Saturday, June 15 , 2019
ನಾನು ಕೇಸರಿಯನ್ನು ಗೌರವಿಸುತ್ತೇನೆ, ನೀವು ಹಿಜಾಬನ್ನು ಗೌರವಿಸುತ್ತೀರಾ? ಸಾದ್ವಿಗೆ ಪ್ರಶ್ನಿಸಿದ ಬಿಜೆಪಿ ನಾಯಕಿ ಫಾತಿಮಾ

ಭೋಪಾಲ್ (26-04-2019): ಮಾಲೆಂಗಾವ್ ಬಾಂಬ್ ಸ್ಫೋಟದ ಆರೋಪಿ, ಭೋಪಾಲ್ ಬಿಜೆಪಿ ಅಭ್ಯರ್ಥಿ ಸಾದ್ವಿ ಪ್ರಜ್ಞಾ ಸಿಂಗ್ ಮುಸ್ಲಿಮರಲ್ಲಿ ಕ್ಷಮೆಯಾಚಿಸಿದ್ರೆ ತಾನು ಆಕೆಯ ಪರವಾಗಿ ಚುನಾವಣಾ ಪ್ರಚಾರ ನಡೆಸುವುದಾಗಿ ಬಿಜೆಪಿ ನಾಯಕಿ ಫಾತಿಮಾ ರಸೂಲ್ ಸಿದ್ದಿಕಿ ಹೇಳಿದ್ದಾರೆ.

ನಾನು ಕೇಸರಿಯನ್ನು ಗೌರವಿಸುತ್ತೇನೆ ಎಂದ ಫಾತಿಮಾ ರಸೂಲ್ ಸಿದ್ದಿಕಿ ಸಾದ್ವಿ ಹಿಜಾಬನ್ನು ಗೌರವಿಸುತ್ತಾರ ಎಂದು ಪ್ರಶ್ನಿಸಿದ್ದಾರೆ. ಸಾದ್ವಿ ಹಿಜಾಬನ್ನು ಗೌರವಿಸುತ್ತಾರೆ ಎಂದಾದರೆ ಮುಸ್ಲಿಂ ಸಮುದಾಯದಲ್ಲಿ ಕ್ಷಮೆಯಾಚಿಸಬೇಕು ಎಂದು ಹೇಳಿದ್ದಾರೆ.

ಹೇಮಂತ್ ಕರ್ಕರೆ ಬಗ್ಗೆ ಸಾದ್ವಿ ಹೇಳಿರುವ ಹೇಳಿಕೆ ನನಗೆ ನೋವು ತಂದಿದೆ ಎಂದ ಸಿದ್ದಿಕಿ, ಇದು ಬಿಜೆಪಿಯ ನಿಲುವಲ್ಲ, ಸಾದ್ವಿಯ ನಿಲುವು, ನಾನು ಸಾದ್ವಿ ಪರ ಪ್ರಚಾರ ನಡೆಸುವುದಿಲ್ಲ ಎಂದು ಹೇಳಿದ್ದಾರೆ.

ನನಗೆ ಬಿಜೆಪಿ ವಿರುದ್ಧ ಅಸಮಾಧಾನವಿಲ್ಲ, ಆದರೆ ಸಾದ್ವಿಯ ಹೇಳಿಕೆಯಿಂದ ನೋವು ತಂದಿದೆ. ಅವರು ಹೇಳಿಕೆ ಕೊಟ್ಟು ಜನರನ್ನು ಪ್ರಚೋದಿಸುವುದು ಸರಿಯಲ್ಲ ಎಂದು ಸಿದ್ದಿಕಿ ಹೇಳಿದ್ದಾರೆ.

 

 

Like us on facebook
Disclaimer:

ರಾಷ್ಟ್ರಧ್ವನಿ ಅಂತಾರ್ಜಾಲ ಸುದ್ದಿ ವಾಹಿನಿಯಲ್ಲಿ ಪ್ರಕಟವಾಗುವ ಸುದ್ದಿಗಳ ಕುರಿತು ಸಾರ್ವಜನಿಕರು ಆರೋಗ್ಯಕರ ಚರ್ಚೆ, ಕಮೆಂಟ್ ಗಳನ್ನು ಮಾಡಬಹುದಾಗಿದೆ. ಧರ್ಮ, ಜಾತಿ ನಿಂದನೆಯಾಗುವಂತಹ ಮತ್ತು ಸಾಮರಸ್ಯ ಕೆಡಿಸುವಂತಹ ದುರುದ್ದೇಶಪೂರಿತ ಕಮೆಂಟ್ ಹಾಗೂ ಚರ್ಚೆ ಕಾನೂನು ರೀತಿಯಲ್ಲಿ ಅಪರಾಧವಾಗಿರುತ್ತದೆ. ದೇಶದ ಕಾನೂನು ಸುವ್ಯವಸ್ಥೆಗೆ ಧಕ್ಕೆ ತರುವಂತಹ ಯಾವುದೇ ಕಮೆಂಟ್ ಗಳನ್ನು ಹಾಕಿದ್ದಲ್ಲಿ, ಅದಕ್ಕೆ ಕಮೆಂಟ್ ಹಾಕುವವರೇ ಹೊಣೆಗಾರರಾಗಿರುತ್ತಾರೆ. ಅಂತಹವರ ಹೆಸರು ಮತ್ತು ಐಪಿ ಅಡ್ರೆಸ್ ಗಳನ್ನು ಸಂಬಂಧಪಟ್ಟ ಇಲಾಖೆಗೆ ಒದಗಿಸಲು ರಾಷ್ಟ್ರಧ್ವನಿ ಬದ್ಧವಾಗಿರುತ್ತದೆ.

ಸಿನಿಮಾ
ಸಂಪಾದಕೀಯ ಮತ್ತಷ್ಟು
ಅಪಾಯಕಾರಿ ಅಣಕು ಕಾರ್ಯಾಚರಣೆಗಳಲ್ಲಿ ವಿದ್ಯಾರ್ಥಿಗಳನ್ನು ಬಳಕೆ..
ವಿಪತ್ತಿನ ಸಂದರ್ಭದಲ್ಲಿ ಅದರಿಂದ ಪಾರಾಗುವುದು ಹೇಗೆ ಎನ್ನುವುದರ ಬಗ್ಗೆ ವಿದ್ಯಾರ್ಥಿಗಳಲ್ಲಿ ಜಾಗೃತಿ ಮೂಡಿಸುವುದು ಒಳ್ಳೆಯ...