಇರುವವರು ಈ ಹುದ್ದೆಗಳಿಗೆ ಅರ್ಜಿ ಸಲ್ಲಿಸಲು ಅರ್ಹರು.

ಇದೇ ವಿಷಯಗಳಲ್ಲಿ ಪಿಎಚ್‌.ಡಿ ಪೂರ್ಣಗೊಳಿಸಿದ್ದರೂ ಅರ್ಜಿ ಸಲ್ಲಿಸಲು ಅವಕಾಶವಿದೆ. ಆದರೆ, ಯಾವುದೇ ಹುದ್ದೆಗೆ ಅರ್ಜಿ ಸಲ್ಲಿಸಬೇಕಾದರೂ ನಿಗದಿತ ಸೇವಾನುಭವ ಕಡ್ಡಾಯಗೊಳಿಸಲಾಗಿದೆ. ಈ ಹುದ್ದೆಗಳಿಗೆ ಅರ್ಜಿ ಸಲ್ಲಿಸುವ ಅಭ್ಯರ್ಥಿಗಳು 500 ರೂ. ಅರ್ಜಿ ಶುಲ್ಕ ಪಾವತಿಸಬೇಕು.

 

Like us on facebook
Disclaimer:

ರಾಷ್ಟ್ರಧ್ವನಿ ಅಂತಾರ್ಜಾಲ ಸುದ್ದಿ ವಾಹಿನಿಯಲ್ಲಿ ಪ್ರಕಟವಾಗುವ ಸುದ್ದಿಗಳ ಕುರಿತು ಸಾರ್ವಜನಿಕರು ಆರೋಗ್ಯಕರ ಚರ್ಚೆ, ಕಮೆಂಟ್ ಗಳನ್ನು ಮಾಡಬಹುದಾಗಿದೆ. ಧರ್ಮ, ಜಾತಿ ನಿಂದನೆಯಾಗುವಂತಹ ಮತ್ತು ಸಾಮರಸ್ಯ ಕೆಡಿಸುವಂತಹ ದುರುದ್ದೇಶಪೂರಿತ ಕಮೆಂಟ್ ಹಾಗೂ ಚರ್ಚೆ ಕಾನೂನು ರೀತಿಯಲ್ಲಿ ಅಪರಾಧವಾಗಿರುತ್ತದೆ. ದೇಶದ ಕಾನೂನು ಸುವ್ಯವಸ್ಥೆಗೆ ಧಕ್ಕೆ ತರುವಂತಹ ಯಾವುದೇ ಕಮೆಂಟ್ ಗಳನ್ನು ಹಾಕಿದ್ದಲ್ಲಿ, ಅದಕ್ಕೆ ಕಮೆಂಟ್ ಹಾಕುವವರೇ ಹೊಣೆಗಾರರಾಗಿರುತ್ತಾರೆ. ಅಂತಹವರ ಹೆಸರು ಮತ್ತು ಐಪಿ ಅಡ್ರೆಸ್ ಗಳನ್ನು ಸಂಬಂಧಪಟ್ಟ ಇಲಾಖೆಗೆ ಒದಗಿಸಲು ರಾಷ್ಟ್ರಧ್ವನಿ ಬದ್ಧವಾಗಿರುತ್ತದೆ.

ಸಿನಿಮಾ
ಸಂಪಾದಕೀಯ ಮತ್ತಷ್ಟು
ಅಪಾಯಕಾರಿ ಅಣಕು ಕಾರ್ಯಾಚರಣೆಗಳಲ್ಲಿ ವಿದ್ಯಾರ್ಥಿಗಳನ್ನು ಬಳಕೆ..
ವಿಪತ್ತಿನ ಸಂದರ್ಭದಲ್ಲಿ ಅದರಿಂದ ಪಾರಾಗುವುದು ಹೇಗೆ ಎನ್ನುವುದರ ಬಗ್ಗೆ ವಿದ್ಯಾರ್ಥಿಗಳಲ್ಲಿ ಜಾಗೃತಿ ಮೂಡಿಸುವುದು ಒಳ್ಳೆಯ...
POLL

[democracy id="1"]