Saturday, September 19 , 2020
BREAKING NEWS
 
ಸೇತುವೆ ಕೊಚ್ಚಿ ಹೋಗಿ 30 ವರ್ಷವಾದರೂ ಸರ್ಕಾರ ನಿರ್ಮಿಸಲಿಲ್ಲ | ಸರ್ಕಾರಕ್ಕೆ ಮುಖಭಂಗವಾಗುವಂತೆ ತಾವೇ ಸೇತುವೆ ನಿರ್ಮಿಸಿದ ಗ್ರಾಮಸ್ಥರು ,          ಸೈಕಲ್ ನಲ್ಲಿ ತೆರಳಿದ್ದ ಬಾಲಕಿ ರಾತ್ರಿಯಾದರೂ ಬರಲಿಲ್ಲ! | ಬೆಳಗ್ಗೆ ಕಾದಿತ್ತು ಪೋಷಕರಿಗೆ ಶಾಕ್ | ಒಂದು ಮನಕರಗಿಸುವ ಘಟನೆ ,          ಕೊರೊನಾ ಹಾಟ್ ಸ್ಪಾಟ್ ಆದ ನಾಗಪುರದ ಆರೆಸ್ಸೆಸ್ ಕಚೇರಿ; 9 ಹಿರಿಯ ನಾಯಕರಿಗೆ ಕೋವಿಡ್ ಪಾಸಿಟಿವ್ ,          ಅಕುಲ್ ಬಾಲಾಜಿ ರೆಸಾರ್ಟ್ ನಲ್ಲಿ ನಡೆಯುತ್ತಿತ್ತಾ ಮತ್ತಿನ ದಂಧೆ | ಸ್ಟಾರ್ ನಟರ ಮೋಜು ಮಸ್ತಿಯ ಪಾರ್ಟಿಯಲ್ಲಿ ಡ್ರಗ್ಸ್ ನದ್ದೇ ಕಾರುಬಾರು! ,          ಈ ಬಾರಿಯ ದೆಹಲಿ ಪ್ರಯಾಣದಲ್ಲಿ ಆದ ಅನುಭವವೇನು? | ಸಿಎಂ ಯಡಿಯೂರಪ್ಪ ಏನು ಹೇಳಿದರು? ,          ಅಲ್ ಖೈದಾ ಭಯೋತ್ಪಾದಕರೆಂದು 9 ಮಂದಿಯ ಬಂಧಿಸಿದ ಎನ್ ಐಎ ,         
ಕರ್ನಾಟಕದವರ ಉದ್ಯೋಗಗಳು ಉತ್ತರಭಾರತೀಯರ ಪಾಲು | ವಿಶೇಷ ವರದಿ; ತಪ್ಪದೇ ಓದಿ

ಬೆಂಗಳೂರು(16.11.2019): ಕನ್ನಡಿಗರು ಹಿಂದಿ ಕಲಿತರೇನು ಸಮಸ್ಯೆ? ಕರ್ನಾಟಕದಲ್ಲಿ ಇಂಗ್ಲಿಷ್ ಕಲಿತರೇ ಸಮಸ್ಯೆ ಇಲ್ಲ, ಹಿಂದಿ ಕಲಿತರೇ ಸಮಸ್ಯೆಯಾಗಿ ಬಿಡುತ್ತದೆಯೇ? ಅಂತ ಪ್ರಶ್ನೆ ಮಾಡುವವರಿಗೇನೂ ಕೊರತೆಯಿಲ್ಲ. ಆದರೆ ನಿಜವಾಗಿಯೂ ಕನ್ನಡಕ್ಕೆ ಸಮಾನ ಸ್ಥಾನಮಾನ ನೀಡಬೇಕು ಎಂದು ಹೋರಾಟಗಾರರು ಯಾಕೆ ಹೇಳುತ್ತಿದ್ದಾರೆ ಎನ್ನುವುದು ಬಹುತೇಕ ಜನರಿಗೆ ಇನ್ನೂ ಅರ್ಥವಾಗಿಲ್ಲ.

ಕರ್ನಾಟಕದಲ್ಲಿ ಸದ್ಯ “ಭಾಷಾ ಸಮಾನತೆಗಾಗಿ ಕರ್ನಾಟಕ ಜನಾಂದೋಲನ” ಎನ್ನುವ ಹೋರಾಟ ರೂಪುಗೊಂಡಿದೆ. ಹಿಂದಿ ಹೇರಿಕೆಯ ವಿರುದ್ಧ ಈ ಆಂದೋಲನವು ಪ್ರಬಲವಾದ ಧ್ವನಿಯೆತ್ತುತ್ತಿದೆ. ಇದಲ್ಲದೇ ಹಿಂದಿ ಹೇರಿಕೆಯನ್ನ ಅಥವಾ  ಹಿಂದಿ ಭಾಷೆಗೆ ವಿಶೇಷ ಸ್ಥಾನ ಮಾಡಿರುವುದನ್ನು ಪ್ರಬಲವಾಗಿ ಖಂಡಿಸಿದೆ. ಹಿಂದಿ ಹೇರಿಕೆಯಿಂದ ಕನ್ನಡ ಮೇಲಾಗ ಬಹುದಾದ ಪರಿಣಾಮಗಳೇನು? ಎನ್ನುವ ಬಗ್ಗೆ ವಿವಿಧ ಕಡೆಗಳಲ್ಲಿ ಕಾರ್ಯಾಗಾರಗಳನ್ನೂ ರೂಪಿಸಿದೆ. ಈ ಕಾರ್ಯಾಗಾರಗಳಲ್ಲಿ ಹಿಂದಿಗೆ ವಿಶೇಷ ಸ್ಥಾನಮಾನ ಕೊಟ್ಟಿರುವುದು ಹೇಗೆ ತಪ್ಪು ಎನ್ನುವುದನ್ನು ವಿವರಿಸಲಾಗುತ್ತಿದೆ. ಹಿಂದಿಗೆ ವಿಶೇಷ ಸ್ಥಾನಮಾನಗಳನ್ನು ನೀಡುವುದರಿಂದಾಗಿ ಮುಂದಿನ ದಿನಗಳಲ್ಲಿ ಹಿಂದಿಯನ್ನು ಇತರ ರಾಜ್ಯಗಳ ಮೇಲೆ ಬಲವಂತವಾಗಿ ಹೇರಲು ಸಾಧ್ಯವಿದೆ. ಆ ಸಂದರ್ಭದಲ್ಲಿ ಒಂದು ಭಾಷೆಯ ಜೊತೆಗೆ ಇರುವ ಸಂಸ್ಕೃತಿ, ಆರ್ಥಿಕತೆ, ಧಾರ್ಮಿಕತೆ, ವೈಚಾರಿಕತೆ ಇವೆಲ್ಲವೂ ನಾಶವಾಗುವ ಸಾಧ್ಯತೆಗಳಿವೆ ಎಂದು ಈ ಆಂದೋಲನಕಾರರು ಹೇಳುತ್ತಿದ್ದಾರೆ.

ಸಂವಿಧಾನದ ಅನುಚ್ಛೇದ 344-351 ವಿಧಿಗಳು ಹಿಂದಿ ಭಾಷೆಗೆ ವಿಶೇಷ ಸ್ಥಾನಮಾನವನ್ನು ಕೊಟ್ಟಿದೆ. ಸಂವಿಧಾನದ 8ನೇ ಶೆಡ್ಯುಲ್ ನಲ್ಲಿ 27 ಭಾಷೆಗಳನ್ನು  ಸಮಾನ ಭಾಷೆಗಳು ಎಂದು ಘೋಷಿಸಿದ್ದಾರೆ.  ಈ 27 ಭಾಷೆಗಳಿಗೆ ಸಮಾನ ಸ್ಥಾನಮಾನ ಇರುವಾಗ ಹಿಂದಿಗೆ ವಿಶೇಷ ಸ್ಥಾನಮಾನ ನೀಡುತ್ತಿರುವುದು  ನಮ್ಮ ಮೇಲೆ ಹಿಂದಿಯನ್ನು ಹೇರಲು ಅವಕಾಶ ಮಾಡಿಕೊಟ್ಟಂತಾಗುತ್ತದೆ ಎಂದು ಈ ಆಂದೋಲನವು ಹೇಳುತ್ತಿದೆ. ಹಾಗಾಗಿ ಈ ವಿಧಿಗಳನ್ನು ರದ್ದುಗೊಳ್ಳಿಸಬೇಕು. ರದ್ದುಗೊಳಿಸದೇ ಇದ್ದರೆ, ವಿವಿಧತೆಯಲ್ಲಿ ಎನ್ನುವ ಭಾರತದ ಪರಂಪರೆಗೆ ಇದು ಘಾಸಿಗೊಳಿಸುತ್ತದೆ ಎಂದು ಆಂದೋಲನವು ಹೇಳುತ್ತಿದೆ.

ನವೆಂಬರ್ 14ರಂದು ಮೈಸೂರಿನಲ್ಲಿ ನಡೆದ “ಭಾಷಾ ಸಮಾನತೆಗಾಗಿ ಕರ್ನಾಟಕ ಜನಾಂದೋಲನ “ ಏರ್ಪಡಿಸಿದ್ದ ದುಂಡುಮೇಜಿನ ಸಭೆಯಲ್ಲಿ ಮಾಜಿ ಸಚಿವ, ಕೊಳ್ಳೇಗಾಲ ಶಾಸಕ ಎನ್.ಮಹೇಶ್ ಅವರು ಎತ್ತಿರುವ ಪ್ರಶ್ನೆಯೊಂದು ಸದ್ಯ ಕನ್ನಡಿಗರು ಯೋಚಿಸಲೇ ಬೇಕಾದ ವಿಚಾರ ಇದು ಎನ್ನುವ ಅಭಿಪ್ರಾಯವನ್ನು ಮೂಡಿಸಿದೆ.

ಕರ್ನಾಟಕ ಹಾಗೂ ಇತರ ರಾಜ್ಯಗಳಲ್ಲಿ ಅಧಿಕಾರವಹಿಸಿಕೊಂಡಿರುವ ಐಎಎಸ್, ಐಪಿಎಸ್ ಅಧಿಕಾರಿಗಳು ಹೆಚ್ಚಿನ ಸಂಖ್ಯೆಯಲ್ಲಿ ಹಿಂದಿ ಭಾಷಿಗರೇ ಕಾಣಸಿಗುತ್ತಾರೆ. ಇದಕ್ಕೆ ಮುಖ್ಯ ಕಾರಣಗಳೇನು ಎಂದು ನೋಡಿದರೆ, ಕೇಂದ್ರ ಲೋಕಸೇವಾ ಆಯೋಗವು (UPSC) ನಡೆಸುವ ಪರೀಕ್ಷೆಯ ಪ್ರಶ್ನೆ ಪತ್ರಿಕೆಗಳು ಇಂಗ್ಲಿಷ್ ಮತ್ತು ಹಿಂದಿ ಭಾಷೆಯಲ್ಲಿ ಪ್ರಕಟವಾಗಿರುತ್ತದೆ. ಹೀಗಾಗಿ ಹಿಂದಿ ಭಾಷಿಗರು ಜಠಿಲವಾದ ಪ್ರಶ್ನೆಗಳನ್ನು, ಪದಗಳನ್ನು ಹಿಂದಿಯಲ್ಲಿ ನೋಡಿ ಅರ್ಥ ಮಾಡಿಕೊಳ್ಳುತ್ತಾರೆ. ಇತರ ಭಾಷೆಯವರು ಇಂಗ್ಲಿಷ್ ನಲ್ಲೇ ಪ್ರಶ್ನೆಯನ್ನು ಅರ್ಥ ಮಾಡಿಕೊಂಡು ನಂತರ ಬರೆಯಬೇಕಾಗುತ್ತದೆ.  ಹೀಗಾಗಿಯೇ ಕರ್ನಾಟಕ ಸೇರಿದಂತೆ ಇತರ ಪ್ರದೇಶಗಳ ಅಭ್ಯರ್ಥಿಗಳು ಈ ಪರೀಕ್ಷೆಗಳಲ್ಲಿ ಹೆಚ್ಚಿನ ಸಾಧನೆ ಮಾಡಲು ತಡೆಯಾಗಿದೆ. ಹಾಗಾಗಿ ಯಾವ ರಾಜ್ಯದಲ್ಲಿ ಯಾವ ಭಾಷೆಯಿದೆಯೋ ಅವರ ಮಾತೃ ಭಾಷೆ ಹಾಗೂ ಇಂಗ್ಲಿಷ್ ನಲ್ಲಿ ಪ್ರಶ್ನೆ ಪತ್ರಿಕೆ ತಯಾರು ಮಾಡಲು ಒತ್ತಾಯಿಸಬೇಕಿದೆ. ಅದಕ್ಕಾಗಿ ಹಿಂದಿ ಭಾಷೆಗೆ ಸಂವಿಧಾನ ಬದ್ಧವಾಗಿ ನೀಡಲಾಗಿರುವ ವಿಶೇಷ ಸ್ಥಾನಮಾನವನ್ನು ಬದಲಿಸಬೇಕಿದೆ ಎಂದು ಅವರು ಅಭಿಪ್ರಾಯಪಟ್ಟಿದ್ದಾರೆ.

ಕೇಂದ್ರ ಲೋಕಸೇವಾ ಆಯೋಗವು (UPSC) ನಡೆಸುವ ಪರೀಕ್ಷೆಗಳಲ್ಲಿ ಕನ್ನಡಿಗರಿಗೆ ಹೇಗೆ ಅನ್ಯಾಯವಾಗುತ್ತಿದೆ ಎನ್ನುವ ವಿಚಾರವಾಗಿ ರಾಷ್ಟ್ರಧ್ವನಿ ಅಂತರ್ಜಾಲ ಪತ್ರಿಕೆಯಲ್ಲಿ ಪ್ರಕಟವಾಗುತ್ತಿರುವ “ಪ್ರಬುದ್ಧ ಭಾರತದ ತುಡಿತ” ಅಂಕಣಕಾರ ಡಾ.ಶಿವಕುಮಾರ ಅವರು ಬರೆದಿದ್ದು, ಕೇಂದ್ರ ಲೋಕಸೇವಾ ಆಯೋಗವು (UPSC) ನಡೆಸುವ ಯಾವುದೇ ಪರೀಕ್ಷೆಯು ಹಿಂದಿ ಮತ್ತು ಇಂಗ್ಲೀಷ್ ಮಾಧ್ಯಮದಲ್ಲಿರುತ್ತದೆ. ಅಂದರೆ ಪ್ರಶ್ನೆಪತ್ರಿಕೆಗಳು ಹಿಂದಿ ಮತ್ತು ಇಂಗ್ಲೀಷ್ ಎರಡೂ ಭಾಷೆಗಳಲ್ಲಿ ಮುದ್ರಿತವಾಗಿರುತ್ತವೆ. ಇದು ಉತ್ತರ ಭಾರತೀಯ ವಿದ್ಯಾರ್ಥಿಗಳ ಪಾಲಿಗೆ ವರದಾನವಾಗಿರುತ್ತದೆ. ಏಕೆಂದರೆ ಅವರಿಗೆ ಇಂಗ್ಲೀಷ್ ಗೊತ್ತಿಲ್ಲದಿದ್ದರೂ ಅವರು ತಮ್ಮ ಮಾತೃಭಾಷೆಯಲ್ಲಿ ಪ್ರಶ್ನೆಗಳನ್ನು ಓದಿ ಅರ್ಥ ಮಾಡಿಕೊಳ್ಳುತ್ತಾರೆ. ಹೆಚ್ಚು ಪ್ರಶ್ನೆಗಳಿಗೆ ಅವರು ಶೀಘ್ರವಾಗಿ ಉತ್ತರಿಸುತ್ತಾರೆ. ಇದರಿಂದ ಕೇಂದ್ರಮಟ್ಟದ ಯಾವುದೇ ಪರೀಕ್ಷೆಗಳಿರಲಿ (ಉದಾಹರಣೆಗೆ IAS, Banking ಇತ್ಯಾದಿ)ಉತ್ತರ ಭಾರತೀಯರೇ ಹೆಚ್ಚು ಜನ ಪಾಸಾಗುತ್ತಾರೆ. ನಮ್ಮ ದಕ್ಷಿಣ ಭಾರತ ಅಥವಾ ಕರ್ನಾಟಕದಲ್ಲೂ ಅವರೇ ಹೆಚ್ಚಿನ ಹುದ್ದೆಗಳನ್ನು ಆಕ್ರಮಿಸಿಕೊಳ್ಳುತ್ತಾರೆ ಎಂದು ಅವರು ಅಭಿಪ್ರಾಯಪಡುತ್ತಾರೆ.

ವಿದ್ಯಾರ್ಥಿಗಳು ಪ್ರಶ್ನೆ ಪತ್ರಿಕೆಗಳನ್ನು ತಮ್ಮ ಮಾತೃ ಭಾಷೆಯಲ್ಲಿ ಅರ್ಥ ಮಾಡಿಕೊಳ್ಳುವುದಕ್ಕೂ, ಇತರ ಭಾಷೆಯಲ್ಲಿ ಅರ್ಥಮಾಡಿಕೊಳ್ಳುವುದಕ್ಕೂ ವ್ಯತ್ಯಾಸವಿದೆ. ನಮ್ಮ ರಾಜ್ಯದ ವಿದ್ಯಾರ್ಥಿಗಳು ಇಂಗ್ಲೀಷ್ ಕಲಿಕೆಯಲ್ಲಿ ಉತ್ತರ ಭಾರತೀಯರಿಗಿಂತ ಮುಂದಿದ್ದರೂ, ಪ್ರಶ್ನೆಗಳು ಹಿಂದಿಯಲ್ಲೂ ಮುದ್ರಿತವಾಗಿರುವುದರಿಂದ ಉತ್ತರ ಭಾರತೀಯ ವಿದ್ಯಾರ್ಥಿಗಳಿಗೆ ಹೆಚ್ಚು ಸುಲಭವಾಗಿ ಅರ್ಥವಾಗುತ್ತವೆ. ಹಾಗಾಗಿ ಅವರೇ ಹೆಚ್ಚು ಜನ ಪಾಸಾಗಿ, ನಮ್ಮ ರಾಜ್ಯದವರಿಗೆ ಸಿಗಬೇಕಾದ ಹುದ್ದೆಗಳನ್ನು ಕಬಳಿಸುತ್ತಿದ್ದಾರೆ ಎಂದು ಡಾ.ಶಿವಕುಮಾರ ಅವರು ತಮ್ಮ ಅಂಕಣದಲ್ಲಿ ಬೆಳಕು ಚೆಲ್ಲಿದ್ದಾರೆ.

ಸಂವಿಧಾನದ 343 ನೇ ಅನುಚ್ಛೇದದಲ್ಲಿಹಿಂದಿಯನ್ನು ಆಡಳಿತ ಭಾಷೆ (Official language)ಎಂದು ಕರೆಯಲಾಗಿದೆ. (ಕೆಲವರು ಇದನ್ನೇ ರಾಷ್ಟ್ರ ಭಾಷೆ ಎಂದು ತಪ್ಪಾಗಿ ಕರೆಯುವುದುಂಟು. ಹಿಂದಿ ಮತ್ತು ಇಂಗ್ಲೀಷ್ ಎರಡನ್ನು ಆಡಳಿತ ಭಾಷೆಗಳೆಂದು ಕರೆಯಲಾಗಿದೆ, ಭಾರತಕ್ಕೆ ರಾಷ್ಟ್ರ ಭಾಷೆ ಎಂದು ಯಾವುದನ್ನೂ ಕರೆದಿಲ್ಲ) ಜೊತೆಗೆ 351 ನೇ ಅನುಚ್ಛೇದದಲ್ಲಿ ಹಿಂದಿ ಭಾಷೆಯನ್ನು ಅಭಿವೃದ್ಧಿಪಡಿಸಲು ಮತ್ತು ಪ್ರಚಾರ ಮಾಡಲು ಕೇಂದ್ರ ಸರ್ಕಾರ ಕ್ರಮ ಕೈಗೊಳ್ಳಬೇಕು ಎಂದು ಹೇಳಿದೆ. ದೇಶದ ಸಂಸತ್ತಿನಲ್ಲಿ ಹಿಂದಿ ಭಾಷೆಯ ಸಂಸದರೇ ಹೆಚ್ಚಿರುವುದರಿಂದ ಸಂವಿಧಾನದಲ್ಲಿ ಹೀಗೆ ಸೇರಿಸಲಾಗಿದೆ ಎಂದು ಡಾ.ಶಿವಕುಮಾರ ಅವರು ಅಭಿಪ್ರಾಯಪಟ್ಟಿದ್ದಾರೆ.

ಒಟ್ಟಿನಲ್ಲಿ ಭಾರತ ಸದ್ಯ ಸಮತೋಲನ ಸ್ಥಿತಿಯಲ್ಲಿದೆ. ಈ ವ್ಯವಸ್ಥೆಯನ್ನೇ ಬದಲಿಸಲು ಕೇಂದ್ರ ಸರ್ಕಾರ ದಿನಕ್ಕೊಂದು ಕಾರ್ಯಕ್ರಮಗಳನ್ನು ಹಾಕುತ್ತಿದೆ. ಇದರ ವ್ಯತಿರಿಕ್ತ ಪರಿಣಾಮವಾಗಿ ಈಗಾಗಲೇ ಆರ್ಥಿಕ ಹಿಂಜರಿತ ಭಾರತದ ಉಸಿರು ಕಟ್ಟಿಸುತ್ತಿದೆ. ಸದ್ಯ ಭಾಷೆಯ ವಿಚಾರವಾಗಿಯೂ ಕೇಂದ್ರ ಸರ್ಕಾರ ತೆಗೆದುಕೊಂಡಿರುವ ನಿರ್ಧಾರ ಮತ್ತೊಂದು ಸಂಕಷ್ಟಕ್ಕೆ ಭಾರತವನ್ನು ದೂಡುವ ಸಾಧ್ಯತೆಗಳೇ ಹೆಚ್ಚಾಗಿ ಕಂಡು ಬರುತ್ತಿದೆ. ಕರ್ನಾಟಕದಲ್ಲಿ ಇದರ ವಿರುದ್ಧ ಈಗಾಗಲೇ ಜನಾಂದೋಲನ ಹುಟ್ಟಿಕೊಂಡಿದೆ. ಎಲ್ಲ ರಾಜ್ಯಗಳೂ ಇದೇ ರೀತಿಯ ಆಂದೋಲವನ್ನು ಆರಂಭಿಸಿದರೆ, ಭಾಷೆಯ ವಿಚಾರದಲ್ಲಿ ಭಾರತ ಸಂಕಷ್ಟಕ್ಕೀಡಾಗುವುದು ತಪ್ಪಿ ಹೋಗುತ್ತದೆ.

Like us on facebook
Disclaimer:

ರಾಷ್ಟ್ರಧ್ವನಿ ಅಂತಾರ್ಜಾಲ ಸುದ್ದಿ ವಾಹಿನಿಯಲ್ಲಿ ಪ್ರಕಟವಾಗುವ ಸುದ್ದಿಗಳ ಕುರಿತು ಸಾರ್ವಜನಿಕರು ಆರೋಗ್ಯಕರ ಚರ್ಚೆ, ಕಮೆಂಟ್ ಗಳನ್ನು ಮಾಡಬಹುದಾಗಿದೆ. ಧರ್ಮ, ಜಾತಿ ನಿಂದನೆಯಾಗುವಂತಹ ಮತ್ತು ಸಾಮರಸ್ಯ ಕೆಡಿಸುವಂತಹ ದುರುದ್ದೇಶಪೂರಿತ ಕಮೆಂಟ್ ಹಾಗೂ ಚರ್ಚೆ ಕಾನೂನು ರೀತಿಯಲ್ಲಿ ಅಪರಾಧವಾಗಿರುತ್ತದೆ. ದೇಶದ ಕಾನೂನು ಸುವ್ಯವಸ್ಥೆಗೆ ಧಕ್ಕೆ ತರುವಂತಹ ಯಾವುದೇ ಕಮೆಂಟ್ ಗಳನ್ನು ಹಾಕಿದ್ದಲ್ಲಿ, ಅದಕ್ಕೆ ಕಮೆಂಟ್ ಹಾಕುವವರೇ ಹೊಣೆಗಾರರಾಗಿರುತ್ತಾರೆ. ಅಂತಹವರ ಹೆಸರು ಮತ್ತು ಐಪಿ ಅಡ್ರೆಸ್ ಗಳನ್ನು ಸಂಬಂಧಪಟ್ಟ ಇಲಾಖೆಗೆ ಒದಗಿಸಲು ರಾಷ್ಟ್ರಧ್ವನಿ ಬದ್ಧವಾಗಿರುತ್ತದೆ.

ಸಿನಿಮಾ
ಸಂಪಾದಕೀಯ ಮತ್ತಷ್ಟು
ಸಂವಿಧಾನಾತ್ಮಕ ಸದನಗಳಲ್ಲಿ ಪಾಸ್ ಆಗುತ್ತಿದೆ ‘ಹಿಂದೂ..
ದ್ವೇಷಪೂರಿತ, ಅಸಂವಿಧಾನಿಕ ಪೌರತ್ವ ತಿದ್ದುಪಡಿ ಮಸೂದೆ ಉಭಯ ಸದನಗಳಲ್ಲಿ ಅಂಗೀಕಾರವಾಗಿದೆ. ಇನ್ನು ರಾಷ್ಟ್ರಪತಿ ಅಂಕಿತ...
POLL

[democracy id="1"]