Saturday, June 15 , 2019
ಬರಲಿದೆ ಬೆಹನ್ ಜಿ ಮಾಯಾವತಿ ಬಯೋಪಿಕ್; ಮಾಯಾವತಿ ಪಾತ್ರ ಮಾಡಲಿದ್ದಾರೆ ವಿದ್ಯಾಬಾಲನ್?

ಹೊಸದೆಹಲಿ: ಪ್ರಮುಖ ರಾಜಕೀಯ ನಾಯಕರ ಜೀವನ ಚರಿತ್ರೆಯನ್ನು ಆಧರಿಸಿದ ಚಲನ ಚಿತ್ರ ತಯಾರಿಸುವುದು ಈಗಿನ ಟ್ರೆಂಡ್. ಈಗಿನ ಸಂದರ್ಭದಲ್ಲಿ ಅದರ ಬೇಡಿಕೆಯೂ ಹೆಚ್ಚಿದೆ. ಇದರಿಂದ ಆ ನಾಯಕರು ಹಾದು ಬಂದಿರುವ ಹಾದಿಯ ಬಗೆಗಿನ ನೋಟ, ಅವರ ಜೀವನ ವಿಧಾನದ ಅರಿವು ಪ್ರೇಕ್ಷಕರಿಗೆ ಆಗುತ್ತದೆ. ರಾಜಕೀಯ ಎಷ್ಟು ಕಷ್ಟದ ಹಾದಿ ಎಂಬುದು ತಿಳಿಯುತ್ತದೆ. ನಾಯಕರ ರಾಜಕೀಯ ಜೀವನದ ಬಗೆಗಿನ ಒಳನೋಟ ಸಿಗುತ್ತದೆ.

ಈಗಾಗಲೇ ಮನಮೋಹನ್ ಸಿಂಗ್, ಪ್ರಧಾನಿ ನರೇಂದ್ರ ಮೋದಿ, ಎನ್ ಟಿ ಆರ್, ಬಾಳಠಾಕ್ರೆ ಮೊದಲಾದವರ ಜೀವನ ಚರಿತ್ರೆಯನ್ನು ಆಧರಿಸಿದ ಸಿನಿಮಾಗಳು ತೆರೆಕಂಡಿವೆ. ಪ್ರಧಾನಿ ನರೇಂದ್ರ ಮೋದಿ ಸಿನಿಮಾ ಸಿದ್ಧವಾಗಿದ್ದರೂ ಇನ್ನಷ್ಟೇ ತೆರೆ ಕಾಣಬೇಕಿದೆ. ಟ್ರೇಲರ್ ಮೂಲಕವೇ ಆ ಚಿತ್ರ ಸಾಕಷ್ಟು ವಿವಾದ, ಟೀಕೆಯನ್ನು ಹುಟ್ಟುಹಾಕಿವೆ. ಮನಮೋಹನ್ ಸಿಂಗ್ ಅವರನ್ನು ಕೆಟ್ಟ ರೀತಿಯಲ್ಲಿ ಬಿಂಬಿಸಲಾಗಿದೆ ಎಂದು ಅವರ ಜೀವನ ಆಧಾರಿತ ಎನ್ನಲಾದ `ದಿ ಆ್ಯಕ್ಸಿಡೆಂಟಲ್ ಪ್ರೈಮ್ ಮಿನಿಸ್ಟರ್’ ಎಂಬ ಸಿನಿಮಾದ ಬಗೆಗೆ ವಿಮರ್ಶೆಗಳು ಬಂದಿವೆ.

ತಮಿಳು ನಾಡಿನ ಮಾಜಿ ಮುಖ್ಯಮಂತ್ರಿ ಜೆ.ಜಯಲಲಿತಾ ಅವರ ಜೀವನಾಧಾರಿತ ಸಿನಿಮಾ ನಿರ್ಮಾಣಗೊಳ್ಳುವ ಕುರಿತು ಸುದ್ದಿಗಳು ಹರಿದಾಡುತ್ತಿದೆ. ಕಂಗನಾ ರಾಣಾವತ್ ಜಯಲಲಿತಾ ಪಾತ್ರ ನಿರ್ವಹಿಸಲಿದ್ದಾರೆ. ಆ ಚಿತ್ರ ಇನ್ನಷ್ಟೇ ಸೆಟ್ಟೇರಬೇಕಿದೆ.

ಆದರೆ, ಇವೆಲ್ಲದರ ಜೊತೆಗೆ ಬಹುಜನಾ ಸಮಾಜ ಪಾರ್ಟಿ ಮುಖ್ಯಸ್ಥೆ, ಬಹುಜನರ ನಾಯಕಿ ಮಾಯಾವತಿಯವರ ಜೀವನ ಚರಿತ್ರೆಯನ್ನು ಆಧರಿಸಿದ ಸಿನಿಮಾ ಬರಲಿದೆ ಎಂಬ ಸುದ್ದಿಯಿದ್ದು, ಇದು ಅನೇಕರ ಕುತೂಹಲಕ್ಕೆ ಕಾರಣವಾಗಿದೆ. ದಶಕಗಳ ಕಾಲದ ಬಹುಜನರ ನಾಯಕಿಯ ಜೀವನಾಧಾರಿತ ಸಿನಿಮಾ ಖಂಡಿತವಾಗಿಯೂ ದೇಶದಲ್ಲಿ ನಡೆದ ಬಹುಮುಖ್ಯ ರಾಜಕೀಯ ಪಲ್ಲಟದ ಕಥೆಯೇ ಆಗಿರುತ್ತದೆ ಎಂಬುದು ಮಾಯಾವತಿ ಅಭಿಮಾನಿಗಳ ನಿರೀಕ್ಷೆ. ದಲಿತರ, ಹಿಂದುಳಿದವರ ಬವಣೆಯ ಕಥೆಯೂ ಇದರಲ್ಲಿರುತ್ತದೆ ಎಂಬುದು ಬಹುಜನರ ಭರವಸೆ.

ಮಾಯಾವತಿ ಸಿನಿಮಾವನ್ನು ಸುಭಾಷ್ ಕಪೂರ್ ನಿರ್ದೇಶಿಸಲಿದ್ದಾರೆ ಹಾಗೂ ಮಾಯಾವತಿ ಪಾತ್ರಕ್ಕೆ ಖ್ಯಾತ ಬಾಲಿವುಡ್ ನಟಿ ವಿದ್ಯಾಬಾಲನ್ ಜೀವ ತುಂಬಲಿದ್ದಾರೆ ಎಂಬ ಸುದ್ದಿಯಿದೆ. ಆದರೆ, ಈ ಸುದ್ದಿ ಇನ್ನೂ ಖಚಿತವಾಗಿಲ್ಲ. ಇಬ್ಬರೂ ಈ ಬಗ್ಗೆ ಬಹಿರಂಗ ಮಾಹಿತಿ ನೀಡಿಲ್ಲ. ಒಂದು ಮೂಲದ ಪ್ರಕಾರ, ನಿರ್ದೇಶಕರು ಮಾಯಾವತಿ ಪಾತ್ರಕ್ಕೆ ಎಂಟು ಪ್ರಮುಖ ತಾರೆಯರನ್ನು ಸೂಚಿಸಿದ್ದು, ಅವರಲ್ಲಿ ಒಬ್ಬರನ್ನು ಆಯ್ಕೆ ಮಾಡಬೇಕಿದೆ. ಅದರಲ್ಲಿ ವಿದ್ಯಾಬಾಲನ್ ಗೆ ಮುಖ ಆದ್ಯತೆ ನೀಡಲಾಗಿದೆ ಎನ್ನಲಾಗಿದೆ.

 

Like us on facebook
Disclaimer:

ರಾಷ್ಟ್ರಧ್ವನಿ ಅಂತಾರ್ಜಾಲ ಸುದ್ದಿ ವಾಹಿನಿಯಲ್ಲಿ ಪ್ರಕಟವಾಗುವ ಸುದ್ದಿಗಳ ಕುರಿತು ಸಾರ್ವಜನಿಕರು ಆರೋಗ್ಯಕರ ಚರ್ಚೆ, ಕಮೆಂಟ್ ಗಳನ್ನು ಮಾಡಬಹುದಾಗಿದೆ. ಧರ್ಮ, ಜಾತಿ ನಿಂದನೆಯಾಗುವಂತಹ ಮತ್ತು ಸಾಮರಸ್ಯ ಕೆಡಿಸುವಂತಹ ದುರುದ್ದೇಶಪೂರಿತ ಕಮೆಂಟ್ ಹಾಗೂ ಚರ್ಚೆ ಕಾನೂನು ರೀತಿಯಲ್ಲಿ ಅಪರಾಧವಾಗಿರುತ್ತದೆ. ದೇಶದ ಕಾನೂನು ಸುವ್ಯವಸ್ಥೆಗೆ ಧಕ್ಕೆ ತರುವಂತಹ ಯಾವುದೇ ಕಮೆಂಟ್ ಗಳನ್ನು ಹಾಕಿದ್ದಲ್ಲಿ, ಅದಕ್ಕೆ ಕಮೆಂಟ್ ಹಾಕುವವರೇ ಹೊಣೆಗಾರರಾಗಿರುತ್ತಾರೆ. ಅಂತಹವರ ಹೆಸರು ಮತ್ತು ಐಪಿ ಅಡ್ರೆಸ್ ಗಳನ್ನು ಸಂಬಂಧಪಟ್ಟ ಇಲಾಖೆಗೆ ಒದಗಿಸಲು ರಾಷ್ಟ್ರಧ್ವನಿ ಬದ್ಧವಾಗಿರುತ್ತದೆ.

ಸಿನಿಮಾ
ಸಂಪಾದಕೀಯ ಮತ್ತಷ್ಟು
ಅಪಾಯಕಾರಿ ಅಣಕು ಕಾರ್ಯಾಚರಣೆಗಳಲ್ಲಿ ವಿದ್ಯಾರ್ಥಿಗಳನ್ನು ಬಳಕೆ..
ವಿಪತ್ತಿನ ಸಂದರ್ಭದಲ್ಲಿ ಅದರಿಂದ ಪಾರಾಗುವುದು ಹೇಗೆ ಎನ್ನುವುದರ ಬಗ್ಗೆ ವಿದ್ಯಾರ್ಥಿಗಳಲ್ಲಿ ಜಾಗೃತಿ ಮೂಡಿಸುವುದು ಒಳ್ಳೆಯ...