Sunday, May 31 , 2020
ಪುಟ್ಟ ಗ್ರಹಕ್ಕೆ ಪುತ್ತೂರಿನ ಸ್ವಸ್ತಿಕ್ ಹೆಸರು!

ಇಂಟರ್ ನ್ಯಾಶನಲ್ ಸೈನ್ಸ್ ಆ್ಯಂಡ್ ಎಂಜಿನಿಯರಿಂಗ್ ಫೇರ್ – 2018ರ ಸಾಧನೆಗೆ ಸಂದ ಗೌರವ

ಪುತ್ತೂರು(01-12-2018): ದಕ್ಷಿಣ ಕನ್ನಡ ಜಿಲ್ಲೆಯ ಪುತ್ತೂರು ವಿವೇಕಾನಂದ ಪದವಿಪೂರ್ವ ಕಾಲೇಜಿನ ದ್ವಿತೀಯ ಪಿಯುಸಿ ವಿಜ್ಞಾನ ವಿಭಾಗದ ವಿದ್ಯಾರ್ಥಿ ಸ್ವಸ್ತಿಕ್ ಪದ್ಮ  ಹೆಸರನ್ನು ಪುಟ್ಟ ಗ್ರಹವೊಂದಕ್ಕೆ ನಾಮಕರಣ ಮಾಡಲಾಗಿದೆ.

ಇಂಟರ್ ನ್ಯಾಶನಲ್ ಸೈನ್ಸ್ ಆ್ಯಂಡ್ ಎಂಜಿನಿಯರಿಂಗ್ ಫೇರ್ – 2018 ರಲ್ಲಿ ಸ್ವಸ್ತಿಕ್ ಮಾಡಿದ ಸಾಧನೆಯನ್ನು ಪರಿಗಣಿಸಿ ಮೆಸಾಚ್ಯುಸೆಟ್ ಇನ್ಸ್ಟಿಟ್ಯೂಟ್ ಆಫ್ ಟೆಕ್ನಾಲಜಿ ಲಿಂಕನ್ ಲ್ಯಾಬೊರೇಟರಿ ಆ್ಯಂಡ್ ಇಂಟರ್ ನ್ಯಾಶನಲ್ ಆಸ್ಟ್ರೊನಾಮಿಕಲ್ ಯೂನಿಯನ್ ಈ ಗೌರವ ಪ್ರದಾನಿಸಿದೆ. ಈ ಮೂಲಕ 2019ರ ಮೇ ತಿಂಗಳಲ್ಲಿ ನಡೆಯುವ ಗೂಗಲ್ ಸೈನ್ಸ್ ಫೇರ್ ನಲ್ಲಿ ಭಾಗವಹಿಸಲು ಸ್ವಸ್ತಿಕ್ ಅರ್ಹತೆ ಪಡೆದಿದ್ದಾರೆ. ಈ ವಿಜ್ಞಾನ ಮೇಳದಲ್ಲಿ ಅವರು “ಡೆಸಾಲ್: ಡೆವಲಪ್ ಮೆಂಟ್ ಆಫ್ ಎ ನೋವೆಲ್ ಆ್ಯಂಡ್ ಫೀಸಿಬಲ್ ಡೆಸಾಲಿನೇಶನ್ ಡಿವೈಸ್’ ಎಂಬ ಸಂಶೋಧನ ಪ್ರಬಂಧ ಮಂಡಿಸಲಿದ್ದಾರೆ.

ಸ್ವಸ್ತಿಕ್ ಈ ಹಿಂದೆಯೂ ಎರಡು ಬಾರಿ ಅಂತಾರಾಷ್ಟ್ರೀಯ ಮಟ್ಟದಲ್ಲಿ ಭಾರತವನ್ನು ಪ್ರತಿನಿಧಿಸಿದ ಹೆಗ್ಗಳಿಕೆ ಹೊಂದಿದ್ದಾರೆ. 2017ರಲ್ಲಿ ಇಂಟರ್ ನ್ಯಾಶನಲ್ ಸೈನ್ಸ್ ಆ್ಯಂಡ್ ಎಂಜಿನಿಯರಿಂಗ್ ಫೇರ್ ನಲ್ಲಿ ಪುನರ್ಬಳಕೆ ಆಗದ ಪ್ಲಾಸ್ಟಿಕ್ ಗೆ ಸ್ಲಾಗ್ ಬಳಸಿ ವಸ್ತುವೊಂದನ್ನು ತಯಾರಿಸಿದ್ದರು. ಇದು ಕಬ್ಬಿಣಕ್ಕಿಂತಲೂ 24 ಪಟ್ಟು ಬಲಶಾಲಿ. ಇದರಲ್ಲಿ ವಿಶೇಷ ಪ್ರಶಸ್ತಿ ಪಡೆದಿದ್ದರು.

2018ರಲ್ಲಿ ಮಕ್ಕಳ ಅಪೌಷ್ಟಿಕತೆಯನ್ನು 6 ತಿಂಗಳು ಮೊದಲೇ ಪತ್ತೆ ಹಚ್ಚುವ ಪೇಪರ್ ಸ್ಲಿಪ್ ಅನ್ವೇಷಿಸಿದ್ದರು. ಅಲ್ಲದೆ, ಬಾಯಿ ಕ್ಯಾನ್ಸರನ್ನು ಬೇಗನೇ ಪತ್ತೆ ಹಚ್ಚುವ ಪೇಪರ್ ಸ್ಲಿಪ್ ಸಂಶೋಧಿಸಿದ್ದರು. ಈ ಸಾಧನೆಗಾಗಿ 2018ರ ಅಂತಾರಾಷ್ಟ್ರೀಯ ಸೈನ್ಸ್ ಆ್ಯಂಡ್ ಎಂಜಿನಿಯರಿಂಗ್ ಫೇರ್ ನಲ್ಲಿ ಸೆಕೆಂಡ್ ಗ್ರಾಂಡ್ ಪ್ರಶಸ್ತಿ ಪಡೆದಿದ್ದರು. 2017ರ ನ.14ರಂದು ಭಾರತದ ರಾಷ್ಟ್ರಪತಿಯವರಿಂದ ಬಾಲ ಪುರಸ್ಕಾರ ಪಡೆದುಕೊಂಡಿದ್ದರು. ಸ್ವಸ್ತಿಕ್ ಪದ್ಮ ಬಂಟ್ವಾಳ ತಾಲೂಕಿನ ಕೆದಿಲ ಮುರ್ಗಜೆ ಶ್ರೀರಾಮ ಭಟ್ ಮತ್ತು ಮಲ್ಲಿಕಾ ದಂಪತಿ ಪುತ್ರ.

Like us on facebook
Disclaimer:

ರಾಷ್ಟ್ರಧ್ವನಿ ಅಂತಾರ್ಜಾಲ ಸುದ್ದಿ ವಾಹಿನಿಯಲ್ಲಿ ಪ್ರಕಟವಾಗುವ ಸುದ್ದಿಗಳ ಕುರಿತು ಸಾರ್ವಜನಿಕರು ಆರೋಗ್ಯಕರ ಚರ್ಚೆ, ಕಮೆಂಟ್ ಗಳನ್ನು ಮಾಡಬಹುದಾಗಿದೆ. ಧರ್ಮ, ಜಾತಿ ನಿಂದನೆಯಾಗುವಂತಹ ಮತ್ತು ಸಾಮರಸ್ಯ ಕೆಡಿಸುವಂತಹ ದುರುದ್ದೇಶಪೂರಿತ ಕಮೆಂಟ್ ಹಾಗೂ ಚರ್ಚೆ ಕಾನೂನು ರೀತಿಯಲ್ಲಿ ಅಪರಾಧವಾಗಿರುತ್ತದೆ. ದೇಶದ ಕಾನೂನು ಸುವ್ಯವಸ್ಥೆಗೆ ಧಕ್ಕೆ ತರುವಂತಹ ಯಾವುದೇ ಕಮೆಂಟ್ ಗಳನ್ನು ಹಾಕಿದ್ದಲ್ಲಿ, ಅದಕ್ಕೆ ಕಮೆಂಟ್ ಹಾಕುವವರೇ ಹೊಣೆಗಾರರಾಗಿರುತ್ತಾರೆ. ಅಂತಹವರ ಹೆಸರು ಮತ್ತು ಐಪಿ ಅಡ್ರೆಸ್ ಗಳನ್ನು ಸಂಬಂಧಪಟ್ಟ ಇಲಾಖೆಗೆ ಒದಗಿಸಲು ರಾಷ್ಟ್ರಧ್ವನಿ ಬದ್ಧವಾಗಿರುತ್ತದೆ.

ಸಿನಿಮಾ
ಸಂಪಾದಕೀಯ ಮತ್ತಷ್ಟು
ಸಂವಿಧಾನಾತ್ಮಕ ಸದನಗಳಲ್ಲಿ ಪಾಸ್ ಆಗುತ್ತಿದೆ ‘ಹಿಂದೂ..
ದ್ವೇಷಪೂರಿತ, ಅಸಂವಿಧಾನಿಕ ಪೌರತ್ವ ತಿದ್ದುಪಡಿ ಮಸೂದೆ ಉಭಯ ಸದನಗಳಲ್ಲಿ ಅಂಗೀಕಾರವಾಗಿದೆ. ಇನ್ನು ರಾಷ್ಟ್ರಪತಿ ಅಂಕಿತ...
POLL

[democracy id="1"]