Wednesday, October 23 , 2019
ಕಾಂಟ್ರಾಕ್ಟರ್ ನೇಸಮಣಿಯ ತಲೆಗೆ ಸುತ್ತಿಗೆಯಿಂದ ಹೊಡೆದ ಕಿಚಿನಮೂರ್ತಿ | ನೇಸಮಣಿ ಸ್ಥಿತಿ ಗಂಭೀರ!

ಚೆನ್ನೈ(31.05.2019): ಕಾಂಟ್ರಾಕ್ಟ್ ನೇಸಮಣಿಯ ಕೊಲೆಗೆ ಯತ್ನ ನಡೆಸಲಾಗಿದೆ. ಇಬ್ಬರು ಬಿಟ್ಟಿಯಾಗಿ ದುಡಿಯಲು ಬಂದವರು ಮತ್ತು ನೇಸಮಣಿಯ ಅಣ್ಣನ ಮಗ ಸೇರಿ ನೇಸಮಣಿಯ ನಡು ತಲೆಯ ಮೇಲೆ ಸುತ್ತಿಗೆ ಎಸೆದು ಕೊಲೆ ಮಾಡಲು ಯತ್ನಿಸಿದ್ದಾರೆ. ಆದರೆ ಅದೃಷ್ಟವಶಾತ್ ನೇಸಮಣಿಯ ಪ್ರಾಣಕ್ಕೆ ಯಾವುದೇ ತೊಂದರೆಯಾಗಿಲ್ಲ. ಅವರು ಆಸ್ಪತ್ರೆಯಲ್ಲಿ ದಾಖಲಾಗಿದ್ದು, ಅವರು ಶೀಘ್ರ ಗುಣಮುಖರಾಗಲೆಂದು ಪ್ರಾರ್ಥಿಸೋಣ #Pray_for_Neasamani, #Nesamani….

ಯಾವ ಕಾಂಟ್ರಾಕ್ಟರ್ ಗೂ ನಡೆಯ ಬಾರದಾದ ಘಟನೆ ನಮ್ಮ ಕಾಂಟ್ರಾಕ್ಟರ್ ನೇಸಮಣಿಗೆ ನಡೆದಿದೆ. ಅರವಿಂದನ್, ಚಂದ್ರು, ಕಿಚಿನಮೂರ್ತಿ ಮೂವರು ಸೇರಿ ನೇಸಮಣಿಯ ನಡು ತಲೆಯ ಮೇಲೆ ಮೇಲಿನಿಂದ ಸುತ್ತಿಗೆ ಎಸೆದು ಗಂಭೀರ ಗಾಯಗೊಳಿಸಿದ್ದಾರೆ. ಅವರು ಪ್ರಜ್ಞೆ ತಪ್ಪಿ ಬಿದ್ದ ಸಂದರ್ಭದಲ್ಲಿಯೂ ಅವರ ಮೇಲೆ ಕೊಳಕು ನೀರನ್ನು ಹಾಕಲು ಪ್ರಯತ್ನಿಸಿದ್ದಾರೆ. ಈ ವೇಳೆ ಆರೋಪಿಗಳಲ್ಲಿ ಓರ್ವನಾದ ಅರವಿಂದ್ ಇದನ್ನು ತಡೆದಿದ್ದಾರೆ. ಇಂತಹದ್ದೊಂದು ಅನ್ಯಾಯ ನೇಸಮಣಿಗೆ ನಡೆದಿರುವುದು ಸಾಧಾರಣ ವಿಚಾರವಲ್ಲ.

ಅರವಿಂದ್ ಮತ್ತು ಚಂದ್ರು ನೇಸಮಣಿ ಬಳಿಯಲ್ಲಿ ಬಿಟ್ಟಿಯಾಗಿ ದುಡಿಯಲು ಸೇರಿಕೊಂಡಿದ್ದರು. ಜಮೀನ್ ಪ್ಯಾಲೆಸ್ ನಲ್ಲಿ ದೊರಕಿದೆ ಒಂದು ಲಕ್ಷ ರೂಪಾಯಿ ಕಾಂಟ್ರಾಕ್ಟ್ ನಲ್ಲಿ ಇವರು ನೇಸಮಣಿಯನ್ನು ಪ್ಲಾನ್ ಮಾಡಿ ಅಟ್ಯಾಕ್ ಮಾಡಿ ಕೊಲೆ ಮಾಡಲು ಯತ್ನಿಸಿದ್ದಾರೆ. ಆದರೆ, ಸಮಯಕ್ಕೆ ಸರಿಯಾಗಿ ನೇಸಮಣಿಯನ್ನು ಆಸ್ಪತ್ರೆಗೆ ದಾಖಲಿಸಿದ್ದಾರೆ.

ಆಶ್ಚರ್ಯವಾಗುತ್ತಿದೆಯೇ? ಇಂತಹದ್ದೊಂದು ಸುದ್ದಿ ಕಳೆದೆರಡು ದಿನಗಳಿಂದ ಟ್ವಿಟ್ಟರ್ ನಲ್ಲಿ ಫುಲ್ ಹರಿದಾಡಿದ್ದು, ಟ್ವಿಟ್ಟರ್ ನಲ್ಲಿ ಟ್ರೆಂಟ್ ಆಗಿತ್ತು. ಸಿವಿಲ್ ಇಂಜಿನಿಯರಿಂಗ್ ಲರ್ನರ್ಸ್ ಎನ್ನುವ ಟ್ವಿಟ್ಟರ್ ಖಾತೆಯಲ್ಲಿ ಸುತ್ತಿಗೆಯ ಫೋಟೋ ಹಾಕಿ ಇದಕ್ಕೆ ನಿಮ್ಮ ಊರಿನಲ್ಲಿ ಏನು ಹೆಸರು ಎಂದು ಪ್ರಶ್ನಿಸಲಾಗಿತ್ತು. ಈ ಪ್ರಶ್ನೆಗೆ ತಮಿಳುನಾಡಿನ ಪೋಕರಿ ಹುಡುಗನೋರ್ವ ಕಮೆಂಟ್ ಮಾಡಿದ್ದು, ಇದನ್ನು ನಮ್ಮ ಊರಿನಲ್ಲಿ ಸುತ್ತಿಗೆ ಎಂದು ಹೇಳುತ್ತಾರೆ. ಈ ಸುತ್ತಿಗೆಯನ್ನು ಕಾಂಟ್ರಾಕ್ಟರ್ ನೇಸಮಣಿಯ ತಲೆಗೆ ಎಸೆಯಲಾಗಿತ್ತು ಎಂದು ಹೇಳಿದ್ದ. ಈತನ ಕಮೆಂಟ್ ಬೆನ್ನಲ್ಲೇ ನೇಸಮಣಿಯ ಬಗ್ಗೆ ವ್ಯಾಪಕ ಟ್ವೀಟ್ ಗಳು ಬಂದಿದ್ದವು. ಅಷ್ಟಕ್ಕೂ ಈ ನೇಸಮಣಿ ಯಾರು? ತಮಿಳು ಚಿತ್ರದಲ್ಲಿ ವಿಜಯ್ ಹಾಗೂ ಸೂರ್ಯ ನಟಿಸಿದ್ದ ಸೂಪರ್ ಹಿಟ್ ಚಿತ್ರದಲ್ಲಿ ಒಂದು ಕಾಮಿಡಿ ದೃಶ್ಯ ಇದಾಗಿದ್ದು, ಇದರಲ್ಲಿ ಕಾಂಟ್ರಾಕ್ಟರ್ ನೇಸಮಣಿ ಪಾತ್ರದಲ್ಲಿ ವಡಿವೇಲು ನಟಿಸಿದ್ದರು. ಇದರಲ್ಲಿ ಮೊಳೆ ತೆಗೆಯುತ್ತಿದ್ದ ವೇಳೆ ನೇಸಮಣಿಯ ತಲೆಯ ಮೇಲೆ ಕಿಚಿನಮೂರ್ತಿ ಕೈತಪ್ಪಿ ಸುತ್ತಿಗೆ ಹಾಕುವ ದೃಶ್ಯವಿದೆ. ಈ ದೃಶ್ಯವೇ ಇದೀಗ ಟ್ವಿಟ್ಟರ್ ನಲ್ಲಿ ಟ್ರೆಂಡ್ ಆಗಿರುವ ಗಾಸಿಪ್ ಗಳಿಗೆ ಕಾರಣ. ನೇಸಮಣಿಗೆ ತಮಿಳು ಚಿತ್ರರಂಗದ ಸೂಪರ್ ಸ್ಟಾರ್ ಗಳೂ ಟ್ವಿಟ್ಟರ್ ನಲ್ಲಿ ಶುಭ ಹಾರೈಸಿದ್ದಾರೆ. ನೇಸಮಣಿ ಆದಷ್ಟು ಬೇಗ ಗುಣಮುಖರಾಗಲಿ ಎಂದು ಹಾಸ್ಯ ಚಟಾಕಿ ಸಿಡಿಸಿದ್ದಾರೆ.

 

Like us on facebook
Disclaimer:

ರಾಷ್ಟ್ರಧ್ವನಿ ಅಂತಾರ್ಜಾಲ ಸುದ್ದಿ ವಾಹಿನಿಯಲ್ಲಿ ಪ್ರಕಟವಾಗುವ ಸುದ್ದಿಗಳ ಕುರಿತು ಸಾರ್ವಜನಿಕರು ಆರೋಗ್ಯಕರ ಚರ್ಚೆ, ಕಮೆಂಟ್ ಗಳನ್ನು ಮಾಡಬಹುದಾಗಿದೆ. ಧರ್ಮ, ಜಾತಿ ನಿಂದನೆಯಾಗುವಂತಹ ಮತ್ತು ಸಾಮರಸ್ಯ ಕೆಡಿಸುವಂತಹ ದುರುದ್ದೇಶಪೂರಿತ ಕಮೆಂಟ್ ಹಾಗೂ ಚರ್ಚೆ ಕಾನೂನು ರೀತಿಯಲ್ಲಿ ಅಪರಾಧವಾಗಿರುತ್ತದೆ. ದೇಶದ ಕಾನೂನು ಸುವ್ಯವಸ್ಥೆಗೆ ಧಕ್ಕೆ ತರುವಂತಹ ಯಾವುದೇ ಕಮೆಂಟ್ ಗಳನ್ನು ಹಾಕಿದ್ದಲ್ಲಿ, ಅದಕ್ಕೆ ಕಮೆಂಟ್ ಹಾಕುವವರೇ ಹೊಣೆಗಾರರಾಗಿರುತ್ತಾರೆ. ಅಂತಹವರ ಹೆಸರು ಮತ್ತು ಐಪಿ ಅಡ್ರೆಸ್ ಗಳನ್ನು ಸಂಬಂಧಪಟ್ಟ ಇಲಾಖೆಗೆ ಒದಗಿಸಲು ರಾಷ್ಟ್ರಧ್ವನಿ ಬದ್ಧವಾಗಿರುತ್ತದೆ.

ಸಿನಿಮಾ
ಸಂಪಾದಕೀಯ ಮತ್ತಷ್ಟು
ಕನ್ನಡ ಉಳಿಸುವ ಜವಾಬ್ದಾರಿ ಬಡ ಮಕ್ಕಳಿಗೆ..
ಸರಕಾರಿ ಆಂಗ್ಲ ಮಾಧ್ಯಮ ಶಾಲೆಯ ಆದೇಶವನ್ನು ಹಿಂಪಡೆಯಲು ಕರ್ನಾಟಕ ಕೈಗಾರಿಕಾ ಮತ್ತು ವಾಣಿಜ್ಯೋದ್ಯಮ ಕನ್ನಡ...
POLL

[democracy id="1"]