Friday, November 22 , 2019
ಗುಜರಾತ್: ಟ್ಯಾಂಕ್ ಸ್ವಚ್ಛಕ್ಕಿಳಿದ ಏಳು ಕಾರ್ಮಿಕರು ಬಲಿ

ವಡೋದರ(15-06-2019): ಗುಜರಾತ್ ನ ವಡೋದರ ಸಮೀಪದ ಫರ್ತಿಕ್ವೈ ಎಂಬಲ್ಲಿ ಹೋಟೆಲ್ ವೊಂದರ ಟ್ಯಾಂಕ್ ಸ್ವಚ್ಛಗೊಳಿಸಲು ಇಳಿದಿದ್ದ ಏಳು ಮಂದಿ ವಿಷಾನಿಲ ಸೇವನೆಯಿಂದ ಮೃತಪಟ್ಟಿರುವ ದಾರುಣ ಘಟನೆ ಶನಿವಾರ ನಡೆದಿದೆ.
ಮೃತರ ಪೈಕಿ ಮೂವರು ಹೋಟೆಲ್ ಸಿಬ್ಬಂದಿಯಾಗಿದ್ದು, ಇನ್ನುಳಿದ ನಾಲ್ವರು ಪೌರಕಾರ್ಮಿಕರು ಎನ್ನಲಾಗಿದೆ. ನಿರ್ಲಕ್ಷ್ಯದ ಆರೋಪದ ಮೇಲೆ ಹೋಟೆಲ್ ಮಾಲೀಕನ ಮೇಲೆ ಪ್ರಕರಣ ದಾಖಲಿಸಲಾಗಿದೆ. ಮೃತ ಹೋಟೆಲ್ ಸಿಬ್ಬಂದಿಯನ್ನು ಜೈ ವಾಸವ (24), ವಿಜಯ್ ಚೌಹಾಣ್ (22), ಸಹದೇವ ವಾಸವ (22) ಎಂದು ಗುರುತಿಸಲಾಗಿದೆ. ಮೃತ ಪೌರ ಕಾರ್ಮಿಕರ ಮಾಹಿತಿ ಇನ್ನಷ್ಟೇ ಲಭ್ಯವಾಗಬೇಕಿದೆ.
ಹೊಟೇಲ್ ನ ಟ್ಯಾಂಕ್ ಸ್ವಚ್ಛಗೊಳಿಸಲೆಂದು ಮೊದಲಿಗೆ ಸಿಬ್ಬಂದಿಯೊಬ್ಬರು ಟ್ಯಾಂಕ್ ಗೆ ಇಳಿದಿದ್ದಾರೆ. ಕೆಲ ನಿಮಿಷಗಳ ನಂತರ ಅವರು ಪ್ರಜ್ಞಾ ಹೀನರಾಗಿದ್ದಾರೆ. ಅವರನ್ನು ಮೇಲೆತ್ತಲೆಂದು ಮತ್ತೊಬ್ಬರು ಇಳಿದಿದ್ದಾರೆ. ಆವರಿಗೂ ಅದೇ ಪರಿಸ್ಥಿತಿಯುಂಟಾಗಿದೆ. ಹೀಗೆ ಮೂವರೂ ಸಾವಿಗೀಡಾಗಿದ್ದರು. ವಿಷಾನಿಲದ ಪರಿಣಾಮವಾಗಿ ಹೋಟೆಲ್ ಸಿಬ್ಬಂದಿ ಮೃತಪಟ್ಟಿದ್ದರು. ಇದಾದ ನಂತರ ಟಾಂಕ್ ಇಳಿದ ನಾಲ್ವರು ಕಾರ್ಮಿಕರೂ ವಿಷಾನಿಲ ಸೇವನೆಯಿಂದ ಮೃತಪಟ್ಟಿದ್ದಾರೆ. ಪೊಲೀಸರು, ಅಗ್ನಿಶಾಮಕ ಸಿಬ್ಬಂದಿ ಸ್ಥಳಕ್ಕೆ ತೆರಳಿದ್ದು ದೇಹಗಳನ್ನು ಹೊರತೆಗೆದಿದ್ದಾರೆ.

Like us on facebook
Disclaimer:

ರಾಷ್ಟ್ರಧ್ವನಿ ಅಂತಾರ್ಜಾಲ ಸುದ್ದಿ ವಾಹಿನಿಯಲ್ಲಿ ಪ್ರಕಟವಾಗುವ ಸುದ್ದಿಗಳ ಕುರಿತು ಸಾರ್ವಜನಿಕರು ಆರೋಗ್ಯಕರ ಚರ್ಚೆ, ಕಮೆಂಟ್ ಗಳನ್ನು ಮಾಡಬಹುದಾಗಿದೆ. ಧರ್ಮ, ಜಾತಿ ನಿಂದನೆಯಾಗುವಂತಹ ಮತ್ತು ಸಾಮರಸ್ಯ ಕೆಡಿಸುವಂತಹ ದುರುದ್ದೇಶಪೂರಿತ ಕಮೆಂಟ್ ಹಾಗೂ ಚರ್ಚೆ ಕಾನೂನು ರೀತಿಯಲ್ಲಿ ಅಪರಾಧವಾಗಿರುತ್ತದೆ. ದೇಶದ ಕಾನೂನು ಸುವ್ಯವಸ್ಥೆಗೆ ಧಕ್ಕೆ ತರುವಂತಹ ಯಾವುದೇ ಕಮೆಂಟ್ ಗಳನ್ನು ಹಾಕಿದ್ದಲ್ಲಿ, ಅದಕ್ಕೆ ಕಮೆಂಟ್ ಹಾಕುವವರೇ ಹೊಣೆಗಾರರಾಗಿರುತ್ತಾರೆ. ಅಂತಹವರ ಹೆಸರು ಮತ್ತು ಐಪಿ ಅಡ್ರೆಸ್ ಗಳನ್ನು ಸಂಬಂಧಪಟ್ಟ ಇಲಾಖೆಗೆ ಒದಗಿಸಲು ರಾಷ್ಟ್ರಧ್ವನಿ ಬದ್ಧವಾಗಿರುತ್ತದೆ.

ಸಿನಿಮಾ
ಸಂಪಾದಕೀಯ ಮತ್ತಷ್ಟು
ಕನ್ನಡ ಉಳಿಸುವ ಜವಾಬ್ದಾರಿ ಬಡ ಮಕ್ಕಳಿಗೆ..
ಸರಕಾರಿ ಆಂಗ್ಲ ಮಾಧ್ಯಮ ಶಾಲೆಯ ಆದೇಶವನ್ನು ಹಿಂಪಡೆಯಲು ಕರ್ನಾಟಕ ಕೈಗಾರಿಕಾ ಮತ್ತು ವಾಣಿಜ್ಯೋದ್ಯಮ ಕನ್ನಡ...
POLL

[democracy id="1"]