Tuesday, July 23 , 2019
ಪಾಪ್ ಗಾಯಕ ದಲೇರ್ ಮೆಹೆಂದಿ ಬಿಜೆಪಿ ಸೇರ್ಪಡೆ

ಹೊಸದೆಹಲಿ(26/04/2019): ಪಾಪ್ ಗಾಯಕ ದಲೇರ್ ಮೆಹೆಂದಿ ಬಿಜೆಪಿ ಸೇರ್ಪಡೆಗೊಂಡರು. ದೆಹಲಿಯಲ್ಲಿ ನಡೆದ ಕಾರ್ಯಕ್ರಮದಲ್ಲಿ ಕೇಂದ್ರ ಸಚಿವ ವಿಜಯ್ ಗೋಯಲ್ ರಿಂದ ಅವರು ಪಕ್ಷದ ಸದಸ್ಯತ್ವ ಪಡೆದುಕೊಂಡರು.

ಈ ವೇಳೆ ದೆಹಲಿಯ ಬಿಜೆಪಿ ಅಧ್ಯಕ್ಷ ಮನೋಜ್ ತಿವಾರಿ, ವಾಯುವ್ಯ ದೆಹಲಿಯ ಬಿಜೆಪಿ ಲೋಕಸಭಾ ಅಭ್ಯರ್ಥಿ  ಹನ್ಸ್ ರಾಜ್ ಹನ್ಸ್, ಚಾಂದ್ ನಿ ಚೌಕ್ ಅಭ್ಯರ್ಥಿ ಹರ್ಷವರ್ಧನ್ ಮೊದಲಾದವರಿದ್ದರು.

2013ರ ದೆಹಲಿ ವಿಧಾನ ಸಭಾ ಚುನಾವಣೆಗೂ ಕೆಲವು ದಿನಗಳ ಮೊದಲು ದಲೇರ್ ಮೆಹೆಂದಿ ಕಾಂಗ್ರೆಸ್ ಸೇರಿದ್ದರು. ಮಾತ್ರವಲ್ಲದೆ, ಅವರ ಹಾಡುಗಳನ್ನು ಕಾಂಗ್ರೆಸ್ ಚುನಾವಣಾ ಪ್ರಚಾರಕ್ಕೆ ಬಳಸಿಕೊಂಡಿತ್ತು. ಸ್ವತಃ ದಲೇರ್ ಮೆಹೆಂದಿಯವರೇ ಕಾಂಗ್ರೆಸ್ ಪ್ರಚಾರ ಸಭೆಗಳಲ್ಲಿ ಹಾಡಿದ್ದರು.

ದಲೇರ್ ಮೆಹೆಂದಿ ಅನೇಕ ಬಾಲಿವುಡ್ ಸಿನೆಮಾಗಳಿಗೆ ಹಾಡಿದ್ದಾರೆ.

 

Like us on facebook
Disclaimer:

ರಾಷ್ಟ್ರಧ್ವನಿ ಅಂತಾರ್ಜಾಲ ಸುದ್ದಿ ವಾಹಿನಿಯಲ್ಲಿ ಪ್ರಕಟವಾಗುವ ಸುದ್ದಿಗಳ ಕುರಿತು ಸಾರ್ವಜನಿಕರು ಆರೋಗ್ಯಕರ ಚರ್ಚೆ, ಕಮೆಂಟ್ ಗಳನ್ನು ಮಾಡಬಹುದಾಗಿದೆ. ಧರ್ಮ, ಜಾತಿ ನಿಂದನೆಯಾಗುವಂತಹ ಮತ್ತು ಸಾಮರಸ್ಯ ಕೆಡಿಸುವಂತಹ ದುರುದ್ದೇಶಪೂರಿತ ಕಮೆಂಟ್ ಹಾಗೂ ಚರ್ಚೆ ಕಾನೂನು ರೀತಿಯಲ್ಲಿ ಅಪರಾಧವಾಗಿರುತ್ತದೆ. ದೇಶದ ಕಾನೂನು ಸುವ್ಯವಸ್ಥೆಗೆ ಧಕ್ಕೆ ತರುವಂತಹ ಯಾವುದೇ ಕಮೆಂಟ್ ಗಳನ್ನು ಹಾಕಿದ್ದಲ್ಲಿ, ಅದಕ್ಕೆ ಕಮೆಂಟ್ ಹಾಕುವವರೇ ಹೊಣೆಗಾರರಾಗಿರುತ್ತಾರೆ. ಅಂತಹವರ ಹೆಸರು ಮತ್ತು ಐಪಿ ಅಡ್ರೆಸ್ ಗಳನ್ನು ಸಂಬಂಧಪಟ್ಟ ಇಲಾಖೆಗೆ ಒದಗಿಸಲು ರಾಷ್ಟ್ರಧ್ವನಿ ಬದ್ಧವಾಗಿರುತ್ತದೆ.

ಸಿನಿಮಾ
ಸಂಪಾದಕೀಯ ಮತ್ತಷ್ಟು
ಅಪಾಯಕಾರಿ ಅಣಕು ಕಾರ್ಯಾಚರಣೆಗಳಲ್ಲಿ ವಿದ್ಯಾರ್ಥಿಗಳನ್ನು ಬಳಕೆ..
ವಿಪತ್ತಿನ ಸಂದರ್ಭದಲ್ಲಿ ಅದರಿಂದ ಪಾರಾಗುವುದು ಹೇಗೆ ಎನ್ನುವುದರ ಬಗ್ಗೆ ವಿದ್ಯಾರ್ಥಿಗಳಲ್ಲಿ ಜಾಗೃತಿ ಮೂಡಿಸುವುದು ಒಳ್ಳೆಯ...