Thursday, December 12 , 2019
ಪ್ರತಿಭಟನೆ ಮಾಡಿದ 296 ಎಸ್ಪಿ ಕಾರ್ಯಕರ್ತರ ಮೇಲೆ ಪ್ರಕರಣ ದಾಖಲು

 ಹೊಸದಿಲ್ಲಿ (13-02-2019): ಅಲಹಬಾದ್ ವಿವಿ ಸಮಾಜವಾದಿ ಪಕ್ಷದ ವಿದ್ಯಾರ್ಥಿ ಘಟಕದ  ಕಾರ್ಯಕ್ರಮಕ್ಕೆ ತೆರಳದಂತೆ ಮಾಜಿ ಸಿಎಂ, ಎಸ್ಪಿ ವರಿಷ್ಠ ಅಖಿಲೇಶ್ ಯಾದವ್ ಗೆ ತಡೆ ಮಾಡಿದ ಉತ್ತರ ಪ್ರದೇಶದ ಯೋಗಿ ಸರಕಾರದ ವಿರುದ್ಧ ನಡೆದ ಪ್ರತಿಭಟನೆಯ ವೇಳೆ 296 ಎಸ್ಪಿ ಕಾರ್ಯಕರ್ತರ ವಿರುದ್ಧ ಪ್ರಕರಣ ದಾಖಲಾಗಿದೆ.

ನನ್ನನ್ನು ವಿದ್ಯಾರ್ಥಿ ಘಟಕದ ಕಾರ್ಯಕ್ರಮಕ್ಕೆ ಹಾಜರಾಗದಂತೆ ತಡೆದಿರುವುದರ ಹಿಂದೆ ವಿದ್ಯಾರ್ಥಿಗಳ ಸಾಮಾಜಿಕ ಚಿಂತನೆ ಮತ್ತು ಧ್ವನಿಯನ್ನು ಅಡಗಿಸುವ ತಂತ್ರವಿದೆ ಎಂದು ಅಖಿಲೇಶ್ ಯಾದವ್ ನಿನ್ನೆ ಆರೋಪಿಸಿದ್ದರು.

ನಿನ್ನೆ ಯುವ ನಾಯಕಿ ಹಾಗೂ ಎಸ್‌ಪಿ ವಕ್ತಾರರಾದ ರಿಚಾ ಸಿಂಗ್ ಅವರ ಮೇಲೆ ಪ್ರತಿಭಟನೆ ವೇಳೆ ಪೊಲೀಸರು ಗಂಭೀರವಾಗಿ ಹಲ್ಲೆ ನಡೆಸಿದ್ದರು. ರಕ್ತಸ್ರಾವವಾಗುತ್ತಿದ್ದ ರಿಚಾರನ್ನು ಪ್ರಜ್ಞಾಹೀನ ಸ್ಥಿತಿಯಲ್ಲಿ ರಸ್ತೆಯಲ್ಲಿಯೇ ಬಿಟ್ಟು ಪೊಲೀಸರು ತೆರಳಿದ್ದರು. ಮತ್ತು ಹಲವು ಪ್ರತಿಭಟನಾಕಾರರ ಮೇಲೆ ಯೋಗಿ ಸರಕಾರ ಪೊಲೀಸರ ಮೂಲಕ ಬಲಪ್ರಯೋಗವನ್ನು ನಡೆಸಿತ್ತು.

Like us on facebook
Disclaimer:

ರಾಷ್ಟ್ರಧ್ವನಿ ಅಂತಾರ್ಜಾಲ ಸುದ್ದಿ ವಾಹಿನಿಯಲ್ಲಿ ಪ್ರಕಟವಾಗುವ ಸುದ್ದಿಗಳ ಕುರಿತು ಸಾರ್ವಜನಿಕರು ಆರೋಗ್ಯಕರ ಚರ್ಚೆ, ಕಮೆಂಟ್ ಗಳನ್ನು ಮಾಡಬಹುದಾಗಿದೆ. ಧರ್ಮ, ಜಾತಿ ನಿಂದನೆಯಾಗುವಂತಹ ಮತ್ತು ಸಾಮರಸ್ಯ ಕೆಡಿಸುವಂತಹ ದುರುದ್ದೇಶಪೂರಿತ ಕಮೆಂಟ್ ಹಾಗೂ ಚರ್ಚೆ ಕಾನೂನು ರೀತಿಯಲ್ಲಿ ಅಪರಾಧವಾಗಿರುತ್ತದೆ. ದೇಶದ ಕಾನೂನು ಸುವ್ಯವಸ್ಥೆಗೆ ಧಕ್ಕೆ ತರುವಂತಹ ಯಾವುದೇ ಕಮೆಂಟ್ ಗಳನ್ನು ಹಾಕಿದ್ದಲ್ಲಿ, ಅದಕ್ಕೆ ಕಮೆಂಟ್ ಹಾಕುವವರೇ ಹೊಣೆಗಾರರಾಗಿರುತ್ತಾರೆ. ಅಂತಹವರ ಹೆಸರು ಮತ್ತು ಐಪಿ ಅಡ್ರೆಸ್ ಗಳನ್ನು ಸಂಬಂಧಪಟ್ಟ ಇಲಾಖೆಗೆ ಒದಗಿಸಲು ರಾಷ್ಟ್ರಧ್ವನಿ ಬದ್ಧವಾಗಿರುತ್ತದೆ.

ಸಿನಿಮಾ
ಸಂಪಾದಕೀಯ ಮತ್ತಷ್ಟು
ಸಂವಿಧಾನಾತ್ಮಕ ಸದನಗಳಲ್ಲಿ ಪಾಸ್ ಆಗುತ್ತಿದೆ ‘ಹಿಂದೂ..
ದ್ವೇಷಪೂರಿತ, ಅಸಂವಿಧಾನಿಕ ಪೌರತ್ವ ತಿದ್ದುಪಡಿ ಮಸೂದೆ ಉಭಯ ಸದನಗಳಲ್ಲಿ ಅಂಗೀಕಾರವಾಗಿದೆ. ಇನ್ನು ರಾಷ್ಟ್ರಪತಿ ಅಂಕಿತ...
POLL

[democracy id="1"]