Friday, August 23 , 2019
ದ್ವಿತೀಯ ಪಿಯುಸಿಯಲ್ಲಿ ಶೇ.82 ಅಂಕಪಡೆದು ಉತ್ತೀರ್ಣರಾದ ಸೈರಾಟ್ ಚಿತ್ರದ ನಾಯಕಿ

ಮಹಾರಾಷ್ಟ್ರ(29.05.2019): ಎರಡು ರಾಷ್ಟ್ರಪ್ರಶಸ್ತಿಗಳನ್ನು ಪಡೆದುಕೊಂಡ ಸೈರಾಟ್ ಚಿತ್ರದ ನಟಿ ರಿಂಕು ರಾಜಗುರು ದ್ವಿತೀಯ ಪಿಯುಸಿ ಪರೀಕ್ಷೆಯಲ್ಲಿ ಶೇ..82ರಷ್ಟು ಅಂಕಗಳನ್ನು ಪಡೆದು ಉತ್ತೀರ್ಣರಾಗಿದ್ದಾರೆ.

2017ರಲ್ಲಿ ಎಸೆಸೆಲ್ಸಿ ಪರೀಕ್ಷೆ ಬರೆದಿದ್ದ ರಿಂಕು ಶೇ.66ರಷ್ಟು ಅಂಕಗಳನ್ನು ಪಡೆದು ಉತ್ತೀರ್ಣರಾಗಿದ್ದರು. ಇದೀಗ ದ್ವಿತೀಯ ಪಿಯುಸಿಯಲ್ಲಿ ಹೆಚ್ಚಿನ ಅಂಕಗಳನ್ನು ಪಡೆದುಕೊಂಡಿದ್ದು, ಶೇ.82 ಫಲಿತಾಂಶ ದಾಖಲಿಸಿದ್ದಾರೆ. 655 ಅಂಕಗಳಲ್ಲಿ ಮರಾಠಿಯಲ್ಲಿ 86, ಇತಿಹಾಸದಲ್ಲಿ 86, ಭೂಗೋಳಶಾಸ್ತ್ರದಲ್ಲಿ 98, ರಾಜಕೀಯ ವಿಜ್ಞಾನದಲ್ಲಿ 83, ಅರ್ಥಶಾಸ್ತ್ರದಲ್ಲಿ 77 ಹಾಗೂ ಇಂಗ್ಲಿಷ್ ನಲ್ಲಿ 54 ಅಂಕಗಳನ್ನು ಗಳಿಸಿ ಒಟ್ಟು 633 ಅಂಕಗಳನ್ನು ಗಳಿಸಿದ್ದಾರೆ.

ರಿಂಕು ರಾಜಗುರು ಮೊದಲ ಬಾರಿ ನಟಿಸಿದ್ದ ಸೈರಾಟ್ ಸಿನಿಮಾ ಸೂಪರ್ ಹಿಟ್ ಆಗಿತ್ತು. ಈ ಚಿತ್ರಕ್ಕೆ 2 ರಾಷ್ಟ್ರಪ್ರಶಸ್ತಿಗಳು ದೊರಕಿದ್ದವು. ಈ ಚಿತ್ರ ಹಿಂದಿ ಕನ್ನಡದಲ್ಲೂ ರಿಮೇಕ್ ಆಗಿತ್ತು. ಕನ್ನಡ ಚಿತ್ರದಲ್ಲೂ ರಿಂಕು ನಟಿಸಿದ್ದು, ಎಸ್. ನಾರಾಯಣ್ ನಿರ್ದೇಶನದ ಮನಸು ಮಲ್ಲಿಗೆ ಚಿತ್ರದಲ್ಲಿಯೂ ರಿಂಕು ನಾಯಕಿ ನಟಿಯಾಗಿ ಅಭಿನಯಿಸಿದ್ದರು.

Like us on facebook
Disclaimer:

ರಾಷ್ಟ್ರಧ್ವನಿ ಅಂತಾರ್ಜಾಲ ಸುದ್ದಿ ವಾಹಿನಿಯಲ್ಲಿ ಪ್ರಕಟವಾಗುವ ಸುದ್ದಿಗಳ ಕುರಿತು ಸಾರ್ವಜನಿಕರು ಆರೋಗ್ಯಕರ ಚರ್ಚೆ, ಕಮೆಂಟ್ ಗಳನ್ನು ಮಾಡಬಹುದಾಗಿದೆ. ಧರ್ಮ, ಜಾತಿ ನಿಂದನೆಯಾಗುವಂತಹ ಮತ್ತು ಸಾಮರಸ್ಯ ಕೆಡಿಸುವಂತಹ ದುರುದ್ದೇಶಪೂರಿತ ಕಮೆಂಟ್ ಹಾಗೂ ಚರ್ಚೆ ಕಾನೂನು ರೀತಿಯಲ್ಲಿ ಅಪರಾಧವಾಗಿರುತ್ತದೆ. ದೇಶದ ಕಾನೂನು ಸುವ್ಯವಸ್ಥೆಗೆ ಧಕ್ಕೆ ತರುವಂತಹ ಯಾವುದೇ ಕಮೆಂಟ್ ಗಳನ್ನು ಹಾಕಿದ್ದಲ್ಲಿ, ಅದಕ್ಕೆ ಕಮೆಂಟ್ ಹಾಕುವವರೇ ಹೊಣೆಗಾರರಾಗಿರುತ್ತಾರೆ. ಅಂತಹವರ ಹೆಸರು ಮತ್ತು ಐಪಿ ಅಡ್ರೆಸ್ ಗಳನ್ನು ಸಂಬಂಧಪಟ್ಟ ಇಲಾಖೆಗೆ ಒದಗಿಸಲು ರಾಷ್ಟ್ರಧ್ವನಿ ಬದ್ಧವಾಗಿರುತ್ತದೆ.

ಸಿನಿಮಾ
ಸಂಪಾದಕೀಯ ಮತ್ತಷ್ಟು
ಅಪಾಯಕಾರಿ ಅಣಕು ಕಾರ್ಯಾಚರಣೆಗಳಲ್ಲಿ ವಿದ್ಯಾರ್ಥಿಗಳನ್ನು ಬಳಕೆ..
ವಿಪತ್ತಿನ ಸಂದರ್ಭದಲ್ಲಿ ಅದರಿಂದ ಪಾರಾಗುವುದು ಹೇಗೆ ಎನ್ನುವುದರ ಬಗ್ಗೆ ವಿದ್ಯಾರ್ಥಿಗಳಲ್ಲಿ ಜಾಗೃತಿ ಮೂಡಿಸುವುದು ಒಳ್ಳೆಯ...
POLL

[democracy id="1"]