Saturday, September 19 , 2020
BREAKING NEWS
 
ಸೇತುವೆ ಕೊಚ್ಚಿ ಹೋಗಿ 30 ವರ್ಷವಾದರೂ ಸರ್ಕಾರ ನಿರ್ಮಿಸಲಿಲ್ಲ | ಸರ್ಕಾರಕ್ಕೆ ಮುಖಭಂಗವಾಗುವಂತೆ ತಾವೇ ಸೇತುವೆ ನಿರ್ಮಿಸಿದ ಗ್ರಾಮಸ್ಥರು ,          ಸೈಕಲ್ ನಲ್ಲಿ ತೆರಳಿದ್ದ ಬಾಲಕಿ ರಾತ್ರಿಯಾದರೂ ಬರಲಿಲ್ಲ! | ಬೆಳಗ್ಗೆ ಕಾದಿತ್ತು ಪೋಷಕರಿಗೆ ಶಾಕ್ | ಒಂದು ಮನಕರಗಿಸುವ ಘಟನೆ ,          ಕೊರೊನಾ ಹಾಟ್ ಸ್ಪಾಟ್ ಆದ ನಾಗಪುರದ ಆರೆಸ್ಸೆಸ್ ಕಚೇರಿ; 9 ಹಿರಿಯ ನಾಯಕರಿಗೆ ಕೋವಿಡ್ ಪಾಸಿಟಿವ್ ,          ಅಕುಲ್ ಬಾಲಾಜಿ ರೆಸಾರ್ಟ್ ನಲ್ಲಿ ನಡೆಯುತ್ತಿತ್ತಾ ಮತ್ತಿನ ದಂಧೆ | ಸ್ಟಾರ್ ನಟರ ಮೋಜು ಮಸ್ತಿಯ ಪಾರ್ಟಿಯಲ್ಲಿ ಡ್ರಗ್ಸ್ ನದ್ದೇ ಕಾರುಬಾರು! ,          ಈ ಬಾರಿಯ ದೆಹಲಿ ಪ್ರಯಾಣದಲ್ಲಿ ಆದ ಅನುಭವವೇನು? | ಸಿಎಂ ಯಡಿಯೂರಪ್ಪ ಏನು ಹೇಳಿದರು? ,          ಅಲ್ ಖೈದಾ ಭಯೋತ್ಪಾದಕರೆಂದು 9 ಮಂದಿಯ ಬಂಧಿಸಿದ ಎನ್ ಐಎ ,         
ಚೈತ್ರಾ ಕೋಟೂರು ಬಿಗ್ ಬಾಸ್ ಮನೆಯಿಂದ ಹೊರ ಬಿದ್ದದ್ದು ಹೇಗೆ? | ಪರದೆಯ ಹಿಂದೆ ನಡೆದದ್ದೇನು?

ಕಲರ್ಸ್ ಕನ್ನಡದಲ್ಲಿ ಕಿಚ್ಚ ಸುದೀಪ್ ನಿರೂಪಣೆಯಿಂದ ಮೂಡಿ ಬರುತ್ತಿರುವ ಬಿಗ್ ಬಾಸ್ ಕಾರ್ಯಕ್ರಮದಿಂದ ಚೈತ್ರಾ ಕೋಟೂರು ಅವರು ಎಲಿಮಿನೇಶನ್ ಆಗಿರುವುದು ಈಗಾಗಲೇ ಪ್ರಸಾರವಾಗಿದೆ. ಆದರೆ, ಚೈತ್ರಾ ಕೋಟೂರು ಬಿಗ್ ಬಾಸ್ ನಿಂದ ಹೊರ ಬಿದ್ದದ್ದೇಕೆ ಎನ್ನುವ ವಿಚಾರ ಇನ್ನೂ ಬಹುತೇಕ ಜನರಿಗೆ ಪ್ರಶ್ನೆಯಾಗಿಯೇ ಉಳಿದಿದೆ.

ಚೈತ್ರಾ ಕೋಟೂರು ಅವರು ಆ ಒಂದು ಶಬ್ದವನ್ನು ಬಳಸದಿದ್ದರೆ, ಬಿಗ್ ಬಾಸ್ ನೊಳಗೆ ಮುಂದುವರಿಯುತ್ತಿದ್ದರು ಅಂತನೇ ಇದೀಗ ಎಲ್ಲೆಡೆ ಜನ ಹೇಳುತ್ತಿದ್ದಾರೆ. ಅಸ್ಪೃಶ್ಯತೆಯ ಬಗ್ಗೆ ಚೈತ್ರಾ ಮಾತನಾಡಿದ್ದರು. ಇದಾದ ಬಳಿಕ ಅವರು ಈ ಬಗ್ಗೆ ಕ್ಷಮೆಯನ್ನೂ ಕೇಳಿದ್ದರು. ಆದರೆ, ಅವರು ಆಡಿರುವ ಮಾತು ಜನರನ್ನು ತೀವ್ರವಾಗಿ ನೋಯಿಸಿರುವುದಂತೂ ಸತ್ಯ. ಹೀಗಾಗಿಯೇ ಅವರ ವಿರುದ್ಧ ಭಾರೀ ಪ್ರತಿಭಟನೆ ನಡೆದಿದ್ದು, ಬಿಗ್ ಬಾಸ್ ಮುಖ್ಯಸ್ಥರಿಗೆ ಪ್ರತಿಭಟನೆಯ ಬಿಸಿ ಸರಿಯಾಗಿಯೇ ತಗಲಿದೆ ಎಂದು ಹೇಳಲಾಗುತ್ತಿದೆ.

ಚೈತ್ರಾ ಕೋಟೂರು ಅವರು ಅಸ್ಪೃಶ್ಯತೆಯ ಬಗ್ಗೆ ಆಡಿರುವ ಮಾತುಗಳು ಅಸ್ಪೃಶ್ಯತಾ ವಿರೋಧಿ ಹೋರಾಟಗಾರರನ್ನು ರೊಚ್ಚಿಗೆಬ್ಬಿಸಿತ್ತು. ಅಸ್ಪಶೃತೆಯ ಬಗ್ಗೆ ಇಷ್ಟೊಂದು ಕೇವಲವಾಗಿ ಅವರು ಮಾತನಾಡಿರುವುದನ್ನು ತೀವ್ರವಾಗಿ ವಿವಿಧ ಸಂಘಟನೆಗಳು ವಿರೋಧಿಸಿ ಬಿಗ್ ಬಾಸ್ ಕಾರ್ಯಕ್ರಮದ ವಿರುದ್ಧ ಪ್ರತಿಭಟಿಸಿದ್ದು, ಕಿಚ್ಚ ಸುದೀಪ್ ಅವರನ್ನೂ ತರಾಟೆಗೆತ್ತಿಕೊಂಡಿದ್ದರು.

ಸದ್ಯ ಈ ಬಗ್ಗೆ ವಿಡಿಯೋವೊಂದು ಸಾಮಾಜಿಕ ಜಾಲತಾಣಗಳಲ್ಲಿ ವೈರಲ್ ಆಗಿದ್ದು, ಈ ವಿಡಿಯೋದಲ್ಲಿ ವಿವಿಧ ಸಂಘಟನೆಗಳು ನಡೆಸಿದ ಪ್ರತಿಭಟನೆಯಲ್ಲಿ, ಬಿಗ್ ಬಾಸ್ ಮುಖ್ಯಸ್ಥರನ್ನು ಪ್ರತಿಭಟನಾಕಾರರು ತೀವ್ರವಾಗಿ ತರಾಟೆಗೆತ್ತಿಕೊಂಡಿದ್ದಾರೆ. ಪ್ರತಿಭಟನೆ ನಡೆಸುತ್ತಿದ್ದ ಜಾಗದಲ್ಲಿ ಬಿಗ್ ಬಾಸ್ ಮುಖ್ಯಸ್ಥರು ಮೈಕ್ ನಲ್ಲಿ ಮಾತನಾಡಲೂ ಹಿಂಜರಿದಿದ್ದಾರೆ. ಈ ವೇಳೆ ಪ್ರತಿಭಟನಾಕಾರರು ಮೈಕ್ ನಲ್ಲಿ ಮಾತನಾಡುವಂತೆ ತೀವ್ರ ಆಕ್ರೋಶ ವ್ಯಕ್ತಪಡಿಸಿದ್ದರು. ತಕ್ಷಣವೇ ಚೈತ್ರಾ ಕೋಟೂರು ಅವರನ್ನು ಬಿಗ್ ಬಾಸ್ ಮನೆಯಿಂದ ಹೊರ ಹಾಕಬೇಕು. ಅಸ್ಪೃಶ್ಯತೆಯ ಬಗ್ಗೆ ಚೈತ್ರಾ ಅವರು ಮಾತನಾಡಿರುವ ವಿಚಾರಕ್ಕೆ ಸಂಬಂಧಿಸಿದಂತೆ ಕಿಚ್ಚ ಸುದೀಪ್ ಅವರು ಕಾರ್ಯಕ್ರಮದಲ್ಲಿ ಸ್ಪಷ್ಟನೆ ನೀಡಬೇಕು ಎಂದು ಪ್ರತಿಭಟನಾಕಾರರು ಬಿಗ್ ಬಾಸ್ ಮುಖ್ಯಸ್ಥರಿಗೆ ತಾಕೀತು ಮಾಡಿದ್ದರು.

ಪ್ರತಿಭಟನೆಯ ತೀವ್ರತೆ ಅರಿತ ಬಿಗ್ ಬಾಸ್ ಮುಖ್ಯಸ್ಥರು ಕೊನೆಗೂ ಚೈತ್ರಾ ಕೋಟೂರು ಅವರನ್ನು ಬಿಗ್ ಬಾಸ್ ಮನೆಯಿಂದ ಹೊರ ಕಳಿಸಿದ್ದಾರೆ. ಅಸ್ಪೃಶ್ಯತೆಯ ಬಗ್ಗೆ ಚೈತ್ರಾ ಕೋಟೂರು ಬಿಗ್ ಬಾಸ್ ಬಾಸ್ ಮನೆಯಿಂದ ಹೊರ ಬಿದ್ದರೂ, ಜನ ಈಗಲೂ ಸಾಮಾಜಿಕ ಜಾಲತಾಣಗಳಲ್ಲಿ ಚೈತ್ರಾ ಕೋಟೂರು ವಿರುದ್ಧ ಆಕ್ರೋಶ ವ್ಯಕ್ತಪಡಿಸುತ್ತಿರುವುದು ಕಂಡು ಬಂದಿದೆ.

ವಿಡಿಯೋ ನೋಡಿ

ಇನ್ನಷ್ಟು ವಿಡಿಯೋಗಳಿಗೆ ಸಬ್ಸ್ಕ್ರೈಬ್ ಆಗಿ, ಬೆಲ್ ಬಟನ್ ಪ್ರೆಸ್ ಮಾಡಿ

https://youtu.be/NIdJYuHFDDw
Like us on facebook
Disclaimer:

ರಾಷ್ಟ್ರಧ್ವನಿ ಅಂತಾರ್ಜಾಲ ಸುದ್ದಿ ವಾಹಿನಿಯಲ್ಲಿ ಪ್ರಕಟವಾಗುವ ಸುದ್ದಿಗಳ ಕುರಿತು ಸಾರ್ವಜನಿಕರು ಆರೋಗ್ಯಕರ ಚರ್ಚೆ, ಕಮೆಂಟ್ ಗಳನ್ನು ಮಾಡಬಹುದಾಗಿದೆ. ಧರ್ಮ, ಜಾತಿ ನಿಂದನೆಯಾಗುವಂತಹ ಮತ್ತು ಸಾಮರಸ್ಯ ಕೆಡಿಸುವಂತಹ ದುರುದ್ದೇಶಪೂರಿತ ಕಮೆಂಟ್ ಹಾಗೂ ಚರ್ಚೆ ಕಾನೂನು ರೀತಿಯಲ್ಲಿ ಅಪರಾಧವಾಗಿರುತ್ತದೆ. ದೇಶದ ಕಾನೂನು ಸುವ್ಯವಸ್ಥೆಗೆ ಧಕ್ಕೆ ತರುವಂತಹ ಯಾವುದೇ ಕಮೆಂಟ್ ಗಳನ್ನು ಹಾಕಿದ್ದಲ್ಲಿ, ಅದಕ್ಕೆ ಕಮೆಂಟ್ ಹಾಕುವವರೇ ಹೊಣೆಗಾರರಾಗಿರುತ್ತಾರೆ. ಅಂತಹವರ ಹೆಸರು ಮತ್ತು ಐಪಿ ಅಡ್ರೆಸ್ ಗಳನ್ನು ಸಂಬಂಧಪಟ್ಟ ಇಲಾಖೆಗೆ ಒದಗಿಸಲು ರಾಷ್ಟ್ರಧ್ವನಿ ಬದ್ಧವಾಗಿರುತ್ತದೆ.

ಸಿನಿಮಾ
ಸಂಪಾದಕೀಯ ಮತ್ತಷ್ಟು
ಸಂವಿಧಾನಾತ್ಮಕ ಸದನಗಳಲ್ಲಿ ಪಾಸ್ ಆಗುತ್ತಿದೆ ‘ಹಿಂದೂ..
ದ್ವೇಷಪೂರಿತ, ಅಸಂವಿಧಾನಿಕ ಪೌರತ್ವ ತಿದ್ದುಪಡಿ ಮಸೂದೆ ಉಭಯ ಸದನಗಳಲ್ಲಿ ಅಂಗೀಕಾರವಾಗಿದೆ. ಇನ್ನು ರಾಷ್ಟ್ರಪತಿ ಅಂಕಿತ...
POLL

[democracy id="1"]