Tuesday, July 23 , 2019
BREAKING NEWS
ತಲೈವಾ`ದರ್ಬಾರ್’: ರಜಿನಿ ಹೊಸ ಸಿನಿಮಾದ ಫಸ್ಟ್ ಲುಕ್ ಬಿಡುಗಡೆ

ವಿಜಯ್ ಅಭಿನಯದ ಸರ್ಕಾರ್ ಸೂಪರ್ ಹಿಟ್  ಚಿತ್ರದ ಬಳಿ ಎ.ಆರ್.ಮುರುಗದಾಸ್ ನಿರ್ದೇಶಿಸುವ ಹೊಸ ಚಿತ್ರದಲ್ಲಿ ಸೂಪರ್ ಸ್ಟಾರ್  ರಜನಿಕಾಂತ್ ಅಭಿನಯಿಸಲಿದ್ದಾರೆ.

ಎ.ಆರ್.ಮುರುಗದಾಸ್ ಟ್ವಿಟ್ಟರ್ ನಲ್ಲಿ `ದರ್ಬಾರ್’ ಎಂಬ ಹೆಸರಿನ ಈ ಚಿತ್ರದ ಫಸ್ಟ್ ಲುಕ್  ಬಿಡುಗಡೆಗೊಳಿಸಿದ್ದಾರೆ.

ಇದು ರಜಿನಿಕಾಂತ್ ನಟನೆಯ 167 ನೇ ತಮಿಳು ಸಿನಿಮಾವಾಗಿದ್ದು, ಚಿತ್ರದಲ್ಲಿ ಅವರು  ಇದೇ ಮೊದಲ ಬಾರಿಗೆ ಖಡಕ್ ಐಪಿಎಸ್ ಅಧಿಕಾರಿ ಪಾತ್ರದಲ್ಲಿ ಕಾಣಿಸಿಕೊಳ್ಳುತ್ತಿದ್ದಾರೆ.

ವಿಶೇಷವೇನೆಂದರೆ ಮುರುಗದಾಸ್ ರಜನಿಗೆ ಆ್ಯಕ್ಷನ್ ಕಟ್ ಹೇಳುತ್ತಿರುವುದು ಇದೇ ಮೊದಲು. ರಜಿನಿಯನ್ನು ಐಪಿಎಸ್ ಅಧಿಕಾರಿ ಹಾಗೂ ಸಮಾಜ ಸೇವಕನಾಗಿ ದ್ವಿಪಾತ್ರದಲ್ಲಿ ತೋರಿಸುತ್ತಿದ್ದಾರೆ.

ಇನ್ನು ಲಿಕಾ ಪ್ರೊಡಕ್ಷನ್ ನಲ್ಲಿ ನಿರ್ಮಾಣವಾಗುತ್ತಿದೆ. ರಜಿನಿಯ ಬ್ಲಾಕ್ ಬಸ್ಟರ್ ಸಿನಿಮಾ 2.0 ಕೂಡ ಲಿಕಾ ಪ್ರೊಡಕ್ಷನ್ ನಿಂದಲೇ ನಿರ್ಮಾಣವಾಗಿದೆ.

ಅನಿರುದ್ಧ ರವಿಚಂದ್ರನ್ ಸಂಗೀತ ನಿರ್ದೇಶನ ಮಾಡಲಿರುವ  ಈ ಸಿನಿಮಾದಲ್ಲಿ ನಯನತಾರ  ನಾಯಕಿ ಪಾತ್ರದಲ್ಲಿ ಕಾಣಿಸಿಕೊಳ್ಳುತ್ತಿದ್ದಾರೆ. ಚಿತ್ರದ ಶೂಟಿಂಗ್ ಏಪ್ರಿಲ್ 10 ರಿಂದ ಶುರುವಾಗಲಿದ್ದು,  ಮುಂದಿನ ವರುಷ ಸಂಕ್ರಾಂತಿಗೆ ತೆರೆ ಕಾಣಲಿದೆ.

Like us on facebook
Disclaimer:

ರಾಷ್ಟ್ರಧ್ವನಿ ಅಂತಾರ್ಜಾಲ ಸುದ್ದಿ ವಾಹಿನಿಯಲ್ಲಿ ಪ್ರಕಟವಾಗುವ ಸುದ್ದಿಗಳ ಕುರಿತು ಸಾರ್ವಜನಿಕರು ಆರೋಗ್ಯಕರ ಚರ್ಚೆ, ಕಮೆಂಟ್ ಗಳನ್ನು ಮಾಡಬಹುದಾಗಿದೆ. ಧರ್ಮ, ಜಾತಿ ನಿಂದನೆಯಾಗುವಂತಹ ಮತ್ತು ಸಾಮರಸ್ಯ ಕೆಡಿಸುವಂತಹ ದುರುದ್ದೇಶಪೂರಿತ ಕಮೆಂಟ್ ಹಾಗೂ ಚರ್ಚೆ ಕಾನೂನು ರೀತಿಯಲ್ಲಿ ಅಪರಾಧವಾಗಿರುತ್ತದೆ. ದೇಶದ ಕಾನೂನು ಸುವ್ಯವಸ್ಥೆಗೆ ಧಕ್ಕೆ ತರುವಂತಹ ಯಾವುದೇ ಕಮೆಂಟ್ ಗಳನ್ನು ಹಾಕಿದ್ದಲ್ಲಿ, ಅದಕ್ಕೆ ಕಮೆಂಟ್ ಹಾಕುವವರೇ ಹೊಣೆಗಾರರಾಗಿರುತ್ತಾರೆ. ಅಂತಹವರ ಹೆಸರು ಮತ್ತು ಐಪಿ ಅಡ್ರೆಸ್ ಗಳನ್ನು ಸಂಬಂಧಪಟ್ಟ ಇಲಾಖೆಗೆ ಒದಗಿಸಲು ರಾಷ್ಟ್ರಧ್ವನಿ ಬದ್ಧವಾಗಿರುತ್ತದೆ.

ಸಿನಿಮಾ
ಸಂಪಾದಕೀಯ ಮತ್ತಷ್ಟು
ಅಪಾಯಕಾರಿ ಅಣಕು ಕಾರ್ಯಾಚರಣೆಗಳಲ್ಲಿ ವಿದ್ಯಾರ್ಥಿಗಳನ್ನು ಬಳಕೆ..
ವಿಪತ್ತಿನ ಸಂದರ್ಭದಲ್ಲಿ ಅದರಿಂದ ಪಾರಾಗುವುದು ಹೇಗೆ ಎನ್ನುವುದರ ಬಗ್ಗೆ ವಿದ್ಯಾರ್ಥಿಗಳಲ್ಲಿ ಜಾಗೃತಿ ಮೂಡಿಸುವುದು ಒಳ್ಳೆಯ...