Saturday, June 15 , 2019
ಚುನಾವಣೆ ಗೆದ್ದ ಬಳಿಕ ಬಿಜೆಪಿಯ ಚೌಕಿದಾರರು ನಾಪತ್ತೆ ! | ಫಲಿತಾಂಶ ಬಂದು ಒಂದೇ ದಿನದಲ್ಲಿ ಚೌಕಿದಾರನನ್ನು ಕಿತ್ತೆಸೆದ ಬಿಜೆಪಿ

ನವದೆಹಲಿ(24.05.2019): ಲೋಕಸಭಾ ಚುನಾವಣೆಯಲ್ಲಿ ಅಮೋಘ ಗೆಲುವಿನ ಬಳಿಕ ಭಾರತದ ಚೌಕಿದಾರರು ನಾಪತ್ತೆಯಾಗಿದ್ದು, ಟ್ವಿಟ್ಟರ್ ಸೇರಿದಂತೆ ವಿವಿಧ ಸಾಮಾಜಿಕ ಜಾಲತಾಣಗಳಲ್ಲಿ ಫಲಿತಾಂಶ ಪ್ರಕಟಗೊಂಡು ಒಂದು ದಿನದೊಳಗೆ ಚೌಕಿದಾರರು ನಾಪತ್ತೆಯಾಗಿದ್ದಾರೆ.

ಲೋಕಸಭಾ ಚುನಾವಣೆ ಗೆಲ್ಲಲು ಭಾರತದ ಕಾವಲುಗಾರರು ನಾವು ಎಂದು ಹೇಳಿಕೊಂಡ ಪ್ರಧಾನಿ ನರೇಂದ್ರ ಮೋದಿ ಹಾಗೂ ಬಿಜೆಪಿ ರಾಷ್ಟ್ರೀಯ ಅಧ್ಯಕ್ಷ ಅಮಿತ್ ಶಾ ಸೇರಿದಂತೆ ಪ್ರಮುಖ ಬಿಜೆಪಿ ನೇತಾರರು ತಮ್ಮ ಹೆಸರಿನ ಮುಂದೆ ಸೇರಿದ್ದ ಚೌಕಿದಾರ್ ಸರ್ ನೇಮ್ ನ್ನು ತೆಗೆದು ಹಾಕಿದ್ದಾರೆ.

ಬಿಜೆಪಿ ರಾಜ್ಯಾಧ್ಯಕ್ಷ ಯಡಿಯೂರಪ್ಪ ಅವರೂ ಚುನಾವಣೆ ಸಂದರ್ಭ  ತಮ್ಮ ಹೆಸರಿಗೆ ಜೋತು ಹಾಕಿದ್ದ ಚೌಕಿದಾರ್ ಹೆಸರನ್ನು ಅಳಿಸಿ ಹಾಕಿದ್ದು, ಬಿ.ಎಸ್.ಯಡಿಯೂರಪ್ಪ ಎಂದು ಮರುನಾಮಕರಣ ಮಾಡಿಕೊಂಡಿದ್ದಾರೆ. ಬಿಜೆಪಿ ರಾಜ್ಯ ನಾಯಕರಿಂದ ಹಿಡಿದು ರಾಷ್ಟ್ರ ನಾಯಕರವರೆಗೆ ಏಕಕಾಲದಲ್ಲಿ ಎಲ್ಲರ ಹೆಸರಿಗೆ ನೇತು ಹಾಕಲಾಗಿದ್ದ ಚೌಕಿದಾರ್ ಹೆಸರನ್ನು ಏಕ ಕಾಲಕ್ಕೆ ತೆಗೆದು ಹಾಕಲಾಗಿದೆ. ಇದು ಬಿಜೆಪಿ ರಾಷ್ಟ್ರೀಯ ನಾಯಕರ ನಿರ್ದೇಶನದಂತೆ ನಡೆದಿದೆ ಎಂದು ಹೇಳಲಾಗಿದೆ.

ಇನ್ನೂ ಈ ಸಂಬಂಧ ಸಾಮಾಜಿಕ ಜಾಲತಾಣಗಳಲ್ಲಿ ಭಾರೀ ಟ್ರೋಲ್ ಆರಂಭವಾಗಿದೆ. ಚುನಾವಣೆಯವರೆಗೆ ಬಿಜೆಪಿ ನಾಯಕರು ತಾತ್ಕಾಲಿಕವಾಗಿ ತಮ್ಮ ಹೆಸರನ್ನು ಬದಲಿಸಿಕೊಂಡಿದ್ದರು. ಇದೀಗ ಚುನಾವಣೆ ಗೆದ್ದ ಬಳಿಕ ತಮ್ಮ ಹೆಸರಿನಲ್ಲಿದ್ದ ಚೌಕಿದಾರನನ್ನು ಕಿತ್ತು ಎಸೆದಿದ್ದಾರೆ ಎಂದು ವ್ಯಾಪಕ ಟ್ರೋಲ್ ಕಾಣಿಸಿಕೊಂಡಿದೆ.

Like us on facebook
Disclaimer:

ರಾಷ್ಟ್ರಧ್ವನಿ ಅಂತಾರ್ಜಾಲ ಸುದ್ದಿ ವಾಹಿನಿಯಲ್ಲಿ ಪ್ರಕಟವಾಗುವ ಸುದ್ದಿಗಳ ಕುರಿತು ಸಾರ್ವಜನಿಕರು ಆರೋಗ್ಯಕರ ಚರ್ಚೆ, ಕಮೆಂಟ್ ಗಳನ್ನು ಮಾಡಬಹುದಾಗಿದೆ. ಧರ್ಮ, ಜಾತಿ ನಿಂದನೆಯಾಗುವಂತಹ ಮತ್ತು ಸಾಮರಸ್ಯ ಕೆಡಿಸುವಂತಹ ದುರುದ್ದೇಶಪೂರಿತ ಕಮೆಂಟ್ ಹಾಗೂ ಚರ್ಚೆ ಕಾನೂನು ರೀತಿಯಲ್ಲಿ ಅಪರಾಧವಾಗಿರುತ್ತದೆ. ದೇಶದ ಕಾನೂನು ಸುವ್ಯವಸ್ಥೆಗೆ ಧಕ್ಕೆ ತರುವಂತಹ ಯಾವುದೇ ಕಮೆಂಟ್ ಗಳನ್ನು ಹಾಕಿದ್ದಲ್ಲಿ, ಅದಕ್ಕೆ ಕಮೆಂಟ್ ಹಾಕುವವರೇ ಹೊಣೆಗಾರರಾಗಿರುತ್ತಾರೆ. ಅಂತಹವರ ಹೆಸರು ಮತ್ತು ಐಪಿ ಅಡ್ರೆಸ್ ಗಳನ್ನು ಸಂಬಂಧಪಟ್ಟ ಇಲಾಖೆಗೆ ಒದಗಿಸಲು ರಾಷ್ಟ್ರಧ್ವನಿ ಬದ್ಧವಾಗಿರುತ್ತದೆ.

ಸಿನಿಮಾ
ಸಂಪಾದಕೀಯ ಮತ್ತಷ್ಟು
ಅಪಾಯಕಾರಿ ಅಣಕು ಕಾರ್ಯಾಚರಣೆಗಳಲ್ಲಿ ವಿದ್ಯಾರ್ಥಿಗಳನ್ನು ಬಳಕೆ..
ವಿಪತ್ತಿನ ಸಂದರ್ಭದಲ್ಲಿ ಅದರಿಂದ ಪಾರಾಗುವುದು ಹೇಗೆ ಎನ್ನುವುದರ ಬಗ್ಗೆ ವಿದ್ಯಾರ್ಥಿಗಳಲ್ಲಿ ಜಾಗೃತಿ ಮೂಡಿಸುವುದು ಒಳ್ಳೆಯ...