Sunday, May 31 , 2020
ಗೂಗಲ್ ನಾರದನ ಆವಿಷ್ಕಾರ | ‘ಪುರಾಣ ತಂತ್ರಜ್ಞಾನ-2’

ಏನಿದು…? ಮತಿಭ್ರಮಣೆಯೇ…? ಅಜ್ಞಾನದ ಪರಮಾವಧಿಯೇ..?  ಪುರಾಣಕ್ಕೂ ಆಧುನಿಕತೆಗೂ ನಡೆಯುತ್ತಿರುವ ಯುದ್ಧವೇ…? ಇದು ಕೆಲವರಿಗೆ ಅಚ್ಚರಿಯ ವಿಚಾರವಾದರೆ, ಕೆಲವರಿಗೆ ಹಾಸ್ಯದ ವಿಚಾರ. ಆಧುನಿಕ ಉಪಕರಣಗಳೂ ದೇವರಾಗಲು ಆರಂಭವಾಯಿತೆಂದರೆ, ಅಚ್ಚರಿಪಡದಿರಲು ಸಾಧ್ಯವೇ?

ಪುರಾಣ ಕಾಲದಲ್ಲಿಯೇ ಇಂಟರ್ ನೆಟ್ ವ್ಯವಸ್ಥೆಯನ್ನು ಕಂಡು ಹುಡುಕಲಾಗಿತ್ತು. ಕುರುಡ ರಾಜ ಧೃತರಾಷ್ಟ್ರ ಇಂಟರ್ ನೆಟ್ ಮೂಲಕ ಕುರುಕ್ಷೇತ್ರವನ್ನು ಲೈವ್ ಆಗಿ ವೀಕ್ಷಿಸುತ್ತಿದ್ದ ಎಂಬಂತಹ ಹೇಳಿಕೆಗಳನ್ನು ತ್ರಿಪುರದ ಮುಖ್ಯಮಂತ್ರಿ ಬಿಪ್ಲಬ್ ಕುಮಾರ್ ನೀಡಿ ವಿವಾದಕ್ಕೀಡಾಗಿರುವುದು ಅಚ್ಚರಿಯ ವಿಷಯವಾದರೂ, ಇಂತಹ ಹೇಳಿಕೆ ಪ್ರಜ್ಞಾವಂತರಿಗೆ ಅಚ್ಚರಿಯ ವಿಷಯವೇನಲ್ಲ. ಇಂತಹ ಅದೆಷ್ಟೋ ಹೇಳಿಕೆಗಳನ್ನು ಕೇಳಿ ಕೇಳಿ ಜನರಿಗೆ ಸಾಕಾಗಿ ಹೋಗಿದೆ.

ಬಿಪ್ಲಬ್ ಕುಮಾರ್ ಅವರು ಒಂದು ರಾಜ್ಯದ ಸಿಎಂ ಆಗಿ ಇಂತಹದ್ದೊಂದು ಅಜ್ಞಾನದ ಹೇಳಿಕೆಯನ್ನು ನೀಡಿದ್ದಾರೆ. ವಿದ್ಯುತ್ ಇಲ್ಲದ ಕಾಲಘಟ್ಟದಲ್ಲಿ ಇಂಟರ್ ನೆಟ್ ಹೇಗೆ ವರ್ಕ್ ಆಗುತ್ತಿತ್ತು ಎನ್ನುವುದನ್ನು ಅವರು ಯಾವ ರೀತಿಯಲ್ಲಿ ಸಮರ್ಥಿಸುತ್ತಾರೋ ಗೊತ್ತಿಲ್ಲ. ಉಪಗ್ರಹವನ್ನು ಹೇಗೆ ಬಾಹ್ಯಾಕಾಶಕ್ಕೆ ಕಳಿಸಿದರೋ ಗೊತ್ತಿಲ್ಲ. ಪುರಾಣವನ್ನು ಆಧುನಿಕತೆಗೆ ಟಚ್ ಮಾಡಿ, ಈ ಎರಡರ ಪಾವಿತ್ರ್ಯವನ್ನು ಬಿಪ್ಲಬ್ ಹಾಳು ಮಾಡಿದ್ದಾರೆ.

ಇದೀಗ ಬಿಜೆಪಿಯ ಪುರಾಣ ತಂತ್ರಜ್ಞಾನ ಮತ್ತೆ ಮುಂದುವರಿದಿದ್ದು, ‘ಗೂಗಲ್ ನಾರದ’ನ  ಆವಿಷ್ಕಾರವಾಗಿದೆ. ಇದನ್ನು ಆವಿಷ್ಕಾರ ಮಾಡಿರುವುದು ಗುಜರಾತ್ ಮುಖ್ಯಮಂತ್ರಿ ವಿಜಯ್ ರೂಪಾಣಿ ಅವರು. ಮಾಹಿತಿ ಕಣಜವಾಗಿರುವ ಗೂಗಲ್ ನಾರದಮುನಿಯಾಗಿದ್ದಾರೆ ಎಂದು ಅವರು ಹೇಳಿದ್ದಾರೆ.  ಇದಕ್ಕೆ ಅವರು ನೀಡಿರುವ ಸಮರ್ಥನೆ ನಾರದಮುನಿಗೆ ಜಗತ್ತಿನ ಆಗು-ಹೋಗುಗಳ ಬಗ್ಗೆ ಅರಿವಿತ್ತು ಎಂದು ಹೇಳಿಕೆ ನೀಡಿದ್ದಾರೆ. ಗೂಗಲ್ ಗೆ ಯಾವುದೇ ಮಾಹಿತಿಯನ್ನು ಅಪ್ ಲೋಡ್ ಮಾಡಿದರೆ ಮಾತ್ರ ಅದರಲ್ಲಿ ಇನ್ನೊಬ್ಬರಿಗೆ ಆ ಮಾಹಿತಿ ದೊರೆಯಲು ಸಾಧ್ಯ. ಹಾಗಾದರೆ ನಾರದಮುನಿಗೆ ಯಾರು ಮಾಹಿತಿಗಳನ್ನು ಅಪ್ ಲೋಡ್ ಮಾಡುತ್ತಿದ್ದರು ಎನ್ನುವುದನ್ನು ವಿಜಯ್ ರೂಪಾಣಿ ಅವರೇ ಬಹಿರಂಗಪಡಿಸಬೇಕಿದೆ.

Like us on facebook
Disclaimer:

ರಾಷ್ಟ್ರಧ್ವನಿ ಅಂತಾರ್ಜಾಲ ಸುದ್ದಿ ವಾಹಿನಿಯಲ್ಲಿ ಪ್ರಕಟವಾಗುವ ಸುದ್ದಿಗಳ ಕುರಿತು ಸಾರ್ವಜನಿಕರು ಆರೋಗ್ಯಕರ ಚರ್ಚೆ, ಕಮೆಂಟ್ ಗಳನ್ನು ಮಾಡಬಹುದಾಗಿದೆ. ಧರ್ಮ, ಜಾತಿ ನಿಂದನೆಯಾಗುವಂತಹ ಮತ್ತು ಸಾಮರಸ್ಯ ಕೆಡಿಸುವಂತಹ ದುರುದ್ದೇಶಪೂರಿತ ಕಮೆಂಟ್ ಹಾಗೂ ಚರ್ಚೆ ಕಾನೂನು ರೀತಿಯಲ್ಲಿ ಅಪರಾಧವಾಗಿರುತ್ತದೆ. ದೇಶದ ಕಾನೂನು ಸುವ್ಯವಸ್ಥೆಗೆ ಧಕ್ಕೆ ತರುವಂತಹ ಯಾವುದೇ ಕಮೆಂಟ್ ಗಳನ್ನು ಹಾಕಿದ್ದಲ್ಲಿ, ಅದಕ್ಕೆ ಕಮೆಂಟ್ ಹಾಕುವವರೇ ಹೊಣೆಗಾರರಾಗಿರುತ್ತಾರೆ. ಅಂತಹವರ ಹೆಸರು ಮತ್ತು ಐಪಿ ಅಡ್ರೆಸ್ ಗಳನ್ನು ಸಂಬಂಧಪಟ್ಟ ಇಲಾಖೆಗೆ ಒದಗಿಸಲು ರಾಷ್ಟ್ರಧ್ವನಿ ಬದ್ಧವಾಗಿರುತ್ತದೆ.

ಸಿನಿಮಾ
ಸಂಪಾದಕೀಯ ಮತ್ತಷ್ಟು
ಸಂವಿಧಾನಾತ್ಮಕ ಸದನಗಳಲ್ಲಿ ಪಾಸ್ ಆಗುತ್ತಿದೆ ‘ಹಿಂದೂ..
ದ್ವೇಷಪೂರಿತ, ಅಸಂವಿಧಾನಿಕ ಪೌರತ್ವ ತಿದ್ದುಪಡಿ ಮಸೂದೆ ಉಭಯ ಸದನಗಳಲ್ಲಿ ಅಂಗೀಕಾರವಾಗಿದೆ. ಇನ್ನು ರಾಷ್ಟ್ರಪತಿ ಅಂಕಿತ...
POLL

[democracy id="1"]